fbpx
News

ಆಯುರ್ವೇದಿಯ ಔಷದಿಗಳಷ್ಟು ಎಷ್ಟು ಸುರಕ್ಷಿತ ?

ಮುಂಚಿನ ಆರ್ಟಿಕಲ್ ಓದಲು ಲಿಂಕ್ ಕ್ಲಿಕ್ ಮಾಡಿ  http://www.aralikatte.com/2016/07/30/ayurveda2

ಅಲೋಪಥಿಯಲ್ಲಿ S71 ದೃಢತೆ ಪರೀಕ್ಷೆ ಮಾಡುವ ಮೂಲಕ ಯಾವುದೇ ಔಷದಿಯನ್ನು ಎಷ್ಟು ದಿನ ಉಪಯೋಗಿಸಬಹುದು ಎಂದು (EXPIRY) ನಿರ್ಧರಿಸುತ್ತಾರೆ. ಅಲೋಪತಿಯಲ್ಲಿ ಉಪಯೋಗಿಸುವ ಔಷದೀಯ ರಾಸಾಯನಿಕ ದೇಹದಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ, ಅದರ ಅಡ್ಡ ಪರಿಣಾಮವೇನು ಎಷ್ಟು ಗುಟುಕು (DOSE) ಕೊಡಬೇಕು ಎಂಬುದಕ್ಕೆ ಸಾಕ್ಷಿ ಸಹಿತ ದಾಖಲೆಗಳು ಲಭ್ಯ ! ಆದರೆ ಆಯುರ್ವೇದ ಔಷದಿಗಳಿಗೆ ಈ ಮಾಹಿತಿಗಳು ಅಲಭ್ಯ ಏಕೆಂದರೆ ಒಂದು ಆಯುರ್ವೇದಿಯ ಔಷದಿಯನ್ನು ತಯಾರಿಸುವಾಗ ಅನೇಕ ರೀತಿಯ ನಾರು, ಬೇರು, ತೊಗಟೆ ಉಪಯೋಗಿಸುತ್ತಾರೆ ಇವುಗಳಲ್ಲಿ ಔಷದೀಯ ಗುಣವುಳ್ಳ ರಾಸಾಯನಿಕಗಳ ಮಿಶ್ರಣವೇ ಇರುತ್ತದೆ ಯಾವ ರಾಸಾಯನಿಕ ಯಾವ ರೋಗದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇನ್ನು ಅಸ್ಪಷ್ಟ ಔಷದೀಯ ಗುಣ ಇರುವ ಅಂಶವನ್ನು ಸಸ್ಯಗಳಲ್ಲಿ ಗುರುತಿಸಿ, ಅದನ್ನು ಮಾತ್ರ ಸಂಸ್ಕರಿಸಿ ಅಲೋಪತಿಯಲ್ಲಿ ಬಳಸುವ ಏಕಮಾತ್ರ ರಾಸಾಯನಿಕಗಳ ಹಾಗೆ, ಔಷಧಿ ತಯಾರಿಸಿದಾಗ ಅದಕ್ಕೂ ಇನ್ನೂ ಮಹತ್ವ ಬರಬಹುದು. ಅತ್ಯಾಧುನಿಕ ಪರಿಕರಗಳನ್ನು ಬಳಸಿ ಹೀಗೆ ಸಂಸ್ಕರಿಸಿದ ಆಯುರ್ವೇದ ಕಣದ ಗುರುತು ಹಚ್ಚುವ ಪರೀಕ್ಷೆ ಹಾಗೂ ಅದರ ಪ್ರಮಾಣವನ್ನು ಪತ್ತೆ ಹಚ್ಚುವ ಕೆಲಸ ಇನ್ನೂ ಹೆಚ್ಚಾಗಿ ಆಗಬೇಕಾಗಿದೆ.

