fbpx
News

ಕನ್ನಡ ಬಾವುಟ, ಕನ್ನಡಿಗರ ಸ್ವಾಭಿಮಾನ, ಕನ್ನಡಿಗರ ಕಿಚ್ಚು…

ಕನ್ನಡ ಪರ ಹೋರಾಟಗಳು ಹುಟ್ಟಿದ್ದು ಹೇಗೆ ಅದಕ್ಕೂ ಮುನ್ನ ಸ್ವಲ್ಪ ಇತಿಹಾಸವನ್ನು ತಿಳಿಯೋಣ

participants_of_the_first_kannada_sahitya_parishat_bangalore_1915

ಕರ್ನಾಟಕ ಏಕೀಕರಣ ಹೋರಾಟ

1895 ಕರ್ನಾಟಕದ ಕುಲ ಪುರೋಹಿತ ಎಂದೇ ಕರೆಯಲ್ಪಡುವ ಆಲೂರು ವೆಂಕಟರಾಯರು ಮೊದಲು ಭಾಷಾವಾರು ಪ್ರಾಂತ್ಯಗಳ ಬಗ್ಗೆ ಆಲೋಚನೆ ಮಾಡುತ್ತಾರೆ ಅಂದು ಇಂದಿನ ಕರ್ನಾಟಕದ ಭಾಗಗಳು ಹಂಚಿ ಹೋಗಿರುತ್ತವೆ, ಕೆಲ ಪ್ರಾಂತ್ಯಗಳು ಹೈದರಾಬಾದ್ ನಿಜಾಮರ ಕೈಯಲ್ಲಿ , ಮದ್ರಾಸಿಗರ ಕೈಯಲ್ಲಿ , ಕೊಡಗು ,ಮಂಗಳೂರು ,ದಕ್ಷಿಣ ಕನ್ನಡ ,ಬಳ್ಳಾರಿ ಪ್ರಾಂತ್ಯಗಳು ತಮಿಳರ ಆಡಳಿತದಲ್ಲಿತ್ತು .

  • 1956 ಕರ್ನಾಟಕದ ಏಕೀಕರಣದ ಚಳುವಳಿ ಶಿಪ್ರ ಗತಿಯಲ್ಲಿ ಶುರುವಾಗಿರುತ್ತದೆ .
  • 1954-1955 ರಲ್ಲಿ ಹತ್ತು ಜಿಲ್ಲೆಗಳು ಅಖಂಡ ಕರ್ನಾಟಕದ ಭೂಪಟಕ್ಕೆ ಸೇರ್ಪಡೆ ಗೊಂಡರೆ
  • 1956 ರ ಹೊತ್ತಿಗೆ ಒಟ್ಟು 19 ಜಿಲ್ಲೆಗಳು ಸೇರುತ್ತವೆ .

