fbpx
News

ಡ್ಯಾಶಿಂಗ್ ಡೆನ್ಮಾರ್ಕ್

ಕಳೆದ ಮಾರ್ಚಿಯಲ್ಲಿ ನನಗೆ ಡೆನ್ಮಾರ್ಕ್‌ಗೆ ಹೋಗುವ ಅವಕಾಶ ಒದಗಿಬಂದಿತ್ತು, ಡೆನ್ಮಾರ್ಕ್ ಉತ್ತರ ಯೋರೊಪಿನಲ್ಲಿರುವ ಒಂದು ಪುಟ್ಟ ರಾಷ್ಟ್ರ, ನಿಮಗೆ ಗೊತ್ತೆ? ಪ್ರಪಂಚದಲ್ಲಿ ಅತಿ ಹೆಚ್ಚು ಸಂತೋಷದಿಂದ ಬದುಕುತ್ತಿರುವವರು ಡೆನ್ಮಾರ್ಕಿಗರು , ಕ್ರೈಂ ಎಂಬುದು ಇಲ್ಲಿ ಇಲ್ಲವೇ ಇಲ್ಲಾ! ಭಿಕ್ಷುಕರು ಹುಡುಕಿದರು ಸಿಗುವುದಿಲ್ಲಾ!ಜ್ಯೂಟ್ ಪ್ರದೇಶ ಹಾಗೂ ಬಾಲ್ಟಿಕ್ ಸಮುದ್ರದಲ್ಲಿರುವ ಅನೇಕ ದ್ವೀಪಗಳನೊಳಗೊಂಡ ರಾಷ್ಟ್ರವಾಗಿದೆ, ಡೆನ್ಮಾರ್ಕ್‌ಗೆ ಕೇವಲ 68ಕಿಮೀ ಮಾತ್ರ ಬೂಗಡಿಪ್ರದೇಶವಿದ್ದು 7313 ಕಿಮಿಯಷ್ಟು ಸಮುದ್ರಗಡಿ, ಈ ರಾಷ್ಟ್ರದಲ್ಲಿ 1400 ಕ್ಕಿಂತ ಅಧಿಕ ದ್ವೀಪಗಳಿದೆ,ಇವುಗಳಲ್ಲಿ 443 ದ್ವೀಪಗಳಿಗೆ ಹೆಸರಿದ್ದರೆ ಸೂಮಾರು 73 ದ್ವೀಪಗಳಲ್ಲಿ ಜನವಸತಿಯೂ ಇದೆ,ಇವುಗಳಲ್ಲಿ ಜೀಲ್ಯಾಂಡ್ ಮತ್ತು ಪುವಿನ್ ದೊಡ್ಡ ದ್ವೀಪಗಳಾಗಿದೆ, ಇಲ್ಲಿರುವ ದೊಡ್ಡದೊಡ್ಡ ದ್ವೀಪಗಳನ್ನು ಸೇತುವೆಗಳ ಮೂಲಕ ಸಂಪರ್ಕಿಸಲಾಗಿದೆ, ಜೀಲ್ಯಾಂಡ್ ನಿಂದ ಪ್ರಾರಂಭವಾಗುವ ಒರ್ಸ್ಂಡ್ ಸೇತುವೆ ಸ್ವೀಸ್ ದೇಶವನ್ನು ಸಂಪರ್ಕಿಸುತ್ತದೆ, ಜೀಲ್ಯಾಂಡ್ ನಲ್ಲಿರುವ ಕೂಪೆನ್‌ಹೇಗನ್ ಡೆನ್ಮಾರ್ಕ್ ರಾಜಧಾನಿಯಾಗಿದ್ದು ಅರ್ಹಸ್, ಅಲ್ಬರ್ಗ್, ಇಸ್ಬರ್ಗ್ ಹಾಗು ಜ್ಯೂಟ್‌ಲ್ಯಾಂಡ್ ನಲ್ಲಿರುವ ಒಡೆನ್ಸ್ ಪ್ರಮುಖ ನಗರಗಳಾಗಿದೆ, 2012 ರ ಜನಗಣತಿಯ ಪ್ರಕಾರ ಈ ದೇಶದ ಜನಸಂಖ್ಯೆ 55,43,453 ಇದರಲ್ಲಿ ಕಾಲುಬಾಗ ಜನ ಕೂಪನ್ ಹೇಗನ್‌ನಲ್ಲಿ ವಾಸಿಸುತ್ತಾರೆ,

