fbpx
Karnataka

ಕನ್ನಡಿಗರ ಪಾಲಿಗೆ ಐ.ಟಿ ಸಂಸ್ಥೆಗಳು ಎಷ್ಟರ ಮಟ್ಟಿಗೆ ಉಪಯೋಗಕಾರಿಯಾಗಿವೆ?

ಒಂದು ಐ.ಟಿ ಸಂಸ್ಥೆ ಕರ್ನಾಟಕದಲ್ಲಿಯೇ ಹುಟ್ಟಿ, ಇಲ್ಲಿಯ ಸಂಪನ್ಮೂಲಗಳನ್ನೇ ಬಳಸಿಕೊಂಡು ತನ್ನ ಅಸ್ತಿತ್ವವನ್ನು ಎಲ್ಲೆಡೆ ಪಸರಿಸಿಕೊಳ್ಳುತ್ತ ಜಗತ್ತಿನ ಇತರೆ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಬಂಡವಾಳದ ಆಧಾರದ ಮೇಲೆ ಲಾಭ ಮಾಡಿಕೊಳ್ಳುತ್ತದೆ. ಆದರೆ ಇಂತಹ ಸಂಸ್ಥೆಗಳು ಜಾಗ ಕೊಟ್ಟ ರಾಜ್ಯವನ್ನೇ ಮರೆತುಬಿಡುತ್ತವೆ. ರಾಜ್ಯದ ನಿರುದ್ಯೋಗಿಗಳನ್ನೇ ಕಡೆಗಣಿಸುತ್ತದೆ.

ಕರ್ನಾಟಕದ ಪಾಲಿಗಿದು ಅರಿಗಿಸಿಕೊಳ್ಳಲಾಗದ ಕಟು ಸತ್ಯದ ಮಾತು. ನಮ್ಮ ರಾಜ್ಯದಲ್ಲಿ ವಿಶ್ವಕ್ಕೆ ಪರಿಚಿತವಾದ ದೊಡ್ಡ ದೊಡ್ಡ ಕಂಪನಿಗಳು ಸ್ಥಾಪಿತಗೊಂಡು, ಜಗತ್ತಿನ ವಿವಿಧೆಡೆಯಲ್ಲಿ ತನ್ನ ಶಾಖೆಗಳನ್ನು ತೆರೆದು ಕಾರ್ಯನಿರ್ವಾಹಿಸುತ್ತಿವೆ. ಆದರೆ ಕನ್ನಡಿಗರ ಪಾಲಿಗೆ ಈ ಸಂಸ್ಥೆಗಳು ಎಷ್ಟರ ಮಟ್ಟಿಗೆ ಉಪಯೋಗಕಾರಿಯಾಗಿವೆ ಎಂಬುದೇ ದೊಡ್ಡ ಪ್ರಶ್ನೆ.. ಇನ್ಫೊಸಿಸ್, ವಿಪ್ರೋ, ಫ್ಲಿಪ್-ಕಾರ್ಟ್, ಅಮೆಜ಼ಾನ್ ಇನ್ನೂ ಬೇಕಾದಷ್ಟು ಸಂಸ್ಥೆಗಳು ಕನ್ನಡಿಗರಿಗೆ ಎಷ್ಟು % ನಷ್ಟು ಕೆಲಸ ಕೊಡುತ್ತಿದೆ ಎಂದು ಕೆದಕಿ ನೋಡಿದರೆ ಬಹಳ ಬೇಸರವಾಗುತ್ತದೆ. ಇಂತಹ ಕಂಪನಿಗಳು ಪ್ರಾರಂಭವಾಗುವ ಮುನ್ನ ಸ್ಥಳಿಯರಿಗೆ ಹೆಚ್ಚಿನ ಉದ್ಯೋಗವಕಾಶ ನೀಡಲಾಗುತ್ತದೆ ಎಂದು ಭರವಸೆ ನೀಡಿ ನಂತರದ ದಿನಗಳಲ್ಲಿ ಕನ್ನಡಿಗರನ್ನು ಮುಲಾಜಿಲ್ಲದೆ ತಿರಸ್ಕರಿಸುತ್ತವೆ. ಸಂಸ್ಥೆಯ ಎಲ್ಲ ವಿಭಾಗಗಳಲ್ಲಿಯೂ ಪರಭಾಷಿಗರದ್ದೇ ಕಾರುಬಾರು. ಅಪ್ಪಿತಪ್ಪಿ ಪರಭಾಷಿಗರೇ PM, DM, HR ಆಗಿ ಬಂದರೆ ಕನ್ನಡಿಗರನ್ನು ನೋಡುವ ರೀತಿ ಆ ದೇವರಿಗೆ ಪ್ರೀತಿ..

ಅಯ್ಯೋ ಟ್ಯಾಲೆಂಟ್ ಇದ್ರೆ ಕನ್ನಡದವ್ರಿಗೂ ಕೆಲಸ ಕೊಡ್ತಾರೆ ಅನ್ನಬಹುದು ಕೆಲವರು ಇದನ್ನ ಓದಿ, ಅವರಿಗೆ ನಾನು ಹೇಳೋದು… ಕಳೆದ ಜನಗಣತಿ ಆಯೋಗ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 137 ಪದವೀಧರರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲೇ 102 ಮಂದಿ ವಿದ್ಯಾವಂತರು ಬಿಕ್ಷೆ ಮಾಡಿ ಜೀವನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬೀದರ್ 5, ಕಲಬುರ್ಗಿ..ತುಮಕೂರು ತಲಾ 1, ಬೆಳಗಾವಿ 7, ಹಾವೇರಿ 3, ಬಳ್ಳಾರಿ 4, ವಿಜಯಪುರ 2 ಹಾಗೂ ಮೈಸೂರು 12. ಲೆಕ್ಕಕ್ಕೆ ಸಿಕ್ಕವು ಇಷ್ಟು…ಲೆಕ್ಕಕ್ಕೆ ಸಿಗದೇ ಇರುವವು ಎಷ್ಟೋ. ಇದಕ್ಕೆ ಏನು ಹೇಳುತ್ತೀರಿ…?

