fbpx
Astrology

ಈ ದಿನ ಬೇರೆಯವರ ಮನೆಯಲ್ಲಿ ಊಟ ಮಾಡಿದರೆ ಮುಂದಿನ ಜನ್ಮದಲ್ಲಿ ಪ್ರಾಣಿಯಾಗುತ್ತಿರ!

ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿಯು ಬಂದಾಗ ಚಂದ್ರಗ್ರಹಣವಾಗುವುದು ಎಂಬ ವೈಜ್ಞಾನಿಕ ಕಾರಣಗಳು ಮತ್ತು ಹಿನ್ನೆಲೆಗಳೂ ಸಾಕಷ್ಟಿವೆ. ಆದರೆ ವಿಜ್ಞಾನ ಹುಟ್ಟುವುದಕ್ಕೇ ಮೊದಲೇ ಅನಾದಿ ಕಾಲದಿಂದಲೂ ಗ್ರಹಣಾಚರಣೆ ಮಾಡಿಕೊಂಡು ಬರಲಾಗುತ್ತಿದೆ ಮತ್ತು ಅದನ್ನು ಹಿರೀಕರು ಬರೆದಿಟ್ಟಿದ್ದಾರೆ ಎಂದರೆ ನಮ್ಮ ಹಿಂದೂ ಧರ್ಮ ಎಷ್ಟು ಶ್ರೇಷ್ಠ ಎಂಬುದು ಗೊತ್ತಾಗುತ್ತದೆ.ಅನೇಕ ಭಾಗದಲ್ಲಿ ಗ್ರಹಣ ಎದುರಾದಾಗ ಅನೇಕ ಆಚರಣೆಗಳು ಶುರುವಾಗುತ್ತವೆ. ತಲತಲಾಂತರಗಳಿಂದ ಈ ಆಚರಣೆಗಳು ಚಾಲ್ತಿಯಲ್ಲಿವೆ.

ಗ್ರಹಣದ ದಿನ ಏನು ಮಾಡಬೇಕು?

ಗ್ರಹಣ ಆರಂಭಕ್ಕೂ ಮುನ್ನ ಒಂದು ಸಾರಿ ಸ್ನಾನ ಮಾಡಬೇಕು, ನಂತರ ಗ್ರಹಣ ಬಿಟ್ಟ ಮೇಲೆ ಇನ್ನೊಂದು ಸಾರಿ ಸ್ನಾನ ಮಾಡಬೇಕು. ಗ್ರಹಣ ಕಾಲದಲ್ಲಿ ಆಹಾರ ಸೇವಿಸುವುದು ನಿಷಿದ್ಧ. ಕೆಲವು ಕಡೆ ಮನೆಯ ಪೀಠದಲ್ಲಿರುವ ದೇವರನ್ನು ನೀರಿನಲ್ಲಿ ಮುಳುಗಿಸಿಡುವ ಸಂಪ್ರದಾಯವೂ ಇದೆ. ಇಲ್ಲಾ ಗ್ರಹಣ ಹಿಡಿದಲ್ಲಿಂದ ಬಿಡುವವರೆಗೆ ದೇವರಿಗೆ ನಿರಂತರ ಅಭಿಷೇಕ ಪೂಜೆ ಮಾಡಲಾಗಿತ್ತದೆ.

ಪ್ರತಿಯೊಂದು ಅನ್ನದ ಅಗಳಿನ ಮೇಲೆ ತಿನ್ನುವವನ ಹೆಸರಿರುತ್ತಂತೆ. ಎನ್ನುವ ಗಾದೆ ನೀವು ಕೇಳಿರ್ತಿರಾ ಆದರೆ ಇದರ ಜೊತೆ ಜೊತೆಗೆ ಬೇರೆಯವರ ಅನ್ನ(ಊಟ)ವನ್ನು ಎಲ್ಲ ಸಮಯದಲ್ಲೂ ತಿನ್ನಬಾರದು. ಇದಕ್ಕೆ ಶಾಸ್ತ್ರವಿದೆ. ಸಮಯವಲ್ಲದ ಸಮಯದಲ್ಲಿ, ದಿನಗಳಲ್ಲಿ ಬೇರೆಯವರ ಅನ್ನ ಸೇವನೆ ಮಾಡಿದ್ರೆ ತಿಂಗಳ ಪೂರ್ತಿ ಮಾಡಿದ ಪುಣ್ಯ ನಷ್ಟವಾಗುತ್ತಂತೆ. ಹಾಗೆ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುತ್ತಾನಂತೆ ಎಂದು ಶಾಸ್ತ್ರ ಹೇಳುತ್ತದೆ.

ಶಾಸ್ತ್ರಗಳ ಪ್ರಕಾರ ಇಂದು (ಸೆಪ್ಟೆಂಬರ್ 16) ಈ ವರ್ಷದ ಕೊನೆಯ ಚಂದ್ರಗ್ರಹಣ. ಮರೆತೂ ಈ ದಿನ ಬೇರೆಯವರ ಮನೆಯಲ್ಲಿ ಊಟ ಮಾಡಬೇಡಿ ಹಾಗೇನಾದರು ಈ ದಿನ ಬೇರೆಯವರ ಅನ್ನವನ್ನು ಸೇವಿಸಿದರೆ 12 ವರ್ಷಗಳ ಪುಣ್ಯ ನಷ್ಟವಾಗಲಿದೆ.

ಶಸ್ತ್ರಗಳ ಪ್ರಕಾರ ಯಾವ ಯಾವ ದಿನದಂದು ಬೇರೆಯವರ ಮನೆಯಲ್ಲಿ ಊಟ ಮಾಡಬಾರದು

  • ಅಮಾವಾಸ್ಯೆ ದಿನದಂದು ಬೇರೆಯವರ ಊಟವನ್ನು ಸೇವನೆ ಮಾಡಬಾರದು. ತಿಂಗಳ ಪೂರ್ತಿ ಸಂಪಾದಿಸಿದ ಪುಣ್ಯ ಕಳೆದು ಹೋಗುತ್ತದೆ. ಯಾರ ಊಟವನ್ನು ನೀವು ಸೇವನೆ ಮಾಡಿರುತ್ತೀರೋ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ.
  • ಸಂಕ್ರಾತಿಯ ದಿನದಂದೂ ಬೇರೆಯವರ ಊಟವನ್ನು ಸೇವನೆ ಮಾಡಬಾರದು.
  • ಉತ್ತರಾಯಣ ಅಥವಾ ದಕ್ಷಿಣಾಯಣ ಆರಂಭವಾಗುವ ದಿನ ಕೂಡ ಬೇರೆಯವರ ಅನ್ನ ಸೇವನೆ ಮಾಡಬೇಡಿ.
  • ಮನುಸ್ಮೃತಿಯ ಪ್ರಕಾರ ಯಾವ ವ್ಯಕ್ತಿ ಅತಿ ಆಸೆಗೆ ಬಿದ್ದು ಬೇರೆಯವರ ಮನೆಯಲ್ಲಿ ಊಟ ಮಾಡ್ತಾನೋ ಆ ವ್ಯಕ್ತಿ ಮುಂದಿನ ಜನ್ಮದಲ್ಲಿ ಆ ಮನೆಯ ಊಟ ತಿನ್ನುವ ಪಶುವಾಗಿ ಜನಿಸ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top