fbpx
News

ರೈತರ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿ

 

ನಾಸಿಕ್, ಆ.26:ಕೆಲವು ತಿಂಗಳ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರು ತಬ್ಬಿಬ್ಬಾಗಿದ್ದರು, ಈಗ ಅದೇ ಈರುಳ್ಳಿ ಮೌಲ್ಯ ಕೇವಲ 5 ಪೈಸೆ..! ಉಳ್ಳಾಗಡ್ಡೆ ಧಾರಣೆ ಪಾತಾಳಕ್ಕೆ ಕುಸಿದಿದ್ದರಿಂದ ಬೇಸತ್ತ ರೈತನೊಬ್ಬ ತಾನು ಬೆವರು ಹರಿಸಿ ಬೆಳೆದ 13 ಕ್ವಿಂಟಾಲ್ ಈರುಳ್ಳಿಯನ್ನು ತಿಪ್ಪೆಗೆ ಸುರಿದ ಪ್ರಸಂಗ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕರಂಜ್ಗಾಂವ್ನಲ್ಲಿ ನಿನ್ನೆ ನಡೆದಿದೆ.

ಸೂಕ್ತ ಮೌಲ್ಯ ಸಿಗದೇ ಗೋದಾಮು, ಮಂಡಿಗಳಲ್ಲಿ ಕೊಳೆತು ನಾರುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿಯನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಿಂದ ಸರ್ಕಾರಕ್ಕೆ ಸುಮಾರು 100ಕೋಟಿ ನಷ್ಟವಾಗಲಿದೆಯಾದರೂ 30 ಕೋಟಿ ರೂ ಬೆಲೆಯ 3.28 ಲಕ್ಷ ಕ್ವಿಂಟಾಲ್ ಈರುಳ್ಳಿ ಗೋದಾಮುಗಳಲ್ಲಿ ಕೊಳೆತು ಹೋದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಮಹಾರಾಷ್ಟ್ರದಲ್ಲಿ ಈರುಳ್ಳಿಯ ಸಗಟು ಧಾರಣೆ ಪಾತಾಳಕ್ಕೆ ಕುಸಿದಿದ್ದು, 1 ಕೆ.ಜಿ.ಗೆ ಕೇವಲ 5 ಪೈಸೆ ದರ ನಿಗದಿಯಾಗಿದೆ. ಇದರಿಂದ ಆಕ್ರೋಶಗೊಂಡ ರೈತರು, ಮಾಲನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಸತತ ಬರಗಾಲದಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ರೈತರು, ಹೇಗೋ ಕಷ್ಟಪಟ್ಟು ಈರುಳ್ಳಿ ಬೆಳೆದಿದ್ದರು. ಫಸಲು ಕೂಡ ಉತ್ತಮವಾಗಿ ಬಂದಿತ್ತು. ಆದರೆ, ಮಾರುಕಟ್ಟೆಗೆ ತಂದ ಈರುಳ್ಳಿಗೆ

2015 ರ ಆಗಸ್ಟ್ ನಲ್ಲಿ 1 ಕ್ವಿಂಟಾಲ್ ಈರುಳ್ಳಿಗೆ 5824 ರೂಪಾಯಿ ದರ ಇತ್ತು.

ಬರದಿಂದ ಕಬ್ಬು ಬೆಳೆಯುವುದನ್ನು ಬಿಟ್ಟ ರೈತರು ಈರುಳ್ಳಿ ಬೆಳೆದಿದ್ದರು. ಹೀಗಾಗಿ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಈರುಳ್ಳಿ ಬಂದ ಕಾರಣ, ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ತಾವು ಬೆಳೆದ ಟನ್ ಗಟ್ಟಲೇ ಬೆಳೆಯನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ.

 ಮೇ ತಿಂಗಳಿಂದ ಈರುಳ್ಳಿ ಬೆಲೆ ನೆಲಕ್ಕೆ ಕುಸಿದಿದ್ದು , ಬೆಲೆ ಚೇತರಿಕೆ ಕಾಣದೇ ರೈತರು ಕಂಗಾಲಾಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Jim says:

It’s perfect time to make some plans for the long run and it is time
to be happy. I’ve learn this publish and if I may just I
wish to suggest you few interesting issues or advice.
Perhaps you can write next articles relating to this article.

I wish to learn more issues about it! http://yahoo.org/

To Top