ಅನಿಯಮಿತ ವಲಸೆ, ಪ್ರಸ್ತುತ ರಾಜಕೀಯ ಸ್ಥಿತಿ, ಕಂಪೆನಿಗಳ ಮೇಲೆ ಯಾವುದೇ ಕಠಿಣ ನಿಯಮಗಳನ್ನು ಹೇರದಿರುವುದು ಇವೆಲ್ಲವೂ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣಗಳು. ಬೇರೆ ರಾಜ್ಯಗಳಲ್ಲಿ ಇದೇ ಕೆಲ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಅಲ್ಲಿ ಇಂತಹ ಸಮಸ್ಯೆಗಳು ಕಂಡು ಬರುವುದಿಲ್ಲ ಏಕೆಂದರೆ ಅಲ್ಲಿಯ ಸರ್ಕಾರ ಕಂಪನಿಗಳಿಗೆ ಕೆಲ ಶರತ್ತು ಬದ್ದ ನಿಯಮಗಳನ್ನು ಹೇರಿಯೇ ಅವರಿಗೆ ನೆಲೆಯೂರಲು ಅವಕಾಶ ನೀಡಿರುತ್ತವೆ. ಆ ರಾಜ್ಯಗಳಿಗೆ ತಮ್ಮ ರಾಜ್ಯದ ಜನರ ಭವಿಷ್ಯವೇ ಮುಖ್ಯವಾಗಿರುತ್ತದೆ. ಆದರೆ ಇಲ್ಲಿ, ನಮ್ಮ ಸರ್ಕಾರ ತನ್ನ ಇನ್ವೆಸ್ಟ್ಮೆಂಟ್/ಆಧಾಯವನ್ನು ಹೆಚ್ಚಿಸಿಕೊಳ್ಳುವ ಬರದಲ್ಲಿ ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿರುವ ಕನ್ನಡಿಗರ ಕಡೆಗೆ ಮುಖ ಮಾಡದೆ ಆಧಾಯ ಪಡೆಯುವಲ್ಲಿ ನಿರತವಾಗಿದೆ.

ಮೈಸೂರಿನ ವಿಪ್ರೋ ಇನ್ಫೊಟೆಕ್ ಸಂಸ್ಥೆಯಲ್ಲಿ ಕೆಲಸ ಮಾಡುವ 60-70% ಭಾಗದಷ್ಟು ಉದ್ಯೋಗಿಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರು. ಆದರೆ ಈಗ ಈ ಸಂಸ್ಥೆ ಈ ಪೈಕಿಯರಲ್ಲಿ ಮುಕ್ಕಾಲು ಭಾಗದಷ್ಟು ಉದ್ಯೋಗಿಗಳನ್ನು ತೆಗೆದು ಅವರ ಜಾಗಕ್ಕೆ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದ ಉದ್ಯೋಗಿಗಳನ್ನು ಕರೆಸಿ ನೇಮಿಸುತ್ತಿದ್ದೆ. 3-4 ವರ್ಷಗಳಿಂದ ಕೆಲಸ ಮಾಡುತ್ತಿದ್ದವರನ್ನು ತಕ್ಷಣವೇ ತೆಗೆದು ಪರರಾಜ್ಯದ ಕಾಲೇಜುಗಳಿಂದಾಯ್ದ ಅಭ್ಯಾರ್ಥಿಗಳಿಗೆ ನೀಡುತ್ತಿದೆ. ಕಾರಣ ಕೇಳಿದರೆ ಅವರಿಂದ ಪೊಳ್ಳು ಉತ್ತರ ಬರುತ್ತದೆ. ಮೊದಲೆಲ್ಲ ಸಂಸ್ಥೆಯೊಳಗೆ ಅಲ್ವ ಸ್ವಲ್ಪ ಕನ್ನಡಿಗರನ್ನು ನೋಡಬಹುದಿತ್ತು ಆದರೆ ಇಂದು 90-95% ಉದ್ಯೋಗಿಗಳು ಪರಭಾಷಿಗರೇ. ಈ ಸ್ಥಿತಿ ಹೀಗೆ ಮುಂದುವರೆದರೆ 100 ಸಂಖ್ಯೆಯಲ್ಲಿರುವ ಬಿಕ್ಷುಕರು ಮುಂದೆ 1000 ವಾಗಬಹುದು..1000 ಲಕ್ಷವಾಗಬಹುದು.

ಮಾನ್ಯ ಸಿದ್ಧರಾಮಯ್ಯನವರೇ, ಕನ್ನಡಿಗರು ಏನು ಪಾಪ ಮಾಡಿದ್ದಾರೆ ಸ್ವಾಮಿ…? ಕರ್ನಾಟಕದಲ್ಲಿ ನೆಲಯೂರುವ ಕಂಪೆನಿಗಳು ಕನ್ನಡಿಗರಿಗೆ ಒಂದಿಷ್ಟು % ಕೆಲಸವನ್ನು ಕಡ್ಡಾಯವಾಗಿ ಕೊಡಬೇಕೆಂಬ ಆದೇಶವನ್ನು ಹೊರಡಿಸಿ, ಜಾರಿಗೆ ತಂದು ಕನ್ನಡಿಗರ ಹಿತವನ್ನು ಕಾಪಾಡಿ ಸ್ವಾಮಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top