Karnataka

ಕರ್ನಾಟಕಕ್ಕೆ ಕೇಂದ್ರ ಸರ್ಕಾರ 3 ಹೊಸ ಮೆಡಿಕಲ್ ಕಾಲೇಜುಗಳ ಕೊಡುಗೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಂಗಳೂರು: ಹೊಸ ವರ್ಷಕ್ಕೆ ಕರ್ನಾಟಕ ಸರ್ಕಾರ ಮೂರು ವೈದ್ಯಕೀಯ ಕಾಲೇಜುಗಳನ್ನು ಕೊಡುಗೆಯಾಗಿ ನೀಡುತ್ತಿದೆ. 2016ರ ಶೈಕ್ಷಣಿಕ ವರ್ಷದಿಂದ ಮೂರು ಕಾಲೇಜುಗಳು ಆರಂಭವಾಗಲಿದ್ದು, 450 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ.

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಕೊಡುಗೆ ನೀಡಿದ್ದು , ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಕಾರ್ಯಾರಂಭ ಮಾಡುವಂತೆ ಮೂರು ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.ದೇಶಾದ್ಯಂತ ಒಟ್ಟು 17 ನೂತನ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅನುಮತಿ ನೀಡಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ 3 ವೈದ್ಯಕೀಯ ಕಾಲೇಜುಗಳು ಲಭಿಸಿರುವುದು ಕರ್ನಾಟಕಕ್ಕೆ ಮಾತ್ರ. ಮಹಾರಾಷ್ಟ್ರ, ತೆಲಂಗಾಣ, ಉತ್ತರಪ್ರದೇಶಕ್ಕೆ ತಲಾ ಎರಡು, ಚಂಡೀಗಡ, ನವದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರಾಖಂಡ್ ರಾಜ್ಯಗಳಿಗೆ ತಲಾ ಒಂದು ವೈದ್ಯಕೀಯ ಕಾಲೇಜು ತೆರೆಯಲು ಎಂಸಿಐ ಅನುಮೋದನೆ ನೀಡಿದೆ.

ತಮ್ಮ ರಾಜ್ಯಗಳಿಗೆ ಹೆಚ್ಚಿನ ವೈದ್ಯ ಕೀಯ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡುವಂತೆ ಕೆಲ ರಾಜ್ಯಗಳು ಪ್ರಸ್ತಾವನೆ ಸಲ್ಲಿಸಿ ದ್ದವು. ಇದರಲ್ಲಿ ಉತ್ತರ ಪ್ರದೇಶ 17, ಮಧ್ಯಪ್ರದೇಶ 11, ಕೇರಳ 10, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ತಲಾ 6, ಕರ್ನಾಟಕ 5 ಹಾಗೂ ಇನ್ನಿತರ ಕೆಲವು ರಾಜ್ಯಗಳು ಕೋರಿಕೆ ಸಲ್ಲಿಸಿದ್ದವು. ಆದರೆ ಇದನ್ನು ಎಂಸಿಐ ತಿರಸ್ಕರಿ ಸಿದ್ದು, ಸದ್ಯಕ್ಕೆ ಈ ವರ್ಷ 17 ವೈದ್ಯಕೀಯ ಕಾಲೇಜು ಗಳನ್ನು ತೆರೆಯಲು ಅನುಮೋದನೆ ನೀಡಿದೆ.

ಎಂಸಿಐ ನೀಡಿರುವ ಅನುಮೋದನೆಯಂತೆ ಈ ವರ್ಷ ರಾಜ್ಯದಲ್ಲಿ ಕೊಡಗು, ಕಾರವಾರ ಮತ್ತು ಚಾಮರಾಜನಗರದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು ಪ್ರಾರಂಭ ವಾಗಲಿವೆ. ಇದರಿಂದ ರಾಜ್ಯಕ್ಕೆ ಒಟ್ಟು 450 ಹೆಚ್ಚುವರಿ ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ. ದೇಶದಲ್ಲಿ ಒಟ್ಟು 439 ವೈದ್ಯಕೀಯ ಕಾಲೇಜುಗಳಿದ್ದು, 59,288 ವೈದ್ಯಕೀಯ ಸೀಟುಗಳು ಲಭ್ಯವಿದೆ. ಇದರಲ್ಲಿ ಕರ್ನಾಟಕದಲ್ಲೇ 53 ವೈದ್ಯಕೀಯ ಕಾಲೇಜುಗಳಿದ್ದು, 7,355 ವೈದ್ಯಕೀಯ ಸೀಟುಗಳು ರಾಜ್ಯಕ್ಕೆ ಲಭಿಸುತ್ತವೆ. ನೂತನವಾಗಿ ಕಾರ್ಯಾರಂಭ ಮಾಡಲಿರುವ ವೈದ್ಯಕೀಯ ಕಾಲೇಜುಗಳು, 300 ಹಾಸಿಗೆ ಹಾಗೂ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಎಂಸಿಐ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಸದ್ಯದಲ್ಲೇ ಈ ಮೂರು ಜಿಲ್ಲೆಗಳಿಗೆ ಉನ್ನತ ಅಧಿಕಾರಿಗಳ ತಂಡ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದೆ.

ರಾಜ್ಯದಲ್ಲಿ 5 ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕೆಂದು ಸರ್ಕಾರ 2 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿತ್ತು. ಪ್ರತಿವರ್ಷ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಳವಾಗುತ್ತಿ ರುವುದರಿಂದ ಕಾಲೇಜುಗಳ ಅನುಮತಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಮಡಿಕೇರಿ, ಚಾಮರಾಜ ನಗರ ಮತ್ತು ಕಾರವಾರದಲ್ಲಿ ಕಾಲೇಜು ಗಳ ಆರಂಭಕ್ಕೆ ಅನುಮೋದನೆ ಸಿಕ್ಕಿರುವುದರಿಂದ ವೈದ್ಯಕೀಯ ಸೀಟು ಸಿಗದೆ ಪರದಾಡುವವರಿಗೆ ಅನುಕೂಲವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top