fbpx
Kannada Bit News

ಎಲ್ಲಾರಂತಲ್ಲಾ, ವಿಭಿನ್ನ ಈ ಅ“ಸಾಮನ್ಯ ಕನ್ನಡಿಗ” ಕನ್ನಡದ ಕ್ಯೆಂಕರ್ಯಕ್ಕೆ ನಿಂತ ಯುವಪಡೆ

ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳಿಗೆನೂ ಬರವಿಲ್ಲಾ!! ನವೆಂಬರ್ ಬಂತೆಂದರೆ ಸಾಕು ಮ್ಯೆಕೋಡವಿ ಎದ್ದು ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆದು ಮತ್ತೆ ಮ್ಯೆಮುದುಡಿ ಮಲಗಿದರೆ ಮತ್ತೆ ಕನ್ನಡದ ನೆನಪಾಗುವುದು ಮುಂದಿನ ನವಂಬರ್‍ನಲ್ಲೆ!! ಆದರೆ ಇವುಗಳಿಂದ ಬಿನ್ನವಾದ ಕನ್ನಡಪರ ಸಂಘಟನೆಯೊಂದು ಸದ್ದಿಲ್ಲದೆ ಕನ್ನಡ ಉಳಿಸಿ ಬೆಳೆಸುವ ಹೋರಾಟದಲ್ಲಿ ತನ್ನನ್ನು ತೊಡಗಿಸಿ ಕೊಂಡಿದೆ, ಭಾಷೆಯ ಮೂಲಕ ಮನ್ನುಷ್ಯರನ್ನು ಬೆಸೆಯಬಹುದೆಂಬ ತತ್ವದಡಿ ಹುಟ್ಟಿಕೊಂಡ ಸಂಘಟನೆಯೆ “ಸಾಮಾನ್ಯ ಕನ್ನಡಿಗ(ರಿ)” ತಂಡ, ಕರ್ನಾಟಕದಲ್ಲೆ ತನ್ನನೆಲೆಯನ್ನು ಕಳೆದುಕೊಳ್ಳುತ್ತಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸ ಬೇಕೆಂಬ ಉದ್ದೇಶದಿಂದ ಹುಟ್ಟಿದ್ದು ಈ ಸಾಮಾನ್ಯ ಕನ್ನಡಿಗ ತಂಡ, ಇದು ಸಂದೀಪ್ ಪಾಶ್ರ್ವನಾಥ್ ಅವರ ಕನಸಿನ ಕೂಸು.

12507428_1652978588290296_6119749384507797747_n

ವೃತ್ತಿಯಲ್ಲಿ ಮಾಹಿತಿ ತಂತ್ರಜ್ನಾರಾಗಿರುವ ಸಂದೀಪ್ ಒಮ್ಮೆ ಬಿಗ್‍ಬಜಾರ್‍ಗೆ ಹೋಗಿದ್ದಾಗ ಬಜಾರ್‍ಲ್ಲಿ ಬರಿ ಹಿಂದಿ ಹಾಡುಗಳು ಗುನುಗುನಿಸುತ್ತಿತ್ತು, ಕನ್ನಡ ಹಾಡನ್ನು ಹಾಕಿ ಏಂದು ಹೇಳಿದಾಗ ಅವರಿಂದ ಬಂದ ಪ್ರಶ್ನೆ ನೀವುಯಾವ ಕನ್ನಡಪರ ಸಂಘಟನೆಯವರು? “ನಾನೊಬ್ಬ ಸಾಮಾನ್ಯ ಕನ್ನಡಿಗ’ ಕನ್ನಡನಾಡಲ್ಲಿ ಕನ್ನಡಕ್ಕೆ ಮೊದಲ ಪ್ರಾಧಾನ್ಯತೆ ಏಂದುಹೇಳಿದಾಗ ಅಲ್ಲಿದ್ದ ಕೆಲ ಕನ್ನಡಿಗರು ಇವರ ಜೊತೆ ಧ್ವನಿಗೂಡಿಸಿದರು, ಆಗ ಬಳಸಿದ ‘ಸಾಮಾನ್ಯ ಕನ್ನಡಿಗ” ಪದದ ಶಿರ್ಷೀಕೆಯಡಿಯಲ್ಲೇ ಕನ್ನಡದ ಏಳಿಗೆಗಾಗಿ ಏನಾದರೂ ಮಾಡಬೇಕೆಂದು ಯೋಚಿಸಿದಾಗ ಹುಟ್ಟಿಕೊಂಡದ್ದೆ ಈ ” ಸಾಮಾನ್ಯ ಕನ್ನಡಿಗ’ ತಂಡ. ಎಂಟು ಯುವಜನರ ನಾಯಕತ್ವದಲ್ಲಿ ಮುನ್ನೆಡೆಯುತ್ತಿರುವ 2012 ರಲ್ಲಿ ಅಸ್ತಿತ್ವಕ್ಕೆ ಬಂದ ಈ ತಂಡಕ್ಕೆ ಈಗ ಪ್ರಪಂಚದಾದ್ಯಂತ ಸುಮಾರು ಹತ್ತು ಸಾವಿರ ಸದಸ್ಯರಿದ್ದಾರೆ. ಏಕೆ ಇಂಥಹ ಕನ್ನಡ ಪರ ಸಂಘಟನೆಗಳು ಇವತ್ತು ಜಾಸ್ತಿಯಾಗುತ್ತಿದೆ ಏಂದು ಹುಡುಕುತ್ತಾ ಹೋದರೆ ಸಿಗುವ ಉತ್ತರ ” ಕನ್ನಡ ನೆಲದಲ್ಲಿ ಕನ್ನಡ ಭಾಷೆ, ಕನ್ನಡಿಗ ತನ್ನ ಅಸ್ತಿತ್ವ ವನ್ನು ಕಳೆದುಕೊಳ್ಳುತ್ತಿರುವ ಇಂಥಹ ಹೊತ್ತಿನಲ್ಲಿ ಕನ್ನಡದ ಪರ ಕನ್ನಡಿಗರ ಹಕ್ಕುಗಳ ಪರ ಹೋರಾಡಲು ಇಂಥಹ ಸಂಘಟೆನಗಳ ಅಗತ್ಯತೆ ಇದೆ ಎಂದುಅನ್ನಿಸದೆ ಇರದು.

