fbpx
Awareness

ಸಾಮಾನ್ಯ ಕನ್ನಡಿಗನೊಂದಿಗೆ ಕೈ ಜೋಡಿಸೋಣ…

ಹೌದು, ನಮಗಿಂದು ಅನ್ಯಾಯವಾಗಿದೆ, ಕರ್ನಾಟಕ ಬೆಂಕಿಯ ಕೆನ್ನಾಲಿಗೆ ಇಂದ ಹತ್ತಿ ಉರಿಯುತ್ತಿದೆ, ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದ ಕರ್ನಾಟಕದ ಲಾಯರ್ ಉಂಡ ಮನೆಗೆ ಎರಡು ಬಗೆಯುತ್ತಿರುವುದು ಕಣ್ಣಿಗೆ ಕಾಣುತ್ತಿದೆ, ರೈತರು ಮತ್ತು ಕನ್ನಡ ಪರ ಸಂಘ ಸಂಸ್ಥೆಗಳು ಸುಪ್ರೀಂಕೋರ್ಟ್ ನ ಆದೇಶದಿಂದ ರೊಚ್ಚಿಗೆದ್ದು 9ನೇ ತಾರೀಕು ಪ್ರತಿಭಟನೆ ಮಾಡಲು ಹೊರಟಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ.

ನಮಗೆಷ್ಟೇ ಅನ್ಯಾಯವಾದರೂ ಅದನ್ನು ಪ್ರತಿಭಟಿಸದೇ ಕಾಲ ತಳ್ಳುವುದು ಕನ್ನಡಿಗರ ಹುಟ್ಟು ಗುಣ, ಮೈಗೂಡಿಸಿಕೊಂಡಿರುವ ಈ ಪ್ರವೃತ್ತಿಯನ್ನು ನಾವು ಬಿಡಬೇಕಿದೆ, ಕೇವಲ 5 ಜನ ಲಾಯರ್ ಇಟ್ಟುಕೊಂಡು ತಮಿಳುನಾಡು ಅಮ್ಮ ಕನ್ನಡಿಗರ ಭಾವನೆಗಳೊಂದಿಗೆ ಆಟ ಆಡುತ್ತಿದ್ದಾಳೆ, ಇದಕೆಲ್ಲಾ ಪರಿಹಾರ ಒಂದೇ ಅದು ಹೋರಾಟ. ನಾರಿಮನ್ ಎಂಬ ಮುದುಕ ಸರಿ ಸುಮಾರು 200 ಕೋಟಿಗು ಹೆಚ್ಚು fee ಪಡೆದು ಕಾವೇರಿ ಪರ ಹೋರಾಟ ಮಾಡುತ್ತೇನೆ ಎಂದು ಕೈ ಕೊಟ್ಟಿದ್ದಾನೆ. ನಿಮಗೆ ಗೊತ್ತಿರಲಿ ಕನ್ನಡಿಗರೇ ಈತ ಬೇರೆ ಯಾರೋ ಅಲ್ಲ, ದಿ 17/10/2014 ರಂದು ತಮಿಳುನಾಡಿನ ಅಮ್ಮನ ಕೇಸ್ Conflict of Interest ತಗೆದುಕೊಂಡು ಆಕೆಯ ಪರ ಬ್ಯಾಟ್ ಬೀಸಿ ಆಕೆಗೆ ಬೇಲ್ ಕೊಡಿಸಿದ ಪುಣ್ಯಾತ್ಮ, ಇಂದು ಕರ್ನಾಟಕದ ಪರ ವಾದ ಮಂಡಿಸುತ್ತಾನೆ ಎಂದರೆ ಕನ್ನಡಿಗರು ಅದಿನ್ನೆಷ್ಟು ವಿಶಾಲ ಹೃದಯದವರು ಎಂಬುದನ್ನು ಅರಿತುಕೊಳ್ಳಬೇಕಾಗಿದೆ… ಇನ್ನಾದರೂ ಎಚ್ಚೆತ್ತುಕೊಳ್ಳೋಣ.