karnataka_1956_reorg-svg

ಕನ್ನಡ ಪರ ಹೋರಾಟಗಳ ಹುಟ್ಟು

03

ಒಂದು ಕಾಲದಲ್ಲಿ ಬ್ರಿಟಿಷ್ ಸೈನ್ಯದ ತುಕಡಿಗಳಿದ್ದ ಬೆಂಗಳೂರಿನ ಅನೇಕ ಪ್ರಾಂತ್ಯ ಗಳಲ್ಲಿ ಕೂಲಿ ಕೆಲಸ ಮಾಡಲೆಂದು ಬಂದು ನೆಲೆಸಿದ ಹೊರರಾಜ್ಯದ ಜನರು ಅದರಲ್ಲೂ ಮುಖ್ಯವಾಗಿ 90 %ನಷ್ಟು ತಮಿಳರು ಮುಂದೆ ಅದೇ ಬ್ರಿಟಿಷ್ ಸೈನ್ಯದ ತುಕಡಿಗಳಿದ್ದ ಸ್ಥಳಗಳಾದ ಹಲಸೂರು ,ಜೋಗಿಪಾಳ್ಯ ಮುಂತಾದ ಸ್ಥಳಗಳಲ್ಲಿ ಶಾಶ್ವತವಾಗಿ ನೆಲೆಸಲು ಶುರು ಮಾಡುತ್ತಾರೆ .
ಕನ್ನಡ ಚಿತ್ರಗಳು ಬೆಂಗಳೂರಿನಲ್ಲಿ ಎಲ್ಲೂ ತೆರೆಗೆ ಬರುತ್ತಿರರಿಲ್ಲ , ಕನ್ನಡ ನಟ ನಟಿಯರನ್ನು ತೀವ್ರವಾಗಿ ಹೀಯಾಳಿಸುವ ಪ್ರಕ್ರಿಯೆಯು ಶುರುವಾಗಿರುತ್ತದೆ. ದಿನೇ ದಿನೇ ತಮಿಳರು ಸ್ಥಳೀಯರ ಮೇಲೆ ತಮ್ಮ ಪ್ರಾಬಲ್ಯ ತೋರಲು ಶುರು ಮಾಡುತ್ತಾರೆ .
ಈ ವಿಷಯ ಒಂದು ದಿನ ಮೂಲ ಕನ್ನಡಿಗರಿಗೆ ತೊಂದರೆಯಾಗಬಹುದೆಂದು ಮನಗೊಂಡ ಉತ್ಸಾಹಿ ಕನ್ನಡ ಯುವಕರಾದ ಗೋಪಾಲ ಗೌಡರು , ಕೋಣಂದೂರು ಲಿಂಗಪ್ಪನವರು ಬಹಳ ಚಿಂತೆಗೆ ಒಳಗಾದರು . ಕರ್ನಾಟಕದ ಭಾಗವೇ ಆದ ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿಯನ್ನು , ಕನ್ನಡ ಚಿತ್ರಗಳಿಗೆ ಒಂದು ಬೆಲೆ ಬರಬೇಕೆಂದು ಉಪಾಯ ಮಾಡಿ ಕನ್ನಡದ ಪ್ರಮುಖ ಚಿತ್ರರಂಗದವರನ್ನೆಲ್ಲ ಸೇರಿಸಿ ‘ಕನ್ನಡ ಕಲಾವಿದರ ಸಂಘ’ ಮದ್ರಾಸಿನಲ್ಲಿ ಶುರು ಮಾಡುತ್ತಾರೆ ಈ ತಂಡದಲ್ಲಿ ಡಾ ರಾಜಕುಮಾರ್ ರವರು ಇದ್ದದ್ದು ಇನ್ನೊಂದು ವಿಶೇಷ ಹಾಗೂ 1958 ರಲ್ಲಿ ಈ ಚಿತ್ರ ಕಲಾವಿದರ ತಂಡ ‘ರಣಧೀರ ಕಂಠೀರವ’ ಚಿತ್ರ ತಯಾರು ಮಾಡುತ್ತಾರೆ ಆದರೆ ಮತ್ತದೇ ಥಿಯೇಟರ್ ಸಮಸ್ಯೆ ಕನ್ನಡ ಮನಸುಗಳಾದ ಅ.ನ . ಕೃಷ್ಣರಾಯರು ,ಬೀಚಿ, ನಾಡಿಗೇರ್ ಕೃಷ್ಣ ರಾಯರು , ರಾಮ ಮೂರ್ತಿಗಳು ,ಗೋಪಾಲ ಗೌಡರು ಇವರ ಸತತ ಪ್ರಯತ್ನದಿಂದ ಬೆಂಗಳೂರಿನ ಹಿಮಾಲಯ ಹಾಗೂ ಭಾರತ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನೆಗೊಳ್ಳುತ್ತದೆ .
ಹೀಗೆ ನಡೆದ ಹೋರಾಟ ಮುಂದೆ ಅ.ನ . ಕೃಷ್ಣರಾಯರ ನೇತೃತ್ವದಲ್ಲಿ ಯುವಜನ ಸಭಾ ಸಂಘದ ಹುಟ್ಟಿಗೆ ಕಾರಣವಾಗುತ್ತದೆ ಸತತ 3-4 ವರ್ಷಗಳು ಬಹಳ ಕಷ್ಟದಿಂದ ಅ.ನ ಕೃರವರು ಸಂಘಟಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ.

