fbpx
Karnataka

ಕನ್ನಂಬಾಡಿ ಕಟ್ಟೆ ಎಂದೇ ಹೆಸರಾದ ಕೃಷ್ಣರಾಜ ಸಾಗರ ಇತಿಹಾಸ ಇಲ್ಲಿದೆ ನೋಡಿ

ಕನ್ನಂಬಾಡಿ ಕಟ್ಟೆ ಎಂದೊಡನೆ  ಕೃಷ್ಣರಾಜ ಒಡೆಯರ್ ನೆನಪಾಗುತ್ತಾರೆ. ಅವರು ಆಧುನಿಕ ಮೈಸೂರಿನ ಮಹಾಶಿಲ್ಪಿ ಎಂದೇ ಅವರ ಹೆಸರು ಇತಿಹಾಸದಲ್ಲಿ ದಾಖಲಾಗಿದೆ.

ಮೈಸೂರು ಸೀಮೆಯ ಜನರಿಗೆ ಅವರು ಇಂದಿಗೂ ಪ್ರಾತಃಸ್ಮರಣೀಯರು. ಹಿಂದುಳಿದ ಜನಾಂಗಗಳು, ದಲಿತರು, ಬಡಬಗ್ಗರ ಬಗ್ಗೆ ಅಪಾರ ಕಾಳಜಿ ಇದ್ದ ಅವರ ಬಗ್ಗೆ ಮೈಸೂರು ಪ್ರಾಂತ್ಯದ ಜನರಿಗೆ ಈಗಲೂ ಅಪಾರ ಗೌರವ. ರೈತರ ಪಾಲಿಗೆ ಅವರು ಅನ್ನದಾತ.

ಕನ್ನಂಬಾಡಿ ಕಟ್ಟೆ ಎಂದೇ ಹೆಸರಾದ ಕೃಷ್ಣರಾಜ ಸಾಗರಕ್ಕೆ ಈಗ ನೂರು ವರ್ಷಗಳು ತುಂಬಿವೆ. ಮೈಸೂರು ಭಾಗದ ಗ್ರಾಮೀಣ ಜನರ ನಾಲಿಗೆಯ ಮೇಲೆ ಇಂದಿಗೂ ಕನ್ನಂಬಾಡಿ ಕಟ್ಟೆ ಎಂದೇ ಕರೆಸಿಕೊಳ್ಳುವ ಈ ಜಲಾಶಯದ ಕಾಮಗಾರಿ ಪ್ರಾರಂಭವಾದದ್ದು 1911ರಲ್ಲಿ.

ಕೃಷಿಗಾಗಿ ಹಾಗೂ. ನೀರಿನ ಸದ್ಬಳಕೆಗಾಗಿ ನಾಲ್ವಡಿಯವರ ಆಳ್ವಿಕೆಯಲ್ಲಿ ಅನೇಕ ಕೆರೆ. ಕಟ್ಟೆ. ಕಾಲುವೆಗಳನ್ನು ನಿರ್ಮಿಸಲಾಯಿತು.  ಕನ್ನಂಬಾಡಿ ಕಟ್ಟೆ. ಮಾರೀಕಣವೇ ಅಣೇಕಟ್ಟು. ಅಂಜನಾಪುರ ಜಲಾಶಯ. ಭಿಮನಹಳ್ಳಿ ಜಲಾಶಯ. ಮಾರ್ಕೋನಹಳ್ಳಿ ಜಲಾಶಯ. ಗೋಪಾಲಪುರದ ಜಲಾಶಯ. ನೆಲ್ಲೀಗೆರೆ ಜಲಾಶಯ. ಪ್ರಮುಖವಾದವು.