12002756_1620069684914520_550721066153897334_n

2500 ವರ್ಷಗಳ ಇತಿಹಾಸವಿರುವ ಕನ್ನಡವನ್ನು ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದ್ದು ಕನ್ನಡಭಾಷೆಯನ್ನು ಮೆಲೆತ್ತುವ ಉದ್ದೇಶದಿಂದ ಸ್ಥಾಪಿತವಾದ ಈ ಸಂಘಟನೆಯಲ್ಲಿ ಹೆಚ್ಚಾಗಿ ವೃತ್ತಿಪರ ಯುವಕರೆ ಇದ್ದು ವೃತ್ತಿಪರ ಕನ್ನಡಿಗರ ಯುವ ಸಂಘಟನೆಯಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಪರಭಾಷೆಯ ವಲಸಿಗರು ಬಂದು ನೆಲೆಸುತ್ತಿದ್ದು ಕನ್ನಡ ಅಲ್ಪಸಂಖ್ಯಾತ ಭಾಷೆಯಾಗುತ್ತಿದೆ, ಇಲ್ಲಿ ಬಂದು ನೆಲೆಸುವ ಪರಭಾಷಿಕರು ಇಲ್ಲಿನ ಸೌಲಭ್ಯವನ್ನು ಬಳಸಿಕೊಳ್ಳುತ್ತಾರೆ, ಇಲ್ಲೇ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ ಅದರೆ ಇಲ್ಲಿನ ಭಾಷೆ, ನೆಲ ಜನರ ಬಗ್ಗೆ ಅಗಾಗ ಸಾಮಾಜಿಕ ತಾಣಗಳಲ್ಲಿ ಮಾತನಾಡುವುದು ಮನಸ್ಸಿಗೆ ನೋವುಂಟುಮಾಡುತ್ತದೆ ಏಂದು ಸಂಘಟನೆಯ ಕಾರ್ಯದರ್ಶಿ ವಿವೇಕ್ ಹೇಳುತ್ತಾರೆ. ಇಲ್ಲೇ ಇದ್ದರೂ ಕನ್ನಡವನ್ನು ಕಲಿಯುವ ಪ್ರಯತ್ನವನ್ನು ಮಾಡುವುದಿಲ್ಲಾ! ಪರಭಾಷಿಕರು ಕನ್ನಡ ಕಲಿತು ಕಥೆಕಾದಂಬರಿ ಬರೆಯುವುದು ಬೇಡ, ತಮಗೆ ಬದುಕು ಕಟ್ಟಿಕೊಟ್ಟ ನೆಲದ ಬಗ್ಗೆ ಸ್ವಲ್ಪವಾದರೂ ಗೌರವ ಬೇಡವೇ? ಎಂಬುದು “ಸಕಾ” ಪ್ರಶ್ನೆ?

