fbpx
Gadgets

ಇಲ್ಲಿದೆ ರಿಲಾಯನ್ಸ್ ಜಿಯೋ ಡೇಟಾ ಪ್ಲಾನ್ details…

ಅನ್ ಲಿಮಿಟೆಡ್ ಡಾಟಾ ಕೂಡ ಫ್ರೀ. ವಾಯ್ಸ್ ಕಾಲಿಂಗ್, ವಿಡಿಯೋ ಕಾಲಿಂಗ್ , ಎಸ್ ಎಂ ಎಸ್ ಎಲ್ಲವೂ ಫ್ರೀ.ಫ್ರೀ..ಫ್ರೀ. 90 ದಿನಗಳಾದ್ಮೇಲೆ ಏನ್ ಕಥೆ ಅನ್ನೋ ಪ್ರಶ್ನೆ ನಿಮ್ಮೆಲ್ಲರಲ್ಲೂ ಇರಬಹುದು. ಅದಕ್ಕೂ ಈಗ ಉತ್ತರ ಸಿಕ್ಕಿದೆ. ಉಚಿತ 4 ಜಿ ಸಿಮ್ ನೀಡುವ ಮೂಲಕ ರಿಲಾಯನ್ಸ್ ಜಿಯೋ ಗ್ರಾಹಕರಲ್ಲಿ ಸಂಚಲನ ಎಬ್ಬಿಸಿದೆ. ರಿಲಾಯನ್ಸ್ ಜಿಯೋ 4ಜಿ ಸಿಮ್ ತೆಗೆದುಕೊಂಡ್ರೆ 90 ದಿನಗಳ ಕಾಲ ನಿಮಗೆ ನಯಾಪೈಸೆ ಖರ್ಚಿಲ್ಲ. ಇನ್ ಕಮಿಂಗ್, ಔಟ್ ಗೋಯಿಂಗ್ ಕರೆಗಳೆಲ್ಲ ಉಚಿತ.

WhatsApp Image 2016-09-01 at 11.49.26 AM (1)  WhatsApp Image 2016-09-01 at 11.49.26 AM (3)WhatsApp Image 2016-09-01 at 11.49.26 AM (2)  WhatsApp Image 2016-09-01 at 11.49.26 AMWhatsApp Image 2016-09-01 at 11.49.26 AM (4)

ಜಿಯೋ ಸಿಮ್ ಆಯಕ್ಟಿವೇಟ್ ಆಗಿ 90 ದಿನ ಕಳೆದ ಮೇಲಿನ ಟಾರಿಫ್ ಪ್ಲಾನ್ ಕೂಡ ಲೀಕ್ ಆಗಿದೆ.  ಜಿಯೋ ಡಾಟಾ 10 ಜಿಬಿಗೆ ಕೇವಲ 50 ರೂಪಾಯಿ, 20 ಜಿಬಿಗೆ 100 ರೂಪಾಯಿ, 40 ಜಿಬಿಗೆ 200 ಮತ್ತು 80 ಜಿಬಿಗೆ 400 ರೂಪಾಯಿದೆ. ಉಚಿತ ಎಸ್ ಎಂ ಎಸ್ ಸೌಲಭ್ಯವಿದೆ. ಈ ಪ್ಲಾನ್ ನಿಜವೇ ಆಗಿದ್ದಲ್ಲಿ ಇತರ ಟೆಲಿಕಾಂ ಕಂಪನಿಗಳಿಗೆ ರಿಲಾಯನ್ಸ್ ಜಿಯೋ ಟಕ್ಕರ್ ಕೊಡೋದ್ರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಗ್ರಾಹಕರು ಜಿಯೋ ಬೆಸ್ಟ್ ಅಂದುಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.

ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಇಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿಯವರು, ರಿಲಾಯನ್ಸ್ ಜಿಯೋ 4 ಜಿ ಯ 90 ದಿನಗಳ ಕಾಲದ ಉಚಿತ ಬಳಕೆ ಬಳಿಕದ ಟಾರಿಫ್ ದರಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ರಿಲಾಯನ್ಸ್ ಜಿಯೋ 90 ದಿನಗಳ ಕಾಲ ಉಚಿತ ಡೇಟಾ, ಕಾಲ್ ಸೌಲಭ್ಯ ನೀಡುತ್ತಿರುವುದರಿಂದ ಇದಕ್ಕೆ ಸ್ಪರ್ಧೆಯೊಡ್ಡಲು ಇತರೆ ಮೊಬೈಲ್ ಸೇವಾ ಕಂಪನಿಗಳು ಪೈಪೋಟಿಗೆ ಬಿದ್ದು ಡೇಟಾ ಪ್ಯಾಕ್ ದರಗಳನ್ನು ಕಡಿತಗೊಳಿಸಿದ್ದು, ರಿಲಾಯನ್ಸ್ 4ಜಿ ಇಂದು ಲಾಂಚ್ ಆಗುವ ವೇಳೆ ಮತ್ತಷ್ಟು ಕೊಡುಗೆಗಳನ್ನು ಘೋಷಿಸಿದರೆ ಈ ದರ ಸಮರ ಮತ್ತಷ್ಟು ಕಾಲ ಮುಂದುವರೆಯಲಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
venkatesh says:

Venkatesh #no15 3rd crass 3rd maim jaimaruthinagara nandinilyhut bangolore 96

To Top