fbpx
Editor's Pick

ಏಕೀ ಅನಗತ್ಯ ಹಿಂದಿ ಹೇರಿಕೆ? ಭಾರತವೆಂದರೆ ಕೇವಲ ಹಿಂದಿಭಾಷಿಕರ ದೇಶವೇ?

ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಕೆಲಸ ಮಾಡುವ ನೌಕರರು ಹಿಂದಿ ಭಾಷಾಬಳಕೆಮಾಡುವುದನ್ನು ಉತ್ತೇಜಿಸಲು ಕೇಂದ್ರಸರ್ಕಾರ 10,000 ನಗದು ಬಹುಮಾನ ಘೋಷಿಸಿದೆ ಎಂದು ಕೇಳಿ ಅಶ್ಚರ್ಯವಾಯಿತು!! ಇದರ ಬದಲು ಆಯಾರಾಜ್ಯದ ಕೇಂದ್ರಸರ್ಕಾರದ ಸಿಬ್ಬಂದಿ ಪ್ರಾದೇಶಿಕಭಾಷೇಯನ್ನು ಬಳಸಿದರೆ ಬಹುಮಾನ ಎಂದು ಘೋಷಿಸಿದ್ದರೆ ಮೆಚ್ಚಬಹುದಿತ್ತೇನೋ. ಹಿಂದಿ ರಾಷ್ಟ್ರಭಾಷೆಯೆಂದು ಬಿಂಬಿಸಿ ಅನಗತ್ಯವಾಗಿ ದೇಶಾದ್ಯಂತ ಹಿಂದಿಹೇರಿಕೆಯ ಹುನ್ನಾರ ನೆಡೆದಿದೆ.ಇದಕ್ಕೆ ಪೂರಕವೆಂಬಂತೆ ನಮ್ಮ ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ಸರ್ಕಾರಿ ಅದಿಕಾರಿಗಳು ಸಹ ಹಿಂದಿ ಹೇರಿಕೆಯಲ್ಲಿ ತೊಡಗಿದ್ದಾರೆ, ಹಿಂದಿ ರಾಷ್ಟ್ರಮಟ್ಟದಲ್ಲಿ ಸಂಪರ್ಕ ಭಾಷೆಯಾಗಿಮಾತ್ರ ಉಪಯೋಗಿಸಲ್ಪಡುತ್ತಿದೆಯೇ ಹೊರತು ಹಿಂದಿ ರಾಷ್ಟ್ರಭಾಷೆ ಎಂದು ಅದಿಕೃತವಾಗಿ ಎಲ್ಲೂ ಘೋಷಣೆಯಾಗಿಲ್ಲಾ! ಹಿಂದಿ ರಾಷ್ಟ್ರ ಭಾಷೆ ಎಂಬುದಕ್ಕೆ ಏನಾದರೂ ಪುರಾವೆ ಇದ್ದರೆ ಕೊಡಿ ಶಿಕ್ಷಣಾದಿಕಾರಿಗಳಾಗಿರುವ ಶ್ರೀಕೃಷ್ಣಮೂರ್ತಿಯವರೆ, ದಕ್ಷಿಣಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮಕ್ಕಳ ಮೇಲೆ ಏಕಿ ಅನಗತ್ಯ ಹಿಂದಿ ಹೇರಿಕೆಯೋ ಗೊತ್ತಾಗುತ್ತಿಲ್ಲಾ!