ಸಾಮಾನ್ಯ ಕನ್ನಡಿಗ ತಂಡದ ಕೆಲಸ

ಸಾಮಾನ್ಯ ಕನ್ನಡಿಗ ತಂಡದ ಕೆಲಸ

ಪ್ರತಿ ವರ್ಷ ಕನ್ನಡರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಈ ತಂಡ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ, ಉಚಿತ ವ್ಯೆದ್ಯಕೀಯ ತಪಾಸಣೆ ರಕ್ತದಾನ ಶಿಬಿರಗಳನ್ನಲ್ಲದೆ ಕಳೆದ ಬಾರಿಯ ರಾಜ್ಯೋತ್ಸವದೊಂದು ಮಾಗಡಿಯವರೆಗೂ ಬಂಡಿಕೂಟವನ್ನು ನೆಡೆಸಿ ನಾಡಪ್ರಭು ಕೆಂಪೆಗೌಡರ “ಸಮಾಧಿಸ್ಥಳ”ವನ್ನು ಶೋಧಿಸಿದ ಕೀರ್ತಿ “ಸಕಾ”ಗೆ ಸೇರುತ್ತದೆ. ಮಾಹಿತಿ ತಂತ್ರಜ್ನಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಯುವಕರು ಈ ತಂಡದಲ್ಲಿದ್ದು ಅನೇಕ ಕನ್ನಡ ಪರ ಸಮಸ್ಯೆಗಳಿಗೆ ಮಿಂಚಂಚೆ ಮೂಲಕವೆ ಪರಿಹಾರ ಕಂಡುಕೊಂದಿದ್ದಾರೆ.ಎಟಿಎಮ್ ಗಳಲ್ಲಿ ಮೊದಲು ಬರಿ ಹಿಂದಿ ಇಂಗ್ಲೀಷ್‍ನಲ್ಲಿ ಮಾತ್ರ ಅಯ್ಕೆಗಳಿರುತ್ತಿತ್ತು, ಇದನ್ನು ಗಮನಿಸಿದ ತಂಡ ಏಲ್ಲಾ ಬ್ಯಾಂಕಗಳಿಗೂ ಮಿಂಚಂಚೆಯನ್ನು ಬರೆದು ಕನ್ನಡದ ಅಯ್ಕೆಗಳನ್ನು ತರುವಲ್ಲಿ ಯಶಸ್ವಿಯಾಯಿತಲ್ಲದೆ ಇಂಗ್ಲೀಷ್ ಬರದವರಿಗೆ ಎಟಿಏಮ್ ಬಳಸಲು ಅನೂಕೂಲವಾಯಿತು.ಬ್ರಿಟಿಷ್ ಏರ್‍ವೇಸನ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ವಿಮಾನ ಸಿಬ್ಬಂಧಿ ಕನ್ನಡದಲ್ಲಿ ಮಾಹಿತಿನೀಡುವಂತೆ ಮಾಡಿದ ಕೀರ್ತಿ “ಸಕಾ”ಗೆ ಸೆರುತ್ತದೆ.ಕಳೆದ ಡಿಸೆಂಬರನಲ್ಲಿ ಮಳೆಯಿಂದ ತತ್ತರಿಸಿದ ಚನ್ನ್ಯೆ ಸಂತ್ರಸ್ಥರಿಗೆ ಮೂರುಲಾರಿಗಳಷ್ಟು ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡುಹೋಗಿ ಕೊಟ್ಟಿದ್ದಲ್ಲದೆ ವ್ಯೆದ್ಯಕೀಯ ತಪಾಸಣೆ ಮಾಡಿಸಿ ಸೊಳ್ಳೆಯಿಂದ ರಕ್ಷಿಸಿಕೊಳ್ಳಲು “ಜ್ಯೆವಿಕ ಸೊಳ್ಳೆ ರಕ್ಷಕ” ಸ್ಪ್ರೇಗಳನ್ನು ಹಂಚಿದ್ದಾರೆ. ಕನ್ನಡಕಲಿಯಲು ಆಸಕ್ತಿಯಿರುವ ಅನ್ಯಭಾಷಿಕರಿಗೆ ಕನ್ನಡಕಲಿಸುವ ತರಗತಿಗಳನ್ನು ತಿಂಗಳಿಗೆ ಐವತ್ತು ರೂಪಾಯಿ ಶುಲ್ಕ ವಿಧಿಸಿ ಕನ್ನಡ ಕಲಿಕಾ ಕೇಂದ್ರವನ್ನು ಬಸವನಗುಡಿಯ ಕಛೇರಿಯಲ್ಲಿ ಪ್ರಾರಂಭಿಸಲಾಗಿದೆ. ಕರ್ನಾಟಕದಲ್ಲಿ ನೆಲೆ ಕಂಡುಕೊಂಡ ಹಲವು ಆಹಾರೋತ್ಪನ್ನ ಕಂಪೆನಿಗಳು ತಾವು ತಯಾರಿಸುವ ಆಹಾರದ ಉತ್ಪನ್ನಗಳ ಮೇಲೆ ಕನ್ನಡವನ್ನು ಬಿಟ್ಟು ಉಳಿದೆಲ್ಲಾ ದಕ್ಷಿಣಭಾರತೀಯ ಭಾಷೇಯಲ್ಲಿ ಉತ್ಪನ್ನದ ಹೆಸರನ್ನು ಹಾಕುವುದನ್ನು ವಿರೋಧಿಸಿದ “ಸಕ’ ಸದಸ್ಯರು ಮಿಂಚಂಚೆ ಬರೆಯುವ ಮೂಲಕವೆ ಬಿಸಿಮುಟ್ಟಿಸಿದ್ದು ಕಂಪೆನಿಯವರು ಕನ್ನಡದಲ್ಲಿ ಹಾಕುವುದಾಗಿ ಭರವಸೆ ಕೊಟ್ಟಿದ್ದಾರೆ. ಪರಿಣಾಮಕಾರಿಯಾದ ಮಿಂಚಂಚೆಯನ್ನು ಬರೆಯುವುದರಲ್ಲಿ ತಂಡದ ಸದಸ್ಯ ಪವನ್ ರದ್ದು ಎತ್ತಿದ ಕ್ಯೆ!