ಅಲ್ಲದೇ ಇತ್ತೀಚಿನ ವರದಿಗಳ ಪ್ರಕಾರ ಆಯುರ್ವೇದ ಔಷದಿಗಳಲ್ಲಿ ಹಲವಾರು ವಿಷಯುಕ್ತ ಖನಿಜಗಳು, ಕೀಟನಾಶಕಗಳು, ಬಾರಯುಕ್ತ ಲೋಹಗಳು ಪತ್ತೆಯಾಗಿರುವುದು ಆತಂಕಕಾರಿ ವಿಷಯ ಬಾರಯುಕ್ತ ಲೋಹಗಳಾದ ಆರ್ಸೆನಿಕ್, ಕ್ಯಾಡಿಂಯಂ, ಪಾದರಸ, ಸೀಸ ಹಾಗೂ ಅಲೋಪತಿಯ ಫೆಡ್ಯೂಲ್ ಹೆಚ್‌ನಲ್ಲಿ

ಬರುವ ಫಿನ್ಸೆಲ್ ಜ್ಯೂಟಾಜೋನ್, ಅಮ್ಯೆನೋ ಫಿಲಿನ್, ಪ್ರಿಡ್ನಿಸೋನ್, ಟೆಸ್ಟೊಸ್ಟಿರಾನ್ ಇಂಡೋ ಮೆಟಾಸಿನ್ ಹಾಗೂ ಡ್ಡೆಜಿಪಾಮ್ ಅಂಶಗಳು ಆಯುರ್ವೇದಿಯ ಉತ್ಪನ್ನಗಳಲ್ಲಿ ಕಂಡು ಬಂದಿದೆ ! ಕೆಲವೊಂದು ಲೋಹಗಳನ್ನು ಶಾಸ್ತ್ರೀಯ ಭಾಷೆಯಿಂದ ಉದಾಹರಣೆಗೆ ಪಾದರಸವನ್ನು “ಪಾರದವೆಂದೂ” ಕಬ್ಬಿಣವನ್ನು “ಲೋಹವೆಂದೂ” TINನ್ನು ವಂಗ ಎಂತಲೂ ಸೀಸವನ್ನು ನಾಗ ಎಂದು, ಜಿಂಕ್‌ನ್ನು ಜಶದ ಎಂತಲೂ ಕೆಲವೊಂದು ಆಯುರ್ವೇದಿಯ ಉತ್ಪನ್ನಗಳಲ್ಲಿ ಬಳಸುತ್ತಾರೆ. ಇಲ್ಲಿ ಇವುಗಳನ್ನು ಉಪಯೋಗಿಸುವ ಮೊದಲು ಶುದ್ದಿಕರಿಸುವ ವಿಧಾನವನ್ನು ಅನುಸರಿಸುತ್ತಾಕಾದರೂ ಇವುಗಳ ಅಂಶ ಇದ್ದೆ ಇರುತ್ತದೆ. ಆಯುರ್ವೇದ ಔಷದಿಗಳಲ್ಲಿ ಈ ಲೋಹಗಳನ್ನು ಉಪಯೋಗಿಸುವುದರಿಂದ ಅಸ್ತಿಮಜ್ಜಿ ಕುಗ್ಗುವುದು (BONE MRAROW DEPRESSION) ಅಧಿಕ ರಕ್ತದೊತ್ತಡ, ನಾಡಿಮಿಟಿತದಲ್ಲಿ ಏರಿಳಿತ, ರಕ್ತಸ್ರಾವ ಹಾಗೂ ಗ್ರಾನುಲೋಸ್ಯೆಟೋಸೀಸ್‌ನಂತಹ ಅಡ್ಡಪರಿಣಾಮಗಳು ದಾಖಲಾಗಿದೆ ! ಅಯುರ್ವೇದ ಔಷದಿ ತಯಾರಿಕಾ ಪದ್ದತಿಯಲ್ಲಿ ಉತ್ಪಾದನೆಯ ಒಂದು ಭಾಗವಾಗಿ ಈ ಬಾರಯುಕ್ತ ಲೋಹಗಳನ್ನು ಉಪಯೋಗಿಸುತ್ತಾರೆ. ೩೫ ವರ್ಷದ ವ್ಯಕ್ತಿಯೊಬ್ಬ ಸಕ್ಕರೆ ಖಾಯಿಲೆಗೆ “ಶಕ್ತಿ” ಮತ್ತು “ಪುಷ್ಪ ದ್ರಾವಣ ರಸ” ಎಂಬ ಮಾತ್ರ ತೆಗೆದುಕೊಂಡಾಗ ಅವರಲ್ಲಿದ್ದ ಅಧಿಕ ಸೀಸದ ಪರಿಣಾಮವಾಗಿ LEAD POISONING ನಿಂದ ಬಳಲದ ಅವನನ್ನು ಆಸ್ಪತ್ರೆಗೆ ದಾಖಲಿಸಿದ ನಿದರ್ಶನವಿದೆ ನಂತರ ಆತ ತೆಗೆದುಕೊಂಡ ಮಾತ್ರೆಯನ್ನು ಪರೀಕ್ಷೆಸಿದಾಗ ಅದರಲ್ಲಿ ಅಧಿಕ ಮಟ್ಟದ ಸೀಸ ಪಾದರಸ ಹಾಗೂ ಆರ್ಸೆನಿಕ್ ಪತ್ತೆಯಾಗಿದೆ.

