fbpx
Health

ಆಯುರ್ವೇದಿಯ ಔಷದಿಗಳಷ್ಟು ಎಷ್ಟು ಸುರಕ್ಷಿತ ?

ಮುಂಚಿನ ಆರ್ಟಿಕಲ್ ಓದಲು ಲಿಂಕ್ ಕ್ಲಿಕ್ ಮಾಡಿ  http://www.aralikatte.com/2016/07/30/ayurveda3

ರೋಗಿಗಳನ್ನು ತಲುಪುತ್ತಿದೆ ಅಲೋಪಧಿಕ್ ಔಷದಿಗಳ ಉತ್ಪಾದನ ಪರೀಕ್ಷೆಗೆ ICH (INTERNATIONAL CONFERENCE ON HARMONIZATION) ಎಂಬ ಮಾನದಂಡವಿದೆ ಅದರಂತೆ ಯೂರೋಪ್ 3AQ22 ಎಂಬ ಸೆಕ್ಷೆನ್ ಅಡಿಯಲ್ಲಿ ಆಯುರ್ವೇದ ಔಷದಿಗಳ ಗುಣಮಟ್ಟದ ಬಗ್ಗೆ ಕೆಲವೊಂದು ಮಾನದಂಡಗಳನ್ನು ೧೯೮೯ ರಲ್ಲಿಯೇ ಜಾರಿಗೆ ತಂದಿದೆ ಇದರ ಅನ್ವಯ ಎಲ್ಲ ಆಯುರ್ವೇದಿಯ ಔಷದಿ ತಯಾರಕರು ‘ ಗುಣಮಟ್ಟ ನಿಯಂತ್ರಣ ವಿಧಾನ’ ಅಂದರೆ ಕಚ್ಚಾವಸ್ತುವಿನಿಂದ ಹಿಡಿದು ಸಿದ್ದವಸ್ತುವಿನವರೆಗೂ ಪದಾರ್ಥವನ್ನು ಪರೀಕ್ಷಿಸುವುದು ಔಷದದ ದೃಡತೆ (STABILITY TEST) ಅಂದರೆ ಎಷ್ಟು ದಿನಗಳವರೆಗೂ ಈ ಔಷದಿ ಬಳಸಲು ಸಾಧ್ಯ ಎಂಬ ಮಾಹಿತಿಯನ್ನು, ಸಂಗ್ರಹಿಸಬೇಕು ಅಲ್ಲದೇ ಅಲೋಪತಿ ಔಷದಿ ತಯಾರಿಕೆಯಲ್ಲಿ ಬಳಸುವ “ಉತ್ತಮ ಉತ್ಪಾದನಾ ವಿದಾನ” (GOOD MANUFACTURING PRACTIVE-GMP) ವನ್ನು ತಾವೂ ಸಹ ಅಳವಡಿಸಿಕೊಳ್ಳಬೇಕು, ಇದರ ಬಗ್ಗೆ ೧೯೪೦ ರ ಔಷದ ಹಾಗೂ ಕಾಂತಿವರ್ದಕ ಕಾಯಿದೆ “ಫೆಡ್ಯೂಲ್ ಎಂ ನಲ್ಲಿ” ವಿವರವಾಗಿ ತಿಳಿಸಲಾಗಿದೆ ಅಲ್ಲದೇ ಅಲೋಪಥಿಗೆ ಅನುಸರಿಸುವಂತೆ ಕಚ್ಚಾವಸ್ತುವಿನಿಂದ ಸಿದ್ದವಸ್ತುವಿನವರೆಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿ ಅವುಗಳ ದಾಖಲೆಗಳನ್ನು ಇಡಬೇಕೆಂದು ತಾಕೀತು ಮಾಡಿದೆ.

