fbpx
Karnataka

ರಜನೀಕಾಂತ್ ರನ್ನು ಮಹದಾಯಿ ಹೋರಾಟಕ್ಕೆ ಕರ್ಕೊಂಡು ಬನ್ನಿ…

ಪ್ರಿಯ ಕನ್ನಡಿಗರೇ,

ಅವರು ಕನ್ನಡಿಗ ಎಂಬ ಕಾರಣಕ್ಕೆ ‪ಕಬಾಲಿ‬ ಚಿತ್ರವನ್ನು ನೋಡಲೇಬೇಕೆಂದು ಹಠ ತೊಟ್ಟವರಂತೆ ನಾ ಮುಂದು ತಾ ಮುಂದು ಎಂಬಂತೆ ಚಿತ್ರ ವೀಕ್ಷಿಸಿದ ಸತ್ಯ ಕನ್ನಡಿಗರಲ್ಲಿ ಒಂದು ನಮ್ರತೆಯ ಮನವಿ…

ನಿಮ್ಮವರೇ ಆದ “ಕನ್ನಡಿಗ” ರಜನೀಕಾಂತ್ ರನ್ನು ಮಹದಾಯಿ ಹೋರಾಟಕ್ಕೆ please ಕರ್ಕೊಂಡು ಬನ್ನಿ… ಹೌದು ಹೀಗೊಂದು ಮನವಿ ಎಲ್ಲ ಕನ್ನಡಿಗರ ಬಾಯಲ್ಲಿ ಹರಿದಾಡುತ್ತಿದೆ. ಅತ್ತ ಸರ್ವೇ ಸಾಮಾನ್ಯವೆಂಬಂತೆ ಕಬಾಲಿ ಚಿತ್ರ ಕೋಟಿಗಟ್ಟಲೆ ಹಣ ದೋಚುತ್ತಿದ್ದರೆ ಇತ್ತ ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹಲವು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಚಲನಚಿತ್ರೋದ್ಯಮ ಜುಲೈ 30ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸೇರಿದಂತೆ ಈ ವಿಚಾರದಲ್ಲಿ ಕನ್ನಡಿಗರು ಎಲ್ಲರು ಒಂದಾಗಿದ್ದಾರೆ. ಎಲ್ಲ ಕನ್ನಡಪರ, ರೈತಪರ, ದಲಿತಪರ ಹಾಗೂ ಕಾರ್ಮಿಕ ಸಂಘಟನೆಗಳ ಬೆಂಬಲ ಕೋರಲಾಗಿದೆ.

ಜನರು ಎಷ್ಟು ಮೂಢರಾಗಿದ್ದಾರೆಂದರೆ ಎಷ್ಟೋ ಸಾರಿ ತಾವೇನು ಮಾತಾಡುತ್ತಿದೇವೆ ಎಂಬ ಅರಿವೇ ಇಲ್ಲದೆ ಮಾತಾಡುತ್ತಿರುತ್ತಾರೆ, ಅದಕ್ಕೆ ಉದಾಹರಣೆ ಎಂಬಂತೆ ಎಷ್ಟೋ ಮಂದಿ ರಜಿನಿಕಾಂತ್ ‘ಕನ್ನಡಿಗ’ ಎಂಬ ಕಾರಣ ಕೊಟ್ಟು ಅವರ ಸಿನಿಮಾ ವೀಕ್ಷಿಸುತ್ತಿರುವ ಎಷ್ಟೋ ಮಂದಿ ಕನ್ನಡಿಗರಿಗೆ ರಜಿನಿ ಬಗ್ಗೆ ಅತಿಯಾದ ವ್ಯಾಮೋಹ. ನಿಮಗೆ ಗೊತ್ತಿರಬಹುದು, 1975 ರಲ್ಲಿ ಅಂದರೆ ಹತ್ತ ಹತ್ತಿರ 40 ವರ್ಷಗಳ ಹಿಂದೆಯೇ ತಮಿಳುನಾಡಿಗೆ ವಲಸೆ ಹೋದ ರಜಿನಿಕಾಂತ್ ಈ ಕಡೆ ತಲೆ ಹಾಕಿದ್ದೇ ಇಲ್ಲ, ಯಾವುದೇ ಕನ್ನಡ ಹೋರಾಟಗಳಲ್ಲಾಗಲಿ, ಕಾವೇರಿ ವಿಚಾರದಲ್ಲಿ ಆಗಲಿ ಕಿಂಚಿತ್ತೂ ಕಾಳಜಿ ತೋರದೆ, ತಮಿಳುನಾಡು ನಮ್ಮಮ್ಮ ಎಂದು ಅಲ್ಲಿನ ಸಂಸ್ಕೃತಿಗೆ, ಜನರು ಕೊಟ್ಟ ಅನ್ನಕ್ಕೆ ನಿಷ್ಠೆ ತೋರುತ್ತಿದ್ದಾರೆ ಅದು ತಪ್ಪು ಕೂಡ ಅಲ್ಲವೇ ಅಲ್ಲ… ಆದರೆ ನಮ್ಮ ಜನಕ್ಕೆ ಅದೇನು ರಜಿನಿ ರೋಗ ಬಂದಿದೆಯೋ ನಾ ಕಾಣೆ…!!

