fbpx
News

ಬರ್ತ್ ಡೇ ಖುಷಿಯಲ್ಲಿ ಆಟೋಕ್ಕೆ ಡಿಕ್ಕಿ ಹೊಡೆದ ಶಾಸಕನ ಪತ್ನಿ

ಹ್ಯಾಪಿ ಬರ್ತ್ ಡೇ ಸುಮನ್ ಎಂದು ಫೇಸ್ಪುಕ್ ನಲ್ಲಿ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ಆದ್ರೆ ಮೊದಲ ಡ್ರೈವ್ ನಲ್ಲಿಯೇ ಯಡವಟ್ಟಾಗಿದೆ.

ರಾಜಕಾರಣಿಗಳು ತಮ್ಮ ತಮ್ಮ ಸ್ವರ್ತದ ಬುದ್ದಿಯಿಂದ  ಅಧಿಕಾರಶಾಹಿಗಳ, ಮದೋನ್ಮತ್ತ ನಾಯಕರ, ಶ್ರೀಮಂತರ ದೌರ್ಜನ್ಯ-ಹಿಂಸೆ-ಕೋಟಲೆಗಳಿಗೆ ತುತ್ತಾಗುತ್ತಿದೆ. ಮೂಕ ಜನ ಕೋಟಿಯ ಪರಿಶುದ್ಧಾತ್ಮದಿಂದೇಳುವ ನೋವಿನ ಸಂಗತಿಗಳಿಗೆ ಕಾರಣವಾಗುತ್ತಿದೆ. ಅನ್ಯಾಯ ಪರಂಪರೆಗಳಿಂದ ನಿಸ್ಸಹಾಯಕತೆಯ, ಸಾಮಾಜಿಕ ಏರುಪೇರುಗಳ ದುಷ್ಪರಿಣಾಮದ, ಅಸಮಾನತೆ, ಅವಮಾನಗಳ,  ಬೆಳೆಯುತ್ತಿವೆ ಇದಕ್ಕೆ ಉದಹಾರಣೆಯಂತೆ ಈ ಶಾಸಕನ ಪತ್ನಿ ಮಾಡಿರುವ ಒಂದು ಯಡವಟ್ಟಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ, ಪತ್ನಿ ಸುಮನ್ ಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಬರ್ತ್ ಡೇ ಖುಷಿಯಲ್ಲಿದ್ದ ಪತ್ನಿಗೆ 5.5 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಕಾರ್ ಏರಿದ ಸುಮನ್, ಕಾರ್ ತಿರುಗಿಸುವಾಗ ಆಟೋಕ್ಕೆ ಡಿಕ್ಕಿ ಹೊಡೆದಿದ್ದಾರೆ. ಆಟೋ ಹೆಡ್ ಲೈಟ್ ಒಡೆದಿದೆ. ಹಾಗೆ ಸಣ್ಣ ಪುಟ್ಟ ಹಾನಿಯಾಗಿದೆ. ಆಟೋ ಚಾಲಕ ಈ ಸಂಬಂಧ ಗಲಾಟೆ ಶುರುಮಾಡಿದ್ದಾನೆ. ಹೆದರಿದ ಸುಮನ್ ಕಾರಿನಿಂದ ಇಳಿಯಲಿಲ್ಲ. ಆದ್ರೆ ಪಕ್ಕದಲ್ಲಿ ಕುಳಿತಿದ್ದ ಮೆಹ್ತಾ ಆಟೋ ಚಾಲಕನನ್ನು ಸಮಾಧಾನಗೊಳಿಸಿದ್ದಾರೆ. ಜೊತೆಗೆ ಪರಿಹಾರ ಹಣವನ್ನು ನೀಡಿದ್ದಾರೆ.

ಸುಮನ್ ಚಾಲನೆಯನ್ನು ಮೆಹ್ತಾ ಸಮರ್ಥಿಸಿಕೊಂಡಿದ್ದಾರೆ.

18 ವರ್ಷಗಳ ಅನುಭವ ಸುಮನ್ ಗಿದೆ. ಆಡಿ ಸೇರಿದಂತೆ ದುಬಾರಿ ಕಾರುಗಳನ್ನು ಸುಮನ್ ಓಡಿಸಿದ್ದಾರೆ. ಕಾರ್ ಗುದ್ದಿದ ರಭಸಕ್ಕೆ ಆಟೋದ ಕೆಲವು ಭಾಗಗಳು ಹಾನಿಗೊಳಗಾಗಿವೆ ಎಂದು ಮೆಹ್ತಾ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top