denmark map flag

ಡೆನ್ಮಾರ್ಕ್ ಜನ-ಜೀವನ:ಡೆನ್ಮಾರ್ಕ್ ಸ್ಕ್ಯಾಂಡಿನೇವಿಯ ಭೂಪ್ರದೇಶವನ್ನು ಒಳಗೊಂಡಿದೆ, ಡೆನ್ಮಾರ್ಕ್ ನಲ್ಲಿ ಶೇಕಡಾ 90 ಭಾಗ ಪ್ರೋಟೆಸ್ಟ್ಂಟ್ ಕ್ರಿಶ್ಚಿಯನ್ನರು ಇದ್ದಾರೆ, ನೀವು ಡೆನ್ಮಾರ್ಕ್‌ಗೆ ಹೋಗಿ ಅವರಲ್ಲಿ ಒಬ್ಬರಾಗಿ ಬದುಕಬೇಕೆಂದರೆ ನೀವು ಡ್ಯಾನಿಷ್ ಭಾಷೆಯನ್ನು ಕಲೆಯಲೇ ಬೇಕು, ನೀವು ಕೆಲಸದ ನಿಮಿತ್ತ ಹೋಗಿ ನಿಮಗೆ ಅಲ್ಲಿ ವಾಸಿಸುವ ಪರವಾನಿಗೆ ಪತ್ರ ದೊರೆಯಿತೆಂದರೆ ನೀವು ಢ್ಯಾನಿಷ್ ಕಲಿಯಲೆಬೇಕು, ಇದಕ್ಕೆ ನೀವು ಯಾವುದೇ ರೀತಿಯ ಹಣ ಕೊಡಬೇಕಾಗಿಲ್ಲಾ, ಅಯಾ ನಗರ ಪ್ರದೇಶಗಳ ಎಲ್ಲಾ ಮುನಿಸಿಪಾಲಿಟಿಗಳಲ್ಲಿ ಉಚಿತವಾಗಿ ಈ ಕಲಿಕಾ ತರಬೇತಿಗಳನ್ನು ಏರ್ಪಡಿಸುತ್ತಾರೆ, ಇದು ನೀವು ಡೆನ್ಮಾರ್ಕ್ ನಲ್ಲಿ ವಾಸಿಸಬೇಕೆಂದರೆ ಮಾಡಬೇಕಾದ ಮೊದಲ ಹೆಜ್ಜೆ, ಇಂಗ್ಲೀಷನ್ನು ಇಲ್ಲಿ ಮಾತನಾಡುವುದಿಲ್ಲವೆಂದಲ್ಲಾ, ಅದರೆ ಅವರು ಮಾತನಾಡುವ ರೀತಿಯಿಂದ ನಮಗೆ ಇಂಗ್ಲೀಷ್ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ, ಇಲ್ಲಿನ ಜನರ ದೇಹ ರಚನೆಯ ಬಗ್ಗೆ ಹೇಳಲೆ ಬೇಕು, ಇಲ್ಲಿ ಐದು ಐದುವರೆ ಅಡಿಗಿಂತ ಕಡಿಮೆ ಎತ್ತರ ಇರುವ ವ್ಯಕ್ತಿಗಳನ್ನು ನೋಡಲು ಸಿಗುವುದು ನಿಮಗೆ ಅಪರೂಪ, ಎಲ್ಲರೂ ಐದುವರೆ ಅಡಿಗಿಂತ ಜಾಸ್ತಿ‌ಎತ್ತರದವರೆ, ಸಪೂರ ಮ್ಯೆಕಟ್ಟು, ಬೊಜ್ಜಿನದೇಹದವರು ಕಡಿಮೆಯೆಂದೆ ಹೇಳಬೇಕು, ಒಂದೆರೀತಿಯ ಮ್ಯೆಬಣ್ಣ, ಹೊಂಬಣ್ಣದ ಕೂದಲು, ಎಲ್ಲರ ಮುಖಗಳು ತಿದ್ದಿ ತೀಡಿಮಾಡಿದ ಹಾಗೆ ಒಬ್ಬರಿಗಿಂತ ಒಬ್ಬರು ಸುಂದರವಾಗಿರುತ್ತಾರೆ, ದೇಹಾರೋಗ್ಯದ ಬಗ್ಗೆ ತುಂಬಾ ಎಚ್ಚರ ವಹಿಸುತ್ತಾರೆ, ರಸ್ತೆಗಳ ಇಕ್ಕೆಲಗಳಲ್ಲಿ ಜಾಗಿಂಗ ಮಾಡುವ ಜನರನ್ನು ಸದಾ ನೋಡಬಹುದು, ಇವರ ಬಗ್ಗೆ ಕಾಮೆಂಟ್ ಮಾಡುವಾಗ ನನ್ನ ಸ್ನೇಹಿತ ಮೆಲ್ವಿನ್ ಬ್ರಹ್ಮ ಮೊದಲು ಡೆನ್ಮಾರ್ಕಿಗರನ್ನು ಸೃಷ್ಟಿಸಿರಬೇಕು,ಕೊನೆಯಿಂದ ಏರಡನೆಯವರಾಗಿ ನಮ್ಮನ್ನು ಸೃಷ್ಟಿಸಿರಬೇಕು, ಎಂದು ತಮಾಷೆ ಮಡುತ್ತಿದ್ದ. ಕೊನೆಯದಾಗಿ ಯಾರನ್ನು ಸೃಷ್ಟಿಸಿರಬೇಕೆಂದು ನಾನು ಬೇರೆ ಹೇಳಬೇಕಿಲ್ಲಾ!! ನಿಮಗೂ ಯಾರೆಂದು ಗೊತ್ತಾಗಿರಬಹುದು. ಡೆನ್ಮಾರ್ಕಿಗರು ಸಹ ಬೇರೆಯವರಂತೆ ತಮ್ಮದೇ ಆದ ಸಾಂಪ್ರಾದಾಯವನ್ನು ಪಾಲಿಸುತ್ತಾರೆ, ಯಾವುದೇ ಸಮಾರಂಭ, ಮದುವೆ, ಹಬ್ಬ, ಔತಣಕೂಟ ಎಲ್ಲಾದರಲ್ಲೂ ತಮ್ಮದೇ ಆದ ಸಾಂಪ್ರಾದಾಯವನ್ನು ಪಾಲಿಸುತ್ತಾರೆ, ಮನೆ‌ಒಳಗೆ ಹೋಗುವ ಮೋದಲು ಷೂವನ್ನು ಮನೆ ಹೊರಗಡೆ ಬಿಡುವುದನ್ನು ಮರೆಯುವುದಿಲ್ಲಾ!ಡ್ಯಾನಿಷಿಗರು ಅಷ್ಟೊಂದು ಆಸ್ತಿಕರಲ್ಲಾ!ಅವರು ಚರ್ಚಗಳಿಗೆ ಹೋಗುವುದು ಕಡಿಮೆ,ಅವರ ದ್ಯೆನಂದಿನ ಜೀವನದಲ್ಲಿ ಆಧ್ಯಾತ್ಮ ಅಷ್ಟೋಂದು ಹಾಸುಹೊಕ್ಕಾಗಿಲ್ಲ!ಅಸ್ತಿಕತೆ ಅಧ್ಯಾತ್ಮ ಎಂಬುದು ಬಹಳ ಖಾಸಗಿ ವಿಷಯವೆಂದು ಅವರು ಪರಿಗಣಿಸುತ್ತಾರೆ, ಅದನ್ನು ಬಹಿರಂಗವಾಗಿ ತೋರ್ಪಡಿಸುವ ಅಗತ್ಯವಿಲ್ಲ ಎಂದು ನಂಬಿದ ಜನ ಅವರು, ಹಾಗಾಗಿ ಅವರು ಚರ್ಚಗಳಿಗೆ ಹೋಗುವುದು ಕಡಿಮೆ,ನಾನು ಉಳಿದುಕೊಂಡಿದ್ದ ಜಾಗದ ಬಳಿಯೆ “ಮಾರ್ಕುಸ್ ಕುರ್ಕೆ” ಎಂಬ ಭವ್ಯವಾದ ಪುರಾತನವಾದ ಚರ್ಚ ಇತ್ತು, ಭಾನುವಾರ ಕೂಡ ನಾನು ಅದು ತೆಗೆದದ್ದನ್ನು ನೋಡಲಿಲ್ಲ!ಚರ್ಚನ ಮೇಲಿದ್ದ ಗಡಿಯಾರ ಮಾತ್ರ ಪ್ರತಿಘಂಟೆಗೊಮ್ಮೆ ಘಂಟೆ ಭಾರಿಸುತ್ತಿತ್ತು, ಕ್ರಿಸ್ ಮಸ್ ಸಮಯದಲ್ಲಿ ಮಾತ್ರ ಇವರು ಚರ್ಚಗೆ ಹೋಗುತ್ತಾರೆ, ಇಲ್ಲಿ ಕ್ರೆಸ್ತಧರ್ಮಕ್ಕೆ ಸಂಭಂದಪಟ್ಟ ಹಬ್ಬಗಳನ್ನು ಸಹ ಅಚರಿಸುವುದಿಲ್ಲವೆಂದು ನನ್ನ ಸ್ನೇಹಿತ ಹೇಳುತ್ತಿದ್ದ, ಗುಡ್ ಫ಼್ರೆಡೆ ದಿನ ನಾನು ಅಲ್ಲಿಯೆ ಇದ್ದನಲ್ಲಾ! ನಗರ ಎಂದಿನಂತೆ ಇತ್ತು, ನನ ಸ್ನೇಹಿತ ಹೇಳುತ್ತಿದ್ದ ಅವರ ಡೆನ್ಮಾರ್ಕ್ ಸ್ನೇಹಿತನಿಗೆ ಇದರಬಗ್ಗೆ ಕೇಳಿದ್ದನಂತೆ, ಅದಕ್ಕೆ ಅವರು ಅಲ್ಲಿ ಯುವಜನಾಂಗ ಈಗ ಹೆಚ್ಚಾಗಿದ್ದು ಅವರು ತಮ್ಮನ್ನು ತಾವು ಆಸ್ತಿಕರೆಂದು ಹೇಳಿಕೊಳ್ಳಲು ಇಚ್ಚಿಸುವುದಿಲ್ಲವಂತೆ.
ಯುರೋಪಿನ ಪ್ರಮುಖರಾಷ್ಟ್ರವಾಗಿರುವ ಡೆನ್ಮಾರ್ಕ್ ತನ್ನಲ್ಲಿ ಹಲವಾರು ಪ್ರವಾಸಿತಾಣಗಳನ್ನು ಅಡಗಿಸಿಕೊಂಡಿದೆ ಯುವಜನರಿಗೆ ಇಲ್ಲಿ ಅನೇಕ ಅಮ್ಯೂಸ್ಮೆಂಟ್ ಪಾರ್ಕಗಳು ಕ್ಯೆಬೀಸಿಕರೆದರೆ ಮತ್ಸ ಪ್ರಿಯರಿಗೆ ಅನೇಕ ದೊಡ್ಡದೊಡ್ಡ ಓಷನೇರಿಯಂ (ಸಮುದ್ರದಲ್ಲಿ ನಿರ್ಮಿಸಿರುವ ಅಕ್ವೇರಿಯಂಗಳು) ಮುದನೀಡುತ್ತದೆ, ಕಲೆಸಂಸ್ಕೃತಿಯನ್ನು ಇಷ್ಟಪಡುವವರಿಗೆ ಇತಿಹಾಸ ಪ್ರಿಯರಿಗೆ ಅನೇಕ ಪುರಾತನ ವಸ್ತುಸಂಗ್ರಹಾಲಯಗಳು , ಅತ್ಯಾಕರ್ಷಕ ಐತಿಹಾಸಿಕ ಅರಮನೆಗಳು ಇಲ್ಲಿದೆ..

