fbpx
Health

ಆಯುರ್ವೇದಿಯ ಔಷದಿಗಳಷ್ಟು ಎಷ್ಟು ಸುರಕ್ಷಿತ ?

ಮೇ ೧ ರಿಂದ ಯೂರೋಪಿನಾದ್ಯಂತ ಅಯುರ್ವೇದ ಹಾಗೂ ಇತರ ವನಸ್ಪತಿ ಔಷಧಿಗಳ ಮಾರಟದ ಮೇಲೆ ನಿಷೇಧ ಜಾರಿ ಆಗಲಿದೆ. ಆಯುರ್ವೇದದಂತಹ ಪರ್ಯಾಯ ಔಷಧಿಗಳ ಬಳಕೆಯಿಂದ ಆಗುತ್ತಿರುವ ವ್ಯತಿರಿಕ್ತ ಪರಿಣಾಮದಿಂದ ಆತಂಕ ಹೆಚ್ಚಾಗಿರುವ ಹಿನ್ನಲೆಯಲ್ಲಿ ಯೂರೋಪ್ ದೇಶಗಳ ಒಕ್ಕೂಟ ಈ ಕ್ರಮಕ್ಕೆ ಮುಂದಾಗಿದೆ. ಯೂರೋಪ್ ರಾಷ್ಟ್ರಗಳಲ್ಲಿ ಈ ಅಯುರ್ವೇದ ಔಷಧಿಗಳನ್ನು ಮಾರಾಟಮಾಡಲು ೨೦೦೪ ರಲ್ಲಿ ಅನುಮೋದನೆ ಪಡೆದ ಒಕ್ಕೂಟದ ಶಾಸನಕ್ಕೆ ಅನುಗುಣವಾದ ಪರವಾನಗಿ ಹೊಂದಿರಬೇಕು. ಅಶ್ವಗಂಧದಂಥ ಅಯುರ್ವೇದ ಔಷಧಿಗಳು ಯೂರೋಪಿನಾದ್ಯಂತ ಮಾರಾಟಕ್ಕೆ ಲಭ್ಯವಿಲ್ಲ. ಆಯುರ್ವೇದ ಔಷಧಗಳ ಬಳಕೆಯಿಂದ ಆಗುವ ವ್ಯತಿರಿಕ್ತ ಪರಿಣಾಮ ತಡೆಗಟ್ಟಲು ಈ ಕ್ರಮ ಯೂರೋಪ್‌ನಲ್ಲಿ ಜಾರಿ ಆಗಲಿದ್ದು, ಆದೇಶಕ್ಕೆ ಆಯುರ್ವೇದ ಔಷಧಿಗಳನ್ನು ರಫ್ತು ಮಾಡುತ್ತಿರುವ ಭಾರತೀಯ ಕಂಪನಿಗಳ ಮುಂದಿನ ಕ್ರಮವನ್ನು ಕಾದು ನೋಡಬೇಕಾಗಿದೆ.

