fbpx
News

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದ್ದು ಎಲ್ಲಿ!!!

ಮುಖ್ಯಾಂಶ:
೧. ಸರ್ವೋಚ್ಚ ನ್ಯಾಯಾಲಯವು ಕರ್ನಾಟಕ ಸರ್ಕಾರದ ನಿಲುವನ್ನು ಖಂಡಿಸಿದೆ.
೨. ಕರ್ನಾಟಕವು ತನ್ನ ಅರ್ಜಿಯಲ್ಲಿ ನೀರಿನ ಪ್ರಮಾಣದಲ್ಲಿ ಸ್ವಲ್ಪ ಸಡಿಲು ಮಾಡಬೇಕೆಂದು ಕೋರಿತ್ತು.
೩. ಸರ್ವೋಚ್ಚ ನ್ಯಾಯಾಲಯದ ಆದೇಶವು ಸರ್ಕಾರದ ಮತ್ತು ನಾಗರಿಕರ ಪಾಲಿಸಲು ಬದ್ದರಿರಬೇಕು ಎಂದು ಪೀಠವು ಘೋಷಿಸಿತು.

ನಿನ್ನೆಯ ಅರ್ಜಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ಜನತೆಯ ಪ್ರತಿಭಟನೆಯ ತೀವ್ರತೆಯ ಕಾರಣ ಒಡ್ಡಿ ಸರ್ವೋಚ್ಚ ನ್ಯಾಯಾಲಯದ ಸೆಪ್ಟೆಂಬರ್ ೫ ರ ಆದೇಶವನ್ನು ಮಾರ್ಪಾಡು ಮಾಡಬೇಕೆಂಬ ಅರ್ಜಿಯು ಕರ್ನಾಟಕಕ್ಕೆ ಮಾರಕವಾಗಿದೆ. ಕರ್ನಾಟಕ ಸರ್ಕಾರಕಕ್ಕೆ ನ್ಯಾಯಾಲಯವು ಛೀಮಾರಿ ಹಾಕಿದೆ

ಪೀಠದ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಹಾಗು ಯು.ಯು. ಲಲಿತ್ ರವರು ” ನಾಗರೀಕರು ಕಾನೂನನ್ನು ಪರಿಪಾಲನೆ ಮಾಡಬೇಕು, ಒಂದು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಚಾಚೂ ತಪ್ಪದೇ ಪರಿಪಾಲಿಸಬೇಕು, ಅದು ನಾಗರೀಕರ ಮತ್ತು ಸರ್ಕಾರದ ಕರ್ತವ್ಯ. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ, ಜನರ ಪ್ರತಿಭಟನೆಯ ಕಾರಣ ಮುಂದೊಡ್ಡಿ ಆದೇಶದಲ್ಲಿ ತಿದ್ದುಪಡಿ ತನ್ನಿ ಎನ್ನುವುದು ಸರಿಯಲ್ಲ” ಎಂದು ಖಡಾಖಂಡಿತವಾಗಿ ಹೇಳಿದರು.

ಸೆಪ್ಟೆಂಬರ್ ೫ರಂದು ಸುಪ್ರೀಂ ಕೋರ್ಟ್ ೧೫,೦೦೦ ಕ್ಯೂಸೆಕ್ಸ ನೀರು ಬಿಡುವಂತೆ ಹೇಳಿತ್ತು, ನೆನ್ನೆ ಸೆಪ್ಟೆಂಬರ್ ೨೦ರ ತನಕ ೧೨,೦೦೦ ಕ್ಯೂಸೆಕ್ಸ ನೀರು ಬಿಡಿ ಎಂದು ಆದೇಶ ಹೊರಡಿಸಿತು.

ಕರ್ನಾಟಕ ಪರ ವಾದ ಮಾಡಿದ ನಾರಿಮನ್ ರವರು, ನ್ಯಾಯಾಲಯ ಹೊರಡಿಸಿರಿವ ಕನಿಷ್ಠ ನೀರನ್ನು ಬಿಡುವುದು ಕೂಡ ಕಷ್ಟಕರವಾಗಿದೆ ಕರ್ನಾಟಕದಲ್ಲಿ ಬೆಳೆಯುವ ಬೆಳೆಗಳು ತುಂಬಾ ಕಡಿಮೆ ನೀರನ್ನು ತೆಗೆದುಕೊಳ್ಳುತ್ತದೆ ಆದರೆ ತಮಿಳು ನಾಡಿನಲ್ಲಿ ಬೆಳೆಯುವ ಅಕ್ಕಿಗೆ ಇದರ ಎರಡರಷ್ಟು ನೀರು ಬೇಕು. ಕುಡಿಯುವುದಕ್ಕೆ ಕರ್ನಾಟಕದಲ್ಲಿ ನೀರಿಲ್ಲದಿರುವಾಗ ಅಕ್ಕಿ ಬೆಳೆಗೆ ನೀರು ಬಿಡಿ ಎನ್ನುವುದು ಕಷ್ಟ ಎಂದು ಮನವೊರಿಸಲು ಪ್ರಯತ್ನಿಸಿದರೂ, ನ್ಯಾಯಾಲಯವು ಈ ವಾದಕ್ಕೆ ಕಿವಿಯೊಡ್ಡದೇ ಕರ್ನಾಟಕದ ವಿರುದ್ದ ಆದೇಶ ಹೊರಡಿಸಿತು.

ಹಲವು ಕಾನೂನು ತಜ್ಞರ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ಪ್ರಕಾರ ಸರಿಯಿಲ್ಲ, ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಬಿ.ವಿ.ಆಚಾರ್ಯರವರು “ಇದು ಸರ್ವೋಚ್ಚ ನ್ಯಾಯಾಲಯದ ಘನತೆಗೆ ಸರಿಯಿಲ್ಲ ಅವರ ತೀರ್ಪೇ ಕಾನೂನು ಬಾಹಿರವಾಗಿದೆ, ಈ ತೀರ್ಪು ಕೇವಲ ತಪ್ಪಲ್ಲ ಇದು ಒಂದು pervert ತೀರ್ಪು, ಒಕ್ಕೂಟ ವ್ಯವಸ್ಥೆಯಲ್ಲಿ ಇಂಥಹ ನಿಲುವು ಸರಿಯಿಲ್ಲ” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top