News

ಜಂಗಮವಾಣಿಯನ್ನು ಜೀವನ ಸಂಗತಿ ಮಾಡಿಕೊಂಡ ಭೂಪ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಾವು ಎಲ್ಲೇ ಹೋಗಲಿ ಫೋನ್ ನಮ್ಮೊಂದಿಗೆ ಇರಬೇಕು. ಕರೆ ಬರಲಿ ಬರದೇ ಇರಲಿ, ಮೆಸೇಜ್ ಬರಲಿ ಬರದೇ ಇರಲಿ ಪ್ರತಿ 15 ನಿಮಿಷಕೊಮ್ಮೆ ಅದರೆಡೆ ಕಣ್ಣಾಡಿಸದಿದ್ದರೆ ಏನೋ ಕೆಳೆದುಕೊಂಡ ಭಾವನೆ ಹುಟ್ಟುವುದಂತೂ ನಿಜ… ಮೊಬೈಲನ್ನು ಹೆಚ್ಚು ಎಂದರೆ ಕರೆಮಾಡಲು, ಸಂದೇಶ ಕಳುಹಿಸಲು, ಅಪ್ಲಿಕೇಶನ್‌ಗಳನ್ನು ಬಳಸಲು, ಫೋಟೋಗ್ರಫಿಗಾಗಿ ಇನ್ನೂ ಹೆಚ್ಚೆಂದರೆ ಗೇಮ್ಸ್ ಆಡಲು ಬಳಸಿಕೊಳ್ಳುವುದು ಬಳಸುವುದನ್ನು ನಾವು ನೋಡಿದ್ದೇವೆ, ಆದರೆ ಇಲ್ಲೊಬ್ಬ ಫೋನ್ ಪ್ರೇಮಿ ತನ್ನ ಸ್ಮಾರ್ಟ್‌ಫೋನ್ ಅನ್ನೇ ವಿವಾಹವಾಗಿದ್ದಾನೆ ಎಂದರೆ ನೀವು ನಂಬಲೇ ಬೇಕು. ವಿಶ್ವದಲ್ಲಿ ಇಂತಹ ಜನರೂ ಇರುತ್ತಾರಾ ಎಂದು ಆಶ್ಚರ್ಯ ಹುಟ್ಟುವುದಂತೂ ಖರೆ…

ಆರನ್ ಚೆರುವನಾಕ್ ಎಂಬಾತ ಲಾಸ್ ಏಂಜಲೀಸ್‌ನಲ್ಲಿರುವ ಚರ್ಚ್‌ವೊಂದರಲ್ಲಿ ಸರಳ ಸಮಾರಂಭವನ್ನಿಟ್ಟುಕೊಂಡು ಆಪಲ್ ಐಫೋನ್ ಅನ್ನು ವಿವಾಹವಾಗಿದ್ದಾನೆ.

x29-1469783542-4.jpg.pagespeed.ic.6ZzKb-LEjt

ಇನ್ನು ವಿಶೇಷವೆಂದರೆ ಮದುಮಗ ಆರನ್ ಟ್ಯೂಕ್ಸ್ ಉಡುಪನ್ನು ಧರಿಸಿದ್ದರೆ ಮದುಮಗಳು ಬಿಳಿಯ ಪ್ರೊಟೆಕ್ಟೀವ್ ಕೇಸ್ ಅನ್ನು ಧರಿಸಿ ವಿಜೃಂಬಿಸುತ್ತಿದಳು. ವಿವಾಹ ಸಮಯದಲ್ಲಿ “ನೀನು ವಿವಾಹವಾಗುತ್ತಿರುವ ಸ್ಮಾರ್ಟ್‌ಫೋನ್ ಅನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತೀಯ ಆಕೆಯೊಂದಿಗೆ ವಿಶ್ವಾಸಪೂರ್ವಕವಾಗಿ ನೀನು ಇರುತ್ತೀಯ..?” ಎಂದು ಆರನ್ ನನ್ನು ಕೇಳಿದ್ದಕ್ಕೆ ಆತ ಸಮ್ಮತಿಯನ್ನು ಸೂಚಿಸಿದ್ದಾನೆ ಎನ್ನಲಾಗಿದೆ.

ಈತನ ಹುಚ್ಚುತನವೋ ಅಥವ ಮನೋರಂಜನೆಗೋಸ್ಕರ ಈ ರೀತಿ ಮಾಡುತ್ತಿರುವನೋ ಎಂದು ನಿಮಗನ್ನಿಸಬಹುದು,ಆದರೆ ಆತ ಮೊಬೈಲ್ ಅನ್ನು ಮದುವೆ ಆಗಲು ತನ್ನದೇ ಆದ ಕಾರಣಗಳನ್ನು ನೀಡುತ್ತಾನೆ, ತನ್ನ ಮೊಬೈಲ್ ಅನ್ನು ಆತ ಅತಿಯಾಗಿ ಅಚ್ಚಿಕೊಂಡುರುವುದೇ ಇದಕೆಲ್ಲಾ ಕಾರಣವಂತೆ.

x29-1469783540-3.png.pagespeed.ic.N56sI_iHTz

“ನಾನು ಫೋನ್‌ ಜೊತೆಗೆ ಹೆಚ್ಚು ಸಮಯ ಸಂಪರ್ಕವನ್ನು ಹೊಂದಿರುತ್ತೇನೆ ಮತ್ತು ಎಲ್ಲಾ ಸಮಯವನ್ನು ಅದರೊಂದಿಗೆ ಕಳೆಯುತ್ತೇನೆ. ನನ್ನ ಫೋನ್‌ ಜೊತೆ ನಿದ್ರೆಯನ್ನೂ ಮಾಡುತ್ತೇನೆ, ನಾನು ಸೆಲ್ ಫೋನ್‌ನೊಂದಿಗೆ ಬೆಳಗ್ಗೆ ಏಳುತ್ತೆನೆ, ಕೆಲವೊಮ್ಮೆ ನಾನು ಪರಿಶೀಲಿಸುವ ಪ್ರಥಮ ವಿಷಯವೇ ನನ್ನ ಫೋನ್ ಆಗಿರುತ್ತದೆ, ಆದ್ದರಿಂದ ಮದುವೆಯೇ ಉಚಿತವೆಂಬುದಾಗಿ ನಾನು ಅಂದುಕೊಂಡಿದ್ದೇನೆ” ಎಂಬುದಾಗಿ ಆರನ್ ತಿಳಿಸುತ್ತಾರೆ.

Comments

comments

ಜಂಗಮವಾಣಿಯನ್ನು ಜೀವನ ಸಂಗತಿ ಮಾಡಿಕೊಂಡ ಭೂಪ…
Click to comment

Leave a Reply

Your email address will not be published. Required fields are marked *

ನಮ್ಮಲ್ಲಿ ಜನಪ್ರಿಯ

To Top