ಕನ್ನಡ ಪರ ಚಳುವಳಿ ಕ್ರಾಂತಿ ಮಾರ್ಗ

members-of-kannada-chaluvali-vatal-paksha-led-by-97400

ಫೋರ್ಟ್ ಹೈಸ್ಕೂಲ್ ಮೈದಾನದಲ್ಲಿ ಬಹಳಷ್ಟು ವರ್ಷಗಳಿಂದ ರಾಮೋತ್ಸವ ನಡೆಯುತ್ತಿರುತ್ತದೆ ಪ್ರತಿ ವರ್ಷ ತಮಿಳು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುತ್ತವೆ ಒಂದಾದರು ಕನ್ನಡ ಕಾರ್ಯಕ್ರಮ ಇರುವುದಿಲ್ಲ, ಇದರಿಂದ ರೋಸಿಹೋದ 50 ಜನರ ಕನ್ನಡಿಗರ ಗುಂಪು 1960 ರಲ್ಲಿ ಇಂದಿನ ಮಿಂಟೋ ಆಸ್ಪತ್ರೆಯಿಂದ ಫೋರ್ಟ್ ಹೈಸ್ಕೂಲ್ ಮೈದಾನದವರೆಗೂ ಕನ್ನಡ ಪರ ಘೋಷಣೆಯನ್ನು ಕೂಗುತ್ತ ಮೆರವಣಿಗೆ ಹೊರಡುತ್ತಾರೆ ಈ ಸಂದರ್ಭದಲ್ಲಿ ಲಾಠಿಚಾರ್ಜ್ ನಡೆಯುತ್ತದೆ ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರಾದ ಬೇನಿ ಈಶ್ವರಪ್ಪನವರು ಒಂದು ತೆಂಗಿನ ಮರದ ಚಪ್ಪರಕ್ಕೆ ಬೆಂಕಿ ಹಚ್ಚಿಯೇ ಬಿಡುತ್ತಾರೆ .ಅಷ್ಟೂ ದಿನ ಶಾಂತಚಿತ್ತದಲ್ಲಿ ನಡೆಯುತ್ತಿದ್ದ ಕನ್ನಡ ಹೋರಾಟಗಳು ಕ್ರಾಂತಿ ರೂಪಕ್ಕೆ ತಿರುಗುತ್ತವೆ ನಾವು ಶಾಂತಿಗೂ ಸಿದ್ದ ಸಮರಕ್ಕೂ ಬದ್ದ ಎಂಬ ಘೋಷ ವಾಕ್ಯಗಳು ಮೊಳಗುತ್ತವೆ.
ಅಲ್ಲಿಯವರೆಗೂ ಎಲ್ಲವು ಇದ್ದು ಕಳೆದು ಕೊಂಡಂತೆ ಇದ್ದ ಸಾಮಾನ್ಯ ಕನ್ನಡಿಗ ಈ ಪ್ರತಿಭಟನಕಾರರ ಮೂಲಕ ತನಗೆ ಆದ ,ಆಗುತ್ತಿರುವ ಅನ್ಯಾಯದ ಅರಿವು ಮೂಡುತ್ತದೆ , ಇದು ಎಲ್ಲೆಡೆ ಕನ್ನಡ ಬೇಕು ಬೇರೆ ರಾಜ್ಯದವರ ದಾಸ್ಯ ಸಾಕು ಎಂಬ ಚಳುವಳಿಗೆ ನಾಂದಿಯಾಗುತ್ತದೆ ಈ ಹೊತ್ತಿಗಾಗಲೇ ಶಾಂತ ಮನೋಭಾವದ ಅ.ನ .ಕೃ ರವರೊಂದಿಗೆ ವಾಟಾಳ್ ರಂತ ಕ್ರಾಂತಿಕಾರಿ ಚಳುವಳಿಗಾರರು ಸೇರಿಕೊಂಡಿದ್ದರು .

ಹುಟ್ಟಿತು ಕನ್ನಡದ ಬಾವುಟ !!

