fbpx
News

ವೈಲ್ಡ್ಕ್ಯಾಟ್-ಸಿ ತಂಡದ ಅಧ್ಯಯನದಲ್ಲಿ ಬೆಟ್ಟದ ಸೊಂಡಿಲಿ ಪತ್ತೆ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದ ಬೆಟ್ಟಶ್ರೇಣಿಯಲ್ಲಿ  ಅಧ್ಯಯನಕ್ಕೆ ತೆರಳಿದ್ದ ವೈಲ್ಡ್ಕ್ಯಾಟ್-ಸಿ ತಂಡಕ್ಕೆ ಉದ್ದ ಮೂತಿಯ ಬೆಟ್ಟದ ಸೊಂಡಿಲಿ ಗೋಚರಿಸಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಈ ಸೊಂಡಿಲಿಯ ಇರುವಿಕೆ ಮೊದಲ ಬಾರಿಗೆ ಗೋಚರಿಸಿದೆ ಎಂದು ಅಧ್ಯಯನ ತಂಡದಲ್ಲಿ ಭಾಗವಹಿಸಿದ್ದ ಸಾಗರ್, ಶರತ್, ಸೂರ್ಯ, ಮಧು ಹೇಳಿದ್ದಾರೆ.

ಹುಳು-ಹುಪ್ಪಟೆ ತಿಂದು ಬದುಕುತ್ತದೆ ಎಂದು ಭಾವಿಸಲಾದ ಹಿಲ್ ಷ್ರೋ ಎಂದು ಆಂಗ್ಲಭಾಷೆಯಲ್ಲಿ ಕರೆಯುವ ಈ ಬೆಟ್ಟದ ಸೊಂಡಿಲಿ. ಈ ಅಪರೂಪದ ಸೊಂಡಿಲಿ ಕೇರಳದ ಎರಾವಿಕುಲಮ್, ಕೊಡಗಿನ ಭಾಗಮಂಡಲದಲ್ಲಿ 1850ರಲ್ಲಿ ಕಾಣಸಿಕ್ಕಿವೆ ಎಂದು ದಾಖಲಿಸಲಾಗಿದೆ.

ಅತ್ಯಂತ ಎತ್ತರವಾದ ಬೆಟ್ಟಸಾಲನ್ನು ಹೊಂದಿರುವ ಪಶ್ಚಿಮಘಟ್ಟಶ್ರೇಣಿಯಲ್ಲಿ ಈ ಇಲಿಗಳು ವಾಸಿಸುತ್ತವೆ ಎಂದು ದಾಖಲೆಗಳು ತಿಳಿಸುತ್ತವೆ. ಈ ಸೊಂಡಿಲಿಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅದನ್ನು ಕಂಡು ದಾಖಲಿಸಿರುವುದು ತೀರಾ ಅಪರೂಪ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ವೈಲ್ಡ್ಕ್ಯಾಟ್-ಸಿ ಸಂಸ್ಥೆ ಸಂಪರ್ಕಿಸುತ್ತಿದೆ ಎಂದು ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top