fbpx
Health

ಆಯುರ್ವೇದಿಯ ಔಷದಿಗಳಷ್ಟು ಎಷ್ಟು ಸುರಕ್ಷಿತ ?

ಮುಂಚಿನ ಆರ್ಟಿಕಲ್ ಓದಲು ಲಿಂಕ್ ಕ್ಲಿಕ್ ಮಾಡಿ  http://www.aralikatte.com/2016/07/30/ayurveda1

೬ ಸಾಂಪ್ರದಾಯಿಕ ರೀತಿಯಲ್ಲಿ ಇವುಗಳನ್ನು ಕಿತ್ತುವುದು ಕತ್ತರಿಸುವುದು, ಹಾಗೂ ಇವುಗಳನ್ನು ಸರಿಯಾಗಿ ಸಂರಕ್ಷಿಸದೇ ಹೋದಲ್ಲಿ ಈ ನಾರು ಬೇರುಗಳಿಗೆ ಶೀಲಿಂದ್ರಗಳ ದಾಳಿ ತಪ್ಪಿದ್ದಲ್ಲ. ಸಸ್ಯಶಾಸ್ತ್ರದ ಬಗ್ಗೆ ತಿಳುವಳಿಕೆ ಇಲ್ಲದೇ ಇನ್ಯಾವುದೇ ಸಸ್ಯಗಳನ್ನು ಔಷದೀಯ ತಯಾರಿಕೆಯಲ್ಲಿ ಬಳಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಆಯುರ್ವೇದಿಯ ತಯಾರಿಕಾ ಕಂಪನಿಗಳಲ್ಲಿ ಉಪಯೋಗಿಸುವ ನಾರುಬೇರುಗಳು ಹಾಗೂ ಅಂತಿಮ ಪದಾರ್ಥಗಳು (FINISHED PRODUCT) ಸಾಮಾನ್ಯವಾಗಿ ನೋಡಲು ಒಂದೇ ರೀತಿ ಕಾಣುತ್ತದೆ.
ಉತ್ತಮ ರೀತಿಯ ಗುಣಮಟ್ಟ ನಿಯಂತ್ರಣ ವಿಧಾನಗಳಿಲ್ಲದಿದ್ದರೆ ಇವುಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಲೇಬಲ್ ಮೇಲೆ ನಮೂದಿಸಿರುವ ಪದಾರ್ಥಗಳೆಲ್ಲವೂ ಔಷದಿಯೊಳಗೆ ಇದೆಯೆಂದು ಹೇಳುವ ಯಾವುದೇ ರೀತಿಯ ಗುರುತುಹಚ್ಚುವ (IDENTIFICATION TEST ) ಪ್ರಯೋಗಗಳು ಆಯುರ್ವೇಧ ಔಷದಿಗಳಿಗೆ ಮಾಡುವುದಿಲ್ಲ, ಇದ್ದರೂ ನಿಖರವಾಗಿ ಅದರ ಪ್ರಮಾಣ ಎಷ್ಟಿದೆಯೆಂದು ಹೇಳುವುದಿಲ್ಲ ಆಯುರ್ವೇದ ಔಷದಿಗಳ ಲೇಬಲ್ ಮೇಲೆ APPROXIMATELY “ ಎಂದರೆ ‘ಸರಿಸುಮಾರು’ ಎಂದು ನಮೂದಿಸಿರುವುದನ್ನು ನೀವು ಗಮನಿಸಿರಬಹುದು. ಈ ಸರಿ ಸುಮಾರು ಪ್ರಮಾಣ ಕೂಡ ಅದಲ್ಲಿರುವ ನಾರು ಬೇರಿನ ಪುಡಿಯ ಪ್ರಮಾಣವೇ ಹೊರತು ಅದರಲ್ಲಿರುವ ರಾಸಾಯನಿಕ ಅಂಶವೆಂಬುದಲ್ಲವನ್ನು ಇಲ್ಲಿ ಗಮನಿಸಬೇಕು. ಅದೇ ಅಲೋ ಪತಿಕ್ ಔಶದಿಯನ್ನು ಗಮನಿಸಿ ಕರಾರುವಕ್ಕಾಗಿ ಇಷ್ಟೇಪ್ರಮಾಣದಲ್ಲಿ ಔಷಧಿ ಪ್ರತಿ ಮಾತ್ರೆಯಲ್ಲಿ ಅಥವಾ ಕ್ಯಾಪ್ಸೂಲ್‌ನಲ್ಲಿದೇ ಎಂದು ಹೇಳುತ್ತದಲ್ಲದೇ ಕರಾರುವಕ್ಕಾಗಿ ಅಷ್ಟೇ ಪ್ರಮಾಣದಲ್ಲಿ ಇದೆಯೇ ಇಲ್ಲವೋ ಎಂಬುದನ್ನು ಪತ್ತೆ ಹಚ್ಚುವ ಪರೀಕ್ಷೆಗೆ ಕೂಡ ಈ ಅಲೋಪತಿಕ್ ಔಷದಿಗಳು ಒಳಪಟ್ಟಿರುತ್ತದೆ. ಆಯುರ್ವೇದ ಔಷದಿಗಳಿಗೂ ಕೂಡ ಈ ಕಾರ್ಯ ಆಗಬೇಕಾಗಿದೆ ಮೊದಲೆ ತಿಳಿಸಿದಂತೆ ಅಲೋಪತಿಕ್ ಔಷದಗಳ ತಯಾರಿಕೆಯಲ್ಲಿ ಔಷದೀಯ ಗುಣಹೊಂದಿರುವ ರಾಸಾಯನಿಕವನ್ನು ಗುರುತಿಸುವ, ಅದರ ಗುಟುಕು ( DOSE ) ನಿರ್ಧಸಿರುವ, ಹಾಗೂ ಮಾರುಕಟ್ಟೆ ಪ್ರವೇಶಿಸುವ ಮೊದಲು ಅನೇಕ ರೀತಿಯ ರಾಸಾಯನಿಕ, ಬ್ಯಾಕ್ಟೀರಿಯಾಗಳ, ಇರುವಿಕೆಗಾಗಿ ಪರೀಕ್ಷೆಯನ್ನು ಮಾಡುತ್ತಾರೆ. ಅಲ್ಲದೇ ಈ ಔಷದ ತಯಾರಿಕೆಯಲ್ಲಿ ಬಳಸುವ ನೀರಿನ, ಗುಣಮಟ್ಟವನ್ನು ಕೂಡ ಪರೀಕ್ಷಿಸುತ್ತಾರೆ ಗೊತ್ತೇ ? ಆದರೆ ಈ ಆಯುರ್ವೇದ ಔಷದಿಗಳ ತಯಾರಿಕೆಗೆ ಈ ರೀತಿಯ ಯಾವುದೇ ಮಾನದಂಡಗಳಿಲ್ಲದಿರುವುದು ಅಪಾಯಕಾರಿ.

