fbpx
Astrology

27 ಜುಲೈ 2016 ನಿಮ್ಮ ರಾಶಿಗನುಗುಣವಾಗಿ ಇಲ್ಲಿದೆ ನಿತ್ಯ ಭವಿಷ್ಯ

ಮೇಷ

ನಿಮ್ಮನ್ನು ಹೀಯಾಳಿಸುವ ಜನ ಸಿಗುತ್ತಾರೆ. ಬೇಸರ ಬೇಡ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ದಾರಿ ಲಭ್ಯ. ಶುಭಸಂಖ್ಯೆ: 1

ವೃಷಭ

ಬರೀ ಮಾತುಗಳ ಬಡಿವಾರ ಬೇಡ. ನಿಮ್ಮ ನಿಜವಾದ ಶಕ್ತಿಯನ್ನು ಪ್ರದರ್ಶಿಸಿ. ಅನ್ಯರ ಬೆಂಬಲ ಸಿಗಲಿದೆ. ಶುಭಸಂಖ್ಯೆ: 8

ಮಿಥುನ

ದಶರಥಕೃತ ಶನಿಸ್ತೋತ್ರವನ್ನು ಓದುವುದರಿಂದ ಇಷ್ಟಾರ್ಥವಾದ ಧನಸಂಪಾದನೆಯ ದಾರಿ ಸ್ಪಷ್ಟವಾಗಲಿದೆ. ಶುಭಸಂಖ್ಯೆ: 1

ಕಟಕ

ಯಾವುದೋ ಒಂದು ಕೆಲಸ ಎಂದು ಅಂದುಕೊಂಡು ತೆಪ್ಪಗಿರುವ ನಿಮಗೆ ಹೊಸಕೆಲಸ ಸಿಗುವ ಸಾಧ್ಯತೆ ಹೇರಳ. ಶುಭಸಂಖ್ಯೆ: 5

ಸಿ೦ಹ

ಅನೇಕ ಜನರು ನಿಮ್ಮನ್ನು ಪ್ರಶಂಸಿಸುತ್ತಾರೆ ಎಂಬುದು ಈ ದಿನದ ಸತ್ಯವಾದರೂ ಸ್ವವಿಮರ್ಶೆಗೆ ದಾರಿ ಇರಲಿ. ಶುಭಸಂಖ್ಯೆ: 9

ಕನ್ಯಾ

ಶನಿಕಾಟದಿಂದ ಬೇಸತ್ತಿದ್ದೀರಿ. ರಾಹುಕಾಟವೂ ಇದೆ. ಆದರೆ ಸಹೋದ್ಯೋಗಿಯೊಬ್ಬರಿಂದ ನೆರವಿಗೆ ದಾರಿ ಇದೆ. ಶುಭಸಂಖ್ಯೆ: 6

ತುಲಾ

ಸಾಲಿಗ್ರಾಮವನ್ನು ಪೂಜಿಸುವವರು ಹಾಲಿನ ಸಿಹಿ ನೈವೇದ್ಯದಿಂದ ಪೂಜೆಯನ್ನು ನೆರವೇರಿಸಿ. ಮನದ ಸಂಕಲ್ಪ ಸಿದ್ಧಿ. ಶುಭಸಂಖ್ಯೆ: 3

ವೃಷ್ಟಿಕ

ನಿಮ್ಮ ಚಿಂತೆಗಳನ್ನು ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಹಂಚಿಕೊಳ್ಳಿ. ನಿರಾಳತೆ ಸಾಧ್ಯವಾಗಲಿದೆ. ಶುಭಸಂಖ್ಯೆ: 5

ಧನುಸ್ಸು

ಎಲ್ಲರಿಂದಲೂ ದೂರವಾಗಿದ್ದೇನೆ ಎಂಬನಿರಾಸೆ ಬೇಡ. ಜನರು ಆರಾಧಿಸುವ ದಿನಗಳಿಗಾಗಿ ಹೊಸ ಸಾಧ್ಯತೆ ಲಭ್ಯ. ಶುಭಸಂಖ್ಯೆ: 2

ಮಕರ

ಯಾವುದೋ ಕಾಲದ ಹಳೆಯವಿಚಾರಗಳೆಂದು ಮೂಗು ಮುರಿಯದಿರಿ. ಅವುಗಳ ನೈಜ ಬೆಲೆ ತಿಳಿಯಲಿದೆ. ಶುಭಸಂಖ್ಯೆ: 7

ಕು೦ಭ

ಎಷ್ಟೋ ದಿನಗಳ ಕನಸು ನನಸಾಗುವದಿನವಾಗಿದೆ. ಬೇಸರದಿಂದ ಹೊರಬಂದು ಕ್ರಿಯಾಶೀಲರಾಗಿರಿ. ಶುಭಸಂಖ್ಯೆ: 1

ಮೀನ

ನಿಮ್ಮನ್ನು ಪ್ರಶಂಸಿಸುವವರನ್ನು ಮಾತ್ರವೇ ಆದರಿಸಬೇಡಿ, ಇತರರನ್ನೂ ಆರಾಽಸಿ. ಹೊಸದಕ್ಕೆ ಸಾಧ್ಯತೆ ಜಾಸ್ತಿ. ಶುಭಸಂಖ್ಯೆ: 7

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top