ರಾಜಧಾನಿಯಲ್ಲಿ ಕನ್ನಡ ಮಾತನಾಡುತ್ತಿರುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದಕ್ಕೆ ಅತಂಕ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಅಧೋಗತಿ ಕಾಣುತ್ತಿರುವ ಈ ಸಮಯದಲ್ಲಿ ನಾವು ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕಿರುವುದು ಹಿಂದಿ ಭಾಷೆಯ ಬಗ್ಗೆಯಲ್ಲಾ!! ದಿನದಿಂದ ದಿನಕ್ಕೆ ಕನ್ನಡ ಕಲಿಯುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದು ಮುಂದೊಂದು ದಿನ ಕನ್ನಡದಲ್ಲಿ ಬರುವ ಸಾಹಿತ್ಯಗಳನ್ನು ಓದುವವರೆ ಇಲ್ಲಾವಾಗಬಹುದು ಎಂದರೆ ತಪ್ಪೆನಿಲ್ಲಾ! ಕನ್ನಡ ಭೋಧಿಸುವ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಬೇಕೆಂದು ಸರ್ಕಾರ ಒಂದು ಕಡೆ ಯೊಚಿಸುತ್ತಿದ್ದರೆ ಕರ್ನಾಟಕದಲ್ಲಿರುವ ಸಿ.ಬಿ.ಎಸ್.ಸಿ ಹಾಗೂ ಐ,ಸಿ,ಎಸ್ ಸಿ ಪಠ್ಯವಿರುವ ಶಾಲೆಗಳಲ್ಲಿ ಹಿಂದಿ ಖಡ್ಡಾಯವಾಗಿದೆಯೆ ಹೊರತು ಕನ್ನಡವಲ್ಲಾ! ಹಿಂದಿ ಮಾತನಾಡುವ ರಾಜ್ಯಗಳನ್ನು ಬಿಟ್ಟು ಬೇರೆ ರಾಜ್ಯಗಳಲ್ಲೆಕೆ ತ್ರೀಭಾಷಾ ಸೂತ್ರ?

ಹಿಂದಿ ರಾಷ್ಟ್ರಾಭಾಷೆಯೆಂದು ಎಲ್ಲೂ ಅದಿಕೃತವಾಗಿ ಘೋಷಣೆಯಾಗಿಲ್ಲಾ!! ಭಾರತಕ್ಕೆ ಸ್ವಾತಂತ್ರ್ಯಬಂದ ನಂತರ ದೇಶದಲ್ಲಿ ಬಹಳ ಜನ ಹಿಂದಿಮಾತನಾಡುವವರಿರುವ ಕಾರಣ ಹಿಂದಿಯನ್ನು ” ಅಫಿಶಿಯಲ್ ಲಾಂಗ್ವೇಜ್” ಎಂದು ಪರಿಗಣಿಸಿದೆಯೆ ಹೊರತು ರಾಷ್ಟ್ರಭಾಷೆ ಎಂದು ಎಲ್ಲೂ ಹೇಳಿಲ್ಲಾ ಅದಕ್ಕೆ ಸಂಭಂದ ಪಟ್ಟ ಪುರಾವೆಗಳು ಇಲ್ಲಾ!! ಹಿಂದಿಯ ಜೊತೆಗೆ ಭಾರತೀಯ ಸಂವಿಧಾನ ಅರ್ಟಿಕಲ್ 343 ಹಾಗೂ 345 ಅನ್ವಯ ಇನ್ನೂ ಇಪ್ಪತ್ತೆರಡು ಭಾರತೀಯ ಭಾಷೆಗಳಾದ ಅಸ್ಸಾಮಿ, ಬೆಂಗಾಳಿ, ಬೋಡೊ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮ್ಯೆಥಿಲಿ, ಮರಾಠಿ, ಮಲಾಯಾಳಂ, ಮಣಿಪುರಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ್, ಸಿಂಧಿ, ಸಂತಾಲಿ, ತಮಿಳ್, ತೆಲುಗು ಹಾಗೂ ಉರ್ದುವಿಗೂ ಭಾರತೀಯ ಸಂವಿಧಾನದಲ್ಲಿ ಭಾರತದ ಅದಿಕೃತ ಭಾಷೇಗಳೆಂದು ಘೋಷಿಸಿದ್ದು ಭಾಷಾ ಸಮಾನತೆಗೆ ಪ್ರಾತಿನಿದ್ಯ ನೀಡಿರುವಾಗ ಹಿಂದಿ ಮಾತನಾಡುವ ರಾಜ್ಯಗಳನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿ ಏಕೆ ಅನಗತ್ಯವಾಗಿ ಹಿಂದಿಯನ್ನು ಹೇರಲಾಗುತ್ತಿದೆ? ವಿವಿಧತೆಯಲ್ಲಿ ಏಕತೆ ಇರುವ ಭಾರತದಲ್ಲಿ ” ರಾಷ್ಟ್ರಭಾಷೆ” ಎಂಬ ಪೊಳ್ಳು ಪಟ್ಟಕಟ್ಟಿ ಹಿಂದಿ ಹೇರುತ್ತಿರುವುದು ಭಾರತೀಯ ಏಕತೆಗೆ ಧಕ್ಕೆ ಬರುವುದಿಲ್ಲವೇ? ಭಾರತೀಯ ಪ್ರಜೆಗಳೆಲ್ಲರೂ ಸಮಾನರೆಂದು ಹೇಳುವ ಕೇಂದ್ರ ಭಾಷಾಸಮನತೆಯನ್ನು ಬೆಂಬಲಿಸುವುದಿಲ್ಲಾ?!! ಯಾವುದೇ ಒಂದು ಭಾಷೆಯ ಅಧಾರದ ಮೇಲೆ ಭಾರತದ ಒಕ್ಕೂಟ ರಚನೆಯಾಗಿಲ್ಲಾ ಅಲ್ಲವೇ? ಭಾರತದ ರಾಜ್ಯಗಳು ಭಾಷೆಯ ಆಧಾರದ ಮೇಲೆ ರಚನೆಯಾಗಿದೆ ಅದ್ದರಿಂದ ಭಾಷೆಯ ಪ್ರಾಚಾರವನ್ನು ಅಯಾ ರಾಜ್ಯಗಳ ನಿರ್ಧಾರಕ್ಕೆ ಬಿಡುವುದು ಓಳ್ಳೆಯದು, ಈ ಅನಗತ್ಯ ಹಿಂದಿ ಭಾಷಾ ಹೇರಿಕೆ ಮುಂದೊಂದು ದಿನ ನಮ್ಮ ಏಕತೆಯನ್ನೇ ನಾಶ ಮಾಡಿಬಿಡಬಹುದು,

