fbpx
News

ದಾಖಲೆಗೊಸ್ಕರ ಈ ಮನುಷ್ಯ ಯಾವ ಸಾಹಸಕ್ಕೂ ಸೈ ಅಂತಾನೆ…

ಈವರೆಗೆ 18 ಸಾವಿರಕ್ಕೂ ಅಧಿಕ ಬಾರಿ ಆಕಾಶದಿಂದ ಪ್ಯಾರಾಚೂಟ್ ಬಳಸಿ ಧುಮುಕಿದ ಹಿನ್ನೆಲೆ ಹೊಂದಿರುವ ಸ್ಕೈಡೈವರ್ ಲ್ಯೂಕ್ ಐಕಿನ್ಸ್ ಅವರೇ ಹೊಸ ವಿಶ್ವದ ದಾಖಲೆ ಬರೆದ ವ್ಯಕ್ತಿ…

ಸಾವಿರಾರು ಅಡಿ ಎತ್ತರದಲ್ಲಿ ಹಾರಾಡುವ ವಿಮಾನದಿಂದ ಜಿಗಿದು ಪ್ಯಾರಾಶೂಟ್ ಸಹಾಯದಿಂದ ಕೆಳಗಿಳಿಯುವ ಸಾಹಸ ಪ್ರದರ್ಶನವೇ ಮೈನವಿರೇಳಿಸುತ್ತದೆ. ಅಂತಹದ್ದರಲ್ಲಿ ಅಮೆರಿಕದ 42 ವರ್ಷದ ಸ್ಕೈಡೈವರ್ ಒಬ್ಬ ಪ್ಯಾರಾಶೂಟ್ ಸಹಾಯವಿಲ್ಲದೇ 25 ಸಾವಿರ ಅಡಿ (7.62 ಕಿ.ಮೀ.) ಎತ್ತರದಿಂದ ನೆಲದತ್ತ ಜಿಗಿದು, ಬಲೆಯ ಮೇಲೆ ಬಿದ್ದು ಐತಿಹಾಸಿಕ ಸಾಧನೆ ಮಾಡಿದ ಘಟನೆ ಶನಿವಾರ ನಡೆದಿದೆ. ಈ ರೋಮಾಂಚನಕಾರಿ ಸಾಹಸ ಅಮೆರಿಕದ ಫಾಕ್ಸ್ ಟೀವಿಯಲ್ಲಿ ನೇರ ಪ್ರಸಾರವೂ ಆಗಿದೆ!

ಶನಿವಾರ ಕ್ಯಾಲಿಫೋರ್ನಿಯಾ ಸಮೀಪ ವಿಮಾನದಿಂದ ಜಿಗಿದ ಈತ, ಪ್ಯಾರಾಶೂಟ್ ಬಳಸದೇ 2 ನಿಮಿಷಗಳ ಹಾರಾಟದ ಬಳಿಕ 100 ಅಡಿ ಅಗಲ ಹಾಗೂ 100 ಅಡಿ ಉದ್ದದಷ್ಟು ಪ್ರದೇಶದಲ್ಲಿ ಅಳವಡಿಸಲಾಗಿದ್ದ ಬಲೆಯ ಮೇಲೆ ಬಂದು ಬಿದ್ದಿದ್ದಾನೆ. ಈತನ ಸಾಹಸವನ್ನು ಸ್ವತಃ ಸ್ಕೈಡೈವರ್ ಆಗಿರುವ ಪತ್ನಿ ಮೋನಿಕಾ ಹಾಗೂ 4 ವರ್ಷದ ಪುತ್ರ ಲೋಗನ್, ಮತ್ತಿತರೆ ಕುಟುಂಬ ಸದಸ್ಯರು ಕಣ್ತುಂಬಿಕೊಂಡಿದ್ದಾರೆ.

ಪ್ಯಾರಾಶೂಟ್ ಬೇಡವೆಂದ : ಫಾಕ್ಸ್ ನೆಟ್ವರ್ಕ್ನ ‘ಸ್ಟ್ರೈಡ್ ಗಮ್ ಪ್ರಸೆಂಟ್ಸ್ ಹೆವೆನ್ ಸೆಂಟ್’ ಎಂಬ ವಿಶೇಷ ನೇರ ಪ್ರಸಾರದ ಕಾರ್ಯಕ್ರಮದ ಭಾಗವಾಗಿ ಲ್ಯೂಕ್ ಐಕಿನ್ಸ್ ಈ ಸಾಹಸ ಪ್ರದರ್ಶಿಸಿದ್ದಾನೆ. ಈ ಪ್ರದರ್ಶನಕ್ಕೂ ಮುನ್ನ ಮುನ್ನೆಚ್ಚರಿಕೆಯಾಗಿ ಪ್ಯಾರಾಶೂಟ್ ಅನ್ನು ಬೆನ್ನಿಗೆ ಕಟ್ಟಿಕೊಂಡಿರಬೇಕು ಎಂದು ಆಯೋಜಕರು ಲ್ಯೂಕ್ಗೆ ಸೂಚನೆ ನೀಡಿದ್ದರು. ಆದರೆ ಅದನ್ನು ಸ್ವತಃ ಲ್ಯೂಕ್ ನಿರಾಕರಿಸಿದ್ದ. ಬಲೆ ಮೇಲೆ ಬಿದ್ದಾಗ ಪ್ಯಾರಾಶೂಟ್ನ ಡಬ್ಬಿ ಬೆನ್ನಿಗೆ ಬಡಿದರೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂದು ವಾದಿಸಿದ್ದ. ಕೊನೆಗೆ ಆಗಸದಿಂದ ಧುಮುಕುವ ಮೊದಲು ಪ್ಯಾರಾಶೂಟ್ ಕಟ್ಟಿಕೊಂಡಿರಬೇಕು ಎಂಬ ಷರತ್ತನ್ನು ಆಯೋಜಕರು ಸಡಿಲಿಸಿದರು.

