fbpx
Karnataka

ಕಾನೂನು ಸಮರದಲ್ಲಿ ಹಿನ್ನಡೆ: ಸುಪ್ರೀಂ

12 ಸಾವಿರ ಕ್ಯೂಸೆಕ್ ನೀರು ಬಿಡಿ: ಸುಪ್ರೀಂ

ನವದೆಹಲಿ: ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಕರ್ನಾಟಕ ಸರ್ಕಾರಕ್ಕೆ ಸೋಮವಾರ ಆದೇಶ ನೀಡಿದೆ. ಅಲ್ಲದೆ ಈ ಆದೇಶ ಮಾರ್ಪಡಿಸುವಂತೆ ಮಾಡಲಾದ ಮನವಿಯನ್ನೂ ತಿರಸ್ಕರಿಸಿದೆ. ಹೀಗಾಗಿ ಕಾವೇರಿ ನೀರಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಕರ್ನಾಟಕ ಸರ್ಕಾರಕ್ಕೆ ಒಂದೇ ದಿನ ಎರಡು ಸಲ ಭಾರಿ ಹಿನ್ನಡೆಯಾಗಿದೆ. ಸೆ. 5ರಂದು 15 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನೀಡಿದ್ದ ಆದೇಶ ಮಾರ್ಪಾಟಿಗೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ, ನ್ಯಾ. ಉದಯ್ ಉಮೇಶ್ ಲಲಿತ್ ದ್ವಿಸದಸ್ಯ ಪೀಠ, ಸೆ. 20ರವರೆಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ. ಹಾಗೂ ನೀರು ಬಿಡುವ ವಿಚಾರಕ್ಕೆ ನಡೆದಿರುವ ಪ್ರತಿಭಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ವಿಚಾರಣೆಯನ್ನು ಸೆ. 20ಕ್ಕೆ ಮುಂದೂಡಿದೆ. ಹೀಗಾಗಿ 3 ಟಿಎಂಸಿ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡಬೇಕಿದೆ.

ನ್ಯಾಯಾಲಯದ ಆದೇಶಕ್ಕೂ ಮುನ್ನ ವಾದ ಮಂಡಿಸಿದ ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್, ಕುಡಿಯಲು ನೀರಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಸೆ. 5ರ ಆದೇಶಕ್ಕೆ ತಡೆ ನೀಡಬೇಕು ಎಂದರು. ಆದರೆ ಕರ್ನಾಟಕ ಏಕಪಕ್ಷೀಯವಾಗಿ ಮನವಿ ಸಲ್ಲಿಸದೆ. ಉಭಯ ರಾಜ್ಯಗಳಿಗೂ ನೀರು ಸಮಾನಾಗಿ ಹಂಚಿಕೆಯಾಗಬೇಕು ಎಂದು ತಮಿಳುನಾಡು ಪರ ವಕೀಲ ಶೇಖರ್ ನಫಡೆ ವಾದ ಮಂಡಿಸಿದರು. ಕರ್ನಾಟಕ ರೈತರ ಸಂಕಷ್ಟದ ಬಗ್ಗೆ ವಕೀಲ ನಾರಿಮನ್ ವಾದಕ್ಕೆ ಮನ್ನಣೆ ನೀಡಿದ ನ್ಯಾ. ದೀಪಕ್ ಮಿಶ್ರಾ, ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಹರಿಸುವ ಆದೇಶ ನೀಡಲು ಮುಂದಾಗುತ್ತಿದ್ದಂತೆ ತಮಿಳುನಾಡು ವಕೀಲರು ಆಕ್ಷೇಪ ಎತ್ತಿದರು. 10 ಸಾವಿರ ಕ್ಯೂಸೆಕ್ ನೀರು ರಾಜ್ಯಕ್ಕೆ ಸಾಲದು. ಬೆಳೆಗೆ ನೀರಿಲ್ಲದೆ ರೈತರಿಗೆ ತೊಂದರೆಯಾಗಿದೆ ಎಂದರು. ಅಂತಿಮವಾಗಿ ತೀರ್ಪು ಬುಡಮೇಲಾಗಿ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ್ಕಕ್ಕೆ ಆದೇಶಿಸಲಾಯಿತು. ಬಾಕ್ಸ್) ಮಾರ್ಪಾಟು ಅರ್ಜಿ ತಿರಸ್ಕøತ ಸೋಮವಾರದ ಆದೇಶ ಮಾರ್ಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನೂ ನ್ಯಾಯಲಯ ತಿರಸ್ಕರಿಸಿದೆ. ಸೆ. 20ರ ಬದಲು ಸೆ. 16ರವರೆಗೆ ಮಾತ್ರ ನೀರು ಹರಿಸುವಂತೆ ಆದೇಶ ಮಾರ್ಪಡಿಸುವಂತೆ ನ್ಯಾಯಮೂರ್ತಿಗಳ ಛೇಂಬರ್ ಹೋಗಿ ಮನವಿ ಮಾಡಲಾಗಿತ್ತು. ಆದರೆ ಕರ್ನಾಟದ ಪರವಾಗಿ ವಕೀಲ ಫಾಲಿ ನಾರಿಮನ್ ಹಾಗೂ ಮೋಹನ್ ಕಾತರಕಿ ಮಾಡಿದ್ದ ಮನವಿಯನ್ನು ನ್ಯಾ. ದೀಪಕ್ ಮಿಶ್ರಾ ತಿರಸ್ಕರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top