fbpx
News

2.5 ಮಿಲಿಯನ್ ಮೊಬೈಲ್ ಹಿಂಪಡೆಯಲು ಸ್ಯಾಮ್ ಸಂಗ್ ನಿರ್ಧಾರ

ವಿಶ್ವದ ಪ್ರಖ್ಯಾತ ಮೊಬೈಲ್ ವಸ್ತುಗಳ ತಯಾರಿಕೆ ಮಾಡುವ ಕಂಪನಿಯಾಗಿರುವ ಸ್ಯಾಮಸುಂಗ್ ನ ಎಸ್ 7 ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ದೋಷ ಕಂಡುಬಂದಿದ್ದರಿಂದ ಸ್ಯಾಮ್ ಸಂಗ್ ನ ನೂತನ ಎಸ್ 7 ಸರಣಿಯ ಮೊಬೈಲ್ ಗಳನ್ನು ಕಂಪನಿಯು ಹಿಂಪಡೆಯಲು ನಿರ್ಧರಿಸಿದೆ. ಸ್ಯಾಮ್ ಸಂಗ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ಕ್ರಮ, ತಾಂತ್ರಿಕ ದೋಷ ಸರಿಪಡಿಸಲು ಕಂಪನಿ ನಿರ್ಧರಿಸಿದೆ.

download (1)

ಮೂಲಗಳ ಪ್ರಕಾರ ಮೊಬೈಲ್ ಚಾರ್ಜಿಂಗ್ ಗೆ ಹಾಕಿದ್ದ ವೇಳೆ ಸ್ಫೋಟಗೊಂಡ ಕುರಿತು  ವರದಿಗಳು ಕೇಳಿ ಬಂದ ಹಿನ್ನಲೆಯಲ್ಲಿ ವಿಶ್ವಾದ್ಯಂತ ಮಾರಾಟವಾಗಿರುವ ಎಲ್ಲ ಸ್ಯಾಮ್ ಸಂಗ್ ಎಸ್ 7 ಸರಣಿಯ ಮೊಬೈಲ್ ಗಳನ್ನು ಹಿಂಪಡೆಯುತ್ತಿದೆ, ಮೊಬೈಲ್ ನಲ್ಲಿನ ತಾಂತ್ರಿಕ ದೋಷ ಸರಿಪಡಿಸಿ ಗ್ರಾಹಕರಿಗೆ ಮೊಬೈಲ್ ಮರು ವಿತರಣೆ ಮಾಡಲಾಗುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಸ್ಯಾಮಸುಂಗ್ ಮೊಬೈಲ್ ತಯಾರಿಕಾ ಕಂಪನಿಯು ಶುಕ್ರವಾರದಿಂದ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಕುರಿತು ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸ್ಯಾಮ್ ಸಂಗ್ ಸಂಸ್ಥೆ ಅಧಿಕಾರಿಯೊಬ್ಬರು, ಗ್ರಾಹಕರ ಸುರಕ್ಷತೆಗೆ ಸಂಸ್ಥೆ ಮೊದಲ ಆದ್ಯತೆ ನೀಡಲಿದೆ. ನಮ್ಮ ನಿಷ್ಠಾವಂತ  ಗ್ರಾಹಕರನ್ನು ನಿರಾಶೆಗೊಳಿಸಲು ನಮಗಿಷ್ಟವಿಲ್ಲ. ಹೀಗಾಗಿ ತಾಂತ್ರಿಕ ದೋಷ ಕಂಡುಬಂದಿದೆ ಎನ್ನಲಾಗುತ್ತಿರುವ ಎಸ್ 7 ಸರಣಿಯ ಮೊಬೈಲ್ ಗಳನ್ನು ಹಿಂದಕ್ಕೆ ಪಡೆದು ತಾಂತ್ರಿಕ ದೋಷ  ಸರಿಪಡಿಸಿ ಪುನರ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಪ್ರಸ್ತುತ ವಿತರಣೆಯಾಗಿರುವ ಎಲ್ಲ ಮೊಬೈಲ್ ಗಳ ಪೈಕಿ ಶೇ.0.1ರಷ್ಟು ಮೊಬೈಲ್ ಗಳಲ್ಲಿ ಮಾತ್ರ ಬ್ಯಾಟರಿ ಸಮಸ್ಯೆ ಕಂಡುಬಂದಿದ್ದು, ಅದನ್ನು ಶೀಘ್ರದಲ್ಲಿಯೇ ಸರಿಪಡಿಸುವುದಾಗಿ ಅವರು  ಹೇಳಿದ್ದಾರೆ. ಒಟ್ಟು 2.5 ಮಿಲಿಯನ್ ಫೋನ್ ಗಳನ್ನು ಕಂಪನಿಯು ಹಿಂದಕ್ಕೆ ತೆಗೆದುಕೊಳ್ಳಲಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಇತ್ತ ಷೇರುಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಷೇರುಗಳ ಮೌಲ್ಯ ಕುಸಿದಿದೆ.

ಕಳೆದ ಆಗಸ್ಚ್ 2ರಂದು ಸ್ಯಾಮ್ ಸಂಗ್ ಸಂಸ್ಥೆಯ ಬಹು ನಿರೀಕ್ಷಿತ ಗ್ಯಾಲಕ್ಸಿ ಎಸ್ 7 ಸ್ಮಾರ್ಟ್ ಫೋನ್ ನ್ನು  ಬಿಡುಗಡೆ ಮಾಡಲಾಗಿತ್ತು. ಕೇವಲ ಒಂದು ತಿಂಗಳ ಅವಧಿಯಲ್ಲಿ ಮೊಬೈಲ್ ಬ್ಯಾಟರಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಮೊಬೈಲ್ ಚಾರ್ಜಿಂಗ್ ಗೆ ಹಾಕಿದ್ದ ವೇಳೆ ತನ್ನಿಂದ ತಾನೇ ಸ್ಫೋಟ ವಾಗುತ್ತಿದೆ. ಉತ್ತರ ಕೊರಿಯಾದಲ್ಲಿ ಇಂತಹ 5 ಪ್ರಕರಣಗಳು ಧಾಖಲಾಗಿವೆ.

© newskannada

© newskannada

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top