Kannada Bit News

“ದಿ ಲಾಸ್ಟ್ ಕನ್ನಡಿಗ” ಕಿರುಚಿತ್ರದ ಫರ್ಸ್ಟ್ ಲುಕ್

‘ಲೂಸಿಯ’ ಖ್ಯಾತಿಯ ಶೃತಿ ಹರಿಹರನ್ ಅವರು ನಿರ್ಮಿಸುತ್ತಿರುವ ಕನ್ನಡ ಭಾಷೆಯ ಇಂದಿನ ಸ್ಥಿತಿ ಹಾಗೂ ಕನ್ನಡ ಭಾಷೆಯ ಅರಿವನ್ನು ಸಮಾಜದಲ್ಲಿ ಮೂಡಿಸುವ ಅಂಶ ಹೊಂದಿರುವ “ದಿ ಲಾಸ್ಟ್ ಕನ್ನಡಿಗ” ಕಿರುಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್..

ದಿ ಲಾಸ್ಟ್ ಕನ್ನಡಿಗ

‘ಲೂಸಿಯ’ ಖ್ಯಾತಿಯ ಶ್ರುತಿ ಹರಿಹರನ್‌ ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ನಿರ್ಮಾಣ. ಹೌದು, ಶ್ರುತಿ ಹರಿಹರನ್‌ ಈಗ ನಿರ್ಮಾಪಕರು. ಕಿರುಚಿತ್ರವೊಂದಕ್ಕೆ ಹಣ ಹಾಕುವ ಮೂಲಕ ನಿರ್ಮಾಪಕಿಯಾಗಿದ್ದಾರೆ.
ಶ್ರುತಿ ಹರಿಹರನ್‌ ನಿರ್ಮಿಸಿರುವ ಕಿರುಚಿತ್ರದ ಹೆಸರು “ದಿ ಲಾಸ್ಟ್‌ ಕನ್ನಡಿಗ’. ಇದು ಕನ್ನಡ ಭಾಷೆಗೆ ಸಂಬಂಧಿಸಿದ ಕಿರುಚಿತ್ರ. ಕನ್ನಡ ಭಾಷೆಯ ಇಂದಿನ ಸ್ಥಿತಿ ಹಾಗೂ ಕನ್ನಡ ಭಾಷೆಯ ಅರಿವನ್ನು ಸಮಾಜದಲ್ಲಿ ಮೂಡಿಸುವ ಅಂಶ ಹೊಂದಿರುವ “ದಿ ಲಾಸ್ಟ್ ಕನ್ನಡಿಗ” ಕಿರುಚಿತ್ರ. ಈ ಕಿರುಚಿತ್ರದ ನಿರ್ದೇಶಕ, ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲಾ ಮದನ್‌ರಾಮ್‌ ವೆಂಕಟೇಶ್‌ ರವರದ್ದೇ.

ಇನ್ನು, ಕಿರುಚಿತ್ರ ಕುರಿತು ಹೇಳುವುದಾದರೆ, ಬೆಂಗಳೂರಲ್ಲಿ ಸುಮಾರು ವರ್ಷಗಳಿಂದಲೂ ನಡೆಯುತ್ತಿರುವ ವಾಸ್ತವ ಪರಿಸ್ಥಿತಿಯೇ ಕಿರುಚಿತ್ರದ ಮುಖ್ಯ ವಿಷಯ. “ಬೆಂಗಳೂರಿಗರೇ ಇಲ್ಲಿ ಕನ್ನಡ ಭಾಷೆಯನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಬೇರೆ ಭಾಷಿಗರು ಬಂದು ವಿಳಾಸ ಅಥವಾ ಇನ್ನಿತರೆ ವಿಷಯಗಳ ಬಗ್ಗೆ ಕೇಳಿದರೆ, ಅವರನ್ನು ಅವರ ಭಾಷೆಯಲ್ಲೇ ಮಾತಾಡಿಸುವ ಮೂಲಕ ಕನ್ನಡ ಭಾಷೆಯನ್ನು ಮರೆಯುತ್ತಿದ್ದಾರೇನೋ ಎಂಬ ಆತಂಕ ಶುರುವಾಗಿದೆ. ಅವರಿಗೆ ಅವರ ಭಾಷೆಯಲ್ಲೇ ಮಾತಾಡಿಸುವುದರ ಬದಲು ಕನ್ನಡ ಭಾಷೆಯನ್ನು ಹೇಳಿಕೊಡುವ ಗೋಜಿಗೆ ಹೋಗುತ್ತಿಲ್ಲ. ಅವರಿಗೂ ಕನ್ನಡ ಮಾತನಾಡಲು ಕಲಿಯಬೇಕು ಎಂದು ಒತ್ತಾಯಿಸುತ್ತಿಲ್ಲ. ಯಾವುದೇ ಬಾಷೆ ಮಂದಿ ಬಂದು ಮಾತಾಡಿಸಿದರೂ ಅವರ ಭಾಷೆಯಲ್ಲೇ ಮಾತಾಡಿಸುತ್ತಿರುವುದರಿಂದ ಇಂದು ಕನ್ನಡ ಮಾತಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೇರಳ, ತಮಿಳು ನಾಡು, ಆಂಧ್ರ ಪ್ರದೇಶಗಳಲ್ಲಿ ಅವರ ಭಾಷೆಯನ್ನು ಮಾತಾಡದಿದ್ದರೆ ಅಲ್ಲಿ ಬದುಕು ಸಾಗುವುದಿಲ್ಲ. ಆದರೆ, ಇಲ್ಲಿ ಪರಿಸ್ಥಿತಿ ಹಾಗಿಲ್ಲ. ಹೀಗಾದರೆ, ಮುಂದೆ ಕನ್ನಡದ ಸ್ಥಿತಿ ಹೇಗಾಗಬಹುದು ಎಂಬ ನಿಟ್ಟಿನಲ್ಲಿ ಈ ಕಿರುಚಿತ್ರವನ್ನು ತಯಾರಿಸಲಾಗಿದೆ’ ಎನ್ನುತ್ತಾರೆ ಶ್ರುತಿ ಹರಿಹರನ್‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top