fbpx
Get Inspired

ಉಪೇಂದ್ರ ಕೊಟ್ರು ಸೂಪರ್ ಸುಪ್ರೀಂ ಐಡಿಯಾ…

ಅದು 9 ನಿಮಿಷಗಳ ವಿಡಿಯೋ, ಎಷ್ಟೊಂದು ವೈರಲ್ ಆಯಿತು ಅಂದ್ರೆ ಆತನನ್ನೇ ಕರ್ನಾಟಕದ CM ಮಾಡಿ ಎಂಬ ಕೂಗು ವಿಡಿಯೋ ನೋಡಿದ ಪ್ರಟಿಯೊಬ್ಬ ಕನ್ನಡಿಗನಲ್ಲಿ ಅನ್ನಿಸಿದ್ದು ಸುಳ್ಳಲ್ಲ…!

ಎಲ್ಲರಿಗು ಗೊತ್ತಿರುವ ಹಾಗೆ ಮಾಧ್ಯಮ ಕ್ಷೇತ್ರದ ದಿಗ್ಗಜ ರಂಗನಾಥ್ ಅವರನ್ನು ಮಾತಿನಲ್ಲಿ ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಈ ಆಸಾಮಿ ಅದನ್ನು ಮಾಡಿ ತೋರಿಸಿದ ಎಂದರೆ ನೀವು ನಂಬಲೇ ಬೇಕು… ರಿಯಲ್ ಸಮಸ್ಯೆಗಳನ್ನೇ ಆಧಾರವಾಗಿ ಇಟ್ಟುಕೊಂಡು ತೆರೆಮೇಲೆ ಅದಕ್ಕೆ ರಿಯಲಿಸ್ಟಿಕ್ ಪರಿಹಾರ ನೀಡುವುದರಲ್ಲಿ ಈತ ನಿಸ್ಸೀಮ ಓದುಗರೇ… ಅವರೇ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ…

upendra-photo-gallery1-21

Infact ಉಪೇಂದ್ರ ಕಾವೇರಿ ವಿವಾದದವನ್ನು ವಸ್ತುವಾಗಿಸಿಕೊಂಡು ‘H2O’ ಮಾಡಿದ್ದೂ ನಮ್ಮ ನಿಮ್ಮಲರಿಗೂ ಗೊತ್ತಿರುವ ನಿಜ ಸಂಗತಿ. ಆದರೂ ಏನ್ ಬಂತು ಪ್ರಯೋಜನ? ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ ಕನ್ನಡಿಗರೇ… ಮೊನ್ನೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಪರಿಣಾಮ ಬೆಂಗಳೂರಿನಲ್ಲಿ ಮೊನ್ನೆ (ಸೆಪ್ಟೆಂಬರ್ 12) ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಉಪೇಂದ್ರ, ನಿನ್ನೆ (ಸೆಪ್ಟೆಂಬರ್ 13) ಟಿವಿ ಮಾಧ್ಯಮದ ಜೊತೆ ಮಾತನಾಡುವಾಗ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ತಮ್ಮದೇ ಶೈಲಿಯಲ್ಲಿ ವಾದ ಮಂಡಿಸಿದರು.

ಅಷ್ಟಕ್ಕೂ ಉಪೇಂದ್ರ ರವರ ಪ್ಲಾನ್ ಇಂಪ್ಲಿಮೆಂಟ್ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಎನ್ನುವುದು ಖಂಡಿತ ಸತ್ಯ. ಉಪೇಂದ್ರ ಕೊಟ್ಟಿರುವ ಸೂಪರ್ ಸುಪ್ರೀಂ ಐಡಿಯಾಗೆ ಕನ್ನಡ ಮಾಧ್ಯಮಗಳು ಸಹಕಾರ ನೀಡಿದರೆ, ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ, ನೀರಿಗಾಗಿ ರೈತರು ಬೀದಿಗೆ ಇಳಿಯುವ ಪರಿಸ್ಥಿತಿ ಬರುವುದೇ ಇಲ್ಲ.

