fbpx
Karnataka

ಹಿಂದಿ ಗೊತ್ತಿದ್ರೆ ಮಾತ್ರ LIC ಪಾಲಿಸಿ ಮಾಡಿಸಿ…

“ನನ್ ಹೆಸರು ಗುರು ಪ್ರಸಾದ್ ಅಂತ, ನಮ್ಮದು ಚಿಕ್ಕಮಂಗಳೂರು ಜಿಲ್ಲೆಯ ಒಂದು ಸಣ್ಣ ಹಳ್ಳಿ, ನಮ್ಮ ಹಳ್ಳಿಯಲ್ಲಿ LIC ಕಚೇರಿ ಇಲ್ಲದ ಕಾರಣ ಚಿಕ್ಕಮಂಗಳೂರಿನಲ್ಲಿ LIC ಪಾಲಿಸಿ ಮಾಡಿಸಿದ್ದೆ, ಅನಿವಾರ್ಯ ಕಾರಣಗಳಿಂದ LIC

surrender ಮಾಡಲು ಹೋದಾಗ ನನಗೊಂದು ಆಶ್ಚರ್ಯ ಕಾದಿತ್ತು. ಅಲ್ಲಿನ LIC ಏಜೆಂಟ್ “ಹಿಂದಿ ಭಾಷೆ ಗೊತ್ತಿರುವ” ಮಂದಿಯ ಹತ್ತಿರ ಸಾಕ್ಷಿ ಹಾಕಿಸಿಕೊಂಡು ಬನ್ನಿ ಎಂದ… ನನಗೋ ಚಿಕ್ಕಮಂಗಳೂರಿನಲ್ಲಿ ಕನ್ನಡದವರು ಬಿಟ್ಟು ಹಿಂದಿ ಗೊತ್ತಿರುವ ಜನರ ಒಡನಾಟ ಇಲ್ಲ, ಏನು ಮಾಡಲು ತಿಳಿಯದೆ ಒಮ್ಮೆ ಅವಕ್ಕಾದೆ”.

-ಗುರು ಪ್ರಸಾದ್

ಅಲ್ಲ LIC ಕಂಪೆನಿಯವರೇ ನಿಮಗೆ ತಿಳಿದಿದೆಯೋ ಇಲ್ಲವೋ ಗುರು ಪ್ರಸಾದ್ ಅವರು ಪಾಪ ಹಿಂದಿ ಗೊತ್ತಿರುವ ಸ್ನೇಹಿತನ ಸಹಿ ಹಾಕಿಸಿಕೊಳ್ಳಲು ಸುಮಾರು 6 ತಾಸಿಗೂ ಹೆಚ್ಚು ಪ್ರಯಾಣ ಮಾಡಿ ಬೆಂಗಳೂರಿಗೆ ಬಂದು ಸಹಿ ಹಾಕಿಸಿಕೊಂಡು ಹಿಂತಿರುಗಿದ್ದಾರೆ. ನಾವೇನು ಮೊಘಲರ ಸಾಮ್ರಾಜ್ಯದಲ್ಲಿ ಇದ್ದೇವೆಯೋ ಇಲ್ಲ ಪ್ರದಾನ ಮಂತ್ರಿ ಮೋದಿ ಆಡಳಿತದಲ್ಲಿ ಇದ್ದೇವೆಯೋ ಒಂದು ತಿಳಿಯುತ್ತಿಲ್ಲ, ಒಂದ್ ಕಡೆ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಗೊತ್ತಿದರು ಅದೇ ನಮ್ಮ ರಾಷ್ಟ್ರ ಭಾಷೆ ಎಂದು ವಾದಿಸುವ ಜನ, ಇನ್ನೊಂದು ಕಡೆ ಹೆಗ್ಗು ಸಿಗ್ಗಿಲದೆ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ, ಇದರ ಮದ್ಯ ಕನ್ನಡಿಗ ಹೈರಾಣಾಗುತ್ತಿದ್ದಾನೆ. ಕೇವಲ ಒಂದು ಸಹಿ ಪಡೆಯಲು ಕನ್ನಡಿಗ 270 ಕ್ಕೂ ಹೆಚ್ಚು ಕಿ.ಮೀ ಪ್ರಯಾಣಿಸಿದ್ದಾರೆ ಅದೂ ಅಧಿಕೃತ ಕನ್ನಡ ಭಾಷೆಯ ನೆಲದಲ್ಲಿ…!!

ಕೇಂದ್ರ ಸರ್ಕಾರದ ಜಾಹಿರಾತಿನಲ್ಲಿ ಎತ್ತ ನೋಡಿದರು ಹಿಂದಿ ಭಾಷೆ ರಾರಾಜಿಸುತ್ತಿವೆ, ಕೇವಲ ಹಿಂದಿ ಒಂದೇ ರಾಷ್ಟ್ರದಲ್ಲಿ ಇರುವ ಭಾಷೆಯಲ್ಲ ಎನ್ನುವುದನ್ನು ಕೇಂದ್ರ ಅರಿತುಕೊಳ್ಳಬೇಕು, ಇನ್ನಾದರೂ ರಾಜ್ಯ ಸರ್ಕಾರ ಕನ್ನಡದ ಬಗ್ಗೆ ಕಾಳಜಿ ವಹಿಸಬೇಕು.

-ಗಿರೀಶ್ ಗೌಡ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top