ಕಾವೇರಿ ಹೋರಾಟದಲ್ಲಿ "ಸಾಕ" ಸದಸ್ಯರು

ಕಾವೇರಿ ಹೋರಾಟದಲ್ಲಿ “ಸಾಕ” ಸದಸ್ಯರು

ಸಮಾನ್ಯ ಕನ್ನಡಿಗ ಸದಸ್ಯ ಬ್ರಿಟಿಷ್ ಏರ್ ವೇಸನಲ್ಲಿ ಕೆಲಸ ಮಾಡುತ್ತಿರುವ ದೀಪಕ್ ದೇವಯ್ಯ ಕಳೆದ ನವಂಬರ್ ಓಂದರಂದು ಯುಕೆ(UK)ಯಿಂದ ಬೆಂಗಳೂರಿಗೆ ಬರುತ್ತಿದ್ದ ಬ್ರಿಟಿಷ್ ಏರ್ ವೇಸನಲ್ಲಿ ಪ್ರಾಯಾಣಿಸುತ್ತಿದ್ದ ಕನ್ನಡಿಗರಿಗೆ ಕನ್ನಡದಲ್ಲಿ ರಾಜ್ಯೋತ್ಸವ ಶುಭಾಶಯವನ್ನು ಶುಭಕೋರಿದ್ದು ವಿಶೇಷ.