01
ಅಂದಿನ ಕಾಲಕ್ಕೆ ತಮಿಳರು ಕೆಂಪು ಹಾಗೂ ಕಪ್ಪು ಮಿಶ್ರಿತ ಬಾವುಟವನ್ನು ತಮಿಳರ ಸಂಕೇತವಾಗಿ ಬಳಸುತ್ತಿದ್ದರು
ಕನ್ನಡ ಚಳುವಳಿಗಳ ರೂಪುರೇಷೆ ಸಿದ್ದಗೊಳ್ಳುತ್ತಿದ್ದಹಾಗೆ
ವಿಜಯನಗರದ ಸ್ಥಾಪಕರು ಹಕ್ಕಬುಕ್ಕರು ಇವರ ಆಸ್ಥಾನ ಬಾವುಟ ವಾರಾಹಿ ,ನಾಡ ದೇವತೆ ಚಾಮುಂಡೇಶ್ವರಿ ಇರುವ ಹಾಗೆ ಕನ್ನಡ ರಾಜ್ಯಕ್ಕೂ ಇದರ ಅವಶ್ಯಕತೆ ಮನಗೊಂಡು ಒಂದು ಹಳದಿ ಬಣ್ಣದ ಬಾವುಟ ಕರ್ನಾಟಕದ ನಕ್ಷೆ ಮದ್ಯದಲ್ಲಿ ಹಾಗೂ 7 ಭತ್ತದ ತೆನೆಗಳನ್ನು ಒಳಗೊಂಡಿರುತ್ತದೆ ಈ ಭತ್ತದ ತೆನೆಗಳು ಕನ್ನಡಿಗರು ಆಳಿದ ಸಪ್ತ ಸಾಮ್ರಾಜ್ಯದ ಪ್ರತೀಕ .

cauvery-protest-pti

ನಂತರದ ದಿನಗಳಲ್ಲಿ ಬಾವುಟವು ಪೇಪರ್ನದಾದ್ದರಿಂದ ಬರೆಯಲು ಸ್ವಲ್ಪ ಕಷ್ಟವಾಗುತ್ತಿತ್ತು ಇದನ್ನು ಮನಗೊಂಡ ರಾಮಮೂರ್ತಿಗಳು ಇನ್ನೊಂದು ಬಾವುಟವನ್ನು ವಿನ್ಯಾಸಗೊಳಿಸುತ್ತಾರೆ ಅದುವೇ ಕೆಂಪು ಹಾಗೂ ಹಳದಿ ಬಾವುಟ .
ಈ ಬಾವುಟ ಇಂದಿಗೂ ಪ್ರಸ್ತುತ ಕನ್ನಡಿಗರ ಪ್ರೀತಿ ಇದು !!
ಈ ಬಾವುಟ ಕೆಲ ಮಾಧ್ಯಮಗಳು ಚಿತ್ರಿಸುವಹಾಗೆ

16f87540-9658-403c-9039-d78d4f326e88

ಕೇವಲ 10 ರೂ ಒಳಗೆ ಸಿಗುವಂತದಲ್ಲ ,ಇನ್ಶೂರೆನ್ಸ್ ಕವರ್ ಮೊದಲೇ ಅಲ್ಲ , ಪ್ರತಿಭಟನಾಕಾರರ ಆಯುಧವಲ್ಲ ಬದಲಾಗಿ ಕನ್ನಡಿಗರ ಹೆಮ್ಮೆ ಹಾಗೂ ಸ್ವಾಭಿಮಾನದ ಪ್ರತೀಕ .
ಶಾಂತಿ ಹಾಗೂ ಕ್ರಾಂತಿಯ ರೂಪ .
ಕನ್ನಡದ ದೊರೆಗಳು ಕದಂಬರು ಕಟ್ಟಿದ ಭುವನೇಶ್ವರಿ ತಾಯಿ ಕನ್ನಡದ ಅಧಿ ದೇವತೆಯಾಗುತ್ತಾಳೆ.
ಕುವೆಂಪುರವರ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಘೋಷವಾಕ್ಯವಾಗುತ್ತದೆ

ಮ ರಾಮಮೂರ್ತಿಗಳು ಯಾರು ?