ಆಯುರ್ವೇದಿಯ ಔಷದಶಾಸ್ತ್ರಕ್ಕೆ ಸುಮಾರು ೫ ಸಾವಿರ ವರ್ಷಗಳ ಇತಿಹಾಸವಿದೆ. ಶತಶತಮಾನಗಳಿಂದಲೂ ಕೆಲವೊಂದು ಗಿಡಮೂಲಿಕೆಗಳನ್ನು ನಾರುಬೇರುಗಳನ್ನು ಔಷದಿ ಹಾಗಿ ಆಹಾರವಾಗಿ ಬಳಸುತ್ತಿದ್ದಾರೆ. ಆಯುರ್ವೇದ ಔಷದಿಗಳು ನೈಸರ್ಗಿಕವಾಗಿ ದೊರೆಯುವುದರಿಂದ ಇವು ಸುರಕ್ಷಿತ ಎಂಬ ತಪ್ಪು ತಿಳುವಳಿಕೆ ಜನ ಸಾಮಾನ್ಯರಲ್ಲದೆ. ಇತ್ತೀಚಿನ ಸಂಶೋಧನೆಗಳು ಇವುಕೂಡ ಅಸುರಕ್ಷಿತ ಹಾಗೂ ಅಡ್ಡಪರಿಣಾಮ ಬಿರಬಲ್ಲದು ಎಂದು ಸಾಬೀತು ಪಡಿಸಿದೆ. ದೇಶದಲ್ಲಿ ದೊರೆಯುವ ಹಲವಾರು ಆಯುರ್ವೇದ ಔಷದಿಗಳಿಗೆ ಅವುಗಳು ಉಪಯೋಗಕ್ಕೆ ಎಷ್ಟು ಸುರಕ್ಷಿತ ಎಂಬ ದಾಖಲೆ, ಅಥವಾ ಅವರಲ್ಲಿರುವ ವಿಷಯುಕ್ತ ವಸ್ತುಗಳು (TOXIC SUBSTANLES) ಯಾವ ಪ್ರಮಾಣದಲ್ಲಿದೆ ? ಹಾಗೂ ಈ ಗಿಡಮೂಲಿಕೆಗಳನ್ನು ಅವುಗಳ ಉತ್ಪನ್ನಗಳ ತಯಾರಿಕೆಗೆ ಕನಿಷ್ಟ ಮಾನದಂಡಗಳು ಹಾಗೂ ಗುಣಮಟ್ಟ ನಿಯಂತ್ರಣ ಖಾಯಿದೆಗಳಿಲ್ಲದಿರುವುದು ಆಯುರ್ವೇದ ಉತ್ಪನ್ನಗಳು ಅಸುರಕ್ಷಿತವೆಂದೇ ಹೇಳುತ್ತದೆ. ಆಯುರ್ವೇದ ಔಷದಿಗಳಲ್ಲಿ ಅಡ್ಡಪರಿಣಾಮಗಳಿರುವುದಿಲ್ಲ ಎಂಬ ಕಾರಣಕ್ಕೆ ಅವು ತುಂಬಾ ಪಾಪ್ಯುಲರ್ ! ಮನುಷ್ಯನ ಹುಟ್ಟಿನೊಂದಿಗೆ ಈ ನಾರು ಬೇರುಗಳ ಉಪಯೋಗ ಆಗುತ್ತ ಬಂದಿದೆ. ನಮ್ಮ ಇತ್ತೀಚಿನ ಕೆಲ ರಕ್ತದೊತ್ತಡ ನಿವಾರಕಗಳು ಡಿಜಿಟಾಕ್ಸಿನ್, ಅಟ್ರೋಸಿನ್ ಹಾಗೂ ಅಟ್ರೋವಿನ್ ನಾರ್‌ಕೋಟಿಕ್ ಉತ್ಪನ್ನಗಳು ಗಿಡ ಮೂಲಿಕೆಗಳಿಂದಲೇ ಸಂಸ್ಕರಿಸಿ ಶುದ್ದಪಡಿಸಿರುವಂತವು. ಒಂದು ಅಂದಾಜಿನ ಪ್ರಕಾರ ಪ್ರಪಂಚದ ಶೇ ೮೦ ರಷ್ಟು ಜನಸಂಖ್ಯೆ ಇಂದಿಗೂ ಕೂಡ ಈ ಸಾಂಪ್ರದಾಯಿಕ ಗಿಡಮೂಲಿಕೆಗಳ ಔಷದವನ್ನು ಅವಲಂಬಿಸಿದ್ದಾರೆ. ಯೂರೇಪ್‌ನಂತಹ ದೇಶದಲ್ಲೂ ಕೂಡ ಈ ಆಯುರ್ವೇದಿಯ ಔಷದಿಗಳು ಔಷದೋದ್ಯಮದ ಬಹುಪಾಲು ಷೇರನ್ನು ಆಕ್ರಮಿಸಿದೆಯೆಂದರೆ ಆಶ್ವರ್ಯವಾಗುತ್ತದೆ ಅಲ್ಲವೇ ?