ಅನಗತ್ಯವಾಗಿ ಕೇಂದ್ರ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಬಿಂಬಿಸುತ್ತಿದೆ,ಇತ್ತಿಚೆಗೆ ಮೆಲ್ಚರ್ಜೆಗೇರಿದ ಬೆಂಗಳೂರು ಮ್ಯೆಸೂರು ಹೆದ್ದಾರಿಯಲ್ಲಿ ಮ್ಯೆಲಿಗಲ್ಲುಗಳಲ್ಲಿ ಹಿಂದಿಬಳಕೆಯನ್ನು ವಿರೋಧಿಸಿದ “ಸಕಾ” ತಂಡ ಹಾಗೂ ಅದರ ಸದಸ್ಯ ಶರತ್ ಕನಸುಗಾರ ನೇತ್ರತ್ವದಲ್ಲಿ ಹಿಂದಿಯನ್ನು ಅಳಿಸಿ ಹೆಸರನ್ನು ಕನ್ನಡಿಕರಣಗೊಳಿಸಿದೆ, ಬೇರೆ ರಾಜ್ಯಗಳಲ್ಲಿ ಅಲ್ಲಿನ ರಾಜ್ಯಭಾಷೆಗೆ ಪ್ರಾದಾನ್ಯತೆ ಇದ್ದು ನಮ್ಮ ಕರ್ನಾಟಕದಲ್ಲಿ ಮಾತ್ರ ಸರ್ಕಾರ ಹಿಂದಿಗೆ ಮುಕ್ತಸ್ವಾಗತ ಕೋರುತ್ತಿದೆ, ಕರ್ನಾಟಕ ಸರ್ಕಾರದ ಅನೇಕ ಇಲಾಖೆಗಳಲ್ಲೆ ಕನ್ನಡ ನಿರ್ಲಕ್ಷ್ಯಕೊಳಗಾಗಿದೆ, ಉದಾಹರಣೆಗೆ ರಾಜ್ಯ ಸಾರಿಗೆ ಇಲಾಖೆಯ ಬಸ್‍ಗಳನ್ನೆ ತೆಗೆದುಕೊಳ್ಳಿ, ಹೊರರಾಜ್ಯಕ್ಕೆ ಹೊಗುವ ಸುಪರ್ ಡಿಲಕ್ಸ್ ಮತ್ತು ಐರಾವತ ಬಸ್‍ಗಳಲ್ಲಿಆ ಬಸ್ ಯಾವ ರಾಜ್ಯಕ್ಕೆ ಹೊಗುತ್ತದೋ ಅ ರಾಜ್ಯದ ಭಾಷೆಯ ಚಲನಚಿತ್ರದ ವೀಡಿಯೊ ಹಾಕುತ್ತಾರೆ,ಚೆನ್ನ್ಯೆಗೆ ಹೋಗುವ ಬಸ್ನಲ್ಲಿ ತಮಿಳು, ಹ್ಯೆದ್ರಾಬಾದ್‍ಗೆ ಹೋಗುವ ಬಸ್ಸಲ್ಲಿ ತೆಲುಗು, ಮುಂಬಾಯಿಗೆ ಹೊಗುವ ಬಸ್ಸಲ್ಲಿ ಹಿಂದಿ, ಮರಾಠೀ,ಇದರ ಬಗ್ಗೆ ಹಲವು ಬಾರಿ ದೂರು ಕೊಟ್ಟರು ಯಾವುದೆ ರೀತಿಯ ಕ್ರಮ ಕ್ಯೆಗೊಂಡಿಲ್ಲಾ! ಇಷ್ಟೇ ಅಲ್ಲಾ ಪರರಾಜ್ಯಗಳಿಗೆ ಹೋಗುವ ಬಸ್‍ಗಳಲ್ಲಿ ಆ ರಾಜ್ಯದ ಭಾಷೇಯಲ್ಲೆ ಸ್ಥಳದ ಹೆಸರುಗಳನ್ನು ಬರೆಯುವುದು ರಾಜ್ಯಸಾರಿಗೆ ಸಂಸ್ಥೆ ಬಸ್‍ನಲ್ಲಿ ಸಾಮಾನ್ಯ,ಯಾಕೆ ಸರ್ಕಾರಕ್ಕೆ ಈ ಪರಭಾಷೆಯ ವ್ಯಾಮೋಹ? ಇಂಥಹ ಸರ್ಕಾರದಿಂದ ಕನ್ನಡಭಾಷೆಯ ಏಳಿಗೆ ಸಾಧ್ಯವೇ ಏಂಬುದು ತಂಡದ ಸದಸ್ಯನಾದ ನನ್ನ ಪ್ರಶ್ನೆ ಕೂಡ!!

ಸಾಮಾನ್ಯ ಕನ್ನಡಿಗ ತಂಡದ ಕೆಲಸ

ಸಾಮಾನ್ಯ ಕನ್ನಡಿಗ ತಂಡದ ಕೆಲಸ

ನೀವೇನಾದರೂ ಫ್ರಾನ್ಸ್ ಗೆ ಹೋದರೆ, ಹೊಗುವ ಮೊದಲು ಪ್ರೆಂಚ್ ಭಾಷೆಯನ್ನು ಕಲಿತುಕೊಂಡೆ ಅಲ್ಲಿ ಕಾಲಿಡಬೇಕು, ಅಲ್ಲಿನ ಹೋಟೆಲ್‍ಗಳಲ್ಲಿ ಮೆನುವಿನಲ್ಲಿ ಏಲ್ಲಾ ಪ್ರೆಂಚ್ ಮಯ, ಇಲ್ಲೂ ಯಾಕೆ ಅಂತಹ ಕಾನೂನು ತರಬಾರದು? ಬೆಂಗಳೂರಿನ ಹೋಟೆಲ್‍ಗಳಲ್ಲಿ ಮೆನು ಕನ್ನಡದಲ್ಲಿ ಇರಬೇಕೆಂದು ಬಿಬಿಏಂಪಿ ಆದೇಶವಿದೆ, ಅದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದೆ ಎಂದು ಬಿಬಿಏಂಪಿ ಪರಿಶಿಲಿಸಿದೇಯಾ? ಎಂದು ಸಂಘದ ಅಧ್ಯಕ್ಷ ಸಂದೀಪ್ ಕೇಳುತ್ತಾರೆ.