article-0-1FB9A59400000578-548_634x501

ತಿವೋಲಿ ಗಾರ್ಡನ್: ಕೂಪೆನ್ ಹೆಗನ್ ರೈಲ್ವೆ ನಿಲ್ದಾಣದಿಂದ ಹೊರಬಂದು ಬಲಕ್ಕೆ ಐದುನಿಮಿಷನಡೆದರೆ ಸಾಕು ತಿವೋಲಿ ಅಮ್ಯೂಸ್ಮೆಂಟ್ ಗಾರ್ಡನ್ ನಿಮಗೆ ಸ್ವಾಗತಿಸುತ್ತದೆ, ಡಿಸ್ನಿ ಪಾರ್ಕಿನ ಪರಿಕಲ್ಪನೆಯಲ್ಲಿಯೇ ನಿರ್ಮಿಸಲಾದ ಇಲ್ಲಿರುವ ಗಾರ್ಡನ್ 1843ರಲ್ಲಿಯೆ ನಿರ್ಮಾಣವಾಗಿದೆ, 20ಕ್ಕೂ ಹೆಚ್ಚು ವ್ಯೆವಿಧ್ಯಮಯ ಆಟಗಳು ಇಲ್ಲಿದ್ದು , ಕನ್ನಡಿಯ ದೊಡ್ಡ ಮನೆ, ಡಿಸ್ನಿಲೋಕದ ವಿವಿಧ ಪಾತ್ರದ ಮೂಕವೇಷಧಾರಿಗಳು ಮಕ್ಕಳನ್ನು ಮನರಂಜಿಸಿದರೆ,ಬಯಲು ರಂಗಮಂದಿರಗಳಲ್ಲಿ ನಾಟಕಗಳು ನೆಡೆಯುತ್ತಿರುತ್ತದೆ,ಹೋಟೆಲ್ ಗಳು ಕೆಫ಼ೆಗಳು, ಹೂವಿನ ತೋಟ ಅನೇಕ ಹಾಲಿವುಡ್ ಸಿನಿಮಾಗಳ ಶೂಟಿಂಗ್ ಇಲ್ಲಿ ನೆಡೆದಿದ್ದು, ಕ್ರಿಸ್ ಮಸ್ ಸಮಯದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುವ ತಿವೋಲಿ ಗಾರ್ಡನ್ ಪ್ರಾವಸಿಗರ ಅಚ್ಚುಮೆಚ್ಚಿನ ತಾಣ