ಹಲವಾರು ರೋಗಿಗಳು ಅದರಲ್ಲೂ ನಮ್ಮ ಭಾರತದಲ್ಲಿ ಖಾಯಿಲೆಬಿದ್ದಾಗ ಮನೆಯಲ್ಲೇ ತಲತಲಾಂತರದಿಂದ ಬಂದ ನಾರು ಬೇರಿನ ಔಷದಿಯನ್ನು ಸಿದ್ದ ವೈದ್ಯರಿಂದ ತೆಗೆದುಕೊಳ್ಳುವ, ಪರಿಪಾಠವಿದೆ ಹಲವಾರು ನಾರು ಬೇರುಗಳು ಔಷದಿಯ ಗುಣವುಳ್ಳದ್ದು ಎಂಬುದರಲ್ಲಿ ೨ ಮಾತಿಲ್ಲ, ಆದರೆ ಇದರಲ್ಲಿರುವ ಯಾವ ಅಂಶ ಖಾಯಿಲೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಇನ್ನೂ ಅಸ್ಪಷ್ಟ ಏಕೆಂದರೆ ಗಿಡಮೂಲಿಕೆಯಲ್ಲಿ ಒಂದೇ ರೀತಿಯ ರಾಸಾಯನಿಕ ಅಂಶವಿರುವುದಿಲ್ಲ. ರಾಸಾಯನಿಕ ಮಿಶ್ರಣದಲ್ಲಿ ಯಾವುದೇ ಒಂದು ನಿಮ್ಮ ಖಾಯಿಲೆಯನ್ನು ಗುಣಪಡಿಸಬಹುದು, ಹಾಗಾದರೆ ಉಳಿದ ರಾಸಾಯನಿಕ ಅಂಶಗಳು ನಿಮ್ಮ ದೇಶದ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ಗೊತ್ತಿದ್ದೆಯೇ ? ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಾಗಿದೆ ಉಳಿದ ರಾಸಾಯನಿಕಗಳ ಅಂಶ ನಮ್ಮ ಮೇಲೆ ಅಡ್ಡ ಪರಿಣಾಮ ಬೀರಬಹುದಲ್ಲವೇ ? ಅಲ್ಲದೇ ಈ ರೀತಿ ತಯಾರಾಗಿ ಮಾರುಕಟ್ಟೆ ಪ್ರವೇಶಿಸುವ ಆಯುರ್ವೇದಿಯ ಔಷದಿಗಳು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡುವುದಿಲ್ಲ ಎಂಬುದು ಇಲ್ಲ ಗಮನಾರ್ಹ ಅಂಶ ಹಾಗೂ ಖಾಯಿಲೆಗೆ ಇದನ್ನು ತೆಗೆದುಕೊಂಡಾಗ ಯಾವ ರೀತಿ ಖಾಯಿಲೆಯನ್ನು ಹೋಗಲಾಡಿಸುತ್ತವೆ, ಇವುಗಳ ಪ್ರಭಾವ ಹಾಗೂ ಸುರಕ್ಷೆತೆಯ ವಿಷಯಗಳು, ಸಾಭೀತಾಗದೇ ಇರುವುದು ಇವುಗಳು ಸೇವನಗೆ ಯೋಗ್ಯವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.

ಶತಶತಮಾನಗಳಿಂದ ಈ ನಾರು ಬೇರುಗಳು ಉಪಯೋಗವಾಗುತ್ತಿದ್ದರೂ ಅವು ಹೇಗೆ ಪರಿಣಾಮ ಬಿರುತ್ತದೆ ಎಂಬ ಬಗ್ಗೆ ಸಾಕ್ಷ್ಯಾಧಾರಗಳು ಇಲ್ಲ ಈ ರೋಗಕ್ಕೆ ಈ ನಾರು ಬೇರು ಎಂಬ ಅನುಭವದ ಆಧಾರದ ಮೇಲೆ ಇದು ನೆಡೆದುಕೊಂದು ಬಂದಿದೆಯೆಂದರೆ ತಪ್ಪೇನಿಲ್ಲ! ಅಲ್ಲದೇ ನಮ್ಮ ದೇಹಕ್ಕೆ ಯಾವುದಾದರೂ ಸಣ್ಣಪುಟ್ಟ ಕಾಯಿಲೆ ಬಂದರೆ ೩-೪ ದಿನದಲ್ಲಿ ನಮ್ಮ ದೇಹದ ಆಂಟಿಬಾಡೀಸ್‌ಗಳಿಂದ ರೋಗ ನಿರೋಧಕ ಶಕ್ತಿಯಿಂದಾಗಿಯೂ ಖಾಯಿಲೆ ಗುಣವಾಗಿಬಹುದು ಅಲ್ಲವೇ ? ಈ ಆಯುರ್ವೇದಿಕ ಔಷಧಿಗಳು ಕಾನೂನು ರೀತಿಯಲ್ಲಿ ಒಪ್ಪಿಕೊಂಡಿರುವ ಅಲೋಪತಿ ಔಷದಿಗಳಿಗೆ ಸಮನಾಗುವುದಿಲ್ಲ ಎಂದರೆ ತಪ್ಪೇನಿಲ್ಲ !

