fbpx
Karnataka

ಮುಂಗಾರಿನಲ್ಲಿ ಬರ-ಹಿಂಗಾರಿನಲ್ಲಿ ನೀರಿಗೆ ಗರ

ಬೆಂಗಳೂರು: ಕಾವೇರಿ ವಿವಾದ ಅನೀರಿಕ್ಷಿತವಾಗಿ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಮುಂಗಾರು ಮಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರಿಗಾಗಿ ಭೀಕರ ಪರಿಸ್ಥಿತಿ ಎದುರಿಸಬೇಕಾದ ಅನಿವಾರ್ಯತೆ ಒದಗಿದೆ.

ಹವಾಮಾನ ಇಲಾಖೆ ಅನುಸಾರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಒಟ್ಟಾರೆ ಶೇ.30ರಷ್ಟು ಕುಸಿತ ಕಂಡಿದೆ. ಸೆಪ್ಟಂಬರ್ 15ರಿಂದ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಲಿದ್ದು, ಹಿಂಗಾರು ಆರಂಭವಾಗಲಿದೆ. ಆದರೆ, ಮುಂಗಾರಿನಲ್ಲಿ ಸಮರ್ಪಕ ಮಳೆಯಾಗುವ ಲಕ್ಷಣಗಳಿಲ್ಲ. ಕರಾವಳಿ ಭಾಗದಲ್ಲಿಯೇ ಈಗಾಗಲೇ ಶೇ.23ರಷ್ಟು ಮಳೆ ಕೊರತೆ ಕಂದುಬಂದಿದೆ. ಹೀಗಾಗಿ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತಿದ್ದ ಕೆರೆ ಕುಂಟೆಗಳು ಕೂಡಾ ಖಾಲಿಯಾಗಿವೆ. ಹೀಗಾಗಿ ಒಟ್ಟಾರೆಯಾಗಿ ಶೇ.30ರಷ್ಟು ಮಳೆ ಕೊರತೆ ಕಂಡುಬಂದಿದೆ.

ರಾಜ್ಯದಲ್ಲಿ ಹಿಂಗಾರು ಆರಂಭವಾಗುವ ವೇಳೆಗೆ ತಮಿಳುನಾಡಿನಲ್ಲಿ ಮಳೆ ಆರಂಭವಾಗಲಿದೆ. ಇದರ ಪರಿಣಾಮ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಕೋಲಾರ ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವುದನ್ನು ಹೊರತುಪಡಿಸಿದಲ್ಲಿ ಉಳಿದ ಕಡೆ ಮಳೆ ಕೊರತೆ ಎದುರಾಗಲಿದೆ. ಅಲ್ಪ ಪ್ರಮಾಣದ ಮಳೆಯಾದರೂ ಹಳೆ ಮೈಸೂರು ಭಾಗದಲ್ಲಿ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಾವೇರಿ ಕಣಿವೆಯಲ್ಲಿ ಶೇ. 48 ಕೊರತೆ ವಿಶೇಷ ಎಂದರೆ ಕಾವೇರಿ ಕಣಿವೆಯಲ್ಲಿಯೇ ಶೇ. 28ರಷ್ಟು ಮಳೆ ಕೊರತೆ ಇದ್ದರೆ, ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೇ. 48ರಷ್ಟು ನೀರಿನ ಒಳಹರಿವು ಕೊರತೆ ಎದುರಾಗಿದೆ.

ಮುಂಗಾರು ಆರಂಭವಾದಾಗಿನಿಂದ ರಾಜ್ಯದಲ್ಲಿ ಸಮರ್ಪಕವಾಗಿ ಮಳೆ ಆಗಿಲ್ಲ. ಕೃಷಿ ಚಟುವಟಿಕೆಗೆ ಅನುಕೂಲವಾಗುವಷ್ಟು ಮಾತ್ರ ಮಳೆಯಾಗಿದ್ದು, ಕಾವೇರಿ ಕಣಿವೆಯ ಜಲಾಶಯಗಳಿಗೆ ಅಗತ್ಯವಾದಷ್ಟು ನೀರು ಬಂದಿಲ್ಲ. ಕಳೆದ ವರ್ಷ ಕಾವೇರಿ ಕಣಿವೆಯಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದ್ದುದರಿಂದ ನೀರಿನ ಒಳಹರಿವು ಆಶಾದಾಯಕವಾಗಿತ್ತು. ಈ ಬಾರಿ ಮುಖ್ಯವಾಗಿ ಕೇರಳ ರಾಜ್ಯದ ವೈನಾಡಿನಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಗೆ ನೀರು ಹರಿದುಬರದೆ ಕೆ.ಆರ್.ಎಸ್. ಹಾಗೂ ಇನ್ನಿತರೆ ಜಲಾಶಯಗಳು ಅರ್ಧಕ್ಕಿಂತ ಖಾಲಿ ಇರುವಂತಾಗಿದೆ. ಜಲಾಶಯಗಳಲ್ಲಿ ನೀರು ಖಾಲಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಮಾಣ ಕಡಿಮೆಯಾಗತೊಡಗಿದೆ. ಮಹಾರಾಷ್ಟ್ರದಲ್ಲಿ ಮಳೆಯಾಗಿದ್ದರಿಂದ ಆಲಮಟ್ಟಿ ಹಾಗೂ ನಾರಾಯಣಪುರ, ಘಟಪ್ರಭ ಜಲಾಶಯಗಳು ಮಾತ್ರತುಂಬಿದ್ದವು. ಕೊಡಗು ಜಿಲ್ಲೆಯಲ್ಲಿ ಮಳೆಯಾಗಿದ್ದರಿಂದ ಹಾರಂಗಿ ಜಲಾಶಯ ಭರ್ತಿಯಾಗಿತ್ತು. ಇದನ್ನು ಬಿಟ್ಟರೆ ಇತರೆ ಯಾವುದೇ ಜಲಾಶಯ ಭರ್ತಿಯಾಗದೆ ನೀರಿನ ಸಂಗ್ರಹ ಕೊರತೆ ಎದುರಿಸುತ್ತಿವೆ. ಇದನ್ನು ಗಮನಿಸಿದರೆ ಫೆಬ್ರವರಿ ವೇಳೆಗೆ ರಾಜ್ಯದಲ್ಲಿ ಕುಡಿಯುವ ನೀರಿಗೆ ಕೊರತೆ ಎದುರಾಗುವ ಭೀತಿ ಉಂಟಾಗಿದೆ. ತಿಂಗಳಾಂತ್ಯಕ್ಕೆ ತಮಿಳುನಾಡಿನಲ್ಲಿ ಮಳೆ ಕಾವೇರಿ ನೀರಿಗಾಗಿ ಪದೇ ಪದೇ ಕ್ಯಾತೆ ತೆಗೆಯುವ ತಮಿಳುನಾಡಿನಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಮಳೆ ಆರಂಭವಾಗಲಿದೆ. ಹವಾಮಾನ ಇಲಾಖೆ ಪ್ರಕಾರ ತಮಿಳುನಾಡು, ಪಾಂಡಿಚೇರಿ ಭಾಗದಲ್ಲಿ ಸುಮಾರು ಮೂರು ತಿಂಗಳ ಕಾಲ ಮಳೆಯಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top