fbpx
Awareness

upgrade ಆಗ್ತಿದೆ ರೈಲ್ವೆ ಇಲಾಖೆ…

ಭಾರತದ ಜನಮನದ ಜೀವನಾಡಿ ಭಾರತೀಯ ರೈಲ್ವೇ.. ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸುವ ಈ ರೈಲ್ವೆಯೊಂದಿಗೆ ದೇಶದ ಜನರ ಜೀವನಾಡಿಯೇ ಇದೆ. ಜನತೆಯ ಜೀವನದ ಹಾಸುಹೊಕ್ಕಾಗಿರುವ ಈ ಇಲಾಖೆಯ ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡ್ತಾ ಇದೆ. ಇದೇ ನಿಟ್ಟಿನಲ್ಲಿ ಇನ್ನೊಂದು ಕಾರ್ಯಕ್ಕೆ ಇಲಾಖೆ ಮುಂದಾಗಿದೆ. ಮಾಸಿಕ ಟಿಕೆಟ್ (ಎಂ.ಎಸ್.ಟಿ) ಬದಲು ರೈಲ್ವೇ ಕಾರ್ಡ್ ಜಾರಿಗೆ ಬರಲಿದೆ.

ಮೊದಲು ಮುಂಬೈನಲ್ಲಿ ಇದ್ರ ಪ್ರಯೋಗ ನಡೆಯಲಿದೆ. ಮಾಸಿಕ ಟಿಕೆಟ್ (ಎಂ.ಎಸ್.ಟಿ) ಶೀಘ್ರದಲ್ಲಿಯೇ ಬಂದ್ ಆಗಲಿದೆ. ಉಪ ನಗರಿ ಯಾತ್ರಿಗಳಿಗೆ ಆದಷ್ಟು ಬೇಗ ರೈಲ್ವೇ ಕಾರ್ಡ್ ಸಿಗಲಿದ್ದು, ಆದ್ರೆ ಪ್ರಯಾಣಿಕರು ಇದಕ್ಕೆ ಎಷ್ಟು ಹಣ ನೀಡಬೇಕೆಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ವರದಿ ಪ್ರಕಾರ, ಈ ಕಾರ್ಡ್ ಮೂರು ರೀತಿಯಲ್ಲಿರಲಿದೆ. ಕೆಲ ತಿಂಗಳಿಗೆ ಟಿಕೆಟ್ ಪಡೆಯುವವರು ಗೋಲ್ಡನ್ ಕಾರ್ಡ್ ಪಡೆಯಬೇಕಾಗುತ್ತದೆ. ಸಿಲ್ವರ್ ಕಾರ್ಡ್ ಅವಧಿ ಒಂದು ತಿಂಗಳವರೆಗಿರಲಿದೆ. ಪ್ಲಾಟಿನಮ್ ಕಾರ್ಡ್ ಒಂದು ವರ್ಷಕ್ಕೆ ಅನ್ವಯಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ರೈಲ್ವೇ ಇಲಾಖೆ 31 ಬ್ಯಾಂಕ್ ಗಳ ಜೊತೆ ಮಾತುಕತೆ ನಡೆಸುತ್ತಿದೆ.

source : ಕನ್ನಡ ದುನಿಯಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

upgrade ಆಗ್ತಿದೆ ರೈಲ್ವೆ ಇಲಾಖೆ…
Click to comment

ನಮ್ಮಲ್ಲಿ ಜನಪ್ರಿಯ

To Top