“ಪೇಪರ್ ಬಾಯ್’” ಯಿಂದ ರಾಷ್ಟ್ರಪತಿವರೆಗಿನ ಕಲಾಂರವರ ಜೀವನ ಪ್ರತಿಯೊಬ್ಬರಿಗೂ ಆದರ್ಶಪಾಯವಾದುದ್ದು. ಇಂಡಿಯನ್ ಮಿಸೈಲ್ ಮ್ಯಾನ್ ಅಬ್ದುಲ್ ಕಲಾಂ ತಾನು ಕಂಡ ಕನಸು ” ವಿಶನ್ ಇಂಡಿಯಾ 2020″ ನೋಡುವ ಮೊದಲೇ ಈ ಲೋಕವನ್ನು ಬಿಟ್ಟು ಹೋದರು. ಪ್ರಪಂಚಕ್ಕೆ ಭಾರತದ ತಾಕತ್ತು ಎಂತಹದು ಎಂದು ತೊರಿಸಿದರು. ಅವರ ಜೀವನ ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಅವರ ಬಗೆಗಿನ ಎಷ್ಟೋ ವಿಷಯಗಳು ನಮಗೆ ತಿಳಿಯುತ್ತವೆ. ಅಂತಹ ಆದರ್ಶಪ್ರಾಯವಾದ, ನಿಮಗೆ ತಿಳಿಯದ ಕಲಾಂರವರ ಬಗೆಗಿನ ಮಾಹಿತಿಗಳು ಇಲ್ಲಿವೆ ಓದಿ…
ವಿದ್ಯಾರ್ಥಿ ಜೀವನದಲ್ಲೇ ಅಬ್ದುಲ್ ಕಲಾಂರವರು ಪೇಪರ್ ಬಾಯ್ ಆಗಿ ಬೆಳಿಗ್ಗೆನೇ ಮನೆಮನೆಗೆ ಪೇಪರ್ ಹಾಕುತ್ತಿದ್ದರು. ಹಾಗೆ ಪೇಪರ್ ಹಾಕುವ ಮುಂಚೆ ಆ ಪೇಪರ್ ಪೂರ್ತಿ ಓದುತ್ತಿದ್ದರು. ಕೆಲವೊಮ್ಮೆ ಎರಡೆರಡು ಬಾರಿ ಓದುತ್ತಿದ್ದರು. ಹೀಗೆ ಆರು ವರ್ಷದಿಂದಲೇ ಓದಿನ ಅಭ್ಯಾಸ ಬೆಳೆಸಿಕೊಂಡರು.

Great Quotes
ಈಗ ನಮ್ಮ ದೇಶದಲ್ಲಿ ಸ್ಪೂರ್ತಿ ತುಂಬುವಂತಹ Quotesಗಳಲ್ಲಿ ಕಲಾಂರ Quotes ಎರಡನೇ ಸ್ಥಾನದಲ್ಲಿವೆ. ಮೊದಲನೆಯ ಸ್ಥಾನದಲ್ಲಿರುವುದು ವಿವೇಕಾನಂದರ Quotes.
ಹುಟ್ಟಿನಿಂದಲೇ ಕಲಾಂರವರ ಒಂದು ಕಿವಿಯ ಅರ್ಧಭಾಗ ಮುಚ್ಚಿಕೊಂಡಿತ್ತು. ಸ್ಕೂಲ್’ನಲ್ಲಿ ಇದರ ಬಗ್ಗೆ ಎಲ್ಲರೂ ತಮಾಷೆ ಮಾಡುತ್ತಿದ್ದರು. ಅದಕ್ಕೆ ಕಲಾಂರವರು ಕಿವಿ ಕಾಣದಂತೆ ತಮ್ಮ ಹೆರ್ ಸ್ಟೈಲ್ ಬದಲಾಯಿಸಿಕೊಂಡರು.
ನೀವು ಎಷ್ಟೇ ಹುಡುಕಿದರೂ ಕಲಾಂ ಕೋಪ ಮಾಡಿಕೊಂಡ ಸಂದರ್ಭ ಸಿಗುವುದಿಲ್ಲ. ಯಾಕೆಂದರೆ ಅವರ ಜೀವನದಲ್ಲಿ ಕೋಪ ಮಾಡಿಕೊಂಡಿದ್ದನು ಯಾರೂ ನೋಡಿಲ್ಲ.
ಅವರು ಓದಿದ್ದು ಫಿಸಿಕ್ಸ್ ಆದರೂ ಪರ್ಸನಾಲಿಟಿ ಡೆವಲಪ್ಮೆಂಟ್ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಿದ್ದರು.
ತಾನು ಕಷ್ಟಪಟ್ಟು ಕಟ್ಟಿಸಿದ ಮನೆಯನ್ನು ಮ್ಯೂಸಿಯಮ್ ಮಾಡಿ ಅದನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದರು.
ತನ್ನ ಸಂಪಾದನೆಯನ್ನೆಲ್ಲ ಗ್ರಾಮಗಳ ಅಭಿವೃದ್ದಿ ಕಾರ್ಯಗಳಿಗಾಗಿ ಒಂದು ಟ್ರಸ್ಟ್’ಗೆ ಕೊಡುತ್ತಿದ್ದರು.

Abdul Kalam’s old house in Rameshwara
ಕಲಾಂರವರು ವಿಜ್ಞಾನಿಯಾಗಿ ಭಾರತದ ಮೊದಲ ಕ್ಷಿಪಣಿಯನ್ನು ತಯಾರಿಸಿದ್ದರು.
ಕಲಾಂರಿಗೆ ಏನಾದರೂ ಪ್ರಶ್ನೆಯನ್ನು Mail ಮಾಡಿದರೆ 24 ಗಂಟೆಗಳಲ್ಲಿ Reply ಮಾಡುತ್ತಿದ್ದರು. ಯಾವ ದೇಶದ ರಾಷ್ಟ್ರಪತಿಯೂ ಬರೆಯದಷ್ಟು ಪುಸ್ತಕಗಳನ್ನು ನಮ್ಮ ಕಲಾಂರು ಬರೆದಿದ್ದಾರೆ.

Kalam Loved Kids a lot
— ನಿಮ್ಮ ಪ್ರೀತಿಯ ಸೂರಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
