fbpx
News

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ‘ದೇಶದ ಸೂಪರ್ ಮಾಮ್’

ಸಾಮಾಜಿಕ ಜಾಲತಾಣದ ಮೂಲಕ ದೇಶದ ಜನರ ಜೊತೆ ಸದಾ ಸಂಪರ್ಕದಲ್ಲಿದ್ದು ಹಾಗೂ ಟ್ವಿಟರ್ ನಲ್ಲಿ ಸಕ್ರಿಯವಾಗಿದ್ದುಕೊಂಡು, ಅಗತ್ಯವಿದ್ದವರಿಗೆ ಸುಕ್ಟ್ಯಾ ಸಲಹೆ ಸೂಚನೆಗಳನ್ನು ಕೊಡುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಅಮೇರಿಕಾದ ‘ದ ವಾಷಿಂಗ್ಟನ್ ಪೋಸ್ಟ’ ‘ದೇಶದ ಸೂಪರ್ ಮಾಮ್ (ಅತ್ಯುತ್ತಮ ತಾಯಿ)’ ಎಂದು ಕರೆದಿದ್ದಾರೆ. ಸುಷ್ಮಾ ಸ್ವರಾಜ್  ರವರಿಗೆ  ವಿದೇಶಗಳಿಂದ ಅಭಿನಂದನೆಗಳು ಹರಿದು ಬರುತ್ತಿವೆ.

ಸುಷ್ಮಾ ಸ್ವರಾಜ್ ರನ್ನು ಅಮೆರಿಕಾ ಪತ್ರಿಕೆ ಹೊಗಳಿದ್ದೇನು?

ಸೌದಿಯಲ್ಲಿದ್ದ ಭಾರತೀಯರಿಗೆ ಆಹಾರ ತಲುಪಿಸುವ ಹಾಗೂ ಪತಿಗೆ ತನ್ನ ಪತ್ನಿ ಜೊತೆ ಹನಿಮೂನ್ ಗೆ ಹೋಗಲು ಸಹಾಯ ಮಾಡುವಂತಹ ಕೆಲಸಗಳನ್ನು ಸುಷ್ಮಾ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ವಿದೇಶಾಂಗ ಸಚಿವೆ ಎಂಬ ಹೆಗ್ಗಳಿಕೆಗೆ ಸುಷ್ಮಾ ಸ್ವರಾಜ್ ಪಾತ್ರರಾಗಿದ್ದಾರೆ. 56.3 ಲಕ್ಷ ಮಂದಿ ಸುಷ್ಮಾ ಟ್ವಿಟರ್ ಫಾಲೋ ಮಾಡ್ತಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಸುಷ್ಮಾರನ್ನು ದೇಶದ ಸೂಪರ್ ಮಾಮ್ ಎಂದು ಕರೆದಿದೆ. ತಡ ರಾತ್ರಿಯವರೆಗೂ ಕೆಲಸ ಮಾಡುವ ಹಾಗೂ ಟ್ವಿಟರ್ ನಲ್ಲಿ ಉತ್ತರ ನೀಡುವಾಗ `ಮೇರಿ ಬಚ್ಚೆ’ ಎಂದು ಸಂಬೋಧಿಸುವ ಸುಷ್ಮಾರನ್ನು ಪತ್ರಿಕೆ ಹೊಗಳಿದೆ.

ಪತ್ರಿಕೆಯು ಸಚಿವೆಯ ಈ ಸಾಧನೆಯನ್ನ ಹೊಗಳಿದೆ…..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top