ಕನ್ನಂಬಾಡಿ ಅಣೇಕಟ್ಟೆಯ ನಿರ್ಮಾಣ ವೆಚ್ಚ ಅಂದಾಜು 2 ಕೋಟಿ73 ಲಕ್ಷ ರೂಪಾಯಿ ಗಳಷ್ಟಿದ್ದು. ಹಣದ ಕೊರತೆ ಎದುರಾದಾಗ. ನಾಲ್ವಡಿಯವರು. ತಮ್ಮ ತಾಯಿಯವರ ಸಲಹೆಯಂತೆ. ತಮ್ಮ ಖಾಸಗೀ ಭಂಡಾರದಿಂದ 4 ಮೂಟೆ ರತ್ನಾಭರಣಗಳನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ. ಅ ಹಣವನ್ನು ಕಟ್ಟೆಯ ನಿರ್ಮಾಣಕ್ಕೆ ಬಳಸಿದ್ದು ಅವರ ನಿಸ್ವಾರ್ಥ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.

ನಂತರ ಎದುರಾದುದು  ಮತ್ತೊಂದು ವಿಘ್ನ ಆಣೆಕಟ್ಟು ಕಟ್ಟಿದರೆ ಎಲ್ಲಿ ತಮಗೆ ನೀರು ಸಿಗುವುದಿಲ್ಲವೋ ಎಂದು ಅಂದು ಮದರಾಸ್ ಪ್ರಾಂತ್ಯ ಅದಕ್ಕೆ ವಿರೋಧ ವ್ಯಕ್ತ ಪಡಿಸಿ ಅಡ್ಡಿ ಮಾಡಿತು. ಮುಕ್ಕಾಲು ಪಾಲು ಕಾವೇರಿ ನದಿ ಹರಿಯುವುದು ಕನ್ನಡ ನಾಡಿನಲ್ಲಿ ನಮಗಿಲ್ಲವೇ ಆದರ ಹಕ್ಕು ಎಂದು ಸರ್ ಎಂ ವಿ ಮಂಡಿಸಿದರು?. ಕೊನೆಗೆ ಭಾರತ ಸರ್ಕಾರ ೮೦ ಅಡಿಗೆ ಅಣೆಕಟ್ಟಲು ಅನುಮತಿ ನೀಡಿತು. ಆದರೆ ಸರ್ ಎಂ ವಿ ೧೩೦ ಅಡಿಗೆ ಆಣೆಕಟ್ಟು ಕಟ್ಟಲು ನೀಲನಕ್ಷೆ ಸಿದ್ದ ಮಾಡಿ ಕಾರ್ಯಾರಂಭ ಮಾಡಿದರು. ಕೊನೆಗೆ ಭಾರತ ಸರಕಾರದ ವಿರುದ್ದ ವಾದ ಮಾಡಿ ಮದರಾಸ್ ಪ್ರಾಂತ್ಯ ಇದರಿಂದ  ನಮಗಿಂತ ಜಾಸ್ತಿಯೇ ನೀರು ಸಿಕ್ಕುತ್ತದೆ ಎಂದು ಹೇಳಿ ಅನುಮತಿ ಪಡೆದು ಮುಂದೆ ಕನ್ನಂಬಾಡಿ  ಆಣೆಕಟ್ಟು ಕಟ್ಟಿದರು.

 

ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ. ವೇದವತಿ ನದಿಗೆ ನಿರ್ಮಿಸಿದ ಅಣೇಕಟ್ಟು- ವಾಣಿವಿಲಾಸ ಸಾಗರ-ಅಂದಿನ ದಿನಗಳಲ್ಲಿ ನಾಡಿನ ಅತಿ ದೊಡ್ಡ ಜಲಾಶಯವಾಗಿತ್ತು. 1898ರಲ್ಲಿ. ಅಂದು ರೀಜೆಂಟ್ ಆಗಿದ್ದ ರಾಜಮಾತೆ ವಾಣಿವಿಲಾಸ ಸನ್ನಿಧಾನ ಅವರು ಪ್ರಾರಂಭಿಸಿದ ಇದರ ನಿರ್ಮಾಣ ಕಾರ್ಯ 1907ರಲ್ಲಿ. ನಾಲ್ವಡಿ ಕೄಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಪೂರ್ಣಗೊಂಡಿತು.

