fbpx
Karnataka

ಹಿರಿಯ ಸಾಹಿತಿಗಳ ಜೊತೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಮಾಲೋಚನೆ.

ಹಿರಿಯ ಸಾಹಿತಿಗಳ ಜೊತೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಮಾಲೋಚನೆ ನಡೆಸಿದ್ದು, ಪ್ರಸ್ತುತ ರಾಜ್ಯ ರಾಜಕಾರಣ, ರಾಜಕಾರಣದ ದುಸ್ಥಿತಿಗಳು,  ಸಾಮಾಜಿಕ ಸಮಸ್ಯೆಗಳು  ಮತ್ತು ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಕಾಲದ ರಾಜಕೀಯ ನಡೆಬಗ್ಗೆ ಹಾಗೂ ಈಗ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇನ್ನು ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ಮಾಡಿದರು.

ಈ ಸಮಾಲೋಚನೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ, ಪ್ರೊ.ಕೆ. ಮರುಳಸಿದ್ಧಯ್ಯ, ನಾಗತಿಹಳ್ಳಿ ಚಂದ್ರಶೇಖರ್, ಗಾಯಕ ಮುದ್ದುಕೃಷ್ಣ, ಮುಖ್ಯಮಂತ್ರಿ ಚಂದ್ರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಶ್ರೀನಿವಾಸ್ ಜಿ. ಕಪ್ಪಣ್ಣ, ಎಂ.ಸಿ. ವೇಣುಗೋಪಾಲ್  ಮತ್ತಿತರ ಉಪಸ್ಥಿತರ ಜೊತೆ ಖಾಸಗಿ ಹೋಟೆಲ್ ನಲ್ಲಿ ಸಮಾಲೋಚನೆ ಮಾಡುತ್ತ ಎಲ್ಲರ ಜೊತೆ ಕೂತು ಉಪಹಾರ ಸೇವಿಸಿದ ಎಸ್.ಎಂ.ಕೃಷ್ಣ.

ದೊರೆಸ್ವಾಮಿ ಜೊತೆ ಎಸ್.ಎಂ.ಕೃಷ್ಣ ವಿಶೇಷವಾಗಿ ಮಾತುಕತೆ ನಡೆಸಿದರು.  ಬೆಂಗಳೂರಿನ ಭೂ ಅಕ್ರಮ ದಂಧೆ ಬಗ್ಗೆ ಸಮಗ್ರ ಮಾಹಿತಿ ನೀಡಿದ ದೊರೆಸ್ವಾಮಿಯವರು, ಬೆಂಗಳೂರಿನ ಭೂ ಕಬಳಿಕೆ ಬಗ್ಗೆ ಸಮಗ್ರ ಸಮಾಲೋಚನೆ ನಡೆಸಿದರು. ಈ ಸಮಾಲೋಚನೆಯಲ್ಲಿ ಸಾಹಿತಿಗಳು ತಮ್ಮ ಅನಿಸಿಕೆಯನ್ನು ಮಾದ್ಯಮಗಳಿಗೆ ಹಂಚಿಕೊಂಡರು…

ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ವಿಚಾರ.

ಎಸ್.ಎಂ.ಕೃಷ್ಣರವರು ಮಾಧ್ಯಮಗಳಿಗೆ ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆಯ ಬೆಳವಣಿಗೆ ಆಘಾತಕಾರಿ ಎಂದು ತಿಳಿಸಿದರು. ಇದಕ್ಕೆ ಏನು ಕಾರಣ ಎನ್ನುವುದನ್ನು ಎಲ್ಲರೂ ಸಾಮೂಹಿಕವಾಗಿ ಯೋಚಿಸಬೇಕು. ಆದರೆ ಗಣಪತಿ ಆತ್ಮಹತ್ಯೆ ರಾಜಕೀಕರಣಗೊಂಡಿದೆ. ಹೀಗಾಗಿ ಆ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದು ಎಸ್.ಎಂ.ಕೃಷ್ಣ ಮಾಧ್ಯಮಗಳಿಗೆ ತಿಳಿಸಿದರು.

