fbpx
Entertainment

ಕನ್ನಡದ ‘ಟೂಬ್ ಲೈಟ್’ ಚಿತ್ರದ ಟೈಟಲ್ ಹಿಂದಿಯಲ್ಲಿ ಸಲ್ಮಾನ್ ಖಾನ್ ಚಿತ್ರಕ್ಕೆ

ಸಲ್ಮಾನ್ ಖಾನ್ ಮುಂಬರುವ ಚಿತ್ರದ ಟೈಟಲ್ ಕುರಿತು ಕನ್ನಡ ಚಿತ್ರ ದಾರಿ ಮಾಡಿಕೊಟ್ಟಿದೆ. ಸಲ್ಮಾನ್ ಮುಂಬರುವ ಚಿತ್ರಕ್ಕಾಗಿ ಕನ್ನಡದ ನಿರ್ಮಾಪಕರಿಗೆ ಅನುಮತಿ ಕೇಳಲಾಗಿತ್ತು. ಅಷ್ಟಕ್ಕೂ ಸಲ್ಮಾನ್ ಖಾನ್ ಅದ್ಯಾವ ಚಿತ್ರದ ಟೈಟಲ್ ಗಾಗಿ ಕನ್ನಡದ ನಿರ್ಮಾಪಕರೊಬ್ಬರ ಅನುಮತಿ ಪಡೆಯಲಾಗಿತ್ತು. ಈ ಕುರಿತು ಇಲ್ಲಿದೆ ಮಾಹಿತಿ.

ನಿಮಗೆಲ್ಲಾ ಗೊತ್ತಿರೋ ಹಾಗೇ ಸಲ್ಮಾನ್ ಖಾನ್ ಮುಂಬರುವ ‘ಟ್ಯೂಬ್ ಲೈಟ್’ ಚಿತ್ರದ ನಿರ್ಮಾಪಕರನ್ನು ಕೇಳಿದಾಗ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ ಎಂದು ಬಾಲಿವುಡ್ ನಿರ್ದೇಶಕ ಕಬಿರ್ ಖಾನ್ ತಿಳಿಸಿದ್ದಾರೆ. ಕನ್ನಡದ ‘ಟ್ಯೂಬ್ ಲೈಟ್’ ಚಿತ್ರ ಹಿಂದಿಯಲ್ಲೂ ನಿರ್ಮಾಣವಾಗುತ್ತಿದೆ

ಏಕ್ ಥಾ ಟೈಗರ್, ಭಜರಂಗಿ ಭಾಯಿಜಾನ್’ನಂತಹ ಭರ್ಜರಿ ಹಿಟ್ ಚಿತ್ರ ನೀಡಿದ್ದ ನಿರ್ದೇಶಕ ಕಬೀರ್ ಖಾನ್ ಮತ್ತು ಸಲ್ಮಾನ್ ಖಾನ್ ಜೋಡಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಸಲ್ಲು ಭಾಯಿಜಾನ್ ನಿರ್ಮಿಸಲಿರುವ ಹೊಸ ಚಿತ್ರಕ್ಕೆ ‘ಟೂಬ್ ಲೈಟ್’ ಎಂದು ಟೈಟಲ್ ಇಡಲಾಗಿದೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿದೆ. ಈ ಚಿತ್ರಕ್ಕೂ ವಿಭಿನ್ನ ಕಥೆಯನ್ನು ನಿರ್ದೇಶಕ ಕಬೀರ್ ಖಾನ್ ಆಯ್ಕೆ ಮಾಡಿಕೊಂಡಿದ್ದಾರೆ. ಭಜರಂಗಿ ಭಾಯಿಜಾನ್’ನಲ್ಲಿ ಮಿಂಚಿದ್ದ ಮುನ್ನಿಯ ಪಾತ್ರದಂತೆ ಇಲ್ಲಿ ಮೂಗನ ಪಾತ್ರವೊಂದು ಗಮನ ಸೆಳೆಯಳಿದೆ. ಆದರೆ ಈ ವಿಶೇಷ ಪಾತ್ರವನ್ನು ಚಿತ್ರದಲ್ಲಿ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಮಾಡಲಿದ್ದಾರೆ. ಚಿತ್ರದ ಇತರೆ ತಾರಾಗಣದಲ್ಲಿ ಯಾರ್ಯಾರು ಇರಲಿದ್ದಾರೆ ಎಂಬುದನ್ನು ಚಿತ್ರತಂಡ ಶೀಘ್ರವೇ ಪ್ರಕಟಿಸಲಿದೆ. ಮೈನೆ ಪ್ಯಾರ್ ಕ್ಯೂ ಕಿಯಾ, ಮಿಸ್ಟರ್ ಅಂಡ್ ಮಿಸೆಸ್ ಖನ್ನಾ ಚಿತ್ರದ ಬಳಿಕ ಸಲ್ಲು-ಸೊಹೈಲ್ ಟ್ಯೂಬ್ ಲೈಟ್’ನಲ್ಲಿ ಮತ್ತೆ ಒಂದಾಗುತ್ತಿದ್ದಾರೆ. ಪೊಲಿಟಿಕಲ್ ಡ್ರಾಮಾ ಕಥೆಯ ಫನ್’ಟಾಸ್ಟಿಕ್ ‘ಟ್ಯೂಬ್ ಲೈಟ್’ ಸಹೋದರರಿಗೆ ಜುಲೈನಲ್ಲಿ ಆ್ಯಕ್ಷನ್ ಕಟ್ ಹೇಳಲು ನಿರ್ದೇಶಕ ಕಬೀರ್ ಖಾನ್ ಪ್ಲಾನ್ ಹಾಕಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top