ಕೂಡಲೇ ಲ್ಯೂಕ್ ಹಾಗೂ ಇತರೆ ಮೂವರು ಸ್ಕೈಡೈವರ್ಗಳು 25 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನದಿಂದ ಜಿಗಿದರು. ಒಬ್ಟಾತ ಕ್ಯಾಮೆರಾ ಸಹಾಯದಿಂದ ಚಿತ್ರೀಕರಣ ಮಾಡುತ್ತಿದ್ದರೆ, ಮತ್ತೂಬ್ಬ ಹೊಗೆ ಬಿಡುತ್ತಾ ನೆಲದ ಮೇಲಿದ್ದವರಿಗೆ ಸ್ಕೈಡೈವರ್ನ ಇಳಿಯುವಿಕೆ ತೋರಿಸುತ್ತಿದ್ದ. ಮತ್ತೂಬ್ಬ ಆಮ್ಲಜನಕ ಸಿಲಿಂಡರ್ಗಳನ್ನು ಹೊಂದಿದ್ದ. ಆ ಮೂವರೂ ಪ್ಯಾರಾಶೂಟ್ ಸಹಾಯದಿಂದ ಬೇರೆಡೆ ಇಳಿದರೆ, ಲ್ಯೂಕ್ ಮಾತ್ರ ಪ್ಯಾರಾಶೂಟ್ ಇಲ್ಲದೇ ನೇರವಾಗಿ ಬಲೆಯ ಮೇಲೆ ಬಿದ್ದ. ಕೂಡಲೇ ಎದ್ದು ಓಡಿ ಬಂದು ತನ್ನ ಮಗನನ್ನು ಎತ್ತಿ ಮುದ್ದಾಡಿದ.p

ಮಾರ್ಗದರ್ಶನ ವ್ಯವಸ್ಥೆ ಇದು ಐಕಿನ್ಸ್ ಮತ್ತು ಆತನ ತಂಡದವರು ಸಿದ್ಧಪಡಿಸಿದ ವ್ಯವಸ್ಥೆ. ಬಲೆಯ ಮೇಲೆ ಸರಿಯಾಗಿ ಇಳಿಯುತ್ತಿರುವ ಬಗ್ಗೆ ಇಂಡಿಕೇಟರ್ ಲೈಟ್ ಮೂಲಕ ತೋರಿಸುತ್ತದೆ. ಗುರಿಯಿಂದ ದೂರವಾಗಿದ್ದರೆ ಐಕಿನ್ಸ್ಗೆ ಕೆಂಪು ಲೈಟ್ ಕಾಣಿಸುತ್ತಿತ್ತು. ಗುರಿಗೆ ಸರಿಯಾಗಿ ಇಳಿಯುತ್ತಿದ್ದರೆ ಬಿಳಿಯ ಲೈಟ್ ಕಾಣಿಸುತ್ತಿತ್ತು. ಐಕಿನ್ಸ್ ಬಲೆಯ ಕೇಂದ್ರಕ್ಕೆ ಸಮೀಪವಾಗುತ್ತಿದ್ದಂತೆ ಹೆಲ್ಮೆಟ್ನಲ್ಲಿರುವ ಹೆಡ್ ಸಟ್ನಲ್ಲಿ ಬೀಪ್ ಸೌಡ್ ಇನ್ನಷ್ಟು ಜೋರಾಗಿ ಕೇಳಿಸುತ್ತಿತ್ತು. ಬಲೆಯ ಕೇಂದ್ರದಿಂದ ದೂರ ಆಗುತ್ತಿದ್ದಂತೆ ಬೀಪ್ ಶಬ್ದ ಕಡಿಮೆಯಾಗುತ್ತಿತ್ತು. ಹೀಗಾಗಿ ಬಲೆ ಮೇಲೆಯೇ ಇಳಿಯುವುದಕ್ಕೆ ಐಕಿನ್ಸ್ಗೆ ಸಾಧ್ಯವಾಯಿತು.

ಒಳಕ್ಕೆ ಸೆಳೆದುಕೊಳ್ಳುವ ಬಲೆ ಐಕಿನ್ಸ್ ಮೇಲಿನಿಂದ ಬಿದ್ದ ಬಳಿಕ ಪುಟಿಯುವುದನ್ನು ತಪ್ಪಿಸುವ ಸಲುವಾಗಿ ವಿಶಿಷ್ಟವಾದ ಬಲೆಯನ್ನು ನಿರ್ಮಿಸಲಾಗಿತ್ತು. ನೆಲಕ್ಕೆ ಕಟ್ಟಲಾದ ಬಲೆ ಸುಮಾರು 20 ಅಂತಸ್ತಿನ ಕಟ್ಟಡದಷ್ಟು ಎತ್ತರವಿತ್ತು. ನಾಲ್ಕು ದಿಕ್ಕುಗಳಲ್ಲಿ 200 ಅಡಿ ಎತ್ತರದ ನಾಲ್ಕು ಕ್ರೇನ್ಗಳಿಗೆ ಬಲೆಯ ಅಂಚನ್ನು ಕಟ್ಟಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top