fbpx
News

ದೀಪಿಕಾ ಸೈಕಿಯಾಟ್ರಿಕ್ ಸೊಸೈಟಿ ರಾಯಭಾರಿ

ನವದೆಹಲಿ: ಮಾನಸಿಕ ಆರೋಗ್ಯ ಜಾಗೃತಿಗಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ ರಾಯಭಾರಿಯಾಗಿ ಕೈಜೋಡಿಸಿದ್ದಾರೆ. ಮಾನಸಿಕ ಒತ್ತಡ ಕಡಿಮೆ ಹಾಗೂ ಮಾನಸಿಕ ಆರೋಗ್ಯ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವತಃ ತಾವು ಕೂಡ ಮಾನಸಿಕ ಒತ್ತಡಕ್ಕೊಳಗಾಗಿದ್ದ ದೀಪಿಕಾ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.

ದೀಪಿಕಾ ಅವರ ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆ ಲಿವ್ ಲವ್ ಲಾಫ್ ಫೌಂಡೇಷನ್(ಟಿಎಲ್‍ಎಲ್‍ಎಲ್‍ಎಫ್)ಯೊಂದಿಗೆ ಪಾಲುದಾರಿಕೆಗೆ ಇತ್ತೀಚೆಗೆ ಸಹಿ ಹಾಕಲಾಗಿದೆ ಎಂದು 1947ರಲ್ಲಿ ಸ್ಥಾಪನೆಗೊಂಡಿರುವ ಸೊಸೈಟಿ ಇಂದು ಹೇಳಿದೆ.

ಭಾರತ ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸವಾಲುಗಳ ಕುರಿತು ತುರ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉಭಯ ಸಂಸ್ಥೆಗಳು ಶ್ರಮಿಸಲಿವೆ ಎಂದು ಸೊಸೈಟಿ ತಿಳಿಸಿದೆ. ಮಾನಸಿಕ ಆರೋಗ್ಯದತ್ತ ಸಮಾಜ ಹಾಗೂ ಸರ್ಕಾರದ ಗಮನ ಸೆಳೆಯುವ ಉದ್ದೇಶವನ್ನು ಟಿಎಲ್‍ಎಲ್‍ಎಲ್‍ಎಫ್ ಮತ್ತು ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ ಹೊಂದಿದೆ. ಸೊಸೈಟಿ ರಾಯಭಾರಿಯಾಗುವ ಮೂಲಕ ಮಾನಸಿಕ ಆರೋಗ್ಯ ಜಾಗೃತಿಗೆ ಬೆಂಬಲ ಸೂಚಿಸಿದ್ದೇನೆ ಎಂದು ದೀಪಿಕಾ ಹೇಳಿದ್ದಾರೆ.

ಖಿನ್ನತೆ ಹಾಗೂ ಮಾನಸಿಕ ಒತ್ತಡದ ವಿರುದ್ಧ ಹೋರಾಡಿದ ತನ್ನ ಅನುಭವವನ್ನು ಮೂವತ್ತು ವರ್ಷದ ದೀಪಿಕಾ ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top