fbpx
Karnataka

ಕಾವೇರಿ ಬಂದ್ ನಿಂದ ನಷ್ಟದಲ್ಲಿ ‘ಬೆಂದ’ಕಾಳೂರು!

ಬೆಂಗಳೂರು: ಕಾವೇರಿ ನೀರು ಸಂಬಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿ ಕರ್ನಾಟಕಕ್ಕೆ ಆದ ಅನ್ಯಾಯವನ್ನು ವಿರೋಧಿಸಿ ಬಂದ್ ಪ್ರತಿಭಟನೆಯಿಂದ ಕರುನಾಡಿಗೆ ಸಾರಿರಾರು ಕೋಟಿ ನಷ್ಟ ಸಂಭವಿಸಿದೆ.

ಕಾವೇರಿ ಬಂದ್ ನಿಂದ ಕರುನಾಡಿಗೆ ಸಾವಿರಾರು ಕೋಟಿಯಷ್ಟು ನಷ್ಟ ಸಂಭವಿಸಿದೆ, ಸರ್ಕಾರಿ ಸಂಸ್ಥೆಗಳ ಜೊತೆಗೆ ಖಾಸಗಿ ಕಂಪನೆಗಳಿಗೆ ಭಾರೀ ಆರ್ಥಿಕ ಹೊಡೆತವಾಗಿದೆ. ಹಾಗೂ ಬಂದ್ ನಿಂದ ವಿಪ್ರೋ ಸೇರಿದಂತೆ ದಿಗ್ಗಜ ಐಟಿ ಕಂಪನಿಗಳಿಗೂ ನಷ್ಟವಾಗಿದೆ, ಆನ್ಲೈನ್ ರಿಟೈಲರ್ ಬ್ಯುಸಿನೆಸ್ ಗೂ ತಟ್ಟಿತ್ತು ಬಂದ್ ಎಫೆಕ್ಟ್.

ನಿರಂತರ ಸ್ಟ್ರೈಕ್ ನಿಂದ ಬೆಚ್ಚಿಬಿದ್ದ ಬೆಂಗಳೂರು ಬ್ಯುಸಿನೆಸ್ ಅಸೋಚಾಮ್ ವರದಿಯಲ್ಲಿ ಬಹಿರಂಗವಾಗಿದೆ. ಸರ್ಕಾರಿ ಸಂಸ್ಥೆಗಳ ಜೊತೆಗೆ ಖಾಸಗಿ ಕಂಪನಿಗಳಿಗೆ ಭಾರೀ ಆರ್ಥಿಕ ಹೊಡೆತದಿಂದ ಬರೋಬ್ಬರಿ 20 ರಿಂದ 25 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ನಷ್ಟದ ಸುಳಿಯಲ್ಲಿ ಸಿಲುಕಿದ ಬೆಂಗಳೂರಿನ 500ಕ್ಕೂ ಹೆಚ್ಚು ಕಂಪನಿಗಳು ನಷ್ಟವುಂಟಾಗಿದೆ. ಅದರಜೊತೆಗೆ ವರ್ಕ್ ಫ್ರಮ್ ಹೋಮ್ ನಿಂದಲೂ ಆಗಲಿಲ್ಲ ಬ್ಯುಸಿನೆಸ್ ನಷ್ಟ ಉಂಟಾಗಿದೆ ಎಂದು ಅಸೋಚಾಮ್ ವರದಿಯಲ್ಲಿ ತಿಳಿದುಬಂದಿದೆ.

ಕಾವೇರಿ ಹೋರಾಟಕ್ಕೆ ತತ್ತರಿಸಿದ ಸಿಲಿಕಾನ್ ಸಿಟಿಯಲ್ಲಿ ಕೋಟಿಗಟ್ಟಲೆ ನಷ್ಟ ಉಂಟಾಗಿರುವುದು ತಿಳಿದು ಬಂದಿದೆ. ಇದರಿಂದ ಕರ್ನಾಟಕಕ್ಕೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ನಾರಿಮನ್ ನ್ಯಾಯಾಧಿಶರನ್ನು ಕೂಡ ಬದಲಾವಣೆ ಮಾಡಲಿಲ್ಲ. ತಮಿಳುನಾಡಿಗೆ ನೀರುಹರಿಯುತ್ತಲೇ ಇದೆ. ಜೀಜಹಾನಿ ಕೂಡ ಉಂಟಾಗಿದೆ. ಇದರಿಂದ ಕರ್ನಾಟಕಕ್ಕೆ ನಷ್ಟವೇ ಹೋರೆತು ಯಾವುದೇರೀತಿ ನ್ಯಾಯದೊರಕಿಲ್ಲ.

ಕನ್ನಡಿಗರೇ, ನಾವು ಈ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕಿದೆ.

ಸಂದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಕರ್ನಾಟಕದ ಅವಿಭಾಜ್ಯ ಅಂಗದವರಾದ ನಿಮಗೆ, ನಿಮ್ಮ ಸನಿಹವೇ ಹರಿಯುವ ಕೃಷ್ಣೇ-ಕಾವೇರಿಯ ಮೇಲೆ ಹಕ್ಕು ಅಧಿಕಾರವಿದೆ. ಅದನ್ನು ಚಲಾಯಿಸಲು ಮುಂದಾಗಿ.

ನೇತ್ರಾವತಿಯನ್ನು ದಿಕ್ಕು ತಪ್ಪಿಸಿದರೆ ಕರಾವಳಿಯ ಚಿತ್ರಣ ಬದಲಾಗುತ್ತದೆ. ಹಾಗೆಯೇ, ಕನ್ನಡಿಗರ ಐಕ್ಯತೆ, ಕರ್ನಾಟಕದ ಅಖಂಡತೆ, ಸಹ್ಯಾದ್ರಿಯ ಸಿರಿ ಮತ್ತು ಕರ್ನಾಟಕದ ರಾಜಕೀಯವೇ ದಿಕ್ಕು ತಪ್ಪುವ ಸಾಧ್ಯತೆ ಇದೆ.

ಸರ್ಕಾರವು ಸಮರ್ಪಕವಾಗಿ ಜವಾಬ್ದಾರಿಯುತವಾಗಿ, ಕೃಷ್ಣೆ ಕಾವೇರಿಯನ್ನು ಕಾನೂನಾತ್ಮಕವಾಗಿ ಗೆದ್ದು, ಅದರ ಸಂಬಂಧ ಯೋಜನೆಗಳಿಂದ ಇಂಥಹ ಗೊಂದಲಗಳಿಗೆ ತಿಲಾಂಜಲಿ ಆಡಬಹುದಾಗಿದೆ.

ಕರ್ನಾಟಕ ಜನತೆಯೇ, ಯೋಚಿಸಿ…..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top