fbpx
Kannada Bit News

ಸುಪ್ರೀಂಕೋರ್ಟ್ ಆದೇಶ ತಿರಸ್ಕರಿಸಿ….ಕೆಲವು ಹುಂಬರ ಸಲಹೆ. ಹಾಗೆ ಮಾಡಿದರೆ ಏನಾಗುತ್ತದೆ, ಗೊತ್ತೆ?

ನ್ಯಾಯಾಂಗ ನಿಂದನೆಯಾಗುತ್ತದೆ. ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಥವಾ ಸಂಬಂಧಪಟ್ಟ ಮಂತ್ರಿ/ಮುಖ್ಯಮಂತ್ರಿ ಜೈಲುಪಾಲಾಗುತ್ತಾರೆ. ಅಥವಾ ಸಂವಿಧಾನದ ವಿಧಿ 355ರ ಪ್ರಕಾರ ಕರ್ನಾಟಕ ಸರಕಾರವನ್ನು ಅಮಾನತು/ವಜಾ ಮಾಡಿ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರದ ಮೂಲದ ಜಾರಿಗೊಳಿಸಬಹುದು. ಅಥವಾ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಕೇಂದ್ರ ಸರಕಾರದ ವಶಕ್ಕೆ ಕೊಟ್ಟು ಆದೇಶ ಜಾರಿಗೊಳಿಸಬಹುದು…..

> ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಒಂದು ಪ್ರಯೋಗ ಮಾಡಿದ್ದರು. ಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳಲು ಸುಗ್ರೀವಾಜ್ಞೆ ತಂದಿದ್ದರು. ಆದರೆ ಒಂದೇ ವಾರದಲ್ಲಿ ಸುಪ್ರೀಂಕೋರ್ಟ್ ಅದನ್ನು ತಳ್ಳಿಹಾಕಿ ಕರ್ನಾಟಕಕ್ಕೆ ಛೀಮಾರಿ ಹಾಕಿತ್ತು. ಆ ರೀತಿಯ ಕಾನೂನು/ಸುಗ್ರೀವಾಜ್ಞೆ ತರಲು ನಿಮಗೆ ಯಾವುದೇ ಅಧಿಕಾರವಿಲ್ಲವೆಂದು ವಿಧಿಸಿತ್ತು….

> ಇತ್ತೀಚೆಗಿನ ವರದಿ ಪ್ರಕಾರ ಕರ್ನಾಟಕ ನೀರು ಬಿಡಲು ಸಾಧ್ಯವಿದೆಯೆಂದು ಒಪ್ಪಿಕೊಂಡ ಕಾರಣ ಆ ರೀತಿಯ ಆದೇಶ ನೀಡಲಾಗಿದೆ. ಹಾಗಾದರೆ ತಪ್ಪು ಯಾರದ್ದು? ಸರಿಯಾದ ಅಂಕಿ-ಅಂಶ ದಾಖಲೆಗಳು ಇಲ್ಲದೇ ಕೋರ್ಟಿನಲ್ಲಿ ಸಮರ್ಪಕವಾಗಿ ವಾದ ಮಂಡಿಸದ ಕಾರಣ ನಮಗೆ ಸೋಲಾಗಿದೆ. ಇದು ನಮ್ಮ ಅಧಿಕಾರಿಗಳು,ಇಂಜಿನಿಯರ್ ಗಳು ಸರಿಯಾದ ತಾಂತ್ರಿಕ ಮಾಹಿತಿಗಳನ್ನು ವಕೀಲರಿಗೆ ನೀಡದ ಕಾರಣ ಆದ ಪ್ರಮಾದ, ವಕೀಲರು ಸಹಾ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಂದೆ ಈ ರೀತಿಯ ತಪ್ಪುಗಳಾಗದಂತೆ ಎಚ್ಚರವಹಿಸುವುದೇ ಉಳಿದಿರುವ ದಾರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top