fbpx
Editor's Pick

ಸುಂದರವಾದ ತ್ವಚೆ ಪಡೆಯಲು ಹಣ್ಣಿನ ಫೇಸ್ ಪ್ಯಾಕ್ ಬಳಸಿ

ತಾಜಾ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಹಣ್ಣಿನ ಆಸಿಡ್‍ಗಳು ಇರುವುದರಿಂದ ಹಲವಾರು ತ್ವಚೆಯ ಸಮಸ್ಯೆಗಳನ್ನು ನಿವಾರಿಸಲು ಇದು ಸಹಕಾರಿ, ಅಲ್ಲದೆ ಸ್ವಾಭಾವಿಕವಾದ ಪ್ಯಾಕ್‍ಗಳಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ ಮತ್ತು ಅವುಗಳು ನಿಮ್ಮ ತ್ವಚೆಯ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುವುದಿಲ್ಲ. ಅಧಿಕ ವಿಟಮಿನ್ ಮತ್ತು ಕಿಣ್ವಗಳನ್ನು ಒಳಗೊಂಡಿರುವ ಹಣ್ಣುಗಳು ತ್ವಚೆಯ ಮೇಲೆ ಅದ್ಭುತವಾದ ಎಕ್ಸ್‌ಫೋಲಿಯೇಶನ್ ಕ್ರಿಯೆಯನ್ನು ಮಾಡುತ್ತವೆ.

ಅವೊಕ್ಯಾಡೊ ಪ್ಯಾಕ್

1

ಒಣ ತ್ವಚೆಯ ಸಮಸ್ಯಯೇ? ಚಿಂತೆ ಬಿಡಿ: ಅವೋಕ್ಯಾಡೊಗಳನ ನಿಮ್ಮ ಒಣ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತವೆ, ಇವು ನಿಮ್ಮ ತ್ವಚೆಗೆ ಪರಿಣಾಮಕಾರಿಯಾಗಿ ನೀರಿನಾಂಶವನ್ನು ಒದಗಿಸುತ್ತವೆ, ಅವೋಕ್ಯಾಡೊಗಳನ್ನು ಜಜ್ಜಿ ಅದರ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ನಂತರ ಮುಖವನ್ನು ತೊಳೆಯಿರಿ.

ಟೊಮೇಟೊ ಪ್ಯಾಕ್

2

ಟೊಮೇಟೊಗಳ ಬೇಸಿಗೆಯಲ್ಲಿ ಉಪಯೋಗಕ್ಕೆ ಬರುತ್ತ, ಟೊಮೇಟೊಗಳನ್ನು ಆಲೀವ್ ಎಣ್ಣೆಯ ಜೊತೆಗೆ ರುಬ್ಬಿಕೊಂಡು ಮುಖಕ್ಕೆ ಲೇಪಿಸಿ, ಇದು ಸನ್ ಬರ್ನ್ ಸಮಸ್ಯೆಯನ್ನು ನಿವಾರಿಸುತ್ತದೆ. ಟೊಮೇಟೊದಲ್ಲಿರುವ ಲೈಕೊಪೀನ್ ಎಂಬ ಅಂಶವು ಸನ್ ಬರ್ನ್ ರಾಮಬಾಣದಂತೆ ಕೆಲಸ ಮಾಡುತ್ತದೆ.

ಬಾಳೆಹಣ್ಣಿ ಪ್ಯಾಕ್

3

ಬಾಳೆಹಣ್ಣಿನಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಆಡಗಿರುತ್ತವೆ, ಬಾಳೆಹಣ್ಣನ್ನು ರುಬ್ಬಿಕೊಂಡು, ಅದನ್ನು ಒಂದು ಟೀ ಸ್ಫೂನ್ ಜೇನು ತುಪ್ಪ ಮತ್ತು ಲಿಂಬೆ ರಸದ ಜೊತೆಗೆ ಬೆರೆಸಿಕೊಳ್ಳಿ ಇದನ್ನು ಮುಖಕ್ಕೆ ಲೇಪಿಸಿಕೊಂಡು 20 ನಿಮಿಷ ಬಿಟ್ಟು ನಂತರ ಮುಖ ತೊಳೆಯಿರಿ, ಇದರಿಂದ ಮೊಟವೆಗಳ ಸಮಸ್ಯೆ ದೂರವಾಗುತ್ತದೆ.

ಪಪ್ಪಾಯ ಹಣ್ಣಿನ ಪ್ಯಾಕ್

4

ಪಪ್ಪಾಯ ಹಣ್ಣಿನಂತಹ ಪ್ಯಾಕ್ಗಳು ತ್ವಚೆಗೆ ಯೌವನವನ್ನು ತಂದು ಕೊಡುತ್ತವೆ. ಪಪ್ಪಾಯ ಹಣ್ಣನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ, ನಂತರ ಅದನ್ನು ಮುಖಕ್ಕೆ ಲೇಪಿಸಿ, 15-20 ನಿಮಿಷ ಬಿಡಿ, ಇದು ಟ್ಯಾನ್ ಆಗಿರುವ ತ್ವಚೆಯ ಕೋಶಗಳಿಗೆ ಪುನಶ್ಚೆತನವನ್ನು ಒದಗಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top