ಅಲೋಪತಿಕ್ ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಈ ಇಂಗ್ಲೀಷ್ ಮೆಡಿಸಿನ್‌ಗಳ ತಯಾರಿಕೆಗೆ ಮಾನದಂಡಗಳನ್ನು ಆಯಾ ದೇಶದ ಔಷದ ನಿಯಂತ್ರಣ ಪ್ರಾದಿಕಾರ ಕೈ ಪಿಡಿಯನ್ನು ಪ್ರತಿವರುಷ ಹೊರತರುತ್ತದೆ. ಅದರಂತೆ ಭಾರತದಲ್ಲಿ ಭಾರತೀಯ ಫಾರ್ಮಕೋಪಿಯ (IP-INDIAN PHARMACOPOEIA), US ಫಾರ್ಮಕೋಪಿಯ, ಹಾಗೂ ಬಿ.ಪಿ-ಬ್ರಿಟಿಷ್ ಫಾರ್ಮಕೋಪಿಯಗಳು ಲಭ್ಯವಿದೆ. ಅಲೋಪತಿಕ್ ಔಷದಿ ತಯಾರಿಕಾ ಕಂಪನಿಗಳು ಈ ಫಾರ್ಮಕೋಪಿಯದಲ್ಲಿರುವ ಮಾರ್ಗದರ್ಶನದಂತೆ ಔಷದಿಯನ್ನು ತಯಾರಿಸಿ, ಪರಿಕ್ಷೀಸಿ ಮಾರುಕಟ್ಟೆಗೆ ಬಿಡುಗಡೆಮಾಡುತ್ತದೆ ಕಚ್ಚಾವಸ್ತು ಹಾಗೂ ಸಿದ್ದವಸ್ತು ಈ ಫಾರ್ಮಕೋಪಿಯಾದಲ್ಲಿ ತಿಳಿಸಿರುವ ಯಾವುದೇ ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣವಾದರೂ ಅದನ್ನು ಮಾರುಕಟ್ಟೆಗೆ ಬಿಡುವಂತಿಲ್ಲ ಅಷ್ಟೇ ಅಲ್ಲ ಈ ಎಲ್ಲಾ ಔಷದಿಗಳು ಉತ್ತೀರ್ಣವಾಗಿ ಮಾರುಕಟ್ಟೆ ಪ್ರವೇಶಿಸಿದ ಮೇಲೂ, ಆಯ್ದ ಕೆಲವು ಬ್ಯಾಚ್‌ಗಳ ಮೇಲೆ ಆ ಔಷದಿ ಮಾರುಕಟ್ಟೇಯಲ್ಲಿರುವಷ್ಟು ದಿನವೂ ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಡುತ್ತಾ ಅವುಗಳ ಗುಣಲಕ್ಷಣಗಳ ವಿವರಗಳು ದಾಖಲಾಗುತ್ತಲೇ ಇರುತ್ತದೆ. ಇದನ್ನು ವಸ್ತುವಿನ “ದೃಡತೆ” ಪರೀಕ್ಷೆ (STABILITY TEST) ಎನ್ನುತ್ತಾರೆ.