ಇತ್ತೀಚೆಗೆ ಬೆಂಗಳೂರು ಮ್ಯೆಸುರು ರಸ್ತೆ ರಾಷ್ಟ್ರಿಯ ಹೆದ್ದಾರಿ ಮೆಲ್ದರ್ಜೆಗೆ ಎರಿದ್ದೆ ತಡ, ಕನ್ನಡದ ಮ್ಯೆಲಿಗಲ್ಲುಗಳನ್ನೆಲ್ಲಾ ಅಳಿಸಿ ಹಿಂದಿಮಯ ಮಾಡಲಾಯಿತು, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರಕ್ಕೆ ಮಿಂಚಂಚೆ ಸಮರ ಸಾರಿದ “ಸಾಮಾನ್ಯ ಕನ್ನಡಿಗ” ತಂಡಕ್ಕೆ ಸಿಕ್ಕಿದ್ದು ನಿರಸ ಉತ್ತರ,ಉತ್ತರಭಾರತದಿಂದ ಬರುವ ಪ್ರವಾಸಿಗರಿಗೆ, ಲಾರಿ ಚಾಲಕರಿಗೆ ಕನ್ನಡದಲ್ಲಿ ಇದ್ದರೆ ಮ್ಯೆಲಿಗಲ್ಲುಗಳನ್ನು ಓದುವುದು ಕಷ್ಟವಂತೆ! ಹಾಗದರೆ ದಕ್ಷಿಣಭಾರತದಿಂದ ಉತ್ತರ ಭಾರತಕ್ಕೆ ಹೋಗುವ ಲಾರಿಚಾಲಕರು ಪ್ರವಾಸಿಗರಿಗಾಗಿ ಅಲ್ಲಿ ದಕ್ಷಿಣಭಾರತೀಯ ಭಾಷೇಯಲ್ಲಿ ಮ್ಯೆಲಿಗಲ್ಲುಗಳನ್ನೇಕೆ ಹಾಕುವುದಿಲ್ಲಾ! ಇದರ ವಿರುದ್ದ ಸಿಡಿದೆದ್ದ “ಸಾಮಾನ್ಯ ಕನ್ನಡಿಗ” ತಂಡ ಹಿಂದಿಯನ್ನು ಅಳಿಸಿ ಮ್ಯೆಲಿಗಲ್ಲುಗಳ ಕನ್ನಡಿಕರಣಗೊಳಿಸಲು ಮುಂದಾಯಿತು,ಕಳೆದ ಜನವರಿ 26 ಗಣರಾಜ್ಯೋತ್ಸವ ದಿನದಂದು ಅನಗತ್ಯ ಹಿಂದಿ ಹೇರಿಕೆಯನ್ನು ವಿರೋಧಿಸಿ ಟ್ವಿಟರ್ ನಲ್ಲಿ “ಭಾರತೀಯ ಪ್ರಜೆಗಳೆಲ್ಲರು ಸಮಾನರಾದರೆ, ಭಾಷೆಗಳೆಕೆ ಸಮಾನವಲ್ಲಾ,ಭಾಷಾ ಸಮಾನತೆಯನ್ನು ಬೆಂಬಲಿಸಿ’ಹಿಂದಿ ಗಣತಂತ್ರವಲ್ಲಾ” ಅನ್ನುವ ಸಂದೇಶವನ್ನು ಜಗತ್ತಿಗೆ ಸಾರುವ ಅಂದೋಲನವನ್ನು ಹಮ್ಮಿಕೊಂಡ ಆರು ತಾಸುಗಳಲ್ಲಿ ದೇಶವಿದೇಶಗಳಲ್ಲಿರುವ ಸೂಮಾರು 30ಸಾವಿರಕ್ಕೂ ಹೆಚ್ಚು ಜನ ಟ್ವಿಟ್ ಮಾಡುವ ಮೂಲಕ ಅಂದೋಲನವನ್ನು ಬೆಂಬಲಿಸಿದ್ದಾರೆ.

