fbpx
News

ಬೆಂಗಳೂರು ಸೇರಿ ದೇಶದ ಹಲವೆಡೆ 6630 ಕೋ ರೂ. ಮೌಲ್ಯದ ಆಸ್ತಿಗಳ ಸ್ವಾಧೀನ

ಬೆಂಗಳೂರು ಸೇರಿ ದೇಶದ ಹಲವೆಡೆ 6630 ಕೋ ರೂ. ಮೌಲ್ಯದ ಆಸ್ತಿಗಳು ಬೆಂಗಳೂರಿನ ಮಾಲ್, ಅಪಾರ್ಟ್‍ಮೆಂಟ್, ಯುಬಿಎಲ್, ಯುಎಸ್‍ಎಲ್ ಷೇರುಗಳ ಸ್ವಾಧೀನ

ನವದೆಹಲಿ: ಬ್ಯಾಂಕುಗಳ ಭಾರೀ ಮೊತ್ತದ ಸಾಲ ಮರುಪಾವತಿಸದ ಉದ್ಯಮಿ ವಿಜಯ ಮಲ್ಯಗೆ ಸೇರಿದ 6630 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಶನಿವಾರ ಮುಟ್ಟುಗೋಲು ಹಾಕಿಕೊಂಡಿದೆ.

ಬೆಂಗಳೂರಿನಲ್ಲಿರುವ 800 ಕೋಟಿ ರೂ ಮೌಲ್ಯದ ಮಾಲ್ ಹಾಗೂ ಅಪಾರ್ಟ್‍ಮೆಂಟ್, ಮಹಾರಾಷ್ಟ್ರದಲ್ಲಿರುವ 200 ಕೋಟಿ ರೂ. ಮೌಲ್ಯದ ಹೊಲಮನೆ ಹಾಗೂ ಯುಬಿಎಲ್ ಹಾಗೂ ಯುಎಸ್‍ಎಲ್ ಕಂಪನಿಗಳಲ್ಲಿ ಮಲ್ಯ ಹೊಂದಿರುವ 3000 ಕೋಟಿ ರೂ. ಮೌಲ್ಯದ ಷೇರುಗಳು- ಇವು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡ ಈ ಉದ್ಯಮಿಯ ಆಸ್ತಿಗಳಲ್ಲಿ ಪ್ರಮುಖವಾದವು. ಬೆಂಗಳೂರು ಹಾಗೂ ಮುಂಬಯಿ ಹೊರತಾಗಿ ದೇಶದ ಹಲವೆಡೆ ಮಲ್ಯಾಗೆ ಸೇರಿದ ಆಸ್ತಿಪಾಸ್ತಿಗಳಿವೆ.

ದೇಶದ ಹಲವಾರು ಬ್ಯಾಂಕುಗಳಿಂದ ಒಟ್ಟಾರೆ 9000 ಕೋ ರೂ. ಸಾಲ ಪಡೆದು ಮರುಪಾವತಿಸದ ಮಲ್ಯ ಕಳೆದ ಮಾರ್ಚ್‍ನಲ್ಲಿ ಲಂಡನ್ನಿಗೆ ಪಲಾಯನ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆತನ ಪಾಸ್‍ಪೋರ್ಟ್‍ಗಳನ್ನು ರದ್ದುಪಡಿಸಿದೆ.

ಮಲ್ಯ ಬ್ರಿಟಿಷ್ ಕಂಪನಿಯಿಂದ ಪಡೆದಿರುವ 40 ಮಿಲಿಯನ್ ಡಾಲರ್ ಸೇರಿದಂತೆ ತನ್ನ ಆಸ್ತಿಪಾಸ್ತಿಗಳ ಪೂರ್ಣ ವಿವರವನ್ನು ಬಹಿರಂಗಪಡಿಸಿಲ್ಲ ಎಂದು ಬ್ಯಾಂಕುಗಳ ಒಕ್ಕೂಟವು ಸುಪ್ರೀಂಕೋರ್ಟಿಗೆ ತಿಳಿಸಿದ್ದವು.

ಇದಕ್ಕೂ ಮೊದಲು ಜು. 25ರಂದು ಬ್ಯಾಂಕುಗಳ ಕೋರಿಕೆಗೆ ಮಲ್ಯಾಗೆ ನೋಟಿಸ್ ನೀಡಲಾಗಿತ್ತು. ಅದಕ್ಕೂ ಹಿಂದೆ ಅಟಾರ್ನಿ ಜನರಲ್ ಆಗಿರುವ ಮುಕುಲ್ ರೊಹಟಗಿ ಅವರು ಸುಪ್ರೀಂಕೋರ್ಟಿನಲ್ಲಿ ವಾದಿಸುತ್ತಾ ಮಲ್ಯ ಭದ್ರಲಕೋಟೆಯಲ್ಲಿ ನ್ಯಾಯಾಲಯಕ್ಕೆ ನೀಡಿರುವ ಆಸ್ತಿಪಾಸ್ತಿಗಳ ವಿವರ ಸರಿಯಾಗಿಲ್ಲ, ಅಪೂರ್ಣವಾಗಿವೆ ಎಂದಿದ್ದರು.

ಮಲ್ಯ 2500 ಕೋಟಿ ರೂ. ಗಳ ನಗದು ವ್ಯವಹಾರ ನಡೆಸಿರುವುದೂ ಸೇರಿದಂತೆ ಅನೇಕ ಮಾಹಿತಿಗಳನ್ನು ನ್ಯಾಯಾಲಯದೆದುರು ಬಹಿರಂಗಪಡಿಸಿಲ್ಲ. ತನ್ಮೂಲಕ ಆತ ನ್ಯಾಯಾಂಗ ನಿಂದನೆ ಮಾಡಿರುವುದಾಗಿ ರೊಹಟಗಿ ಆರೋಪಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top