fbpx
News

ನೀವು ಗೂಗಲ್ ಸರ್ಚ್ ಮಾಡುವ ಮುನ್ನ ಎಚ್ಚರ ! ರೆಕಾರ್ಡ್ ಆಗುತ್ತೆ ನಿಮ್ಮ ಮಾತು

ತಾಂತ್ರಿಕ ಅಭಿವೃದ್ದಿಯಲ್ಲಿ ಮುಂದುವರಿಯುತ್ತಿರುವ ಲೋಕದಲ್ಲಿ ಇಂಟರ್ನೆಟ್ ಸೇವಾ ಸೌಕರ್ಯವು ಬಹಳಷ್ಟು ಕಾರ್ಯಗಳಿಗೆ ಬಳಕೆಯಾಗುತ್ತಿದ್ದು. ಇದು ಎಷ್ಟ ಉಪಯೋಗವೋ ಅಷ್ಟೇ ಅಪಾಯಕಾರಿಯಾಗಿದೆ. ಈ ಹೊಸ ಹೋಸ ತಂತ್ರಜ್ಞಾನದಿಂದ ವೈಯಕ್ತಿಕ ಜೀವನಕ್ಕೆ ತೋಂದರೆ ತರುತ್ತಿರುವುದು ಕಂಡಿತ ನಿಜ.

ಇಂದಿನ ನಮ್ಮ ಜೀವನದ ಬಹುತೇಕ ಎಲ್ಲ ಆಯಾಮಗಳನ್ನೂ ಅಂತರ್ಜಾಲ, ಅದರಲ್ಲಿಯೂ ಸಾಮಾಜಿಕ ಜಾಲತಾಣಗಳು   ಗೂಗಲ್ ಇದ್ರೆ ಜಗತ್ತೇ ನಮ್ಮ ಕೈಯ್ಯಲ್ಲಿದ್ದಂತೆ. ಆದ್ರೆ ಗೂಗಲ್ ನ ಫ್ರೀ ಥಾಟ್ ಪ್ರಾಜೆಕ್ಟ್ ಮಾತ್ರ ಹ್ಯಾಕರ್ ಗಳು ಹಾಗೂ ಪತ್ತೇದಾರರಿಗೆ ವರದಾನವಿದ್ದಂತೆ. ಯಾಕಂದ್ರೆ ಅದರಲ್ಲಿ ನಮಗೆ ಅರಿವಿಲ್ಲದೆಯೇ ನಮ್ಮ ಮಾತುಗಳೆಲ್ಲ ರೆಕಾರ್ಡ್ ಆಗಿರುತ್ತವೆ.

ಪ್ರತಿ ಸೆಕೆಂಡ್ ಗೆ ಗೂಗಲ್ ಸರ್ಚ್ ಮಾಡುವವರ ಸಂಖ್ಯೆ 40,000. ಅಂದ್ರೆ ಪ್ರತಿ ದಿನ ಗೂಗಲ್ ಸರ್ಚ್ ಮಾಡುವವರ ಸಂಖ್ಯೆ ಅಂದಾಜು 3.5 ಬಿಲಿಯನ್, ವರ್ಷಕ್ಕೆ 1.2 ಟ್ರಿಲಿಯನ್. ಈ ಸರ್ಚ್ ಗಳಿಂದ ಸಿಕ್ಕ ಫಲಿತಾಂಶಗಳನ್ನೆಲ್ಲ ಜಾಹೀರಾತು ಸೆಳೆಯಲು ಮತ್ತು ಇನ್ನಷ್ಟು ಬಳಕೆದಾರ ಸ್ನೇಹಿಯಾಗಿಸಲು ಉಪಯೋಗಿಸಲಾಗುತ್ತದೆ.

ನೀವು ವೆಬ್ ಸರ್ಚ್ ಗೆ ಗೂಗಲ್ ಬಳಸುತ್ತಿದ್ದೀರಾ ಅಂತಾದ್ರೆ, ಗೂಗಲ್ ನಿಮ್ಮ ಮೇಲೆ ನಿಗಾ ಇಟ್ಟಿದೆ ಅಂತಲೇ ಅರ್ಥ.

ನೀವೇನು ನೋಡಿದ್ದೀರಾ, ಏನು ಮಾಡಿದ್ದೀರಾ ಹೀಗೆ ಪ್ರತಿಯೊಂದು ವಿವರವೂ ಗೂಗಲ್ ಬಳಿ ಇರುತ್ತದೆ. ಆದ್ರೆ ಬಳಕೆದಾರರ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಅವರ ವಿರುದ್ಧ ಬಳಸುವುದಿಲ್ಲ ಅನ್ನೋದು ಗೂಗಲ್ ಸಮರ್ಥನೆ. ಗೂಗಲ್ ರೆಕಾರ್ಡಿಂಗ್ ಅನ್ನು ನೀವು ನಿಲ್ಲಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top