ಪ್ರತಿ ಸಾರಿ ರಜಿನಿ ಸಿನಿಮಾಗಳು ಬೆಂಗಳೂರಿನಲ್ಲಿ ಬಿಡುಗಡೆಯಾದಾಗ ತಮಿಳುನಾಡಿನ ಚೆನ್ನೈ ಏನೋ ಎಂಬ ಭಾವನೆ ಎಲ್ಲರಲ್ಲಿ ವ್ಯಕ್ತವಾಗುತ್ತದೆ. ಮೂಲಗಳ ಪ್ರಕಾರ ಕಬಾಲಿ 50 ಕೋಟಿಗೂ ಹೆಚ್ಚು ಕರ್ನಾಟಕ ಒಂದರಲ್ಲೇ ಗಳಿಕೆ ಮಾಡಿದೆ ಎನ್ನಲಾಗಿದೆ. ಸಂತೋಷ, ಆದರೆ ನಮ್ಮ ಪ್ರೆಶ್ನೆ ಅದು ಅಲ್ಲವೇ ಅಲ್ಲ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ತಾವು ಕನ್ನಡಿಗರು ಎಂದು ಹೇಳಿಕೊಳ್ಳುವ ರಜಿನಿಕಾಂತ್ ಒಂದು ಇಂತಹ ಕಷ್ಟ ಕಾಲದಲ್ಲಿ ಜನರ ನೋವಿಗೆ ಸ್ಪಂದಿಸದೆ ಕರ್ನಾಟಕ ಇರುವುದೇ ತನ್ನ ಸಿನೆಮಾಗಳ ಪ್ರದರ್ಶನ ಮಾಡಲಿಕ್ಕೆ ಎಂಬಂತೆ ವರ್ತಿಸುತ್ತಿರುವುದು ಕಂಡರೆ ಸಿನೆಮಾಗಳ ವಿಚಾರ ಬಂದಾಗ ಕನ್ನಡಿಗರನ್ನು “ಉಪಯೋಗಿಸಿಕೊಂಡು” ಕನ್ನಡಿಗರಿಗೆ ಕಷ್ಟ ಬಂದಾಗ ಕಾಲು ಕಸ ಮಾಡುತ್ತಿರುವುದು ಎದ್ದು ಕಾಣುತ್ತಿದೆ…

ಬೇರೆಯವರ ಬಗ್ಗೆ ಮಾತಾಡುವ ಮುನ್ನ ಕನ್ನಡಿಗರಾದ ನಾವು ರಜಿನಿ ಗುಂಗಿನಿಂದ ಹೊರಬಂದು ಇತ್ತ ಕಡೆ ತಮಿಳುನಾಡಿನವರಿಂದ, ಅತ್ತ ಕಡೆ ಗೋವಾ ದವರಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಎಚ್ಚೆತ್ತುಕೊಂಡು ಮುನ್ನೆಡೆದರೆ ಒಳಿತು…

-ಗಿರೀಶ್ ಗೌಡ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top