ಅಲೋಪಥಿಕ್ ಔಷದಿಗಳಂತೆ ಆಯುರ್ವೇದಿಕ್ ಔಷದಿಗಳು ದೀರ್ಘಕಾಲದ ಬಳಕ ಅನೇಕ ರೀತಿಯ ಅಡ್ಡಪರಿಣಾಮ ಬೀರುತ್ತದೆ. ಅಲೋಪಥಿಯ ಅಡ್ಡಪರಿಣಾಮ ಹಾಗೂ ಅವರ ತುರ್ತು ಚಿಕಿತ್ಸೆ ವಿಧಾನ ಸಾಕ್ಷಿ ಸಹಿತದಾಕಲೆಯ ರೂಪದಲ್ಲಿ ಲಭ್ಯವಿರುತ್ತದೆ. ಆದರೆ ಇದು ಆಯುರ್ವೇದ ಪದ್ದತಿಯಲ್ಲಿ ಅಲಭ್ಯ ನಮ್ಮ ದೇಹದ ರಕ್ಷಣಾ ವ್ಯವಸ್ಥೆ (DEFENCE MECHANISM) ನಾರು ಬೇರಿನ ಕೆಲವು ರಾಸಾಯನಿಕಗಳನ್ನು ಒಪ್ಪಿಕೊಳ್ಳುವುದಿಲ್ಲ ಆಗ ಅಡ್ಡಪರಿಣಾಮ ಖಂಡಿತಾ ಆಗುತ್ತದೆ. ಹೊಟ್ಟೆ ನೋವು ಕಡಿಮೆ ಮಾಡುವ “ಲಿಕೋರೈಸ್” ನಿಂದ ಹೊಪೊಲ್ಯುಕೇಮಿಯಾ ರಕ್ತದೊತ್ತಡ ಜಾಸ್ತಿಯಾದ ಹಾಗೂ ದೇಹದಲ್ಲಿ ಲವಣಗಳ ಕೊರತೆಯಾದ ಉದಾಹರಣೆಗಳಿದೆ ದೇಹದ ತೂಕ ಇಳಿಸಲು ಉಪಯೊಗಿಸಿದ ಆಯುರ್ವೇದಿಯ ಔಷದಿ ೪೮ ಚೈನಾ ಮಹಿಳೆಯರಲ್ಲಿ ಮೂತ್ರಕೋಷದ ವೈಪಲ್ಯಕ್ಕೆ ನಾಂದಿಹಾಡಿದೆ. ಸರಿಯಾಗಿ ಸಂಸ್ಕರಿಸಿದ ಕೆಲವೊಂದು ಆಯುರ್ವೇದ ಔಷದಿಯಲ್ಲಿ ಬೆಳೆಯುವ ಶಿಲಿಂದ್ರಗಳು ಉತ್ಪತ್ತಿ ಮಾಡುವ ರಾಸಾಯನಿಕಗಳು ನರಮಂಡಲ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರಿದೆ. “ಜಿನ್‌ಸೆಂಗ್” ಎಂಬ ಅತಿ ಉಪಯುಕ್ತ ಆಯುರ್ವೇದ ಔಷದ ಕೂಡ ರಕ್ತದೊತ್ತಡ, ನರದೌರ್ಬಲ್ಯ, ಚರ್ಮದ ತುರಿಕೆ, ನಿದ್ದೆ ಬಾರದಿರುವಿಕೆಯಂತ ಅಡ್ಡಪರಿಣಾಮ ಬೀರುತ್ತದೆ.