ಅವರು ಏನು ಹೇಳಿದರು ತಿಳಿದುಕೊಳ್ಳೋಣ ;

ಮಳೆ ಬಾರದೆ ಇರುವ ಪರಿಸ್ಥಿತಿ ಬರಬಹುದು..!

former

”ಜನಸಂಖ್ಯೆ ಬೆಳೆಯುತ್ತಿದೆ, ಮುಂದಕ್ಕೆ ನೀರಿನ ಸಮಸ್ಯೆ ಇನ್ನೂ ಜಾಸ್ತಿ ಆಗುತ್ತೆ. ಮಳೆ ಬಾರದೆ ಇರುವ ಪರಿಸ್ಥಿತಿ ಬರಬಹುದು. ಆ ಸಮಯದಲ್ಲಿ ಇದೇ ತರಹ ಕಂಡಲ್ಲಿ ಗುಂಡು ಆರ್ಡರ್ ಮಾಡಿ, ಜನರು ಹೋರಾಟ ಮಾಡ್ಕೊಂಡು, ಗಲಾಟೆ ಮಾಡ್ಕೊಂಡು ಇದ್ರೆ ಸಮಸ್ಯೆ ಬಗೆಹರಿಯುವುದಾದರೂ ಹೇಗೆ?” – ಉಪೇಂದ್ರ

ಎಲ್ಲರು ಸೇರಿ ಪಾಸಿಟೀವ್ ಯೋಚನೆ ಮಾಡೋಣ….

download

”ನಾವೆಲ್ಲರೂ ಅದರಲ್ಲೂ ರಾಜಕಾರಣಿಗಳು ಮತ್ತು ಮಾಧ್ಯಮಗಳು ಪಾಸಿಟೀವ್ ಆಗಿ ಯೋಚನೆ ಮಾಡ್ಬೇಕು. ‘ಆಗಲ್ಲ’ ಅಂತ ನೆಗೆಟಿವ್ ಆಗಿ ಯೋಚನೆ ಮಾಡಿದರೆ, ಜನರನ್ನ ಕಾಪಾಡುವವರು ಯಾರು?” – ಉಪೇಂದ್ರ

‘ಸೋ ಕಾಲ್ಡ್’ ಲೀಡರ್ಸ್ ಇಂದ ಆಗ್ತಿದೆ ತಪ್ಪು…!

politics-clipart-40699923-indian-politicians

”ಕಾವೇರಿ ಸಮಸ್ಯೆ ಹಲವಾರು ವರ್ಷಗಳಿಂದಲೂ ಇದೆ. ನಾವು ಕೊರಗುತ್ತಿದ್ದೇವೆ ಅನ್ನೋದು ಕೂಡ ನಿಜ. ಕೋರ್ಟ್, ಕೇಸ್ ಆಗಿದೆ ಸತ್ಯ. ಆದ್ರೆ, ಯಾವ ಲೀಡರ್ ಗಳೂ ಸಹ ಸಮಸ್ಯೆಗೆ ಪರಿಹಾರ ಹುಡುಕುತ್ತಿಲ್ಲ..! ಕಾವೇರಿ ವಿವಾದವನ್ನ ‘ಸೋ ಕಾಲ್ಡ್’ ಲೀಡರ್ಸ್ Complicate ಮಾಡ್ತಿದ್ದಾರೆ ಅನ್ಸುತ್ತೆ. . ನಾನೇ ಒಂದು ಚಿತ್ರ ಕೂಡ ಮಾಡಿದ್ದೀನಿ. ” – ಉಪೇಂದ್ರ

ಲೀಡರ್ ಗಳು ಕಿಲಾಡಿಗಳು…!

