fbpx
Karnataka

ಕಾವೇರಿಗಾಗಿ ಕರ್ನಾಟಕ ನಾಳೆ ಸಂಪೂರ್ಣ ಬಂದ್ ಏನಿರುತ್ತೆ..? ಏನಿರೋದಿಲ್ಲ..? ವಿವರ ಇಲ್ಲಿದೆ ನೋಡಿ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಸೆ.9 ರಂದು ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್’ಗೆ ಕರೆ ನೀಡಿವೆ.ಈ ಬಂದ್’ಗೆ ಬಹುತೇಕ ಎಲ್ಲಾ ಸಂಘಟನೆಗಳು ಬೆಂಬಲ ಸೂಚಿಸಿವೆ.

ಪೆಟ್ರೋಲ್ ಬಂಕ್’ಗಳು ಬಾಗಿಲು ತೆರೆಯುವುದಿಲ್ಲ. ಬೆಳಿಗ್ಗೆ 6 ಗಂಟೆಯಿಂದಲೇ ಕೆಎಸ್’ಆರ್’ಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವುದರೊಂದಿಗೆ, ಬ್ಯಾಂಕ್ ಸೇವೆಯೂ ಲಭ್ಯವಿರುವುದಿಲ್ಲ. ಆಸ್ಪತ್ರೆ, ಮೆಡಿಕಲ್ ಶಾಪ್, ಆಯಂಬ್ಯುಲೆನ್ಸ್ ಕಾರ್ಯ ನಿರ್ವಹಿಸಲಿವೆ, ಹಾಲು, ಪೇಪರ್, ತರಕಾರಿ, ಅಗತ್ಯವಸ್ತುಗಳು ಸಿಗಲಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರ್ನಾಟಕ ಬಂದ್ಗೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಬೆಂಬಲವಿಲ್ಲ?

ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬೆಂಬಲ ಸಿಗುವ ನಿರೀಕ್ಷೆ ಇಲ್ಲ. ಬಂದ್ಗೆ ಬೆಂಬಲ ನೀಡದೆ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಯುತ್ತಿದೆ.

ಎತ್ತಿನಹೊಳೆ ಯೋಜನೆ ವಿರುದ್ಧ ನಡೆದ ಬಂದ್ಗೆ ಎಲ್ಲಾ ಜಿಲ್ಲೆಗಳಲ್ಲಿ ಬೆಂಬಲ ಸಿಕ್ಕಿಲ್ಲ. ಆದ್ದರಿಂದ, ಕರ್ನಾಟಕ ಬಂದ್ ಬಗ್ಗೆ ಜಿಲ್ಲೆಯಲ್ಲಿ ಒಮ್ಮತ ಮೂಡಿಲ್ಲ. ಆದ್ದರಿಂದ, ಜಿಲ್ಲೆಯ ವಿವಿಧ ಸಂಘಟನೆಗಳು ಬಂದ್ನಿಂದ ದೂರವಿರಲು ನಿರ್ಧರಿಸಿವೆ.

ಕರ್ನಾಟಕ ಸರ್ಕಾರ ಎತ್ತಿನಹೊಳೆ ಯೋಜನೆಯಲ್ಲಿ ತೋರಿಸಿರುವ ಎಡಬಿಡಂಗಿ ನೀತಿಯನ್ನು ಖಂಡಿಸಿರುವ ಜಿಲ್ಲೆಯ ಸಂಘಟನೆಗಳು ಹಾಗೂ ಎತ್ತಿನಹೊಳೆ ವಿರೋಧಿ ಹೋರಾಟಗಾರರು ಕಾವೇರಿ ನದಿ ವಿಚಾರದಲ್ಲಿ ಮೂಗು ತೂರಿಸದಿರಲು ತೀರ್ಮಾನಿಸಿದ್ದಾರೆ.

ಬಂದ್‍ ಗೆ 1100ಕ್ಕೂ ಸಂಘಟನೆಗಳ ಬೆಂಬಲ : ನಾಳೆ ಸ್ತಬ್ಧವಾಗಲಿದೆ ಕರ್ನಾಟಕ:

ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ನಾಳೆ ನಡೆಯಲಿರುವ ಬಂದ್‍ಗೆ ಕನ್ನಡ ಚಲನಚಿತ್ರೋದ್ಯಮ, ಖಾಸಗಿ ಸಾರಿಗೆ ಸಂಸ್ಥೆಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಸಂಘಟನೆಗಳು ವ್ಯಾಪಕ ಬೆಂಬಲ ಘೋಷಿಸಿದ್ದು, ಇಡೀ ರಾಜ್ಯದಲ್ಲಿ ಸಾರ್ವಜನಿಕ ಜೀವನ ಸಂಪೂರ್ಣ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.

