fbpx
Kannada Bit News

ಬೆಂಗಳೂರು ಜನರಿಗೆ ಬಾಟಲಿ ನೀರು ಕರುಣಿಸಿ: ಕುಮಾರಸ್ವಾಮಿ

ಬೆಂಗಳೂರು: ಬೆಂಗಳೂರು ಜನಕ್ಕೆ ಸಮರ್ಕವಾಗಿ ಕುಡಿಯುವ ನೀರು  ಪೂರೈಕೆಯಾಗುತಿಲ್ಲ. ಈ ಸಂಬಧವಾಗಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ, ಡಿಸೆಂಬರ್ ನಂತರ ಸರ್ಕಾರ ಜನರಿಗೆ ಬಾಟಲಿ ನೀರಿನ ಭಾಗ್ಯ ಕರುಣಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವಿಧಾವಸೌಧದಲ್ಲಿ  ಬುಧವಾರ ಸಿದ್ಧಿ ಗೋಷ್ಠಿಯಲ್ಲಿ ಮಾತನಾಡಿ, ತಮಿಳುನಾಡಿಗೆ 28 ಟಿಎಂಸಿ ನೀರು ಬಿಡುಗಡೆ ಮಾಡಿದ್ದಾಗಿ ಸುಪ್ರೀಂ ಕೋರ್ಟ್ಗೆ ಉತ್ತರಿಸಿದ್ದಾರೆ. ಆದರೆ ಇಗಾಗಲೇ 42 ಟಿಎಂಸಿ ನೀರು ಬಿಡಲಾಗಿದೆ ಎಂದು ಆಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ, ಇದರಲ್ಲಿ ಯಾವುದು ನಿಜ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

ಸದ್ಯ ಬೆಂಗಳೂರಿನ ಜನಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇರುವ ನೀರನ್ನು ತಮಿಳುನಾಡಿಗೆ ಬಿಟ್ಟ ಮೇಲೆ ಬಾಟಲಿ ನೀರಿನ ಭಾಗ್ಯ ನೀಡುವುದೊಂದೇ ಸದ್ಯದ ದಾರಿ ಎಂದರು. ಕಾವೇರಿ , ಮಾಹದಾಯಿ ಬಗ್ಗೆ ಚರ್ಚೆ ಮಾಡಬೇಕಿದೆ, ಸರ್ಕಾರ ತಕ್ಷಣ ವಿಶೇಷ ಅಧಿವೇಶನ ಕರೆಯಬೇಕು ಎಂದು ಅಗ್ರಹಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top