ನಿಮಗೆ ಗೊತ್ತಿರಲಿ ಇತ್ತೀಚೆಗೆ ಕನ್ನಡಿಗ ಯುವ ಸಮೂಹ onlineನಲ್ಲಿ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೆ, ಪ್ರತಿಭಟನೆ ನೆಡೆಸಿ ಜಯದ ರುಚಿಯನ್ನು ಕಂಡಿದೆ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ ಮಿತ್ರರೇ…! ಮೊನ್ನೆ ಮೊನ್ನೆ ಕನ್ನಡವೇ ಬಾರದೆ 18 ವರ್ಷಗಳ ಕಾಲ ಚುನಾವಣೆಗಳಲ್ಲಿ ಕರ್ನಾಟಕದಿಂದ ಗೆದ್ದು ಬೀಗುತ್ತಿದ್ದ ವೆಂಕಯ್ಯ ನಾಯ್ಡು ವಿರುದ್ಧ facebook ನಲ್ಲಿ “ಸಾಮಾನ್ಯ ಕನ್ನಡಿಗ” ತಂಡವು ಕ್ಯಾಂಪೇನ್ ಶುರು ಮಾಡಿ ಸಂಚಲನ ಉಂಟು ಮಾಡಿದ್ದೂ ನಮಗೆಲ್ಲರಿಗೂ ಗೊತ್ತಿರುವ ಸಂಗತಿ, ಕನ್ನಡಿಗರಿಗೆ ಕಷ್ಟ ಬಂದಾಗಲೆಲ್ಲ ಈ ತಂಡವು ಹೆಗಲು ಕೊಟ್ಟಿದೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ… ಈ ತಂಡ ಇಂದು ಮತ್ತೊಬ್ಬ ಕನ್ನಡ ಅನ್ನ ತಿಂದು ಕಾವೇರಿಗೆ ದ್ರೋಹ ಬಗೆಯುತ್ತಿರುವ ಹಿತ ಶತ್ರು ‘ಫಾಲಿ ಸ್ಯಾಮ್ ನಾರಿಮನ್’ ವಿರುದ್ಧ ನಾಳೆ ಬೆಳಿಗ್ಗೆ 7 ರಿಂದ twitter ನಲ್ಲಿ #sacknariman ಎಂಬ ಕ್ಯಾಂಪೇನ್ ಕೈಗೊಳ್ಳುತ್ತಿದೆ.

ಕೆಚ್ಚೆದೆಯ ಕನ್ನಡಿಗರಲ್ಲಿ ಕೇಳಿಕೊಳ್ಳುವುದಿಷ್ಟೇ ನಿಮಗೆ tyre ಸುಟ್ಟು, ಇಲ್ಲವೇ ಬೀದಿಗಿಳಿದು ಪೊಲೀಸರೊಂದಿಗೆ ಸೆಣಸಿ ಪ್ರತಿಭಟಿಸಲು ಆಗದಿದ್ದರೆ ಕೊನೆ ಪಕ್ಷ “ಸಾಮಾನ್ಯ ಕನ್ನಡಿಗ” ತಂಡಕ್ಕೆ ನಿಮ್ಮ ಬೆಂಬಲವನ್ನು ಸೂಚಿಸಿ, ನಿರ್ವೀರ್ಯವರಾಗಿ ಬದುಕುವ ಬದಲು ಕಾವೇರಿ ಪರ ನಿಂತು ನಾವು ಏನು ಎನ್ನುವುದನ್ನು ಅಮ್ಮ ನಿಗೆ ಮನದಟ್ಟು ಮಾಡೋಣ…

facebook ಲಿಂಕ್ : https://www.facebook.com/sakannadiga/

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Rajesh says:

Remove nariman & take the money back. He is misused our trust.

To Top