ಹಿಂದಿಯೇತರ ರಾಜ್ಯಗಳ ಮೇಲಿನ ಅನಗತ್ಯ ಹಿಂದಿ ಹೇರಿಕೆಯು ಭಾಷಾ ಭಯೋತ್ಪಾದನೆ, ಇದು ಮಾನವ ಹಕ್ಕುಗಳ ಉಲ್ಲಂಘನೆ, ಕೇವಲ ಹಿಂದಿ ಮಾತ್ರವೇ ಅದಿಕೃತ ಭಾಷೆಯಾದರೆ, ಹಿಂದಿ ಮಾತನಾಡುವ ಪ್ರಜೆಗಳು ಮಾತ್ರ ಭಾರತದ ಅದಿಕೃತ ಪ್ರಜೆಗಳೆಂದು ಯಾಕೆ ಘೋಷಿಸಬಾರದು? ಮತ್ತು ನನ್ನ ಭಾಷಾ ಸ್ವಾತಂತ್ರವನ್ನು ಗೌರವಿಸದಿದ್ದರೆ ನಾನು ಹೇಗೆ ತಾನೆ ನನ್ನನ್ನು ಭಾರತೀಯನೆಂದು ಹೇಳಿಕೊಳ್ಳಲಿ ಎಂಬ ಮುಂತಾದ ಟ್ವಿಟ್ ಗಳನ್ನು ಬೆಂಬಲಿಗರು ಮಾಡಿದ್ದಾರೆ,