ನಾರ್ಡ್‌ಸೋಯಿನ್ ಓಷನೇರಿಯಂ: ಉತ್ತರ ಜೂಟ್ ಲ್ಯಾಂಡಿನ ಹಿರ್ಟ್‌ಶಾಲ್ಸ ಸಮುದ್ರತೀರದಲ್ಲಿದೆ, ಇಲ್ಲಿ 70 ರೀತಿಯ ಮೀನಿನ ಪ್ರಭೇದಗಳನ್ನು ನೋಡಬಹುದು ಡೆನ್ಮಾರ್ಕ್ ನಲ್ಲಿ ಅನೇಕ ಸಮುದ್ರ ತೀರದ ಓಷನೇರಿಯಂ ಅಂದರೆ ಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಮತ್ಸ್ಯಾಗಾರಗಳು ಇದೆ, ಅವುಗಳಲ್ಲಿ ನಾರ್ಡ್‌ಸೋಯಿನ್ ಹಾಗೂ ಬ್ಲೂಪ್ಲಾನೆಟ್ ಓಷನೇರಿಯಂಗಳು ಮುಖ್ಯವಾದವು.ಅಲ್ಬರ್ಗನಿಂದ ೩೦ ಕೀಮಿ ಹೊದರೆ ಹಿರ್ಟ್‌ಶಾಲ್ಸ ಎಂಬ ಸಣ್ಣ ಪಟ್ಟಣವಿದೆ, ಇಲ್ಲಿ ಸಮುದ್ರಕ್ಕೆ ಹೊಂದಿಕೊಂಡಂತೆ ನಾರ್ಡ್‌ಸೋಯಿನ್ ಓಷನೇರಿಯಂ ಇದೆ, ಪೂರ್ತಿ ಓಷನೇರಿಯಂ ನೋಡಲು ಒಂದುದಿನ ಬೇಕು,ಟಿಕೇಟ್ ತೆಗೆದುಕೊಂಡು ಒಳಹೊಕ್ಕರೆ ಸುಂದರ ಮತ್ಸ್ಯ ಲೋಕ ನಿಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ, ಇಲ್, ಭಯಾನಕ ಶಾರ್ಕ್, ತಿಮಿಂಗಲ, ಎಲೆಕ್ಟ್ರಿಕ್ ರೆ, ಅಕ್ಟೋಪಸ್, ಸಮುದ್ರಕುದುರೆಯಂತಹ ಅನೇಕ ಮೀನುಗಳನ್ನು ಹತ್ತಿರದಿಂದ ನೋಡಬಹುದಲ್ಲದೇ ತುಂಟ ಸೀಲ್ ಗಳೊಂದಿಗೆ ಆಟವನ್ನು ಆಡಬಹುದು. ಪುರಾತನ ಶಾರ್ಕ್‌ಗಳು ತಿಮಿಂಗಲಗಳು ಹಾಗೂ ಅನೇಕ ಜಲಚರ ಪ್ರಾಣಿಗಳ ಪಳೆಯಳಿಕೆಗಳ ದೊಡ್ಡ ಮ್ಯೂಸಿಯಂ ಕೂಡ ಇದರೊಳಗೆ‌ಇದೆ, ಸಮುದ್ರದೊಳಗೆ ಮುಳುಗಿರುವ ಸಣ್ಣ ಹಡಗನ್ನು ಸಹ ನೀವು ಇಲ್ಲಿ ನೋಡಬಹುದು, ಇಲ್ಲೊಂದು ದೊಡ್ಡ ಪರದೆಯಿದ್ದು ಅದರ ಮುಂದೆನಿಂತು ನಿಮ್ಮ ಕ್ಯೆಯನ್ನು ಹೇಗೆ ಆಡಿಸುತ್ತಿರೋ ಹಾಗೆ ಒಂಡು ಶಾರ್ಕ್ ಈಜುತ್ತಿರುತ್ತದೆ, ಕೋನೆಗೊಮ್ಮೆ ಅದು ನಿಮ್ಮ ಮೈಮೇಲೆ ಬಂದಂತಾಗಿ ಫ಼್ಲಾಷ್ ಲ್ಯೆಟ್ ಬರುತ್ತದೆ, ಶಾರ್ಕ್ ಬಾಯಿಯೊಳಗೆ ನೀವಿರುವ ಹಾಗೊಂದು ಫ಼ೋಟೋ ಕ್ಲಿಕ್ ಅಗಿರುತ್ತದೆ, ಅದು ಬೇಕೆಂದರೆ ನೀವು ಮೂವತ್ತು ಕ್ರೋನರ್ಸ ಅಂದರೆ (ಮೂನ್ನೂರು ರೂಪಾಯಿಗಳು) ಹಾಕಿ ನಿಮ್ಮ ಮಿಂಚಂಚೆ ವಿಳಾಸಕ್ಕೆ ನಿಮ್ಮ ಆ ಫ಼ೋಟೋ ಬರುತ್ತದೆ, ಇಲ್ಲಿ ಪ್ರತಿದಿನ ಬೆಳಗ್ಗೆ 11ಘಂಟೆ ಹಾಗೂ ಮಧ್ಯಾಹ್ನ 3 ಘಂಟೆಗೆ ಸೀಲ್‌ಗಳಿಗೆ ಹಾಗೂ ಮಧ್ಯಾಹ್ನ 1 ಘಂಟೆಗೆ ಶಾರ್ಕ್‌ಗಳಿಗೆ ಊಟಹಾಕುತ್ತಾರೆ, ಇದನ್ನು ನೋಡಲೆಂದೆ ಪ್ರವಾಸಿಗರು ಓಶನೇರಿಯಂನಲ್ಲಿ ಇವುಗಳಿರುವ ಭಾಗಕ್ಕೆ ದೌಡಾಯಿಸುತ್ತಾರೆ, ಇಲ್ಲಿ ಸುಮಾರು ಐನೂರು ಜನ ಕುಳಿತು ನೋಡಬಹುದಾದ ದೊಡ್ಡ ಗ್ಯಾಲರಿ ಇದ್ದು ಒಬ್ಬರು ವಿವರಣೆಕೊಡೂತ್ತಿದ್ದರೆ ಇನ್ನೊಬ್ಬ ಡೈವರ್ ನೀರೊಳಗೆ ಧುಮುಕಿ ಶಾರ್ಕಗಳಿಗೆ ತಿನ್ನಿಸುವುದು ರೋಚಕವಾಗಿರುತ್ತದೆ, ಸಮುದ್ರದೊಳಗೆ ದೊಡ್ಡ ದೊಡ್ಡ ರೆಸ್ಟೂರಾಂಟ್‌ಗಳಿದೆ, ಶಾಪಿಂಗ್ ಪ್ರಿಯರಿಗೆ ದೊಡ್ಡ ಅಂಗಡಿಯಿದ್ದು ಇಲ್ಲಿ ಸಮುದ್ರ ಜಲಚರಗಳ ಮಾದರಿಯ ಅನೇಕ ಅಲಂಕಾರಿಕ ಕೀಚೈನ್‌ಗಳು, ಸರ ಬಳೆ , ಮೃದು ಆಟಿಕೆಗಳು ಟಿಶರ್ಟ್ ಗಳು ಇನ್ನು ಅನೇಕ ವಸ್ತುಗಳನ್ನು ಖರಿದೀಸಬಹುದು. ಮೀನುಪ್ರಿಯರಿಗೆ ಅಲ್ಲೇ ಋತುಮಾನಕ್ಕನುಗುಣವಾಗಿ ಸಿಗುವ ಮೀನುಗಳನ್ನು ಹಿಡಿದು ನಿಮಗಿಷ್ಟವಾದ ಮೀನಿನ ಖಾದ್ಯಗಳನ್ನು ಮಾಡಿಸಿಕೊಂಡು ತಿನ್ನಬಹುದು, ಓಷನೇರಿಯಂನಲ್ಲಿ ಮಕ್ಕಳಿಗೆಂದೆ ಆಟದ ಜಾಗವೂ ಇದೆ, ಎಲ್ಲಾರೀತಿಯ ಜಲಚರಗಳನ್ನು ನೋಡಬೇಕೆಂದರೆ ಒಂದು ದಿನ ಸಾಕಾಗುವುದಿಲ್ಲಾ!.ಇದು ಯೋರೊಪಿನ ಅತ್ಯಂತ ದೊಡ್ಡ ಓಷನೇರಿಯಂ ಅದರೆ ಇಲ್ಲಿಂದ ಸ್ವಲ್ಪದೂರದಲ್ಲಿ ಯುರೋಪಿನ ಅತ್ಯಂತ ಸುಂದರ ಪ್ರಾಣಿಸಂಗ್ರಹಲಯವಿದೆ, ಇಲ್ಲಿನ ಭೀಮಗಾತ್ರದ ಜಿಂಕೆಗಳು, ರೈನೋಸರಸ್‌ಗಳು, ದೊಡ್ಡ ಆನೆಗಳು ಹಾಗೂ ಡೊಂಕುಹಲ್ಲಿನ ದ್ಯೆತ್ಯ ಬೆಕ್ಕುಗಳನ್ನು ನೋಡಿದರೆ ನಿಮಗೆ ಐಸ್ ಏಜ್ ಚಿತ್ರ ಕಣ್ಮುಂದೆ ಬರುತ್ತದೆ