ಸ್ನೇಹಿತರೆಲ್ಲ ಕೂತು ಮಾತುಕತೆ ನಡೆಸುವುದಕ್ಕೆ ಇಂದು ಎಸ್.ಎಂ.ಕೃಷ್ಣ ಅವಕಾಶ ಮಾಡಿಕೊಟ್ಟಿದ್ದಾರೆ. ವೇಣುಗೋಪಾಲ್ ಈ ಆಯೋಜನೆ ಮಾಡಿದ್ರು. ಕೃಷ್ಣ ಅವರ ಕಾಲದಲ್ಲಿ ರಾಜಕುಮಾರ್ ಅಪಹರಣ ಆಯ್ತು, ಅದೊಂದು ಮಾನಸಿಕ ಯಾತನೆ. ಆದ್ರೆ ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದರು.

ಕೃಷ್ಣ ಅವರಿಂದ ನಮಗೆ ಸಾಕಷ್ಟು ನಿರೀಕ್ಷೆ ಇದೆ ನಿವಿ೵ಕಾರವಾಗಿ ಕಾಂಗ್ರೆಸ್ ನಾಯಕರಿಗೆ ತಿದ್ದಿ ತೀಡಿ ಬುದ್ದಿ ಹೇಳಬೇಕು. ಬಣಗಳನ್ನು ಬಿಟ್ಟು ರಾಜಕಾರಣ ಮಾಡಲು ಹೇಳಬೇಕು. ಅದನ್ನು ನಾವು ಮನವಿ ಮಾಡಿದ್ದೇವೆ. ಅವರ ರಾಜಕಾರಣದ ಅನುಭವವನ್ನು ಇತರ ನಾಯಕರೊಂದಿಗೆ ಹಂಚಿಕೊಳ್ಳಬೇಕು.

40ಸಾವಿರ ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಇದು ನಿಯಮಬದ್ಧವಾಗಿ ಆಗಿಲ್ಲ. ಅದಕ್ಕೊಂದು ಆರ್ಡಿನೆನ್ಸ್ ಹೊರಡಿಸಿ ಕ್ರಮಬದ್ದಗೊಳಿಸಬೇಕು. ಈ ಸರ್ಕಾರಗಳಿಗೆ ಬದ್ಧತೆ ಇಲ್ಲ. ಕೃಷ್ಣ ಅವರಿಗೆ ಹೇಳಿದರೆ ಅದು ಬೇಗ ಆಗುತ್ತೆ ಅಂತ ಮನವಿ ಮಾಡಿದ್ದೇವೆ.

– ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ಯ್ರ ಹೋರಾಟಗಾರ

ಇಂಗ್ಲೀಷ್ ನಿಂದ ಕನ್ನಡಕ್ಕೆ ಅಪಾಯ ಕಾದಿದೆ. ಕರ್ನಾಟಕದಿಂದ ಐದು ಲಕ್ಷ ಮಂದಿ ಸಹಿ ಸಂಗ್ರಹ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕು. ಎಲ್ಲರ ನೆರವು ಪಡೆದು ದೇಶೀ ಭಾಷೆಗಳ ಉಳಿವಿಗೆ ಹೋರಾಟ ಮಾಡಿ ಕಾಯ್ದೆ ರೂಪಿಸಬೇಕು. ಈ ಬಗ್ಗೆ ಕೃಷ್ಣ ಅವರ ಬಳಿ ನಮ್ಮ ಕನ್ನಡದ ಉಳಿವಿನ ಕುರಿತು ಮನವಿ ಮಾಡಿದ್ದೇವೆ.

