fbpx
Job news

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳ ಆಯ್ಕೆ – ನೇರ ನೇಮಕಾತಿ

ಸರ್ಕಾರವು ತನ್ನ ಆದೇಶ ಸಂಖ್ಯೆ ಗ್ರಾಆಪ/578/ಗ್ರಾಪಂಕಾ/2015, ಬೆಂಗಳೂರು ದಿನಾಂಕ 30.06.2016ರಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ವಹಿಸಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಆಧಿಸೂವನೆ ಗ್ರಾಅಪ/306/ಕೆಎಸ್ಎಸ್/2005. ಬೆಂಗಳೂರು ದಿನಾಂಕ 20.01.2011 ಹಾಗೂ ಪತ್ರ ದಿನಾಂಕ 30.06.2016, 04.08.2016, ಮತ್ತು 16.08.2016ರ ಅನುಸಾರವಾಗಿ, ಹಾಗೂ ಕರ್ನಾಟಕ ಸಾಮಾನ್ಯ ಸೇವೆ (ಆಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ಪಂಚಾಯಿತಿ ಆಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1) (ವಿಷೇಶ) ನಿಯಮಗಳು 2014ರ ಅನ್ವಯ ಅರ್ಹ ಆಭ್ಯರ್ಥಿಗಳಿಂದ 815 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು 809 ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳಿಗೆ ನೇರ ನೆಮಕಾತಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಪರೀಕ್ಷೆಗೆ ಹಾಜರಾಗಬೇಕು.

*ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ        –                16.09.2016

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ                                   –                 15.10.2016

*ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ

ಇ-ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ ಮಾತ್ರ        –                18.10.2016

ವಿವರ :-

ಸಾಮಾನ್ಯ ಆರ್ಹತೆ ಮತ್ತು ಇತರೆ ಆಭ್ಯರ್ಥಿಗಳಿಗೆ  ಒಂದು ಹುದ್ದೆಗೆ ರೂ 500/-  ಎರಡೂ ಹುದ್ದೆಗೆ ರೂ.750/-

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1    ಒಂದು ಹುದ್ದೆಗೆ   ರೂ. 250/- ಎರಡೂ ಹುದ್ದೆಗೆ  ರೂ.400/-

ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ, (ಶೇ. 40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವುವವರು ಮತ್ತು ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಹೊಂದಿರುವವರು)

ಸೂಚನೆ:

1 ಆಭ್ಯರ್ಥಿಗಳು ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ. ಅಂತಹ ಆಭ್ಯರ್ಥಿಗಳು ಅರ್ಜಿಯಲ್ಲಿ ಎರಡೂ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು; ಮತ್ತು

2.ಹುದ್ದೆಗಳಿಗನುಗುಣವಾಗಿ ಶುಲ್ಕವನ್ನು ಪಾವತಿಸಬೇಕು.

ಸ್ಪರ್ಧಾತ್ಮಕ ಪರೀಕ್ಷೆಯ ವಿವರಗಳು

 

ಪತ್ರಿಕೆ                     

ವಿಷಯ ಅಂಕಗಳು  ಒಟ್ಟು ಪ್ರಶ್ನೆಗಳ ಸಂಖ್ಯೆ ಪರೀಕ್ಷಾ ಅವಧಿ ಪರೀಕ್ಷಾ ವಿಧಾನ
ಪತ್ರಿಕೆ-1 ಸಾಮಾನ್ಯ ಜ್ಞಾನ.

ಸಾಮಾನ್ಯ ಕನ್ನಡ,

ಸಾಮಾನ್ಯ ಇಂಗ್ಲೀಷ್

200 ಅಂಕಗಳು 100 2 ಗಂಟೆಗಳ ಅವಧಿ (ವಸ್ತುನಿಷ್ಟ ಬಹು ಆಯ್ಕೆ ಪತ್ರಿಕೆ/Objective Multiple Choice Type)
ಪತ್ರಿಕೆ-2 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 200 ಅಂಕಗಳು 100 2 ಗಂಟೆಗಳ ಅವಧಿ

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ -1 ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಲಾಗುವುದು.

  1. ಆಭ್ಯರ್ಥಿಯು ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಮತ್ತು ಒಮ್ಮೆ ನಮೂದಿಸಿದ ನಂತರ ಅದೇ ಅಂತಿಮವಾಗುತ್ತದೆ ಹಾಗೂ ಬದಲಾವಣೆ ಕೋರಿಕೆಯಲನ್ನು ಪರಿಗಣಿಸಲಾಗುವುದಿಲ್ಲ.
  2. ಆಭ್ಯರ್ಥಿಯು ಪರೀಕ್ಷೆ ಬರೆಯಲು ರಾಜ್ಯದ ಯಾವುದಾದರೂ ಒಂದು ಜಿಲ್ಲಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು,

ಆದರೆ ನೇಮಕಾತಿ ಆಯ್ಕೆಗಾಗಿ ಅವರು ಅರ್ಜಿಯಲ್ಲಿ ನೇಮಕಾತಿಗೆ ನಮೂದಿಸಿದ ಜಿಲ್ಲೆಯನ್ನು ಮಾತ್ರ ಅಯ್ಕೆ ಪರಿಗಣಿಸಲಾಗುವುದು, ಎಲ್ಲಾ ಅರ್ಹ ಅಭ್ಯರ್ಥಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಸೂಚನೆಗಳು, ಅಗತ್ಯ ಅರ್ಹತೆ ವಿವರ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳು, ಆಯ್ಕೆ ಪ್ರಕ್ರಿಯೆ ಮತ್ತು ನೇಮಕಾತಿಯ ವಿವರ, ಪ್ರವರ್ಗದಾರು, ಜಿಲ್ಲಾವಾರು ಮತ್ತು ಹುದ್ದೆವಾರು ಹುದ್ದೆಯ ವಿವರಗಳನ್ನು ಮತ್ತು ನೇಮಕಾತಿ ಪ್ರಕ್ರಿಯೆಯ ವಿವರವಾದ ಸೂಚನೆಗಳಿಗಾಗಿ ಪ್ರಾಧಿಕಾರದ ವೆಬ್ ಸೈಟ್ http://koa.kar.nic.in ಗೆ ಭೇಟಿ ನೀಡಲು ಈ ಮೂಲಕ ಸೂಚಿಸಲಾಗಿದೆ.

In case of any discrepancy/ ambiguity arise with regard to any of the above prescribed rules/ procedures, Karnataka Civil Services (General Recruitment) Rules, 1977 and its amendment rules shall prevail.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top