fbpx
Job news

ಉದ್ಯೋಗಾವಕಾಶ: 19,243 ಬ್ಯಾಂಕ್‌ ಕ್ಲರ್ಕ್‌ ನೇಮಕ

ಐಬಿಪಿಎಸ್‌ನಿಂದ ಅಧಿಸೂಚನೆ:

ರಾಜ್ಯದಲ್ಲಿ 1,467 ಹುದ್ದೆಗಳು ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) 19ಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲೆರಿಕಲ್‌ ಕೇಡರ್‌ನ ಹುದ್ದೆಗಳ ನೇಮಕಾತಿಗಾಗಿ ‘ಸಾಮಾನ್ಯ ಪ್ರವೇಶ ಪರೀಕ್ಷೆ ‘ ನಡೆಸುತ್ತಿದ್ದು, ಅರ್ಜಿ ಆಹ್ವಾನಿಸಿದೆ. ಒಟ್ಟು 19, 243 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ರಾಜ್ಯದಲ್ಲಿಯೇ 1,467 ಹುದ್ದೆಗಳು ಖಾಲಿ ಇವೆ. ಕಳೆದ ಬಾರಿಯಂತೆ ಈ ಬಾರಿಯೂ ಐಎಎಸ್‌, ಕೆಎಎಸ್‌ ಮಾದರಿಯಲ್ಲಿ ಎರಡು ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಬಾರಿಯೂ ಸಂದರ್ಶನ ಇರುವುದಿಲ್ಲ. ಮುಖ್ಯಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ.

ಅರ್ಹತೆ ಏನು? :

ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಪರೀಕ್ಷೆ ಬರೆಯಬಹುದು. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋರ್ಸ್‌ ಮಾಡಿದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಯು ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್‌ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ. (ಕಂಪ್ಯೂಟರ್‌ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್‌/ ಡಿಪ್ಲಮೊ ಅಥವಾ ಡಿಗ್ರಿ ಪಡೆದಿರುವುದು ಅಥವಾ ಪ್ರೌಢಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್‌ ಅಥವಾ ಐಟಿಯನ್ನು ವಿಷಯವಾಗಿ ಓದಿರಬೇಕು.) ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ‌ ಹೊಂದಿರಬೇಕು. ಆಯಾ ರಾಜ್ಯದ ಹುದ್ದೆಗಳನ್ನು ಆಯಾ ರಾಜ್ಯದ ಭಾಷೆ ಗೊತ್ತಿರುವವರಿಗೇ ನೀಡಲಾಗುತ್ತದೆ. ಗಮನಿಸಿ, ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.

ವಯೋಮಿತಿ:

20 ವರ್ಷದಿಂದ 28 ವರ್ಷದೊಳಗಿ ನವರು ಅರ್ಜಿ ಸಲ್ಲಿಸಲು ಅರ್ಹ ರಾಗಿರುತ್ತಾರೆ. ಎಸ್‌ಸಿ /ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಪರೀಕ್ಷೆ ಹೇಗೆ?

ನಿಗದಿತ ದಿನದಂದು ಆನ್‌ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು, 100 ಅಂಕಗಳಿಗೆ ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. (ಅಂದರೆ ಒಂದು ಪ್ರಶ್ನೆಗೆ ಒಂದು ಅಂಕ ನಿಗದಿಯಾಗಿರುತ್ತದೆ ) ಇದರಲ್ಲಿ ಇಂಗ್ಲಿಷ್‌ ಲಾಂಗ್ವೇಜ್‌ನ 30, ನ್ಯೂಮರಿಕಲ್‌ ಎಬಿಲಿಟಿಯ 35 ಹಾಗೂ ರೀಸನಿಂಗ್‌ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಮುಖ್ಯಪರೀಕ್ಷೆಯು ಎರಡು ಗಂಟೆಗಳ ಕಾಲ ನಡೆಯಲಿದ್ದು, 200 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇದರಲ್ಲಿ ರೀಸನಿಂಗ್‌ನ 40, ಇಂಗ್ಲಿಷ್‌ ಲಾಂಗ್ವೇಜ್‌ನ 40, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ನ 40, ಜನರಲ್‌ ಅವೇರ್‌ನೆಸ್‌ನ (ಇದರಲ್ಲಿ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಿರಲಿವೆ) 40 ಹಾಗೂ ಕಂಪ್ಯೂಟರ್‌ ಜ್ಞಾನಕ್ಕೆ ಸಂಬಂಧಿಸಿದ 40 ಪ್ರಶ್ನೆಗಳಿರಲಿವೆ. ಇಂಗ್ಲಿಷ್‌ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳನ್ನು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಒದಗಿಸಲಾಗಿರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ 0.25 ಅಂಕವನ್ನು ಕಳೆಯಲಾಗುತ್ತದೆ.

* ಆನ್‌ಲೈನ್‌ ಅರ್ಜಿ ಸಲ್ಲಿಸುವ ದಿನಾಂಕ : 22-8-2016ರಿಂದ 12-9-2016

*ಪ್ರಿಲಿಮ್ಸ್‌ ನಡೆಯುವ ದಿನಾಂಕ : 26-11-2016, 27-11-2016, 03-12-2016, 04-12-2016.

* ಪ್ರಿಲಿಮ್ಸ್‌ ಫಲಿತಾಂಶ: ಡಿಸೆಂಬರ್‌, 2016

*ಮುಖ್ಯ ಪರೀಕ್ಷೆ ನಡೆಯುವ ದಿನಾಂಕ : 31-12-2016, 01-01-2017

* ಸಂದರ್ಶನ : ಫೆಬ್ರವರಿ, 2017 * ಹುದ್ದೆಗೆ ನೇಮಕ : ಏಪ್ರಿಲ್‌, 2017

* ಪ್ರಿಲಿಮ್ಸ್‌ ನಡೆಯುವ ಕೇಂದ್ರಗಳು : ಬೆಳಗಾವಿ, ಬೆಂಗಳೂರು, ಬೀದರ್‌, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

*ಅರ್ಜಿ ಶುಲ್ಕ: 600ರೂ. (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100ರೂ.) ರಾಜ್ಯದ ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

*ಅಲಹಾಬಾದ್‌ ಬ್ಯಾಂಕ್‌- 17

*ಆಂಧ್ರ ಬ್ಯಾಂಕ್‌- 25

*ಬ್ಯಾಂಕ್‌ ಆಫ್‌ ಬರೋಡ-40

* ಬ್ಯಾಂಕ್‌ ಆಫ್‌ ಇಂಡಿಯಾ-8

*ಕೆನರಾ ಬ್ಯಾಂಕ್‌-425 *ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ- 57

*ಕಾರ್ಪೋರೇಷನ್‌ ಬ್ಯಾಂಕ್‌-90

*ದೇನಾ ಬ್ಯಾಂಕ್‌-3

*ಒರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌-5

*ಪಂಜಾಬ್‌ ಆ್ಯಂಡ್‌ ಸಿಂದ್‌ ಬ್ಯಾಂಕ್‌-3

*ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌-44

*ಸಿಂಡಿಕೇಟ್‌ ಬ್ಯಾಂಕ್‌-435 *ಯುಕೋ ಬ್ಯಾಂಕ್‌-12

* ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ-58 *ವಿಜಯಾಬ್ಯಾಂಕ್‌- 245

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top