fbpx
News

ತ್ರಿಶೂಲಿ ನದಿಗುರುಳಿದ ಬಸ್: 21 ಮಂದಿ ಸಾವು

ನೇಪಾಳದಲ್ಲಿ ಶುಕ್ರವಾರ ಬಸ್ ತ್ರಿಶೂಲಿ ನದಿಗೆ ಉರುಳಿ ಬಿದ್ದು, ಇಬ್ಬರು ಮಹಿಳೆಯರೂ ಸೇರಿದಂತೆ 21 ಮಂದಿ ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ.
ರೌತಾಹತ್ ಜಿಲ್ಲೆಯ ಗೌರ್‍ನಿಂದ ಪೊಖರಾಕ್ಕೆ ತೆರಳುವ ಹೆದ್ದಾರಿ ಮಾರ್ಗದಲ್ಲಿ ಬಸ್ ಆಯತಪ್ಪಿ 100 ಮೀಟರ್ ಆಳದ ನದಿಗೆ ಉರುಳಿಬಿದ್ದಿದೆ.

download

ಸ್ಥಳೀಯರು ಹಾಗೂ ಪೊಲೀಸರು ನದಿಯಲ್ಲಿ ಬಿದ್ದವರನ್ನು ರಕ್ಷಣೆ ಮಾಡಿ, ಮೃತದೇಹಗಳನ್ನು ಮೇಲ್ಕೆತ್ತಿದರು. ಗಾಯಾಳುಗಳನ್ನು ಜಿಲ್ಲೆಯ ಭರತ್‍ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಣೆಯಾದ ವ್ಯಕ್ತಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸೂಕ್ತ ರೀತಿಯಲ್ಲಿ ನಿರ್ವಹಿಸದ ವಾಹನಗಳು ಹಾಗೂ ಕಳಪೆ ಗುಣಮಟ್ಟದ ರಸ್ತೆಗಳಿಂದಾಗಿ ನೇಪಾಳದಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಕಳೆದ ವಾರ ನೇಪಾಳದ ಕೇಂದ್ರ ಭಾಗದಲ್ಲಿ ಜನರಿಂದ ತುಂಬಿದ ಬಸ್ಸೊಂದು ಬೆಟ್ಟದ ಮಾರ್ಗದಿಂದ ಉರುಳಿ 300 ಮೀಟರ್ ಆಳದ ಪ್ರಪಾತಕ್ಕೆ ಬಿದ್ದು 31 ಜನರು ಸಾವನ್ನಪ್ಪಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top