ಜೂನಿಯರ್ ಲೈನ್ಮನ್ ನೇಮಕ;
ಆ.5ರಿಂದ ಅರ್ಜಿ ಸಲ್ಲಿಸಲು ಅವಕಾಶ ಒಟ್ಟು ಹುದ್ದೆಗಳು: 6213 ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್) ಮತ್ತೆ ಲೈನ್ಮನ್ಗಳ ನೇಮಕ ಪ್ರಕ್ರಿಯೆ ಆರಂಭಿಸಿದೆ. ಕೆಪಿಟಿಸಿಎಲ್ನಲ್ಲಿ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಜೂನಿಯರ್ ಲೈನ್ಮನ್ (ಕಿರಿಯ ಮಾರ್ಗದಾಳು ) ಮತ್ತು ಜೂನಿಯರ್ ಸ್ಟೇಷನ್ ಅಟೆಡೆಂಟ್ (ಕಿರಿಯ ಸ್ಟೇಷನ್ ಪರಿಚಾರಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಬ್ಯಾಕ್ಲಾಗ್ ಹುದ್ದೆಗಳೂ ಸೇರಿ ಒಟ್ಟು 6152 ಜೂನಿಯರ್ ಲೈನ್ಮನ್ ಹುದ್ದೆಗಳಿಗೆ ನೇಮಕ ನಡೆದರೆ, ಕೆಪಿಟಿಸಿಎಲ್ಯಲ್ಲಿ ಖಾಲಿ ಇರುವ 61( ಬ್ಯಾಕ್ಲಾಗ್) ಜೂನಿಯರ್ ಸ್ಟೇಷನ್ ಅಟೆಡೆಂಟ್ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹತೆಗಳೇನು? ಕಿರಿಯ ಮಾರ್ಗದಾಳು ಮತ್ತು ಕಿರಿಯ ಸ್ಟೇಷನ್ ಪರಿಚಾರಕ ಎರಡೂ ಹುದ್ದೆಗಳಿಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು. ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಶೇಕಡಾ 50 ಅಂಕಗಳೊಂದಿಗೆ (ಒಬಿಸಿ-ಶೇಕಡಾ 45, ಎಸ್ಸಿ/ಎಸ್ಟಿ-ತೇರ್ಗಡೆ) ಪಾಸಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದೆ.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 35 ವರ್ಷ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ನೇಮಕ ಹೇಗೆ? ಮೊದಲ ಹಂತದಲ್ಲಿ ಗರಿಷ್ಠ ಅಂಕದ ಆಧಾರದ ಮೇಲೆ 1:5ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಸಹನ ಶಕ್ತಿ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ 100 ಮೀಟರ್ ಓಟ, ಸ್ಕಿಪ್ಪಿಂಗ್, ಶಾಟ್ಪುಟ್, ವಿದ್ಯುತ್ಕಂಬ ಏರುವುದು ಹಾಗೂ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಯಾವುದಾದರೂ ಮೂರನ್ನು ಆರಿಸಿಕೊಂಡು ಅರ್ಹತೆ ಪಡೆಯಬೇಕು. ಅದರಲ್ಲಿ ಕಡ್ಡಾಯವಾಗಿ ಕಂಬ ಹತ್ತುವುದು ಒಂದಾಗಿರಬೇಕು. ಏಕಕಾಲದಲ್ಲಿ ಎಲ್ಲ ಎಸ್ಕಾಂಗಳಲ್ಲಿ ಸಹನಶಕ್ತಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರ ದಾಖಲಾತಿ ಪರಿಶೀಲನೆ ನಡೆಸಿ, ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸುವಾಗ ದೊರೆಯಲಿರುವ ‘ಬ್ಯಾಂಕ್ ಚಲನ್’ ಪಡೆದು, ಬ್ಯಾಂಕ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ವೆಬ್ನಲ್ಲಿ ಪ್ರಕಟಿಸಲಾಗುವ ಅಧಿಸೂಚನೆಯನ್ನು ಓದಿಕೊಳ್ಳಬೇಕೆಂದು ಸೂಚಿಸಲಾಗಿದೆ. ಕ್ವಿಕ್ ಲುಕ್ ಅರ್ಜಿ ಸಲ್ಲಿಸಲು ಆರಂಭ : ಆಗಸ್ಟ್ 5, 2016
ಎಲ್ಲಿ ಎಷ್ಟು ಹುದ್ದೆ:
ಕೆಪಿಟಿಸಿಎಲ್ನಲ್ಲಿ 350, ಬೆಸ್ಕಾಂನಲ್ಲಿ 2,603, ಚೆಸ್ಕಾಂನಲ್ಲಿ 1,748, ಹೆಸ್ಕಾಂನಲ್ಲಿ 1,451. ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 100 ರೂ.
ಅರ್ಜಿ ಸಲ್ಲಿಸಲು ವೆಬ್: www.kptcl.com , www.bescom.org
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