followership

”ಕಾವೇರಿ ವಿವಾದ ಒಂಥರಾ ಕಮರ್ಶಿಯಲ್ ಸಿನಿಮಾ ಆಗ್ಬಿಟ್ಟಿದ್ದೆ. ಲೀಡರ್ ಗಳು ಕಿಲಾಡಿಗಳು. ಅದಕ್ಕೆ ಈ ವಿವಾದಕ್ಕೆ ಎಂಡ್ ಕೊಡುತ್ತಿಲ್ಲ. ತೊಂದರೆ ಆಗುತ್ತಿರುವವರಿಗೆ ತೊಂದರೆ ಆಗುತ್ತಲೇ ಇದೆ. ಮೇಲಿರುವವರಿಗೆ ಇದೆಲ್ಲಾ ಎಂಜಾಯ್ಮೆಂಟ್…! ಸೀರಿಯಲ್ ತರಹ ಎಳೆಯುತ್ತಿದ್ದಾರೆ. ಮಜಾ ತೆಗೆದುಕೊಳ್ಳುತ್ತಿದ್ದಾರೆ. ” – ಉಪೇಂದ್ರ

ಇಸ್ರೇಲ್ ದೇಶವನ್ನು ಮಾದರಿಯಾಗಿ ಇಟ್ಟುಕೊಳ್ಳೋಣ..!

cov-carlsbad-23 b3276ad18091000ff67a8d6331938ca6 california-drought-desalination-plant

”ಸುಬ್ರಮಣಿಯನ್ ಸ್ವಾಮಿ ಯವರು ಸಮುದ್ರದ ನೀರನ್ನ Desalination (ಉಪ್ಪಿನಂಶ ತೆಗೆಯುವ ಪ್ರಕ್ರಿಯೆ) ಮಾಡುವ ಬಗ್ಗೆ ಮಾತನಾಡಿರುವ ವಿಡಿಯೋನ ನಾನು ಯೂಟ್ಯೂಬ್ ನಲ್ಲಿ ನೋಡಿದೆ. ಆ ಯೋಜನೆಯನ್ನ ನಾವು ಅನುಷ್ಟಾನಕ್ಕೆ ತಂದರೆ ಖಂಡಿತ ನಮಗೆ ನೀರಿನ ಸಮಸ್ಯೆ ಇರುವುದಿಲ್ಲ, ಇಸ್ರೇಲ್ ದೇಶದಲ್ಲಿ ಅತಿ ಹೆಚ್ಚು ನೀರಿನ ಅಭಾವ ಇತ್ತು ಎಂದು ಕೇಲ್ಪಟ್ಟಿದ್ದೇನೆ, ಇಂದು ತನ್ನ ಪ್ರಜೆಗಳಿಗೆ 24 hours ವಾಟರ್ ನೀಡುತ್ತಿದೆ,” – ಉಪೇಂದ್ರ

ಇಂತ ವಿಚಾರಗಳಲ್ಲಿ ಮೀಡಿಯಾದವರು ಮುಂದೆ ಬರಬೇಕು…

media

”ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಶಾಸಕರನ್ನ ಹಾಗೂ ಸಚಿವರನ್ನ ಕರೆಯಿಸಿ ಅವರಿಗೆ ಈ ಕೆಲಸ (ಸಮುದ್ರದ ನೀರನ್ನ Desalination) ಮಾಡುವಂತೆ ಮನವರಿಕೆ ಮಾಡಿಕೊಡುವ ಕೆಲಸವನ್ನ ಕನ್ನಡ ಮಾಧ್ಯಮಗಳು ಮಾಡಬೇಕು, ಜನರಿಗೆ ಆಪ್ಷನ್ ಇಲ್ಲ. ಅದಕ್ಕೆ ಎಷ್ಟು ಖರ್ಚು ಆಗಲಿದೆ ಎಂಬ ಕುರಿತು ಬಹಿರಂಗ ಚರ್ಚೆ ಮಾಡಿ. ಇದೆಲ್ಲಾ ಮಾಧ್ಯಮಗಳ ಕರ್ತವ್ಯ. ಬೆಳಗ್ಗೆ ಎದ್ದು ಎಲ್ಲರೂ ಟಿವಿ ನೋಡ್ತಾರೆ. ನಿಮ್ಮಿಂದ ನಾವು ಕಲಿಯುತ್ತೇವೆ. ಎಲ್ಲಾ ಲೀಡರ್ ಗಳು ಹೀಗೆಯೇ. ಮಾಧ್ಯಮಗಳು ಇದರ ಬಗ್ಗೆ ಗಮನ ಹರಿಸಬೇಕು. ಎಲ್ಲರನ್ನ ಕರೆಯಿಸಿ, ಪ್ರಾಬ್ಲಂ ಬಗ್ಗೆ ಮಾತನಾಡುವ ಬದಲು ಪರಿಹಾರ ಏನು ಎನ್ನುವುದರ ಬಗ್ಗೆ ಚರ್ಚೆ ಮಾಡಿ. ಸಮುದ್ರದ ನೀರನ್ನ ಬಳಸುವ ಬಗ್ಗೆ ಯೋಜನೆ ಮಾಡಿ. ಸಿನಿಮಾದಲ್ಲಿ ನನಗೆ ಸಾಧ್ಯವಾದಷ್ಟು ನಾನು ಹೇಳ್ತೀನಿ. ಆದರೆ ವಾಸ್ತವವನ್ನ ಮಾಧ್ಯಮಗಳೇ ತಿಳಿಸಬೇಕು” – ಉಪೇಂದ್ರ