ಲಿಟಲ್ ಮರ್ಮೇಡ್: fixedw_large_4xನೀವು ಡೆನ್ಮಾರ್ಕ್‌ನ ರಾಜಧಾನಿ ಕೂಪೆನ್‌ಹೆಗನ್‌ಗೆ ಬಂದು ಈ ಪುಟ್ಟಮತ್ಸಕನ್ಯೆಯನ್ನು ನೋಡದೆ ಹೋದರೆ ವ್ಯರ್ಥ, ಲ್ಯಾನ್ಜಿಲಿನಿ ಎಂಬ ಪ್ರದೇಶದ ಸಮುದ್ರ ತೀರದಲ್ಲಿ ಇದು ಇದ್ದು ಸುತ್ತಲಿನ ಪರಿಸರ ಮನಸ್ಸಿಗೆ ಅಹ್ಲಾದವನ್ನುಂಟುಮಾಡುತ್ತದೆ, ಇಲ್ಲಿ ಕೆಸ್ಟೆಲೆಟ್ ಎಂಬ ಪುರಾತನ ಫ಼್ರೆಡ್ರಿಕ್ಷ್‌ವಾನ್‌ಗೆ ಸೇರಿದ 1625ನೆ ಇಸವಿಗೂ ಹಿಂದಿನ ಕೋಟೆ‌ಇದೆ, ಈ ಕೋಟೆಯನ್ನು ಚೆನ್ನಾಗಿ ಜೋಪಾನವಾಗಿ ಇರಿಸಿದ್ದು ನೋಡುವಂತಹ ಸ್ಥಳವಾಗಿದೆ,ಇಲ್ಲಿ ಸಮುದ್ರ ದಡದಲ್ಲಿ “ಡೆನ್ ಲಿಲ್ಲಿ ಹಫ಼್ರೂ” ಎಂಬ ಮತ್ಸಕನ್ಯೆಯ ಕಂಚಿನ ವಿಗ್ರಹ ಸಮುದ್ರ ಯಾತ್ರಿಕರನ್ನು ಕ್ಯೆಬೀಸಿ ಕರೆಯುತ್ತದೆ, ಇದು ಕೂಪನ್‌ಹೆಗನ್‌ನ ಲಾಂಛನವಾಗಿದೆ, ಹಾನ್ಸ್ ಕ್ರಿಶ್ಚಿಯನ್ ಅನ್ಡರ್ ಸನ್ ಬರೆದಿರುವ ಗಂಧರ್ವ ಲೋಕದ ಕಥೆಗಳಲ್ಲಿ ಈ ಮತ್ಸಕನ್ಯೆಯ ಉಲ್ಲೇಖವಿದೆ,ಸಮುದ್ರದ ನೀರಿನಿಂದ ಅವೃತವಾಗಿರುವ ಚಿಕ್ಕ ಚಿಕ್ಕ ದ್ವೀಪಗಳು ಇಲ್ಲಿದ್ದು ತಿಳಿಯಾದ ಸಮುದ್ರದ ನೀರಿನಲ್ಲಿ ಈಜುವ್ ದೊಡ್ಡದೊಡ್ಡ ಬಾತುಕೋಳಿಗಳನ್ನು ನೋಡುವುದೆ ಆನಂದ,

ಕ್ರಿಶ್ಚಿಯನ್ಬೊರ್ಗ್ ಅರಮನೆ:800 ವರ್ಷಗಳ ಇತಿಹಾಸ ಇರುವ ಈ ಭವ್ಯ ಅರಮನೆ ಪ್ರವಾಸಿಗರ ಪಟ್ಟಿಯಲ್ಲಿ ಮೊದಲ ಸ್ಥಾನ, ಅರಮನೆಯಾದರೂ ಇದು ಡೆನ್ಮಾರ್ಕಿನ ಪಾರ್ಲಿಮೆಂಟ ಭವನವಾಗಿಯೂ ಕಾರ್ಯನಿರ್ವಹಿಸುತ್ತಿದೆ, ಡೆನ್ಮಾರ್ಕನ ಪ್ರಧಾನಮಂತ್ರಿ ಕಾರ್ಯಲಯ, ಡೆನ್ಮಾರ್ಕ್‌ನ ಸರ್ವೋಚ್ಚ ನ್ಯಾಯಲಯ ಇದೆ ಅರಮನೆಯಲ್ಲಿದ್ದು ಅರಮನೆಯ ಕೆಲವು ಭಾಗಗಳನ್ನು ಇನ್ನು ರಾಜವಂಶಸ್ಥರು ಉಪಯೋಗಿಸುತ್ತಿದ್ದಾರೆ, ಇಷ್ಟೆಲ್ಲಾ ಇದ್ದರೂ ಇದು ಪ್ರಾವಸಿಗರ ವಿಕ್ಷಣೆಗೆ ಮುಕ್ತವಾಗಿದೆ, ಈ ಅರಮನೆಯನ್ನು ಕಟ್ಟುವಾಗ 1167ರಲ್ಲಿ ಬಿಷಪ್ ಅಬ್ಸಲೋನ್ ಕಟ್ಟಿದ್ದ ಕೋಟೆಯ ಅವಷೇಶಗಳು ಸಿಕ್ಕಿದ್ದು ಇದನ್ನು ಈಗಲು ಪ್ರವಾಸಿಗರು ನೋಡಬಹುದಾಗಿದೆ. ಅತ್ಯಂತ ಸುಂದರವಾದ ಈ ಅರಮನೆಯನ್ನು ನೋಡಲು ಒಂದುದಿನ ಸಾಕಾಗುವುದಿಲ್ಲ!!

ರಾಷ್ಟ್ರೀಯ ವಸ್ತುಸಂಗ್ರಹಾಲಯ:ಡ್ಯಾನಿಶ್ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ತಿಳಿಯಲು ಆಸಕ್ತಿ‌ಇರುವವರಿಗೆ ರಾಷ್ಟ್ರೀಯ ವಸ್ತುಸಂಗ್ರಹಾಲಯ ಕ್ಯೆಬೀಸಿ ಕರೆಯುತ್ತದೆ, ತಿವೋಲಿ ಗಾರ್ಡನ್ ನಿಂದ ಹತ್ತು ನಿಮಿಷದ ನೆಡೆದರೆ ಇಲ್ಲಿಗೆ ಬರಬಹುದು, 2000 ವರ್ಷಗಳಷ್ಟು ಹಳೆಯದಾದ ರಥದ ಮದರಿಯ ಕಲ್ಲು, ರೋಮನ್ ಹಾಗೂ ಗೋಥಿಕ್ ಶ್ಯೆಲಿ ಚರ್ಚಗಳ ಬಿಡಿಭಾಗಗಳು, ಕಲಾತ್ಮಕ ವಸ್ತುಗಳು , ಪುರಾತನ ನಾಣ್ಯಗಳು ಅಲ್ಲದೆ ಗ್ರಿನ್‌ಲ್ಯಾಂಡ್‌ನಲ್ಲಿದ್ದ ಎಸ್ಕಿಮೋ ಜನಾಂಗದವರು ಉಪಯೋಗಿಸುತ್ತಿದ್ದ ವಸ್ತುಗಳು ಅಂದಿನ ಜನಾಂಗ ಹೇಗಿತ್ತು ಎಂಬುದನ್ನು ವರ್ಣಿಸುತ್ತದೆ, ವಿಕಿಂಗ ಯುಗಕ್ಕೆ ಸೇರಿದ ಕೆಲ ಪಳೆಯುಳಿಕೆಗಳನ್ನು ಇಲ್ಲಿ ನೋಡಬಹುದು, ಏಷ್ಯ, ಆಫ಼್ರಿಕ, ಒಶೆನೀಯ ಹಾಗೂ ಭಾರತೀಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಕೆಲ ಪುರಾತನ ವಸ್ತುಗಳು ಈ ಸಂಗ್ರಹಾಲಯದಲ್ಲಿದೆ,

