fbpx
Kannada Bit News

ವಿಷನ್ ಗ್ರೂಪ್ ನಿಂದ ಆರ್. ಕೆ. ಮಿಶ್ರ ಎತ್ತಂಗಡಿ !

ಬೆಂಗಳೂರನ್ನು ಉದ್ದಾರ ಮಾಡಲು ಮುಖ್ಯ ಮಂತ್ರಿಗಳ ಸಿದ್ದರಾಮಯ್ಯ ರವರ ಕನಸಿನ ಕೂಸು ವಿಷನ್ ಗ್ರೂಪ್ ಗೆ ಮೇಜರ್ ಸರ್ಜರಿ ಆಗಿರುವುದು ಖಚಿತಪಟ್ಟಿದೆ.

ಪಾರ್ಟ್ ಟೈಮ್ ಪೊಲಿಟಿಷಿಯನ್, ಫುಲ್ ಟೈಮ್ ಕನ್ಸಲ್ಟೆಂಟ್, ಮಾಧ್ಯಮಗಳ ಪ್ರೀತಿ ಪಾತ್ರನಾದ ಆರ್.ಕೆ.ಮಿಶ್ರ ರವರನ್ನು ಈ ವಿಷನ್ ಗ್ರೂಪ್ ನಿಂದ ಎತ್ತಂಗಡಿ ಮಾಡಲಾಗಿದೆ. ರಾಜ್ಯದ ಬಗ್ಗೆ ಮತ್ತು ಬೆಂಗಳೂರು ನಗರದ ಬಗ್ಗೆ ನಯಾಪೈಸೆ ಗೊತ್ತಿಲ್ಲದ ಮಿಶ್ರ ರವರನ್ನು ವಿಷನ್ ಗ್ರೂಪ್ ನಿಂದ ಮುಖ್ಯ ಮಂತ್ರಿಗಳು ಕೈ ಬಿಟ್ಟಿದ್ದಾರೆ.

ಮಿಶ್ರ ರವರನ್ನು ಸೇರಿಸಿ, ಇನ್ನೂ 6 ಜನ ಕನ್ನಡೇತರರನ್ನು ಮುಖ್ಯ ಮಂತ್ರಿಗಳ ಮಹತ್ವಾಕಾಂಕ್ಷೆಯ ವಿಷನ್ ಗ್ರೂಪ್ ನಿಂದ ‘ಗೇಟ್ ಪಾಸ್’ ನೀಡಿದ್ದಾರೆ. ಈ ಹಿಂದೆ, ಕನ್ನಡ ಪರ ಸಂಘಟೆನಗಳು, ಮತ್ತು ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸಾಮಾನ್ಯ ಕನ್ನಡಿಗ ತಂಡವು ಮಿಶ್ರ ರವರ ಸೇರ್ಪಡೆಯ ಕುರಿತು ನಿರಂತರವಾದ ಅಭಿಯಾನ ಕೈಗೊಂಡು, ಮುಖ್ಯ ಮಂತ್ರಿಗಳ ಮೇಲೆ ಒತ್ತಡ ತಂದಿದದ್ದು ಇಲ್ಲಿ ಸ್ಮರಿಸಬಹುದು.

ನಗರದ ಮೂಲಸೌಕರ್ಯ ಅಭಿವೃದ್ಧಿ, ಟ್ರಾಫಿಕ್ ದಟ್ಟಣೆ, ಮಾಲಿನ್ಯ ನಿಯಂತ್ರಣ ದ ಬಗ್ಗೆ ಧನಾತ್ಮಕ ಸಲಹಕ್ಕಿಗಳನ್ನು ನೀಡಲು ರಚನೆಯಾಗಿರುವ ಈ ವಿಷನ್ ಗ್ರೂಪ್ ನ ಕೆಲ ಪಟ್ಟಭದ್ರರು ಈ ಗ್ರೂಪ್ ನಿಂದ ತಮ್ಮ ಸಂಸ್ಥೆಯ ಹಿತಾಸಕ್ತಿ ಕಾಪಾಡಿಕೊಳ್ಳಲು ಕೆಲಸ ಮಾಡುತ್ತಿರುವ ಗುಮಾನಿ ಕೇಳಿಬಂದಿರುವ ಕಾರಣವೂ ಇದಕ್ಕೆ ಕಾರಣ ಇರಬಹುದೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top