ಇನ್ನು ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ”ಡಿಜಿಟಲ್ ಇಂಡಿಯಾ” ಲಾಂಚನದಲ್ಲಿ ‘ಕನ್ನಡ” ಭಾಷೆಯನ್ನು ಬಿಟ್ಟು ಬೇರೆಲ್ಲಾ ಭಾಷೆಯನ್ನು ಹಾಕಲಾಗಿದೆ, ಕಳೆದ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ತಂದು ಕೊಟ್ಟ ರಾಜ್ಯದ ಬಿಜಿಪಿ ಸಂಸದರು ಇದರಬಗ್ಗೆ ಚಕಾರವೆತ್ತದೆಇರುವುದು ನಿಜಕ್ಕೂ ಕನ್ನಡಕ್ಕೆ ಕನ್ನಡಿಗರಿಗೆ ಆದ ಅನ್ಯಾಯವೆಂದರೆ ತಪ್ಪಾಗಲಾರದು, ಏಕೆ ಈ ಭಾಷಾ ತಾರತಮ್ಯ?ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಹಿಂದಿ ಹೇರಿಕೆ ನಿಂತು ಕನ್ನಡ ಭಾಷೆಯ ಬಗೆಗಿನ ಒಲವು ಜಾಸ್ತಿಯಾಗಬೇಕಾಗಿದೆ, ಕರ್ನಾಟಕ ವಲಸಿಗರ ಸ್ವರ್ಗವಾಗುತ್ತಿದ್ದು ಕನ್ನಡ ಮಾತನಾಡುತ್ತಿರುವವರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾಇದ್ದಾರೆ ಎಂದರೆ ತಪ್ಪಾಗಲಾರದು,ಕರ್ನಾಟಕದ ಸಿ.ಬಿ.ಎಸ್.ಸಿ ಹಾಗೂ ಐ,ಸಿ,ಎಸ್ ಸಿ ಶಾಲೆಗಳಲ್ಲಿ ಕನ್ನಡ ವಿಷಯ ಒದುವುದು ಖಡ್ಡಾಯವಲ್ಲಾ!!ಇನ್ನು ಕನ್ನಡ ಮಾದ್ಯಮ ಶಾಲೆಗಳು ಬೆರಳೆನಿಕೆಯಷ್ಟು, ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರವೆ ಮುಂದಾಗುತ್ತಿದ್ದು ಇನ್ನು ಕನ್ನಡ ಹೇಗೆ ಬೆಳೆಯಲು ಉಳಿಯಲು ಸಾಧ್ಯ? ರಾಜ್ಯ ಸರ್ಕಾರ ಕನ್ನಡದ ಏಳಿಗೆಗೆ ಕಾರ್ಯರೂಪವನ್ನು ತರದಿದ್ದರೆ ಹಿಂದಿ ಹೇರಿಕೆಯಿಂದ ಮುಂದೊಂದು ದಿನ ಕನ್ನಡ ಕರ್ನಾಟಕದಲ್ಲೇ ಅಲ್ಪಸಂಖ್ಯಾತ ಭಾಷೆಯಾಗುವುದರಲ್ಲಿ ಸಂದೇಹವಿಲ್ಲಾ. ಇಂತಹ ಪರಿಸ್ಥಿತಿಬರದೆ ಕನ್ನಡಿಗ ಕನ್ನಡನೆಲದಲ್ಲಿ ಸ್ವಾಭಿಮಾನಿಯಾಗಿ ಬದುಕುವಂತೆ ಮಾಡುವುದು ರಾಜ್ಯಸರ್ಕಾರದ ಅದ್ಯ ಕರ್ತವ್ಯವಲ್ಲವೇ? ಹತ್ತನೆತರಗತಿಯವರೆಗೂ ಹಿಂದಿ ಮಾಧ್ಯಮವನ್ನು ಒಂದು ವಿಷಯವನ್ನಾಗಿ ಓದಿಸುವ ಬದಲು ಕನ್ನಡ ವಿಷಯವನ್ನು ಕಲಿಯುವಂತೆ ಕಾನೂನು ತರಬೇಕು,ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಹಾಗೂ ಸಂಸದರು ಕನ್ನಡ ಉಳಿಸಿ ಬೇಳಸುತ್ತಾರೆಂಬ ಅಶಯ ಸಾಮಾನ್ಯ ಕನ್ನಡಿಗರಿಗೆ.

ಪ್ರಕಾಶ್.ಕೆ.ನಾಡಿಗ್,ಶಿವಮೊಗ್ಗ
ಹವ್ಯಾಸಿ ಬರಹಗಾರ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published.

To Top