ರಾಷ್ಟ್ರೀಯ ಕಲಾವಸ್ತುಸಂಗ್ರಹಾಲಯ: 1700ನೇ ಇಸವಿಯಿಂದ ಹೀಡಿದು ಇಲ್ಲಿಯವರೆಗಿನ ಅಧ್ಬುತ ಡ್ಯಾನಿಶ್ ಕಲಾಕೃತಿಗಳನ್ನು ಇಲ್ಲಿ ನೋಡಬಹುದು, ಅಲ್ಲದೆ ಪ್ರಪಂಚದ ಬೇರೆಬೇರೆ ಭಾಗದ ಕಲಾಕೃತಿಗಳು ಇಲ್ಲಿ ಇಟ್ಟಿದ್ದಾರೆ, ಇಲ್ಲಿನ ಪ್ರಮುಖ ಅಕರ್ಷಣೆ “ನಾರ್ಡಿಕ್ ಕಲಾ ಪ್ರದರ್ಶನ”, ಇಲ್ಲಿ 150 ವರ್ಷಗಳ ಹಿಂದಿನ ಹಗೂ ಡಚ್ ಕಲೆಗಾರ ಎಡ್ವಾರ್ಡ್ ಮುನ್ಚ್ ಹಾಗು ಪಿಕಸೋ ಕಲಾಕೃತಿಗಳು ಇದೆ, ಮೊದಲನೆ ಮಹಡಿಯಲ್ಲಿ ನ್ಯೆಸರ್ಗಿಕವಾಗಿ ದೊರೆಯುವ ಬೆಳಕನ್ನು ಇಡಿ ಗ್ಯಾಲರಿಗೆ ಬರುವಂತೆ ಮಾಡಿರುವುದು, ವಿದ್ಯುತ್ ದೀಪಗಳಿಲ್ಲದೆ ಇರುವುದು ವಿಷೇಷ.

ಟೌನ್ ಹಾಲ್ ಚೌಕ: 1832 ರಲ್ಲಿ ನಿರ್ಮಾಣವಾದ ದೊಡ್ಡ ಕೂಪೆನ್‌ಹೆಗನ ಟೌನ್ ಹಾಲ್ ಇಲ್ಲಿದ್ದು 106ಮೀ ಎತ್ತರವಿರುವ ಇದು ಕೂಪನ್‌ಹೆಗನ್‌ನಲ್ಲೇ ಅತ್ಯಂತ ದೊಡ್ಡ ಕಟ್ಟಡವಾಗಿದೆ,ಇಟಾಲಿಯನ್ ಹಾಗೂ ಡ್ಯಾನಿಷ್ ಶಿಲ್ಪವಿನ್ಯಾಸವನ್ನು ಹೊಂದಿದ ಈ ಕಟ್ಟಡದಲ್ಲಿ ಸುಂದರವಾದ ಶಿಲ್ಪಗಳು ಹಾಗು ಚಿತ್ರಗಳಿದೆ,ಈ ಕಟ್ಟಡದ ಮೇಲೆ ಹೋದರೆ ಇಡಿ ಕೂಪನ್‌ಹೆಗನ್‌ನನ್ನು ನೋಡಬಹುದು, ಇಲ್ಲಿರುವ ದೊಡ್ಡ ಗಡಿಯಾರ ಬರೆ ಸಮಯ, ದಿನಾಂಕ ವಾರವನ್ನಷ್ಟೆ ಅಲ್ಲದೇ ಖಗೋಳವಿಜ್ನಾನದ ಅನೇಕ ವಿಷಯಗಳನ್ನು ನಿಮ್ಮ ಮುಂದೆ ಬಿಚ್ಚಿಡುತ್ತದೆ,

ಒರೆಸಂಡ್ ಸೇತುವೆ: ಕೂಪನ್‌ಹೆಗನ್ ನಿಂದ ಹತ್ತು ಕೀಮಿ ಸಾಗಿದರೆ ನಿಮಗೆ ಭವ್ಯವಾದ ತಂತ್ರಜ್ನಾನದ ಅಚ್ಚರಿ! ಒರೆಸಂಡ್ ಸೇತುವೆ ನೋಡಬಹುದು.ಈ ಸೇತುವೆಯನ್ನು ದಾಟಿದರೆ ನೀವು ಸ್ವೀಡನ್ ದೇಶದಲ್ಲಿರುತ್ತಿರಿ, ಸ್ವೀಡನ್ ಹಾಗೂ ಡೇನ್ಮಾರ್ಕ್ ದೇಶ ಸೇರಿ ಜಂಟಿಯಾಗಿ ನಿರ್ಮಿಸಿದ ಸೇತುವೆ ಇದು, ಎಂಟು ಕೀಮಿ ಉದ್ದದ ಸೇತುವೆಯ ಮೇಲೆ ಪ್ರಯಾಣವೆ ಒಂದು ಅನಂದದಾಯಕವಾಗಿದೆ, ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಲು ಇದಕ್ಕಿಂತ ಬೇರೆ ಸ್ಥಳ ಮತ್ತೊಂದಿಲ್ಲಾ! ಇದಲ್ಲದೆ 36 ಮೀಟರ ಎತ್ತರದ ಮೂರುವರೆ ಶತಮಾನದ ಹಿಂದಿನ ಗೋಲಾಕಾರದ ಗೋಪುರ, ಏರಡುವರೆ ಶತಮಾನಗಳ ಹಿಂದಿನ ಅಮ್ಲಿಯನ್ ಬರ್ಗ್ ಕೋಟೆ, ರೊಸೆನ್ ಬರ್ಗ ಅರಮನೆ ಹಾಗೂ ಶಾಪಿಂಗ್ ಪ್ರಿಯರಿಗೆ ಸ್ಟ್ರೋಗೆಟ್ ಶಾಪಿಂಗ್ ರಸ್ತೆ ಎಲ್ಲವೂ ಕೂಡ ನೋಡುವಂಥಹ ಸ್ಥಳಗಳಾಗಿದೆ

