fbpx
Awareness

ಕರ್ನಾಟಕದ ರೈತರಿಗೆ ಯಾಕಿಷ್ಟು ತೊಂದರೆಗಳು…

ಶಾಲೆಗೆ ಹೊರಡುವ ಮೊದಲು ಮಗು ಹಾಲು ಬೇಕೆಂದು ಹಠ ಮಾಡುತ್ತ ಅಳುತಿತ್ತು, ಅಂಗಡಿಯವ ಹೇಳಿದ ಹಾಲು ಇನ್ಮೇಲೆ ಅಂಗಡಿಯ ಮುಖ ನೋಡುವುದಿಲ್ಲ ಎಂದ… ಸರಿ ಹಾಲು ಬೇಡವೇ ಬೇಡ ಅಕ್ಕಿ ತಂದು ಅನ್ನ ಮಾಡಿ ತಿನ್ನೋಣವೆಂದು ಅಂಗಡಿಯವನನ್ನು ವಿಚಾರಿಸಿದಾಗ ಅಕ್ಕಿಯೂ ಕೂಡ ಏಲ್ಲರ ಮೇಲೆ ಮುನಿಸಿಕೊಂಡಿದೆ ಎಂದು ತಿಳಿಯಿತು… ಇತ್ತ ತರಕಾರಿ ಮಾರ್ಕೆಟ್ ಗೆ ಬಂದಿಲ್ಲ, ಹಣ್ಣು ಹಂಪಲು ಸಿಗದೆ ರೋಗಿ ಪರದಾಡುತ್ತಿದ್ದಾನೆ, ಇನ್ನು Mcdonalds Kfc Dominos ಎಲ್ಲರು ಬಾಗಿಲು ಜಡಿಯುವ ಸ್ಥಿತಿಯಲ್ಲಿ ಇದ್ದರೆ… ಸದಾ ಜನಜಂಗುಳಿಯೆಂದ ತುಂಬಿರುವ ಬೆಂಗಳೂರು ಮಾರ್ಕೆಟ್ ಸ್ತಬ್ಧವಾಗಿದೆ… ಒಮ್ಮೆ ಯೋಚಿಸಿ, ದೇಶದ ಜೀವ ನಾಡಿ ರೈತ ತನ್ನೆಲಾ ಕಾರ್ಯಗಳನ್ನು ಬಿಟ್ಟು ಎಲ್ಲರಂತೆ ತಾನು ಮತ್ತು ತನ್ನ ಸಂಸಾರ ಎಂದು ಸುಮ್ಮನಾಗಿಬಿಟ್ಟಿದ್ದರೆ ಏನಾಗಿಬಿಡುತಿತ್ತು ಎಂದು…

india-drought

ನಮ್ಮೆಲರಿಗೂ ತಿಳಿದಿರುವಂತೆ ರೈತರು ಇಂದು ಸಂಕಷ್ಟದಲ್ಲಿದ್ದಾರೆ, ಇತ್ತೀಚೆಗೆ ಪರಿಸ್ಥಿತಿ ಹೇಗೆ ಆಗಿದೆ ಎಂದರೆ ಒಬ್ಬ ರೈತ ಲಾಭ ಮಾಡಿದ ಎಂಬ ವಿಷಯ ತಿಳಿದರೆ ಜಗತ್ತು ಆತನ ಕಡೆ ಬೆರಗುಗಣ್ಣಿನಿಂದ ನೋಡುವ ಪರಿಸ್ಥಿತಿ ಉಂಟಾಗಿದೆ.