ಪ್ರಧಾನಿಗೆ ಪ್ಲಾನ್ ಒಪ್ಪಿಸೋಣ…!

0-34592100-1450848819-indian-pm-narendra-modi-russia-remains-our-principal-partner

” ಪ್ರಧಾನಿ ಬಂದು ಸಮಸ್ಯೆ ಬಗೆಹರಿಸಬೇಕು ಅನ್ನೋದಲ್ಲ. ನಾವೇ ನಮ್ಮ ಪ್ಲಾನ್ ಗಳನ್ನ ಅವರ ಬಳಿ ತೆಗೆದುಕೊಂಡು ಹೋಗ್ಬೇಕು. ಆಗ ಆಗಲ್ಲ ಅಂತ ಅವರು ಹೇಗೆ ಹೇಳ್ತಾರೆ? ನೀರಿನ ಪ್ರಾಬ್ಲಂ ಇದೆ ನಿಜ. ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ನೀರಿನ ಸಮಸ್ಯೆ ಇದೆ, ಅದಕ್ಕಾಗಿ ಈ ಯೋಜನೆ ಮಾಡ್ತಿದ್ದೇವೆ ಅಂತ ಕೇಂದ್ರ ಸರ್ಕಾರಕ್ಕೆ ನಾವೆಲ್ಲಾ ಮನವರಿಕೆ ಮಾಡಿಕೊಡಬೇಕು.” – ಉಪೇಂದ್ರ

ಜನರೇ ದುಡ್ಡು ಕೊಡ್ತಾರೆ ಸ್ವಾಮಿ !

kannada-flag

”ಪ್ರಧಾನಿ ಕೈ ಕೊಟ್ಟರು ಒಳ್ಳೆಯ ಕಾರ್ಯಗಳಿಗೆ ಜನ ಎಂದು ಕೈ ಬಿಟ್ಟಿಲ್ಲ, ದುಡ್ಡು ನಮ್ಮಲ್ಲಿ ಇಲ್ಲ ಅಂದ್ರೆ, ಜನರೇ ಇದಕ್ಕೆ ಖಂಡಿತ ಸಹಾಯ ಮಾಡ್ತಾರೆ, ಸಿಟಿಗಳಲ್ಲಿ ನಾವು ಎಷ್ಟೋ ನೀರನ್ನ ವೇಸ್ಟ್ ಮಾಡ್ತಿದ್ದೀವಿ. ಅದನ್ನೆಲ್ಲಾ ಕಡಿಮೆ ಮಾಡಿ, ಕೆರೆಗಳನ್ನ ಕಟ್ಟುವ ಬಗ್ಗೆ ಕೂಡ ಯೋಜನೆ ಹಾಕಬೇಕು” – ಉಪೇಂದ್ರ

 

video link :

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top