oresund-bridge-half-tunnel-half-bridge-and-a-bonus-artificial-island-41655_2

ಡೆನ್ಮಾರ್ಕ್‌ನ ಯಾವುದೇ ನಗರಗಳಿಗೆ ಹೋಗಿ ನಿಮಗೆ ಅಲ್ಲಿ ಇಷ್ಟವಾಗುವುದು ಅಲ್ಲಿನ ರಸ್ತೆಗಳು, ದೂಳುರಹಿತ ಈ ರಸ್ತೆಗಳಲ್ಲಿ ಓಡಾದುವುದೇ ಒಂದು ಅನಂದ, ಪರಿಸರ ಮಾಲಿನ್ಯ ಇಲ್ಲಿ ಇಲ್ಲವೇಂದೆ ಹೇಳಬೇಕು, ಯಾಕೆಂದರೆ ಡ್ಯಾನಿಷಿಗರು ಹೆಚ್ಚಾಗಿ ಸ್ಯೆಕಲನ್ನೇ ಅವಲಂಬಿಸಿದ್ದಾರೆ, ಪ್ರಪಂಚದಲ್ಲೆ ಅತಿ ಹೆಚ್ಚು ಸ್ಯೆಕಲ್‌ಗಳಿಗೋಸ್ಕರವಾಗಿ ನಿರ್ಮಾಣವಾದ ಪಥ ಇರುವುದು ಡೆನ್ಮಾರ್ಕ್‌ನಲ್ಲಿ, ಇಲ್ಲಿ ಬಹಳ ಮಂದಿ ಕಛೇರಿಗಳಿಗೂ ಸಹ ಸ್ಯೆಕಲ್‌ನಲ್ಲಿಯೆ ತೆರಳುತ್ತಾರೆ. ರಸ್ತೆಯ ಇಕ್ಕೆಲಗಳಗಳಲ್ಲಿ ಸ್ಯೆಕಲ ಪಥ ಇದೆ,ನಿಮ್ಮ ಬಳಿ ಸ್ಯೆಕಲ್ ಇಲ್ಲದ್ದಿದ್ದರು ಪರವಾಗಿಲ್ಲಾ! ಇಲ್ಲಿನ ಸರ್ಕಾರ ಅಲ್ಲಲ್ಲಿ ಸ್ಯೆಕಲ್ ನಿಲ್ದಾಣಗಳನ್ನು ನಿರ್ಮಿಸಿದೆ, ಇಲ್ಲಿ ನೀವು ನಿಗದಿತ ಹಣ ಹಾಕಿದರೆ ಅದರ ಬೀಗ ತೆರೆದುಕೊಳ್ಳುತ್ತದೆ, ನೀವು ಅ ಸ್ಯೆಕಲ್ಲನ್ನು ತೆಗೆದುಕೊಂಡು ಎಲ್ಲಿ ಬೇಕಾದರೂ ಓಡಾಡಬಹುದು, ಮತ್ತೆ ಇದೆ ರೀತಿ ಇರುವ ಸ್ಯೆಕಲ್ ನಿಲ್ದಾಣಗಳಲ್ಲಿ ಅದನ್ನು ಬಿಟ್ಟು ಹೋಗಬಹುದು, ಸ್ಯೆಕಲ್ ಚಕ್ರದಲ್ಲಿ ಗಾಳಿ ಕಡಿಮೆ ಇದೆಯೇ? ಚಿಂತೆ ಬೇಡ! ಅಲ್ಲಲ್ಲಿ ಸಿಗ್ನಲ್ ದೀಪದ ಕೆಳಗೆ‌ಇರುವ “ಏರ್‌ಪ್ಯೆಪ” ಗಳಿಂದ ಗಾಳಿಯನ್ನು ತುಂಬಿಸಿಕೊಳ್ಳಬಹುದು.ಡೆನ್ಮಾರ್ಕ್‌ನ ರಸ್ತೆಗಳಲ್ಲಿ ನಿಮಗೆ ಹೆಚ್ಚಾಗಿ ಕಾಣುವುದು ಒಂದೋ ಕಾರು ಅಥವಾ ಸ್ಯೆಕಲ್, ಸರ್ಕಾರ ಕೂಡ ಪರಿಸರದ ಬಗ್ಗೆ ಕಾಳಜಿ ಹೊಂದಿರುವುದರಿಂದ ಈ ರೀತಿಯ ಸ್ಯೆಕಲ್ ನಿಲ್ದಾಣಗಳನ್ನು ಮಾಡಿ ಸ್ಯೆಕಲ್ ಪ್ರಯಾಣವನ್ನು ಉತ್ತೇಜಿಸುತ್ತದೆ, ಇಲ್ಲಿ ಬ್ಯೆಕ್‌ಗಳನ್ನು ನೀವು ದೂರ್ಬಿನೂ ಹಾಕಿ ಹುಡುಕಬೇಕು, ಅಗೊಮ್ಮೆ ಈಗೊಮ್ಮೆ ಎಲ್ಲೋ ಒಂದೊ ಏರಡೊ ಕಂಡರೆ ಹೆಚ್ಚು,
ಇಲ್ಲಿ ಪಾದಚಾರಿಗಳಿಗೆ ಮೊದಲ ಅದ್ಯತೆ, ಪ್ರತಿ ಸಿಗ್ನಲ್ ದೀಪದ ಕೆಳಗೆ ಒಂದು ಬಟನ್ ಇರುತ್ತದೆ, ಅದನ್ನು ಒತ್ತಿದರೆ ಸಾಕು ಎಲ್ಲಾ ಕಡೆ ಕೆಂಪುದೀಪ ಹತ್ತುತ್ತದೆ, ನೀವು ರಸ್ತೆಯನ್ನು ದಾಟಬಹುದು, ನಂತರದ ಅದ್ಯತೆ ಸ್ಯೆಕಲ್ ಸವಾರರಿಗೆ, ನಾನು ಹತ್ತು ದಿನ ಇಲ್ಲಿದ್ದರೂ ರಸ್ತೆಯಲ್ಲಿ ನನಗೆ ಒಂದೆ ಒಂದು ದಿನ ವಾಹನ ಸವಾರರು ಹಾರ್ನ್ ಮಾಡಿದ್ದು ಕೇಳಿಸಲಿಲ್ಲ!ಶಿಸ್ತು ಅನ್ನುವುದು ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಇಲ್ಲಿನ ರಸ್ತೆಗಳಲ್ಲಿ ಹುಡುಕಿದರೂ ಕಸ್ ಕಡ್ಡಿ ಸಿಗುವುದಿಲ್ಲಾ!ತ್ಯಾಜ್ಯಗಳನ್ನು ಮನೆಗಳಲ್ಲಿಯೆ ವಿಂಗಡಿಸಿ ಅದನ್ನು ಅದಕ್ಕೊಸ್ಕರವಾಗಿಯೇ ಇರುವ್ ಡಬ್ಬದಲ್ಲಿ ಹಾಕುತ್ತಾರೆ, ಇನ್ನು ಡೆನ್ಮಾರ್ಕ್‌ನ ತೆರಿಗೆ ಪದ್ದತಿ ಗಿನ್ನಿಸ್ ಧಾಖಲೆ ಸೇರಿದೆ! ಇಲ್ಲಿ ನೀವು ದುಡಿಮೆಯ 38ಶೇಕಡಾ ಅದಾಯ ತೇರಿಗೆ ಕಟ್ಟಬೇಕು, ತೆರಿಗೆ ಕಟ್ಟುವ ಎಲ್ಲಾರಿಗೂ ಸರ್ಕಾರವೆ ಅರೋಗ್ಯವಿಮೆ ಮಾಡಿಸುತ್ತದೆ, ಅರೋಗ್ಯಸೇವೆ ಉಚಿತ, ಮನೆಗೆ ಪೇಪರ್ ಉಚಿತ, ವಿದ್ಯುತ್ ಬಿಲ್ ಪಾವತಿಸಿರೆಂದು ಮನೆಗೆ ಬಂದು ಬಿಲ್ ಕೊಡುವುದಿಲ್ಲಾ! ಪ್ರತಿಯೊಬ್ಬರು ತಪ್ಪದೆ ತಿಂಗಳಿಗೊಮ್ಮೆ ಹೋಗಿ ತಮ್ಮ ವಿದ್ಯುತ್ ಅಕೌಂಟ್ ನಂಬರಿಗೆ ಹಣ ಹಾಕಿ ಬರುತ್ತಾರೆ,
ಡ್ಯಾನಿಶಿಗರು ಡ್ಯಾನಿಶ್ ಪಾಸ್ತ್ರಿಸ್ ಹಾಗೂ ಸ್ಮೋರಿಬ್ರಾಡ್( ಒಪನ್ ಫ಼ೆಸ್ಡ್ ಸ್ಯಾಂಡ್ ವಿಚ್)ನ್ನು ಹೆಚ್ಚಾಗಿ ತಿನ್ನುತ್ತಾರೆ, ಬೆಳಗ್ಗೆ ತಿಂಡಿ ಹಾಗೂ ರಾತ್ರಿ ಊಟವನ್ನು ಮನೆಯವರೊಂದಿಗೆ ಮಾಡಲು ಇಷ್ಟಪಡುವ ಇವರು ತಿಂಡಿಗೆ ಕಾರ್ನ್ ಫ಼್ಲೇಕ್ಸ, ಮುಸ್ಲಿ, ಒಟ್ಸ್‌ನ್ನು ಹೆಚ್ಚಾಗಿ ತಿನ್ನುತ್ತಾರೆ, ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ಮಾಂಸಹಾರ ಸಾಮಾನ್ಯ,ಸ್ಮೋರಿಬ್ರಾಡ್ ಇಲ್ಲಿನ ಸಾಂಪ್ರದಾಯಿಕ ಖಾದ್ಯವಾಗಿದ್ದು ಡೆನ್ಮಾರ್ಕ್‌ನ ಎಲ್ಲಾ ರೆಸ್ಟೊರೆಂಟ್‌ಗಳಲ್ಲಿ ಇದು ಸಿಗುತ್ತದೆ.