indiadroughtcrop

ನಿಮಗೆಲ್ಲರಿಗೂ ಅನ್ನಿಸಬಹುದು ರೈತರು 2 ಲಕ್ಷ 3 ಲಕ್ಷಕೊಸ್ಕರ ಆತ್ಮಹತ್ಯೆ ಹಾದಿ ತುಳಿಯುವುದು ಸಮಂಜಸವಲ್ಲ ಎಂದು ಆದರೆ ಆತನ ಕಷ್ಟ ಆತನೇ ಬಲ್ಲ… ಭೂಮಿ ಉಳುವುದರಿಂದ ಹಿಡಿದು ಗದ್ದೆ ಮಾಡಿ, ಪೈರು ನೆಟ್ಟು, ಪ್ರಾಣಿ ಪಕ್ಷಿಗಳಿಂದ ಬೆಳೆಯನ್ನು ಸಂರಕ್ಷಿಸಿ, ಅದಕ್ಕೆ ರಸ ಗೊಬ್ಬರ ಅದು ಇದು ಎಂದು ಸಾಕಷ್ಟು ಖರ್ಚು ಮಾಡಿ, ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಿ, ಮಧ್ಯವರ್ತಿಗಳ ಉಪಟಳದ ನಡುವೆ ಸೆಣೆಸಾಡುವುದರ ಜೊತೆಗೆ ಸರಕಿನ ಬೆಲೆ ಇಳಿದಿದೆ ಎಂಬ ಆಘಾತದ ಸುದ್ದಿ ತಿಳಿದ ಕೂಡಲೇ ತನ್ನ ಜಂಘಾಬಲವೆಲ್ಲಾ ಅಡಗಿ ಕುಳಿತುಕೊಳ್ಳುತ್ತಾನೆ. ಸತತ 4 ರಿಂದ 5 ತಿಂಗಳು ತನ್ನ ಮಕ್ಕಳಂತೆ ಪೋಷಣೆ ಮಾಡಿದಕ್ಕೆ ಸಿಕ್ಕ ಪ್ರತಿಫಲ ‘ನಷ್ಟ’.

Drought_EPS

ಇಷ್ಟೆಲ್ಲ ಕಷ್ಟಗಳ ಜೊತೆಗೆ ಬೆಳೆ ಬೆಳೆಯುವುದಕ್ಕೆ ‘ನೀರು’ ಸಿಗದಿದ್ದರಂತೂ ಆತನನ್ನು ದೇವರೇ ಕಾಪಾಡಬೇಕು… ಪ್ರವಾಸೋದ್ಯಮದ ಹೆಸರಲ್ಲಿ ಕರ್ನಾಟಕದ ರೈತನಿಗೆ, ಕುಡಿಯಲು ಸಹ ನೀರಿಲ್ಲದೆ ಪರದಾಡುತ್ತಿರುವ ಉತ್ತರಕರ್ನಾಟಕದ ಜನರಿಗೆ ದ್ರೋಹ ಬಗೆಯುತ್ತಿರುವ ಗೋವಾ ಸರ್ಕಾರ ಆಗಲಿ, ಮತ್ತು ಗೋವಾ ಸರ್ಕಾರಕ್ಕೆ ಹಿಂಬಾಗಿಲಿನಿಂದ ಬೆಂಬಲ ನೀಡುತ್ತಿರುವ ಭ.ಜ.ಪ ಸರ್ಕಾರ ಆಗಲಿ ಎಚ್ಚೆತ್ತುಕೊಂಡು ಇನ್ನಾದರೂ ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕು… ಈಗಾಗಲೇ ರೈತಾಪಿ ವರ್ಗ ಕಂಗೆಟ್ಟು ಕೂತಿದ್ದು, ತನ್ನ ವ್ಯವಸಾಯ ಕಾರ್ಯಚಟುವಟಿಕೆಗಳನ್ನು ನಿಲ್ಲಿಸುತ್ತಿದ್ದಾನೆ, ಹೀಗೆಯೇ ಮುಂದುವರೆದರೆ ಮುಂದೊಂದು ದಿನ ತುತ್ತು ಅನ್ನಕ್ಕೂ ಅಲೆದಾಡುವ ಪರಿಸ್ಥಿತಿ ದೂರವಿಲ್ಲ…

-ಗಿರೀಶ್ ಗೌಡ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಕರ್ನಾಟಕದ ರೈತರಿಗೆ ಯಾಕಿಷ್ಟು ತೊಂದರೆಗಳು…
Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top