samanya-kannadiga-group3-2

ಕನ್ನಡ ನೆಲದಲ್ಲಿ ಬದುಕು ಕಟ್ಟಿಕೊಂಡು ಕನ್ನಡದ ನೆಲ-ಜಲ ಭಾಷೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆಯುವ ಹಲವು ಉತ್ತರಭಾರತೀಯರ ಮೇಲೆ ತಂಡ ಪೋಲಿಸ್ ಇಲಾಖೆಯಲ್ಲಿ ದೂರನ್ನು ಧಾಖಲಿಸಿದ್ದಾರೆ. ತನಿಖೆ ನೆಡೆಯುತ್ತಿದೆ.ತಂಡ ನೆಡೆಸಿದ ಸಮೀಕ್ಷೆಯಿಂದ ಹಲವಾರು ಕನ್ನಡಿಗರು ಸಹ ಬೆಂಗಳೂರಿನಲ್ಲಿ ಹಲವಾರು ಸೇವೆಯನ್ನು ಪಡೆಯಲು ಕನ್ನಡವಲ್ಲದೇ ಬೇರೆ ಭಾಷೆಯ ಬಳಕೆಯೂ ಗೋತ್ತಿರಬೇಕು ಎಂಬ ಮನೋಭಾವದಲ್ಲಿರುವುದು ಉನ್ನತ ಸಂಸ್ಕೃತಿಯನ್ನು ಹೊಂದಿರುವ ಕನ್ನಡಕ್ಕೆ ಕರ್ನಾಟಕ್ಕಕ್ಕೆ ದೊಡ್ಡ ಗಂಡಾಂತರವಾಗಿದೆ, ಸರ್ಕಾರವೂ ಕನ್ನಡ ಭಾಷೆಯನ್ನು ನಿರ್ಲಕ್ಷಿಸುತ್ತಿದ್ದು , ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ ಏಳುವರ್ಷಕಳೆದರೂ ಶಾಸ್ತ್ರೀಯ ಸ್ಥಾನಮಾನಕ್ಕೆ ಕೊಡಬೇಕಾದ ಸವಲತ್ತುಗಳನ್ನು ಕೇಂದ್ರ ಸರ್ಕಾರ ಕೋಡುತ್ತಿಲ್ಲಾ, ಅ ಸವಲತ್ತುಗಳನ್ನು ತರಲು ನಮ್ಮ ರಾಜಕೀಯ ನಾಯಕರಿಗೆ ಇಚ್ಚಾ ಶಕ್ತಿಯೂ ಇಲ್ಲಾ. ರಾಜ್ಯ ಸರ್ಕಾರ ಕನ್ನಡದ ಏಳಿಗೆಗೆ ಕಾರ್ಯರೂಪವನ್ನು ತರದಿದ್ದರೆ ಮುಂದೊಂದು ದಿನ ಕನ್ನಡ ಕರ್ನಾಟಕದಲ್ಲೇ ಅಲ್ಪಸಂಖ್ಯಾತ ಭಾಷೆಯಾಗುವುದರಲ್ಲಿ ಸಂದೇಹವಿಲ್ಲಾ. ಇಂತಹ ಪರಿಸ್ಥಿತಿಬರದೆ ಕನ್ನಡಿಗ ಕನ್ನಡನೆಲದಲ್ಲಿ ಸ್ವಾಭಿಮಾನಿಯಾಗಿ ಬದುಕುವಂತೆ ಮಾಡುವುದೇ ತಂಡದ ಏಕ್ಯೆಕ ಧ್ಯೇಯವಾಗಿದೆ.ತಂಡಕ್ಕೆ ಸೇರಬಯಸುವ ಉತ್ಸಾಹಿ ಯುವಕರು 9035956900 ಸಂಚಾರಿ ದೂರವಾಣಿಯನ್ನು ಸಂಪರ್ಕಿಸಬಹುದು.

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top