ಅಯುರ್ವೇದ ಔಷದಿಗಳ ಸುರಕ್ಷೆತೆಯ ಬಗ್ಗೆ ಹಲವಾರು ಪ್ರಪಂಚದಾದ್ಯಂತ ಇರುವ ಆರೋಗ್ಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದೆ. ಸಂಯುಕ್ತ ಸಂಸ್ಥಾನದ “ಔಷದಿ ಆರೋಗ್ಯದ ಕಾನೂನು, ಸಂಸ್ಥೆ” (MHRA Medicines Health Care Regulatory agency) ೨೦೦೨ ರಲ್ಲಿ ನಾರು ಬೇರು ಔಷದಿಗಳ ಸುರಕ್ಷೆತೆಗೆ ಸಂಬಂಧಿಸಿದಂತೆ ವರದಿಯೊಂದನ್ನು ಸಿದ್ದಪಡಿಸಿದೆ. ಇದರಲ್ಲಿ ಆಯುರ್ವೇದಿಯ ಔಷದಿಗಳಿಂದಾಗುವ ಅಡ್ಡಪರಿಣಾಮಗಳನ್ನು ದಾಖಲಿಸಲಾಗಿದೆ.

ಅಮೇರಿಕಾದಲ್ಲಿ ಈಗಲೂ ಗಿಡಮೂಲಿಕೆಗಳನ್ನು ಆಹಾರ ರೂಪದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಮಾರಬಹುದು. ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಇದರ ಮೇಲೆ ನಮೂದಿಸುವ ಹಾಗಿಲ್ಲ. ಅಲೋಪಥಿ ಔಷದಿಗಳನ್ನು ಮಾರುವುದಕ್ಕೆ ಪರವಾನಿಗೆ ಪಡೆಯಬೇಕು. ಆದರೆ ಈ ಗಿಡಮೂಲಿಕೆಯಿಂದ ತಯಾರಾದ ಆಹಾರ ಮಾರುಕಟ್ಟೆ ಮಾಡಲು ಈ ನಿಬಂಧನೆ ಇಲ್ಲ, ಆಯುರ್ವೇದದ ಔಷದಿಗಳ ಮಾರುಕಟ್ಟೆಗಳ ಕಠಿಣ ಕಾನೂನುಗಳು ರೂಪಿತವಾಗುತ್ತಿದ್ದು ಈ ನಿಟ್ಟಿನಲ್ಲಿ ಭಾರತವೂ ಹಿಂದೆ ಒಪ್ಪಿಲ್ಲ ಭಾರತದ ಅಲೋಪಥಿ ಔಷದಿ ತಯಾರಿಕೆಗೆ ಮಾನದಂಡಗಳನ್ನು ರೂಪಿಸಿರುವ ಭಾರತದ ಔಷದ ತಯಾರಿಕಾ ಕೈಪಿಡಿ “ಭಾರತೀಯ ಫಾರ್ಮಕೋಪಿಯ” ( Indian Pharmacopo EIA-IP) ತನ್ನ ೨೦೦೭ ರ ಆವೃತ್ತಿಯಲ್ಲಿ ಆಯುರ್ವೇದದಲ್ಲಿ ಸಾಮಾನ್ಯವಾಗಿ ಉಪಯೊಗಿಸುವ ಅರ್ಜುನ, ಅಮಲಕಿ, ಆಮ್ಲು, ಆರ್ಟಮಿಸಿಯಾ, ಗುಡುಚಿ, ಬೃಂಗರಾಜ, ಹರಿಟಾಕಿ, ಮಂಜಿಪ್ಪ, ವಿಪ್ಪಲಿ, ಪುನರ್ ನವಾ ಸತಾವರಿ, ತುಳಿಸಿ ಮುಂತಾದ ೨೩ ಆಯುರ್ವೇದಿಯ ಗಿಡಮೂಲಿಕೆಗಳನ್ನು ಸೇರಿಸಿದ್ದಾರಲ್ಲದೇ ಅದರ ಅನೇಕ ಮಾನದಂಡಗಳನ್ನು ನಿಗದಿಪಡಿಸಿರುವುದು ಸ್ವಾಗತಾರ್ಹ ವಿಚಾರ ಆದರೆ ಈ ಆಯುರ್ವೇದ ಔಷದಿ ತಯಾರಿಸುವ ಕಂಪೆನಿಗಳು ಈ ನಿಯಮವನ್ನು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂದು ಗಮನಿಸುವ ಕೆಲಸ ಔಷದಿ ಪರೀವಿಕ್ಷಕರದ್ದು.