book

ಮ ರಾಮಮೂರ್ತಿಗಳು ಕರ್ನಾಟಕ ಕಂಡ ಶ್ರೇಷ್ಠ ಕನ್ನಡ ಪರ ಹೋರಾಟಗಾರರು , ತಮ್ಮ ತಂದೆ ವೀರ ಕೇಸರಿ ಸೀತಾರಾಮ ಶಾಸ್ತ್ರಿ ಗಳು ಪೌರಾಣಿಕ ಕಥೆಗಳನ್ನು ಬರೆಯುತ್ತಿದ್ದರು ಆದ ಕಾರಣ ರಾಮಮೂರ್ತಿಗಳು ಮನೆಯಲ್ಲಿ ಕನ್ನಡ ರಾಜರ ಕಥೆಗಳನ್ನು ಕೇಳಿ ಬೆಳಿದಿದ್ದ್ರು ಇದೆ ಮುಂದೆ ರಾಮಮೂರ್ತಿಗಳ ಕನ್ನಡ ಪರ ಅಪಾರ ಪ್ರೀತಿಗೆ ನಾಂದಿ ಆಯಿತು . ಇದಕ್ಕೆ ಮತ್ತಷ್ಟು ಇಂಬು ಕೊಟ್ಟದ್ದು ಅ.ನ ಕೃಷ್ಣರಾಯರ ಒಡನಾಟ

ಕಾಲಿಗೆ ಚಪ್ಪಲಿ ಹಾಗೂ ಹಾಕಿಕೊಳ್ಳಲು ಬಟ್ಟೆ ಇಲ್ಲದ ಕನ್ನಡ ಹೋರಾಟಗಾರರು !
ಪ್ರತಿಭಟನೆ ಹೊಟ್ಟೆ ತುಂಬಿಸಿತೇ ? ಖಂಡಿತ ಇಲ್ಲ
ರಾಮ ಮೂರ್ತಿಗಳು ತಮ್ಮ ಕೈಲಿದ್ದ ಹಣವನ್ನೆಲ್ಲ ಕೂಡಿಸಿ ಕನಕಪುರ ಬಳಿ ಸ್ವಲ್ಪ ಜಾಗವನ್ನು ಕೊಂಡು ಕೊಂಡು ತೋಟವನ್ನು ಮಾಡುವ ಉದ್ದೇಶ ಹೊಂದಿದ್ದರು ನೀರಾವರಿಗಾಗಿ ಏತದ ಬಾವಿಯನ್ನು ತೊಡಿಸುತ್ತಿದ್ದ ಸಮಯದಲ್ಲಿ ಬಾವಿಯಲ್ಲಿ ನೀರು ಜಿನುಗಿತ್ತು . ಕೆಲಸಗಾರನು ಈ ವಿಷಯವನ್ನು ರಾಮಮೂರ್ತಿಗಳಿಗೆ ಮುಟ್ಟಿಸಿದ್ದನು ಕೂಡಲೇ ವಿಶ್ವೇಶ್ವರ ಪುರದಿಂದ ತಮ್ಮ ಇಬ್ಬರು ಮಕ್ಕಳೊಂದಿಗೆ ಹೊರಟು ಬಂದ ಮೂರ್ತಿಗಳು ನೀರು ಜಿನುಗನ್ನು ನೋಡಲು ಬಾವಿಯಲ್ಲಿ ಇಳಿಯುತ್ತಾರೆ ಮೇಲೆ ಸಡಿಲವಾಗಿದ್ದ ಮಣ್ಣು ಕುಸಿದು ರಾಮ ಮೂರ್ತಿಗಳು ಹಾಗೂ ಅವರ ಇಬ್ಬರು ಗಂಡು ಮಕ್ಕಳು ಹಸುನೀಗುತ್ತಾರೆ .

ಮಾ. ರಾಮಮೂರ್ತಿ ಮಕ್ಕಳು 

02 04

ಹಿಂದೆ ಆಲೂರು ವೆಂಕಟರಾಯರು , ಅ .ನ ಕೃಷ್ಣ ರಾಯರು ,ರಾಮ ಮೂರ್ತಿಗಳು ಇವರ ತಂಡ ನಡೆಸಿದ ಕನ್ನಡ ಚಳುವಳಿಗಳು ತರಾಸು ಹಾಗೂ ವಾಟಾಳ್ ನಾಗರಾಜರಿಂದ ಮುಂದುವರೆದು

5
ಇಂದು ಅನೇಕ ಕನ್ನಡ ಪರ ಸಂಘಟನೆಗಳು ಹುಟ್ಟಿಕೊಂಡಿವೆ ಕನ್ನಡ ಕಟ್ಟುವ ಕೆಲಸದಲ್ಲಿ ಮುಂದುವರಿಯುತ್ತಿವೆ
ಕನ್ನಡಕ್ಕೆ ಜಯವಾಗಲಿ !!.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top