ಅಲ್ಲದೇ ಯಾವುದಾದರೊಂದು ಮಾತ್ರೆಯೋ, ಟಾನಿಕ್, ಇಂಜಿಕ್ಷನ್ ಮೊದಲಬಾರಿ ತಯಾರಿಸಲಾದಾಗ ಅದನ್ನು ತಕ್ಷಣ ಮಾರುಕಟ್ಟೆಗೆ ಬಿಡುವಂತಿಲ್ಲ. ಇವುಗಳನ್ನು ೬ ತಿಂಗಳ ಕಾಲ ೪೫? ಉಷ್ಟತೆ ಹಾಗೂ ೭೫ ಶೇಕಡಾ ತೇವಾಂಶವಿರುವ ಕೊಠಡಿಗಳಲ್ಲಿ ಇಟ್ಟು ಪ್ರತಿ ೩೦ ದಿನಕೊಮ್ಮೆ ಅನೇಕ ರೀತಿಯ ಪರೀಕ್ಷೆ ಮಾಡುತ್ತಾರೆ. ಎಲ್ಲ ಪರೀಕ್ಷೆಗಳಲ್ಲಿ ಪಾಸ್ ಆದರೆ ಈ ಪಾರ್ಮೂಲಾಂತೆ ತಯಾರಾದ ಔಷದಿ ಮಾರುಕಟ್ಟೆ ಪ್ರವೇಶಿಸಲು ಸಾಧ್ಯ ಫೇಲಾದರೆ ಮತ್ತೊಂದು ಹೊಸ ಫಾರ್ಮುಲಾ ತಯಾರಿಸಬೇಕು. ಇಂತಹ ತೇವಾಂಶ ಹಾಗೂ ಉಷ್ಣತೆಗೆ ಒಡ್ಡಿದ್ದಾಗ ಅವುಗಳಲ್ಲ ಯಾವ ರೀತಿಯ ರಾಸಾಯನಿಕ ಕ್ರಿಯೆ ನಡೆಯುತ್ತದೆ ಮತ್ತು ಇವುಗಳನ್ನು ಪ್ಯಾಕ್ ಮಾಡಲು ಯಾವ ರೀತಿಯ ಪ್ಯಾಕಿಂಗ್ ಮೆಟಿರಿಯಲ್‌ಗಳನ್ನು ಉಪಯೋಗಿಸಬೇಕೆಂದು ಇದರಲ್ಲಿ ನಿಪುಣತೆಯನ್ನು ಪಡೆದ ತಂಡ ನಿರ್ಧರಿಸುತ್ತದೆ.

ಮೇಲೆ ಹೇಳಿದ ಯಾವುದೇ ರೀತಿಯ ಗುಣಮಟ್ಟ ನಿಯಂತ್ರಣ ಪರೀಕ್ಷೆಯನ್ನು ಆಯುರ್ವೇದ ಔಷದ ತಯಾರಿಕಾ ಕಂಪನಿಗಳು ನಡೆಸುವುದಿಲ್ಲ ! ಮಾತ್ರೆ ಔಷದಿಯ ಬಣ್ಣ ಹೇಗಿದೆ, ಆಕಾರ ಹೇಗಿದೆ, ರುಚಿ ಹೇಗಿದೆ ಎಂಬ ಬೆರಳೆಣಿಕೆಯಷ್ಟು ಬಾಹ್ಯ ಪರೀಕ್ಷೆಗಳನ್ನು ಮಾಡುವುದನ್ನು ಬಿಟ್ಟರೆ ಅದರಲ್ಲಿರುವ ಔಷದೀಯ, ಅಂಶ ಎಷ್ಟಿದೆ, ಎಂದು ಪರೀಕ್ಷಿಸುವುದಿಲ್ಲ ಅಲ್ಲದೇ ಅಲೋಪಧಿಯಲ್ಲಿ ಮಾಡುವ STABILITY TEST ಗಳನ್ನು ಸಹ ಇಲ್ಲಿ ಮಾಡುವುದಿಲ್ಲ ಮಾಡಿದರೂ ಬಾರಿ ಬಾಹ್ಯ ವಿವರಣೆ ನೀಡುವ ಪರೀಕ್ಷೆಗಳಗಷ್ಟೆ ನಿಮಿತ !

ಮುಂದೆ ಓದಲು ಲಿಂಕ್ ಕ್ಲಿಕ್ ಮಾಡಿ  http://www.aralikatte.com/2016/07/30/ayurveda3

 

ಪ್ರಕಾಶ್.ಕೆ.ನಾಡಿಗ್, ಶಿವಮೊಗ್ಗ
(ಮೊಬೈಲ್-೯೮೪೫೫೨೯೭೮೯)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

  1. Pingback: ಆಯುರ್ವೇದಿಯ ಔಷದಿಗಳಷ್ಟು ಎಷ್ಟು ಸುರಕ್ಷಿತ ? - Newsism

Leave a Reply

Your email address will not be published.

To Top