ಸುರಕ್ಷಿತ ಆಯುರ್ವೇದ ಔಷದಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ “ವಿಶ್ವ ಆರೋಗ್ಯ ಸಂಸ್ಥೆ” (WHO) ಕೂಡ ಈ ಆಯುರ್ವೇದ ಔಷದಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತರಲು ಕೆಲವೊಂದು ಮಾನದಂಡಗಳನ್ನು ರೂಪಿಸಿದೆ. WHOನ ಸದಸ್ಯ ರಾಷ್ಟ್ರಗಳು ಈ ಮಾನದಂಡಗಳನ್ನು ತಮ್ಮ ದೇಶದಲ್ಲಿ ಸುರಕ್ಷಿತವಾದ ಆಯುರ್ವೇದ ಔಷದಿಗಳನ್ನು ತಯಾರಿಸಲು ಬಳಸಬಹುದು.

ಶತಮಾನಗಳಿಂದ ಉಪಯೋಗದಲ್ಲಿರುವ ಈ ಗಿಡಮೂಲಿಕೆಗಳು ಹಲವಾರು ರೋಗಗಳಿಗೆ ರಾಮಬಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಲವಾರು ವೈದ್ಯರ ಬಳಿಗೆ ಹೋಗುವ ಮುನ್ನವೇ ಈ ಔಷದಿಗಳನ್ನು ಉಪಯೋಗಿಸುತ್ತಾರೆ ಕಾರಣ ಆಯುರ್ವೇದ ಸುರಕ್ಷಿತ ಎಂಬ ತಪ್ಪು ತಿಳುವಳಿಕೆ. “ಪ್ಯಾರಾಸೆಲ್ಫ್‌ಸ್” ಹೇಳುವಂತೆ “ಎಲ್ಲ ವಸ್ತುಗಳು ವಿಷವೇ ಯಾವುದು ಸುರಕ್ಷಿತವಲ್ಲ, ಸೇವನೆಗೆ ಉತ್ತಮವೇ ಎಂದು ಗುಟುಕು ಮಾತ್ರ ನಿರ್ಧರಿಸುತ್ತದೆ” ಇದು ಗಿಡಮೂಲಿಕಾ ಔಷದಿಗಳಿಗೆ ಭಾಗಶ: ಅನ್ವಯವಾಗುತ್ತದೆ ಸರಿಯಾದ ವೈದ್ಯರ ಮಾರ್ಗದರ್ಶನವಿಲ್ಲದೇ ಈ ಔಷದಿಗಳ ಉಪಯೋಗ ಕೆಲವೊಮ್ಮೆ ಖಂಡಿತಾ ಮಾರಕವಾಗಬಹುದು ಅತಿಯಾದ ಗುಟುಕು (DOSES) ಸರಿಯಾಗಿ ಉತ್ಪಾದಿಸದೇ ಇರುವುದು, ಗೊತ್ತಿಲ್ಲವೇ ಬೇರೆ ಗಿಡಮೂಲಿಕೆಗಳ ಬಳಕೆ ರಾಸಾಯನಿಕ ಔಷದಿಗಳ ಕಲಬೆರಕೆ. ಇವುಗಳ ಉತ್ಪಾದನೆಯಲ್ಲಿ ಬಾರಯುಕ್ತ ಲೋಹಗಳ ಬಳಕೆ ಅಪಾಯಕ ಅಡಿಪಾಯಹಾಕಬಹುದು ತಲತಲಾಂತರದಿಂದ ನೈಸರ್ಗಿಕವಾಗಿ ದೊರೆಯುತ್ತಿರುವ ಈ ಗಿಡಮೂಲಿಕೆಗಳ ಉಪಯೋಗ ಹಲವಾರು ರೋಗಕ್ಕೆ ಉಪಯೋಗವಾಗುತ್ತಿರಬಹುದು ಅಂದ ಮಾತ್ರಕ್ಕೆ ಇವು ಸುರಕ್ಷಿತವೆಂಬ ತಿಳುವಳಿಕೆ ತಪ್ಪು ! ಅಲೋಪಥಿಯ ಔಷದಿಗಳ ಹಾಗೆ ಇವುಗಳಿಗೂ ಕಠಿಣ ಪರೀಕ್ಷಾ ಹಾಗೂ ಕಾನೂನಿನ ಮಾನದಂಡಗಳು ಅಗತ್ಯವಾಗಿದೆ.

 

ಪ್ರಕಾಶ್.ಕೆ.ನಾಡಿಗ್, ಶಿವಮೊಗ್ಗ
(ಮೊಬೈಲ್-೯೮೪೫೫೨೯೭೮೯)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top