fbpx
News

KPN ಟ್ರಾವೆಲ್ಸ್ ಬಸ್ ಗಳಿಗೆ ಬೆಂಕಿ ತಮಿಳಿಗರ ಕೃತ್ಯ..?

ಕಾವೇರಿ ನೀರಿನ ಹಂಚಿಕೆಯ ಸಂಬಂಧ ಬಂದಿದ್ದ ಸುಪ್ರೀಂ ತೀರ್ಪಿನಿಂದ ಕಳೆದ 13 ಸೆಪ್ಟೆಂಬರ್ ಮಂಗಳವಾರ ಬೆಂಗಳೂರು ಅಕ್ಷರಶಃ ಬೆಂಕಿಯ ಉಂಡೆಯಾಗಿತ್ತು, ಈ ಸಂಧರ್ಭದಲ್ಲಿಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿತ್ತು, ಅದರಲ್ಲೂ ಎಲ್ಲರ ವಿರೋದಕ್ಕೆ ಕಾರಣವಾದದ್ದು ಎಂಆರ್‍ಪಿಎಲ್ ಕಚೇರಿ ಮೇಲೆ ದಾಳಿ ನಡೆದು KPN Travels ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣ. ಈ ಪ್ರಕರಣದಲ್ಲಿ ಅಮಾಯಕ ಕನ್ನಡಿಗರನ್ನು cavery-collageತಪ್ಪಿತಸ್ಥರನ್ನಾಗಿ ನಮ್ಮ NATIONAL MEDIA ಬಿಂಬಿಸಿದ್ದವು, ಆದರೆ ಈಗ ಈ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳು ಮೂಲತಃ ತಮಿಳಿಗರು ಎಂದು ಸಾಬೀತಾಗಿದೆ ಹಾಗು ಎಲ್ಲಾ ಆರೋಪಿಗಳು ತಮಿಳುನಾಡಿನ ತಿರುವಣ್ಣಾಮಲೈಗೆ ಸೇರಿದವರು. ಆರ್ ಸತ್ಯ, ಅರುಲ್, ಎಸ್.ಸೆಲ್ವಾ, ಸ್ಟೆಫನ್ ರಾಜ್ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಅಲ್ಲದೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ರಾಜ್ಯ ಸರ್ಕಾರ ಪ್ರಕರಣವನ್ನು ಸಿ ಓ ಡಿ ತನಿಖೆಗೆ ವರ್ಗಾಯಿಸಿದೆ.

ಪ್ರತೀ ಮಾತಿಗೂ ಕನ್ನಡಿಗರ ಮೇಲೆ ಗೂಬೆ ಕೂರಿಸುತ್ತಿರುವ ನಮ್ಮ ರಾಷ್ಟ್ರೀಯ ಮಾಧ್ಯಮಗಳು ಈಗ ಸಿಕ್ಕಿರುವ ಮಾಹಿತಿಯನ್ನು ಆಧರಿಸಿ ಏನು ಹೇಳುತ್ತವೆ ಅನ್ನುದನ್ನು ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top