ರೂಟ್ ಮ್ಯಾಪ್ :ಬೆಂಗಳೂರು ಹಾಗೂ ಮುಂಬ್ಯೆನಿಂದ ಅನೇಕ ವಿಮಾನಯಾನ ಸಂಸ್ಥೆಗಳು ಡೆನ್ಮಾರ್ಕ್ ರಾಜಧಾನಿ ಕೂಪನ್‌ಹೆಗನ್‌ಗೆ ಪ್ರಯಾಣ ಸೇವೆ ನೀಡುತ್ತದೆ, ಕೂಪನ್‌ಹೆಗನ್‌ನಲ್ಲಿ ಉಳಿದುಕೊಂಡು ಎಲ್ಲಾ ಕಡೆ ಪ್ರವಾಸ ಹೋಗಬಹುದು

ತಂಗುದಾಣ: ಇಲ್ಲಿ 3 ಸ್ಟಾರ್, 5 ಸ್ಟಾರ್, ಲಕ್ಸುರಿ ಹೋಟೆಲ್ ಗಳಲ್ಲದೆ ಸ್ಟುಡೀಯೋ ಫ಼್ಲಾಟ್ಸ್ ಗಳು ಅಪಾರ್ಟ್ ಮೆಂಟಗಳಲ್ಲು ಉಳಿದುಕೊಳ್ಳಬಹುದು, ಏರ್‌ಬಿ‌ಎನ್‌ಬಿ.ಕಾಮ್ ಗೆ ಹೋದರೆ ಈ ರೀತಿಯ ಸ್ಟುಡೀಯೋ ಫ಼್ಲಾಟ್ಸ್‌ಗಳು ಅಪಾರ್ಟ್‌ಮೆಂಟಗಳನ್ನು ಬುಕ್ ಮಾಡಬಹುದು, ಹೋಟೆಲ್‌ಗಳಿಗೆ ಹೋಲಿಸಿಕೊಂಡರೆ ಇವು ತುಂಭಾ ರಿಯಾಯಿತಿ ದರದಲ್ಲಿ ಸಿಗುತ್ತದೆ.
ಹೊಟ್ಟೆಗೆ ಹಿಟ್ಟು: ಇಲ್ಲಿ ಅನೇಕ ಭಾರತೀಯ ರೆಸ್ಟೋರಾಂಟ್‌ಗಳು ಇದೆ, ಮೊಬ್ಯೆಲ್‌ನಲ್ಲಿ ಇಂಡಿಯನ್ ರೆಸ್ಟೋರಾಂಟ್ ಎಂದು ಹುಡುಕಿದರೆ ಅನೇಕ ರೆಸ್ಟೋರಾಂಟ್‌ಗಳ ವಿಳಾಸ ದೊರೆಯುತ್ತದೆ, ಜಿಪಿ‌ಎಸ್‌ನಲ್ಲಿ ಆ ರೆಸ್ಟೋರಾಂಟ್‌ನ ವಿಳಾಸ ಹಾಕಿದರೆ ಸುಲಭವಾಗಿ ಹುಡುಕಬಹುದು. ಬಿ ಇಂಡಿಯಾ, ರಸೋಯಿ, ದಿ ಸೌತ್ ಈಂಡಿಯನ್, ಮಾಂಕ್,ಬಾಲಿ ಫ಼ುಡ್, ಅಲ್‌ದಿವಾನ್, ಬಾಂಬೆ, ಸ್ಪೈಸಿಕಿಚನ್ ಮುಂತಾದ ರೆಸ್ಟೋರಾಂಟ್ ಇದೆ,, ನೀವು ಸ್ಟುಡೀಯೋ ಫ಼್ಲಾಟ್ಸ್‌ಗಳಲ್ಲಿ ಉಳಿದುಕೊಂಡರೆ ಸುಪರ್ ಮಾರ್ಕೆಟ್‌ನಿಂದ ಅಡುಗೆ ಸಾಮಾನು ತಂದು ನಿಮಗೆ ಬೇಕ್ಕಾದನ್ನು ಮಾಡಿಕೊಂಡು ತಿನ್ನಬಹುದು, ಈ ಸ್ಟುಡಿಯೋ ಫ಼್ಲಾಟ್ಸಗಳಲ್ಲಿ ಗ್ಯಾಸ್, ರೆಫ಼್ರಿಜರೇಟರ್ ಸಕ್ಕರೆ, ಎಣ್ಣೆ, ಕಾಫ಼ಿಪುಡಿ ಎಲ್ಲಾ ಇಟ್ಟಿರುತ್ತಾರೆ.ಹಾಲುತಂದು ಕಾಫ಼ಿ ಮಾಡಿಕೊಳ್ಳಬಹುದು

ಯಾವಕಾಲ ಸೂಕ್ತ:ಡೆನ್ಮಾರ್ಕ್ ಪ್ರವಾಸ ಕ್ಯೆಗೊಳ್ಳಲು ಮಾರ್ಚಿನಿಂದ ಸೆಪ್ಟಂಬರ್ ಸೂಕ್ತ, ಯೂರೋಪ್ ಶಾನ್ಜೆನ್ ವೀಸಾ ಸಿಕ್ಕರೆ ಯೂರೋಪಿನ ಯಾವದೇಶಗಳಲ್ಲಿ ಬೇಕಾದರೂ ಓಡಾಡಬಹುದು, ಡೆನ್ಮಾರ್ಕ್‌ನಿಂದ ರೈಲು ಬಸ್ಸು ಮುಖಾಂತರ ಅಕ್ಕಪಕ್ಕದ ದೇಶಗಳಾದ ನಾರ್ವೆ, ಆಮ್ಸಟರ್‌ಡ್ಯಾಮ್, ಸ್ವೀಡನ್, ಜರ್ಮನಿ ಹಾಗೂ ಸ್ವಿಡ್ಜರ್‌ಲ್ಯಾಂಡ್ ನೋಡಬಹುದು ಅದರೆ ಸರಿಯಾಗಿ ಪ್ಲಾನ್ ಮಾಡಬೇಕಷ್ಟೇ!

ಪ್ರಕಾಶ್.ಕೆ.ನಾಡಿಗ್,ಶಿವಮೊಗ್ಗ
Mobile-9845529789

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top