– ಜ್ಞಾನ ಪೀಠ ಪ್ರಶಸ್ತಿ ವಿಜೇತರಾದ ಚಂದ್ರಶೇಖರ

ಕೃಷ್ಣ ಅವರಿದ್ದಾಗ ಮೊದಲ ಬಾರಿಗೆ ನಗರ ಅರಣ್ಯ ಯೋಜನೆ ಜಾರಿಗೆ ತಂದಿದ್ರು. ಆದರೆ ಬೆಂಗಳೂರು ಈಗ ಎಲ್ಲೆ ಮೀರಿ ಬೆಳೆದಿದೆ. ಅಭಿವೃದ್ಧಿ ಹೆಸರಲ್ಲಿ ಇಂದು ಹಸಿರು ಬೆಂಗಳೂರು ಮಾಯವಾಗಿದೆ, ಕೆರೆಗಳು ನಾಶವಾಗಿವೆ, ಇವುಗಳ ಉಳಿವಿಗೆ ಗಮನಹರಿಸಬೇಕಿದೆ. ಅದಕ್ಕೊಂದು ರಾಜಕೀಯ ಧ್ವನಿ ಬೇಕು. ಕಾವೇರಿ ನೀರಿಗೂ ಪರದಾಟ ಶುರುವಾಗಿದೆ‌, ತ್ಯಾಜ್ಯ, ನೀರು, ಕೆರೆ ಸಮಸ್ಯೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಉಳಿಸಿಕೊಳ್ಳಬೇಕಿದೆ. ಅದಕ್ಕೊಂದು ಸಮಿತಿ ಬೇಕು, ಹೀಗಾಗಿ ಈ ಬಗ್ಗೆ ಕೃಷ್ಣ ಅವರ ಬಳಿ ಮನವಿ ಮಾಡಿದ್ದೇವೆ.

– ಪರಿಸರವಾದಿ ಸುರೇಶ್ ಹೆಬ್ಳೀಕರ್

ಎಲ್ಲ ಕ್ಷೇತ್ರಗಳ ಗಣ್ಯರು ಇಲ್ಲಿ ಸೇರಿದ್ದೇ ಕೃಷ್ಣ ರವರ ಮೇಲಿನ ಅಭಿಮಾನದಿಂದ. ಬೆಂಗಳೂರಿನ ಸಮಸ್ಯೆ ಬಗ್ಗೆ ಗಮನಹರಿಸುವ ರಾಜಕಾರಣಿ ಎಸ್.ಎಂ.ಕೃಷ್ಣ.

ಈಗ ಬಸ್ ಮುಷ್ಕರ ಶುರುವಾಗಿದೆ. ಬೆಂಗಳೂರಿನಲ್ಲಿ‌ ಮೆಟ್ರೋ ಇಲ್ಲದೇ ಹೋಗಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಅದಕ್ಕೆ ಕೃಷ್ಣ ಕೊಡುಗೆ ಅಪಾರ. ಕನ್ನಡದ ಬಗ್ಗೆ ಕೂಡ ಕೃಷ್ಣ ಕಾಳಜಿ ಹೊಂದಿದವರು. ದೇಶದ ಎಲ್ಲ ಭಾಷೆಗಳು ನಲುಗುತ್ತಿವೆ. ಇವುಗಳ ಉಳಿವಿಗೆ ಕೃಷ್ಣ ಅವರ ಸಹಕಾರ ಅತ್ಯಗತ್ಯ.

ಈಗಿನ ರಾಜಕಾರಣಿಗಳು ಸದಾ ರಾಜಕಾರಣ ಮಾಡುತ್ತಾರೆ, ಅವರಿಗೆ ಮಲಗಿದರೂ ಅದೇ ಚಿಂತೆ ಎದ್ದರೂ ಅದೇ ರಾಜಕಾರಣದ ಚಿಂತೆ, ಕನ್ನಡ ನಾಡು ನುಡಿ, ಸಂಸ್ಕೃತಿ, ಸಾಹಿತ್ಯ, ಸಂಗೀತದ ಬಗ್ಗೆ ಕಾಳಜಿ ಇಲ್ಲ ಇದರ ಏಳಿಗೆ ಬಗ್ಗೆ ಗಮನಹರಿಸುವುದಿಲ್ಲ.

– ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್

ಇಂದು ಬೆಂಗಳೂರಿನ ಆಪ್ತ ಸ್ನೇಹಿತರೆಲ್ಲರು ಮಾತುಕತೆ ನಡೆಸಬೇಕು ಅಂದ್ರು ಹಾಗಾಗಿ ಕೂತು ಮಾತಾಡೋಣ ಅಂತ ಬಂದೆ. ದೊರೆಸ್ವಾಮಿಯವರನ್ನು ಅವರ ಕ್ಷೇತ್ರದಲ್ಲಿಯೇ ನೋಡಬೇಕು ಅಂತ ಬಂದೆ, ಖುಷಿಯಾಯ್ತು ಎಲ್ಲರನ್ನು ಭೇಟಿ ಮಾಡಿ.

– ಎಸ್.ಎಂ.ಕೃಷ್ಣ ಹೇಳಿಕೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top