 

ಅಯುರ್ವೇದ ಔಷದಿ ತೆಗೆದುಕೊಂಡವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಅಧ್ಯಯನದ ದಾಖಲೆ ಇಲ್ಲ, ಅಲೋಪತಿಯಲ್ಲಿ ಯಾವುದಾರೊಂದು ಹೊಸ ಔಷದಿ ಅವಿಷ್ಕಾರವಾದಾಗ ಅದು ಮನುಷ್ಯನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ದೇಹದಲ್ಲಿ ಎಷ್ಟು ಹೊತ್ತು ಇರುತ್ತದೆ. ಎಷ್ಟು ಸಮಯದ ನಂತರ ಅದರ ಪ್ರಭಾವ ಪ್ರಾರಂಭವಾಗುತ್ತದೆ, ದೇಹದಿಂದ ಹೊರಗೆ ಯಾವ ರೂಪದಲ್ಲಿ ಹೋಗುತ್ತದೆ. ಪ್ರತಿ ಮನುಷ್ಯನಿಗೆ ಆತನ ತೂಕವನ್ನಾದರಿಸಿ ಎಷ್ಟು ಗುಟುಕು (DOSE) ಕೊಡಬೇಕು ಯಾವ ರೀತಿಯ ಅಡ್ಡಪರಿಣಾಮ ಬೀರುತ್ತದೆ. ಅದರ ಚಿಕಿತ್ಸಾವಿದಾನ ಹಾಗೂ ಎಂತಹವರಿಗೆ ಈ ಔಷದಿಯನ್ನು ಕೊಡಬಾರದು ಎಂಬ ಇತ್ಯಾದಿ ವಿವರಗಳನ್ನು “ಕ್ಲಿನಿಕಲ್ ಟ್ರಯಲ್ಸ್” ಮೂಲಕ ಸಂಗ್ರಹಿಸುವುದರಿಂದ ಆ ಹೊಸ ಔಷದಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿ ನಿಮಗೆ ಲಭ್ಯವಾಗುತ್ತದೆ ಆದರೆ ಈ ರೀತಿಯ ಕ್ಲಿನಿಕಲ್ ಡೇಟಾ ಆಯುರ್ವೇದದ ಔಷದಿಗಳಿಗೂ ಲಭ್ಯವಾಗಬೇಕು ಅನಾದಿಕಾಲದಿಂದಲೂ ಅಜ್ಜ ಮುತ್ತಜ್ಜಂದಿರು ಉಪಯೋಗಿಸಿದ ಜ್ಞಾನದ ಆಧಾರದ ಮೇಲೆ ಈ ಆಯುರ್ವೇದಿಕ್ ಔಷದಿಗಳು

ಮುಂದೆ ಓದಲು ಲಿಂಕ್ ಕ್ಲಿಕ್ ಮಾಡಿ  http://www.aralikatte.com/2016/07/30/ayurveda4

 

ಪ್ರಕಾಶ್.ಕೆ.ನಾಡಿಗ್, ಶಿವಮೊಗ್ಗ
(ಮೊಬೈಲ್-೯೮೪೫೫೨೯೭೮೯)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

  1. Pingback: ಆಯುರ್ವೇದಿಯ ಔಷದಿಗಳಷ್ಟು ಎಷ್ಟು ಸುರಕ್ಷಿತ ? - Newsism

Leave a Reply

Your email address will not be published.

To Top