ಹಲವಾರು ಆಯುರ್ವೇದಿಯ ಔಷದಿಗಳನ್ನು ಕಷಾಯದ ಪುಡಿ, ಟೀ ಪುಡಿ ಹಾಗೂ ಪುಡ್ ಸಪ್ಲಿಮೆಂಟ್‌ಗಳ ರೂಪದಲ್ಲಿ ಮಾರಾಟ ಮಾಡುತ್ತಾರೆ ಏಕೆಂದರೆ ಆಹಾರರೂಪದಲ್ಲದ್ದರೆ ಅದರ ಪರಿಣಾಮ ಹಾಗೂ ಅಡ್ಡ ಪರಿಣಾಮಗಳ ಬಗ್ಗೆ ನಮೂದಿಸಬೇಕಾಗಿಲ್ಲ “ಔಷದಿ ಗುಟುಕಿನ ( DOSE ) ರೂಪದಲ್ಲಿ ಡಾಕ್ಟರ್‌ರಿಂದ ಬರೆಯಲ್ಪಟ್ಟರೆ ಅದರ ಪರಿಣಾಮ ಸಾಬೀತಾಗಿದೆಯೆಂದು ಅರ್ಥ. “ ಇನ್ನು ಅಲೋಪತಿ ಔಷದಿಗಳು ತಯಾರಿಕೆಗೆ ಅತ್ಯಂತ ಕಠಿಣವಾದ ಪರೀಕ್ಷಾ ಮಾನದಂಡವಿದೆ ಆದರೆ ಆಯುರ್ವೇದ ಔಷದಿಗಳ ತಯಾರಿಕೆಗೆ ಇಂತಹ ಮಾನಂಡಗಳಲ್ಲದಿರುವುದು ಇವುಗಳ ಮಾರಟಕ್ಕೆ ಮುಕ್ತ ಅವಕಾಶ ಸಿಕ್ಕಂತಾಗಿದೆ. ಆದ್ದರಿಂದ ಆಯುರ್ವೇದಿಯ ಔಷದಿಗಳನ್ನು ಉಪಯೋಗಿಸುವ ಮುನ್ನ ಗ್ರಾಹಕರು ಒಮ್ಮೆ ಯೋಚಿಸಬೇಕಾಗಿದೆ.

ಈ ಆಯುರ್ವೇದ ಗಿಡಮೂಲಿಕೆಗಳಲ್ಲಿ ಅವುಗಳಲ್ಲಿರುವ ರಾಸಾಯನಿಕ ಅಂಶ ಅಥವಾ ಔಷದೀಯ ಗುಣ ಅವು ಬೆಳೆಯುವ ಮಣ್ಣಿನಗುಣ, ಸಸ್ಯದ ವಂಶವಾಹಿ, ವಾತಾವರಣ, ತೇವಾಂಶ, ಬೆಳಕು ಎಲ್ಲವನ್ನು ಅವಲಂಬಿಸಿರುತ್ತದೆ, ಉದಾಹರಣೆ ಉತ್ತಮ ಗುಣಮಟ್ಟದ, ಮಣ್ಣು ತೇವಾಂಶ, ಬೆಳಕು ಹಾಗೂ ಸರಿಯಾದ ಸಮಯದಲ್ಲಿ ಕಿತ್ತು ಸಂರಕ್ಷಿಸಲ್ಪಟ್ಟ ಗುಡುಚಿಯಲ್ಲಿ ಔಷದೀಯ ಗುಣ ಹೆಚ್ಚಿನ ಪ್ರಮಾಣದಲ್ಲಿರಬಹುದು ಆದರೆ ಇವುಗಳ ವಿರುದ್ದ ವಾತಾವರಣದಲ್ಲಿ ಬೆಳೆದ ಗುಡುಚಿಯಲ್ಲಿ ಔಷದೀಯ ಗುಣ ಕಡಿಮೆ ಪ್ರಮಾಣದಲ್ಲಿರಬಹುದು ಇದರ ಮಟ್ಟವನ್ನು ಪತ್ತೆ ಹಚ್ಚಲು ಯಾವುದೇ ರೀತಿಯ ಪರೀಕ್ಷೆಗಳಿಲ್ಲ ಅಲ್ಲದೇ ಇಂತಹ ಸಮಯದಲ್ಲಿ ಇದರಿಂದ ತಯಾರಾದ ಔಷದಿಯ “ಗುಟುಕನ್ನು” (DOSE ) ನಿರ್ಧರಿಸುವುದು ಕಷ್ಟವಾಗುತ್ತದೆ !

ಮುಂದೆ ಓದಲು ಲಿಂಕ್ ಕ್ಲಿಕ್ ಮಾಡಿ  http://www.aralikatte.com/2016/07/30/ayurveda2

 

ಪ್ರಕಾಶ್.ಕೆ.ನಾಡಿಗ್, ಶಿವಮೊಗ್ಗ
(ಮೊಬೈಲ್-೯೮೪೫೫೨೯೭೮೯)

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

  1. Pingback: ಆಯುರ್ವೇದಿಯ ಔಷದಿಗಳಷ್ಟು ಎಷ್ಟು ಸುರಕ್ಷಿತ ? - Newsism

Leave a Reply

Your email address will not be published.

To Top