fbpx
News

ಸೆಲ್ಫಿ ಕ್ರೇಜ್ ಗೆ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ವಾರಂಗಲ್: ಸೆಲ್ಫಿಯಿಂದ ಜೀವಕ್ಕೆ ಅಪಾಯ ಉಂಟಾದ ಅನೇಕ ಘಟನೆಗಳು ನಡೆದಿವೆ. ವಾರಂಗಲ್ ನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದ್ದು ಸೆಲ್ಫಿ ಕ್ಲಿಕ್ಕಿಸಲು ಹೋಗಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು  ಮೃತಪಟ್ಟಿದ್ದಾನೆ.

ವಾರಂಗಲ್ ನ ವಾಗ್ದೇವಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಸಮೀಪದ ಧರ್ಮ ಸಾಗರ ಡ್ಯಾಂ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ,

ಹೀಗೆ ಸೆಲ್ಫಿ ತೆದುಕೊಳ್ಳುವ ಸಂದರ್ಭದಲ್ಲಿ ಆಯತಪ್ಪಿ ನೀರಿಗೆ ಬಿದ್ದು, 5 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ವಾರಂಗಲ್ ಸಮೀಪ ನಡೆದಿದೆ. ವಾರಂಗಲ್ ನ ವಾಗ್ದೇವಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಸಮೀಪದ ಧರ್ಮ ಸಾಗರ ಡ್ಯಾಂ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ, ಈ ದುರ್ಘಟನೆ ಸಂಭವಿಸಿದೆ. ಶ್ರಾವ್ಯ ರೆಡ್ಡಿ, ರಮ್ಯಾ, ಶಿವಸಾಯಿ, ಸಾಯಿಕೃಷ್ಣ, ವಿನುತಾ, ಸಾಗರ್ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಆಗ ರಮ್ಯಾ ಹೊರತುಪಡಿಸಿ ಉಳಿದವರು ನೀರಿಗೆ ಬಿದ್ದಿದ್ದಾರೆ.

ಜೊತೆಗಿದ್ದ ಗೆಳೆಯರು ನೀರಿಗೆ ಬೀಳುತ್ತಿದ್ದಂತೆ ರಮ್ಯಾ ಕೂಗಿಕೊಂಡಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಬರುವಷ್ಟರಲ್ಲಿ ನೀರಿಗೆ ಬಿದ್ದ ಐವರೂ ಮೃತಪಟ್ಟಿದ್ದಾರೆ. ಮೂವರ ಶವ ಪತ್ತೆಯಾಗಿದ್ದು, ಮತ್ತಿಬ್ಬರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top