 

ನಾಲ್ವಡಿಯವರ ಆಳ್ವಿಕೆಯಲ್ಲಿ ಲಕ್ಕವಳ್ಳಿ ಬಳಿ ಭದ್ರಾನದಿಯ ಅಣೆಕಟ್ಟೆಯನ್ನು ಪೂರ್ಣಗೊಳಿಸಲಾಯಿತು. 1927 ರಿಂದ 1939 ರವರೆಗೆ ಸುಮಾರು 7.400 ಕೆರೆಗಳ ಜೀರ್ಣೋದ್ಧಾರವಾಯಿತು. ಕೇತೋಹಳ್ಳಿ ಕೆರೆ. ಮರಳವಾಡಿ ಕೆರೆ. ಹೈರಿಗೆ ಕೆರೆ. ತುಂಬಾಡಿ ಕೆರೆ. ದಳವಾಯಿ ಕೆರೆ. ಕಾಮಸಮುದ್ರ ಕೆರೆ… ಮಂತಾದ ಕೆರೆಗಳನ್ನು ಹೊಸದಾಗಿ ನಿರ್ಮಿಸಲಾಯಿತು.  ಕೆರೆಕಟ್ಟೆಗಳ ಮೇಲ್ವಿಚಾರಣೆ ಮತ್ತು ಅಭಿವೃದ್ಧಿಗಾಗಿ 1939ರಲ್ಲಿ .’ನೀರಾವರಿ ಅಭಿವೃದ್ಧಿ ನಿಧಿ’ಯನ್ನು ಸ್ಥಾಪಿಸಲಾಯಿತು.

dam

ಕೆ.ಆರ್.ಎಸ್.ಅಣೆಕಟ್ಟೆಯ ವಿವರ

ವಿಷಯ ವಿವರ
ಅಣೆಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು 1910
ಕಾಮಗಾರಿ ಪ್ರಾರಂಭ 1911
ಕಾಮಗಾರಿ ಪೂರ್ಣಗೊಂಡಿದ್ದು 1932
ಜಲಾನಯನ ಪ್ರದೇಶದ ವಿಸ್ತೀರ್ಣ 14100ಮೈಲಿಗಳು
ಅಣೆಕಟ್ಟೆ ಬಳಿನದಿಯ ಅಗಲ 910ಅಡಿಗಳು
ಅಣೆಕಟ್ಟೆ ಏರಿಯ ಉದ್ದ 8800 ಅಡಿಗಳು
ಅಣೆಕಟ್ಟೆಯ ಪರಮಾವಧಿ ಎತ್ತರ 140 ಅಡಿಗಳು
ಅಣೆಕಟ್ಟೆಯ ತಳಪಾಯದ ಅಗಲ 111 ಅಡಿಗಳು
ಜಲಾಶಯದ ಆಳ 124 ಅಡಿಗಳು.
ಜಲಾಶಯದ ನೀರು ಹರವಿನ ವಿಸ್ತೀರ್ಣ 124 ಅಡಿಗಳು
ಗರಿಷ್ಟ ಮಟ್ಟದಲ್ಲಿ ನೀರು ನಿಲ್ಲುವ ಉದ್ದ 25 ಮೈಲಿಗಳು
ಜಲಾಶಯದ ನೀರುಸಂಗ್ರಹ ಸಾಮರ್ಥೈ 4,83,350ಲಕ್ಷ ಘನ ಅಡಿಗಳು

 

ಕನ್ನಂಬಾಡಿ ಕಟ್ಟೆಗೆ `ಕೃಷ್ಣರಾಜ ಸಾಗರ´ ಎಂಬ ಹೆಸರು ಇಡುವ ಮೂಲಕ ಅವರ ಹೆಸರನ್ನು ಸ್ಮರಿಸಲಾಗಿದೆ. ಆದರೆ  ಕೃಷ್ಣರಾಜ ಒಡೆಯರ್ ಹಾಗೂ ಅಣೆಕಟ್ಟೆ ನಿರ್ಮಾಣಕ್ಕೆ ಶ್ರಮಿಸಿದ ಸರ್.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಕೆ.ಆರ್.ಎಸ್. ಹೃದಯ ಭಾಗಗಳಲ್ಲಿ ಅನಾವರಣಗೊಳಿಸಬೇಕು ಎಂಬ ಜನರ ಬೇಡಿಕೆ ಈಡೇರಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top