ಬಂದ್‍ಗೆ ಬೆಂಬಲ ಸೂಚಿಸಿರುವ ಕನ್ನಡ ಪರ ಮತ್ತಿತರ ಸಂಘಟನೆಗಳ ಸಂಖ್ಯೆ 1100ಕ್ಕೂ ಹೆಚ್ಚಿದೆ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ನಾವು ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕೆಂದು ಮನವಿ ಮಾಡಿದ್ದೇವೆ ಎಂದು ವಾಟಾಳ್ ಹೇಳಿದರು.

ರಾಜ್ಯಸಾರಿಗೆ ನಿಗಮದ ಸಂಘಟನೆಗಳು, ಆಟೋರಿಕ್ಷಾ ಚಾಲಕರು ಮತ್ತು ಟ್ಯಾಕ್ಸಿ ಚಾಲಕರು ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದು, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನಾಳೆ ಕರ್ನಾಟಕ ಬಂದ್ – ಯಾವ ಸೇವೆ ಉಂಟು, ಯಾವುದು ಇಲ್ಲ?  

ಯಾವುದು ಇಲ್ಲ?

  • ಕೆಎಸ್‌ಆರ್ ಟಿಸಿ, ಬಿಎಂಟಿಸಿ ಬಸ್, ತಮಿಳುನಾಡು ಬಸ್ ಗಳ ಸೇವೆ ಇಲ್ಲ. ಹಾಗೂ ಮೆಟ್ರೋ ಸಂಚಾರ ಸ್ಥಗಿತ ಸಾಧ್ಯತೆ.
  • ಲಾರಿಗಳ ಸಂಚಾರವಿಲ್ಲ.
  • ಪೆಟ್ರೋಲ್ ಲಭ್ಯವಿಲ್ಲ, (ನಗರದ 450 ಪೆಟ್ರೋಲ್ ಬಂಕ್ ಸೇರಿ ರಾಜ್ಯದ 3.800 ಪೆಟ್ರೋಲ್ ಬಂಕ್ ಗಳು ನಾಳೆ ಬಂದ್)
  • ಆಟೋ ಟ್ಯಾಕ್ಸಿಗಳ ಸಂಚಾರವಿಲ್ಲ.
  • ಚಿತ್ರಮಂದಿರಗಳು ಹಾಗೂ ಮಾಲ್ ಇರುವುದಿಲ್ಲ.
  • ಎಪಿಎಂಸಿ ಮಾರುಕಟ್ಟೆ, ವಾಣಿಜ್ಯ ಮಾರುಕಟ್ಟೆ ವಹಿವಾಟುಗಳು ಸ್ಥಗಿತಗೊಳ್ಳಲಿದೆ.
  • ಸರ್ಕಾರಿ ಕಚೇರಿಗಳಿರುವುದಿಲ್ಲ.
  • ಬ್ಯಾಂಕ್, ಹೋಟೆಲ್ ಗಳಿರುವುದಿಲ್ಲ.
  • ಕೇಬರ್ ಆಪರೇಟರ್ಸ್ ಗಳ ಸಂಘಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ನಾಳೆ ತಮಿಳು ಚಾನೆಲ್ ಗಳು ರಾಜ್ಯದಲ್ಲಿ ಲಭ್ಯವಿರುವುದಿಲ್ಲ.
  • ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ.
  • ಯಾವೆಲ್ಲಾ ಸೇವೆಗಳು ಲಭ್ಯವಿರುತ್ತದೆ?
  • ಆಸ್ಪತ್ರೆಗಳು
  • ವೈದ್ಯಕೀಯ ಸೇವೆಗಳು
  • ಆಯಂಬುಲೆನ್ಸ್ ಸೇವೆಗಳು
  • ಔಷಧಿಗಳು, ಮೆಡಿಕಲ್ ಶಾಪ್ ಗಳು ತೆರೆದಿರುತ್ತವೆ. ಆದರೆ, ಪ್ರತಿಭಟನೆ ಬೆಂಬಲಿಸಿ ಕಪ್ಪು ಪಟ್ಟಿಯನ್ನು ಧರಿಸಲಿದ್ದಾರೆ.
  • ಎಂದಿನಂತೆ ಹಾಲು ಮತ್ತು ದಿನಪತ್ರಿಗಳು ಲಭ್ಯ
  • ಇನ್ನಿತರೆ ತುರ್ತು ಸೇವೆಗಳು ಲಭ್ಯ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top