ಮೇಷ
ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು, ಹೊಸ ಉದ್ಯಮ ಕಾರ್ಯಕ್ಕೆ ಸಕಾಲ, ಮಹಿಳೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಬಿಡುವಿಲ್ಲದ ಕೆಲಸ.
ವೃಷಭ
ವ್ಯವಹಾರಗಳು ಅಡೆತಡೆ ಇಲ್ಲದೆ ನಡೆಯುವುವು, ಮಧ್ಯವರ್ತಿಗಳ ಸಹಾಯದಿಂದ ವಿವಾಹ ಸಂಬಂಧ ಕಾರ್ಯ ಸುಸೂತ್ರ, ಸಂಗಾತಿಯ ಮಾತುಗಳನ್ನು ಗೌರವಿಸಿ.
ಮಿಥುನ
ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು, ಕಳೆದುಹೋದುದನ್ನು ಪುನಃ ಪಡೆದು ಕೊಳ್ಳುವ ಸಾಧ್ಯತೆ, ಮಿತ್ರವರ್ಗದವರಿಂದ ಪ್ರಶಂಸೆ, ಗೌರವ ಪ್ರಾಪ್ತಿ.
ಕಟಕ
ಕಾರ್ಯ ನೈಪುಣ್ಯದಿಂದ ಪ್ರಶಂಸೆ, ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ, ಸೌಜನ್ಯದಿಂದ ಘನತೆ ಗೌರವಗಳನ್ನು ಪಡೆಯುವಿರಿ, ಆರೋಗ್ಯದಲ್ಲಿ ತೊಂದರೆ.
ಸಿಂಹ
ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ವಿಶೇಷ ಸಾಧನೆ, ಮನಸ್ಸಿನ ಯೋಜನೆ ಕಾರ್ಯಗತ ಮಾಡುವಲ್ಲಿ ಮಾರ್ಗ ಕಂಡು ಬರಲಿದೆ, ದೂರ ಪ್ರಯಾಣ ವಿದೆ.
ಕನ್ಯಾ
ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ, ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಿ, ಮಿತ್ರರಿಂದ ಹೆಚ್ಚಿನ ಸಹಕಾರ ಒದಗುವುದು.
ತುಲಾ
ವದಂತಿ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಎಲ್ಲ ಆಪಾದನೆಗಳಿಂದ ಮುಕ್ತರಾಗುವಿರಿ, ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಸಕಾಲಿಕ ಸಲಹೆ.
ವೃಶ್ಚಿಕ
ಗಂಭೀರ ವಿಷಯಗಳಲ್ಲಿ ಜಾಗರೂಕರಾಗಿ ವ್ಯವಹರಿಸಿರಿ, ಕಾರ್ಯದಲ್ಲಿ ನೈಪುಣ್ಯತೆ ಉಪಯೋಗಿಸಿರಿ, ಕಾರ್ಯ ನಿಮಿತ್ತ ದೂರ ಪ್ರಯಾಣ ಸಾಧ್ಯತೆ.
ಧನು
ಎಣ್ಣೆ, ಹಾಲು ಮುಂತಾದ ದ್ರವ್ಯ ವ್ಯಾಪಾರಿಗಳಿಗೆ ಅಧಿಕ ಲಾಭ, ಮಿತ್ರರಿಂದ ಹಣಕಾಸಿನ ಸಹಾಯ ದೊರಕಲಿದೆ. ಕಳೆದ ವಸ್ತು ಪ್ರಾಪ್ತಿ. ವಿದ್ಯೆಯಲ್ಲಿ ಯಶಸ್ಸು.
ಮಕರ
ನೈತಿಕ ಬಲದಿಂದ ಕಾರ್ಯದಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡುವಿರಿ, ಸಾರ್ವಜನಿಕವಾಗಿ ಪ್ರಶಂಸೆಗಳು ಕೇಳಿ ಬರಲಿವೆ. ಬಂಧುಗಳ ಆಗಮನದಿಂದ ಸಂತಸ.
ಕುಂಭ
ನಿಮ್ಮ ಜಾಣ್ಮೆಯಿಂದ ದಕ್ಷತೆಯಿಂದ ಕೆಲಸ ಕಾರ್ಯಗಳು ಸುಗಮವಾಗಲಿದೆ. ಕಾರ್ಯ ಬಾಹುಳ್ಯದಿಂದಾಗಿ ಅತಿಯಾದ ಆಯಾಸ, ಆಪ್ತರಿಂದ ಸಮಾಧಾನ.
ಮೀನ
ಕಲಾವಿದರಿಗೆ ಉತ್ತಮ ಪ್ರಶಂಸೆ, ಅರ್ಥಪೂರ್ಣ ವಿಚಾರ ವಿನಿಮಯಗಳಲ್ಲಿ ಭಾಗಿ, ಮಿತ್ರರ ಕಷ್ಟಗಳಲ್ಲಿ ಭಾಗಿಯಾಗುವ ಸಾಧ್ಯತೆ, ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
